Thursday, September 2, 2010

Hai 9483478030… Bye 9448657473… & ವೈಶಾಕ್ ಕಾಲಿಂಗ್ ಸುಧಾಕರ್.....

2004ರಲ್ಲಿ BSNL SIM ತಗೋಳೋದು ಅಂದ್ರೆ ಸರಕಾರೀ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಮೆಡಿಕಲ್ ಸೀಟ್ ತಗೆದುಕೊಂಡ ಹಾಗೆ ಇತ್ತು. ಯಪ್ಪಾ…ಏನ್ ಕಾಸ್ಟ್ಲಿ ಗೊತ್ತಾ?. SIM ಬೆಲೆ ನೂರು ರುಪಾಯೀ ಇದ್ರೂ ಬ್ಲಾಕ್ ನಲ್ಲಿ ಅದನ್ನು Rs 800-1000 ರಕ್ಕೆ ಮಾರುತ್ತ ಇದ್ದರು. ಸಾಲದಕ್ಕೆ ಈ BSNL ನೆಟ್ವರ್ಕ್ ಬಗ್ಗೆ ಅವತ್ತು ಜನರಲ್ಲಿ ಇದ್ದ ಭಾವನೆ ಏನೆಂದರೆ ‘ಒಂದು ಊರಿನಲ್ಲಿ ಯಾರದರೊಬ್ಬರ ಮನೆಯಲ್ಲಿ ಒಂದೇ ಒಂದು BSNL ಲ್ಯಾಂಡ್ ಲೈನ್ ಕನೆಕ್ಷನ್ ಇದ್ದರೆ ಸಾಕು ಅಥವಾ BSNL ಲ್ಯಾಂಡ್ ಲೈನ್ ನ ಪೋಲ್ ಇದ್ದರೆ ಸಾಕು, ಇಡಿ ಊರಿನಲ್ಲಿ BSNL ನೆಟ್ವರ್ಕ್ ಸಿಗುತ್ತೆ ’ !! ??. ಸರಿ ನನಗೆ ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಸಿಕ್ಕಿ ನನ್ನನ್ನು ಚಿಕ್ಕಮಗಳೂರಿನ ಕೂಪ್ಪ ಡಿವಿಷನ್ಗೆ ಟ್ರಾನ್ಸವರ್ ಮಾಡಿದಾಗ ಅಲ್ಲಿ ವಾತಾವರಣ ಹೇಗೆ ಇದೆ ಅಂತ ನೋಡಿ ಬರಲು ಹೋಗಿದ್ದಾಗ ತಿಳಿದು ಬಂದ ಸಂಗತಿ ಏನೆಂದರೆ, ಅಲ್ಲಿ BSNL ನೆಟ್ವರ್ಕ್ ಬಿಟ್ಟರೆ ಬೇರೆ ಸಿಗುವುದಿಲ್ಲ ಅನ್ನೋದು. ಅಪ್ಪಾಜಿ ಬೇರೆ “ BSNL SIM ಸಿಗೋದು ಕಷ್ಟ ಕಣಪ್ಪ… SIM ಸಿಕ್ಕರೆ ಒಂದು ಹೊಸ ಮೊಬೈಲ್ ತೆಗೆದು ಕೊಡ್ತೀನಿ…” ಅಂದಿದ್ದರು. ಸರಿ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಫಾರೆಸ್ಟರ್ ಆಗಿ ಕೆಲಸ ಮಾಡುತ್ತಿರುವಾಗ ಅಲ್ಲಿನ BSNL ಆಫೀಸ್ ನವರು BSNL SIM ಗೆ ಅಪ್ಲಿಕೇಶನ್ ಕಾಲ್ ಮಾಡಿದ್ದರು ನಾನು ಹೋಗಿ ಅಪ್ಲಿಕೇಶನ್ ಸಬ್ಮಿಟ್ ಮಾಡಿಬಂದೆ. ಆವಾಗ ಮೇ 2004. ಇದನ್ನು ಈಗಿನ ಕಾಲದಲ್ಲಿ ಜನರಿಗೆ ಹೇಳಿದರೆ ನಂಬುತ್ತಾರೆಯೇ…? “ಏನೋ.. BSNL ನವರು ಈಗ ರೋಡ್ ರೋಡ್ ನಲ್ಲಿ ಮೇಳ ಇಟ್ಟು SIMಗಳನ್ನೂ ಫ್ರೀಯಾಗಿ ಹಂಚುತ್ತಿರುವಾಗ ನೀನು ಅದಕ್ಕೆ ಅಪ್ಲಿಕೇಶನ್ ಹಾಕಿದ್ದ…?” ಅಂತ ಆಶ್ಚರ್ಯ ವ್ಯಕ್ತಪಡಿಸ್ತಾರೆ. ನನಗೆ ಜೂನ್ 2004ರಲ್ಲಿ ಧಾರವಾಡದ ಗುಂಗರಗಟ್ಟಿಯಲ್ಲಿ ಒಂದು ವರ್ಷ ಫಾರೆಸ್ಟರ್ ಟ್ರೈನ್ನಿಂಗ್ ಗೆ ಹಾಕಿದ್ದರು. ಸೊ ಚಿಕ್ಕಮಗಳೂರಿನಿಂದ ರಿಲೀವ್ ಆಗಿ ಧಾರವಾಡಕ್ಕೆ ಬಂದೆ. ಆಗ್ 2004 ರಲ್ಲಿ ನರಸಿಂಹರಾಜಪುರದ ಆಫೀಸ್ ಟೈಪಿಸ್ಟ್ ವಾಣಿ ನನ್ನ ರೊಂ ಮೆಟ್ ಅನಿಲನ ಮೊಬೈಲ್ ಗೆ ಕಾಲ್ ಮಾಡಿ “ರೀ ಸುಧಾಕರ್ congratulation ಕಣ್ರೀ… ನಿಮ್ಮ SIM ಬಂದಿದೆ ರೀ….. Rs 120 ಕಟ್ಟಿ ಬಿಡಿಸಿಕೊಳ್ಳಬೇಕು” ಅಂದರು. ಸರಿ ತಕ್ಷಣ ನಾನು ಒಂದು ಆತರೈಜೇಶನ್ ಲೆಟರ್ ಮತ್ತೇ ದುಡ್ಡು ಎರಡನ್ನು ಕಳಿಸಿ SIM ಬಿಡಿಸಿಕೊಳ್ಳಿ ಅಂತ ಲೆಟರ್ ಬರೆದು ಟೈಪಿಸ್ಟ್ ವಾಣಿಗೆ ಕಳಿಸಿದೆ. ಅದರಂತೆ ಅವರು SIM ತೆಗೆದುಕೊಂಡು ನಾನು ಹೇಳಿದಹಾಗೆ ನನ್ನ ತಂದೆಗೆ ಕೊರಿಯರ್ ಮಾಡಿದರು. ನನ್ನ ತಂದೆ ಆ SIMನ ಜೊತೆ ಆ ಕಾಲಕ್ಕೆ ಐಕಾನ್ ಸೆಟ್ ಆಗಿದ್ದ ನೋಕಿಯಾ 1100 ಅನ್ನು Rs 4800/- ಗೆ ಖರೀದಿ ಮಾಡಿ ಕಳಿಸಿಕೊಟ್ಟರು. ಇದು ನಡೆದಿದ್ದು ಆಗಸ್ಟ್ 2004ರಲ್ಲಿ. ಆದರೆ ನನ್ನ ದುರಾದೃಷ್ಟನೋ ಏನೋ ಅಕ್ಟೋಬರ್ 2004ರ ಮೊದಲ ವಾರ ನನ್ನ ಮೊಬೈಲ್ ಸೆಟ್ಟನ್ನು ನನ್ನ ರೊಂನಲ್ಲೇ ಯಾರೋ ಕದ್ದು ಬಿಟ್ಟರು!!! ಒಳ್ಳೇ ಕಳ್ಳ ನನ್ನ ಮುಂದೇನೇ ಬಂದು, ಮೊಬೈಲ್ ಕದ್ದು ‘ ಜೂಟ್ ’ ಅಂತ ಹೇಳಿ ಓಡಿ ಹೋದಹಾಗೆ ಇತ್ತು ಆ ಅನುಭವ. ಪುನ ನಾನು ನನ್ನ ಮೊಬೈಲ್ ಧಾರವಾಡ್ ಸಿಟಿಯಲ್ಲಿ ಎಲ್ಲೊ ಕಳೆದುಹೋಗಿದೆ ಅಂತ ಕಂಪ್ಲೈಂಟ್ ಲಾಡ್ಜ ಮಾಡಿ, ಮೈಸೂರ್ ಗೆ ಬಂದ ನಂತರ ಡೂಪ್ಲಿಕೆಟ್ SIM ಅನ್ನು ತೆಗೆದುಕೊಂಡೆ. ಇಷ್ಟೆಲ್ಲಾ ಯಾಕೆ ಆ SIM ಬಗ್ಗೆ ಬರೀತಾ ಇದ್ದೀನಿ ಅಂದ್ರೆ ಮೊನ್ನೆ ಜುಲೈ 2010 ರಲ್ಲಿ ನಾನು ಆ ನನ್ನ SIMನ ಚೇಂಜ್ ಮಾಡಿದೆ. ಸೊ ಆ ಚಿಕ್ಕಮಗಳೂರಿನಲ್ಲಿ ತೆಗೆದುಕೊಂಡಿದ್ದ SIM ನಂಬರ್ ನನ್ನ ಜೊತೆ 6 ವರ್ಷ ಇತ್ತು. ಏನ್ ಮಾಡೋದು…? BSNL ನವರು ಯಾವುದೇ SMS ಪ್ಯಾಕೇಜ್ ಅನ್ನು ಒದಗಿಸದ ಕಾರಣ SIM ಚೇಂಜ್ ಮಾಡಬೇಕಾಗಿ ಬಂತು!




ಇವತ್ತಿನ ಕಾಲದ ಜನರ ಮೆಂಟಾಲಿಟಿ ಹೆಂಗಿದೆ ಎಂದರೆ BSNL SIM ಉಪಯೋಗಿಸುವವರು ಅಂದ್ರೆ, ಒಂದೂ ಅವನು ವಯಸ್ಸಾಗಿರೋ ವ್ಯಕ್ತಿ… ಇಲ್ಲವೂ ಅವನು ಆಫೀಶಿಯಲ್ ಆಗಿರ್ತಾನೆ (ಹುಡುಗೀರಂತೂ 99% ಯಾರು BSNL SIM ತಗೆದುಕೊಳ್ಳೋದಿಲ್ಲ ಬಿಡಿ) ಅನ್ನೋ ನಂಬಿಕೆ. ಮೊನ್ನೆ ಹಾಗೆ ಯಾಕೋ ನಂಗೆ ನನ್ನ ಫ್ರೆಂಡ್ಸ್ ಗಳು ಒಬೊಬ್ಬರಾಗಿ ಮಿಸ್ ಆಗಿ ಹೋಗ್ತಾ ಇದ್ದರೆ, ಕಾಂಟಾಕ್ಟ್ ತಪ್ಪಿ ಹೋಗ್ತಾ ಇದೆ, ನನ್ನ ಮತ್ತು ನನ್ನ ಸ್ನೇಹಿತರ ನಡುವಿನ ಗ್ಯಾಪ್ ಜಾಸ್ತಿ ಆಗ್ತಾ ಇದೆ ಅಂತೆಲ್ಲ ಅನ್ನಿಸಿ ನನಗೆ 6 ವರ್ಷ ಕನೆಕ್ಷನ್ ಹಾಗು ಸಾಥ್ ನೀಡಿದ್ದೆ SIM ಚೇಂಜ್ ಮಾಡೋ ಮಹತ್ವವಾದ ನಿರ್ಧಾರ ಕೈಗೊಂಡೆ. SIM ಚೇಂಜ್ ಮಾಡಿ ಎಲ್ಲರಿಗೂ “ಹಲೋ ಸರ್/ ಫ್ರೆಂಡ್ಸ್ ದಿಸ್ ಇಸ್ ಸುಧಾಕರ್(ಲೋಕು) ಪ್ರೊಂ ಸಿ.ಕೆ.ಜಿ.ಬಿ, ಕೆ ಆರ್ ನಗರ್ ( X ಫಾರೆಸ್ಟರ್) ಐ ಹಾವ್ ಚೇಂಜ್ed ಮೈ ನಂಬರ್ ಪ್ಲೀಸ್ ಅಪ್ ಡೇಟ್ ಮೈ ನ್ಯೂ ನಂಬರ್” ಅಂತ ಮೆಸೇಜ್ ಮಾಡಿದೆ. ಅದು ಎಷ್ಟು ಜನರಿಗೆ ತಲುಪಿತೋ, ತಲುಪಿದ ಜನರಲ್ಲಿ ಎಷ್ಟು ಜನ ಓದಿ, ನಂಬರ್ ಅಪ್ ಡೇಟ್ ಮಾಡಿಕೊಂಡರು ಗೊತ್ತಿಲ್ಲ. ಬಟ್ ನನ್ನ ಒಬ್ಬಆತ್ಮಿಯ ಹಳೇ ಗೆಳಯ ವೈಶಾಕ್ ಅಂತೂ ಅಪ್ ಡೇಟ್ ಮಾಡಿಕೊಂಡಿರಲಿಲ್ಲ. ಸರಿ ನನ್ನ ಹೊಸ SIM ನಲ್ಲಿ ದಿನ 300 ಲೋಕಲ್ SMS, 20 ನ್ಯಾಷನಲ್ SMS ಫ್ರೀ… ಅನ್ನೋ ಆಫರ್ ಇತ್ತು. ಸರಿ ಎಲ್ಲರಿಗೂ ಬೆಳಗಿನ ಹೊತ್ತು ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಲು ಶುರು ಮಾಡಿದೆ. ಮಧ್ಯ ಮಧ್ಯ ಕೆಲವರಿಗೆ ನನಗೆ ಬಂದಿದ್ದ ಜೋಕ್ಸ್, ಪಿ.ಜೇ, ಇನ್ನು ಕೆಲವರಿಗೆ ಕೆಲವು ಪೋಲಿ (ನಾನ್ ವೆಜ್) ಮೆಸೇಜ್ ಗಳನ್ನೂ ಫಾರ್ವರ್ಡ್ ಮಾಡ್ತಾ ಇದ್ದೆ. ಅವತ್ತು ಜುಲೈ 2010 ರ ಎರಡನೆ ಶನಿವಾರ ನನ್ನ MBA ಮೂರನೆ ಸೆಮಿಸ್ಟರ್ ನ ಎಕ್ಷಮ್ಸ ನಡೀತಾ ಇದ್ದವು, ನಾನು ಆಫೀಸಿಗೆ 11 ದಿನ ರಜೆ ಹಾಕಿದ್ದೆ. ನನ್ನ ಆಪ್ತ ಸ್ನೇಹಿತ ಪ್ರಸಾದೀ ಕೂಡ ನಾನು MBA ಸೇರಿದ ಒಂದು ವರ್ಷದ ನಂತರ ಅವನು MBA ಗೆ ಸೇರಿದ್ದ. ಅವನದು ಮೊದಲನೆಯ ಸೆಮಿಸ್ಟರ್ ಎಕ್ಷಮ್ಸ ನೆಡಿತಾ ಇತ್ತು. ಇಬ್ಬರು ಇಂಜಿನಿಯರಿಂಗ್ ಓದೋ ಟೈಮ್ನಿಂದಲೂ ಯಾವುದೆ ಎಕ್ಷಮ್ಸ ಬಂದರು ನನ್ನ ಮನೆಯಲ್ಲೇ ಕಂಬೈನ್ ಆಗಿ ಸ್ಟಡೀ ಮಾಡ್ತಾ ಇದ್ದೆವು. ಟೈಮ್ ರಾತ್ರಿ 9.10 ಆಗಿತ್ತು ಪ್ರಸಾದೀ ನನ್ನ ರೂಮಿನ ಅಟ್ಯಾಚ್ಡ್ ಬಾತ್ರೂಂನ ಬಾಗಿಲ ಮೇಲೆ ಇರೋ ಗೋಡೆಗೆ ಹಾಕಿರೋ ಗಡಿಯಾರ ನೋಡಿ “ಮಗ 9.10 ಅಯೀತು… ಯಾಕೋ ಓದಿ… ಓದಿ… ತಲೆ ಬಿಸಿ ಆಗಿದೆ ಸ್ವಲ್ಪ ಸಿಮಿ(ಅವನ ಗರ್ಲ್ ಫ್ರೆಂಡ್) ಜೊತೆ ಮಾತಾಡಿ ಕೊಂಡು ಹಾಗೆ ಊಟ ಮಾಡಿಕೊಂಡು ಬರ್ತನಿ” ಅಂತ ಹೇಳಿ ಹೋದ. ನಾನು ಲೈಟ್ ಆಫ್ ಮಾಡಿ ನನ್ನ ರೂಂ ಇಂದ ಇನ್ನೇನು ಹೊರಗೆ ಬರಬೇಕು ಅಷ್ಟರಲ್ಲಿ ನನ್ನ ಫೋನು ‘When The Thron Bush turns White, That’s when I’ll Come Home….’ ಅಂತ ರಿಂಗ್ ಆಗ ತೊಡಗಿತು. ಫೋನ್ ನೋಡಿದೆ ‘Vaishak calling…’ ಅಂತ ಡಿಸ್ಪ್ಲೇ ಬರ್ತಾ ಇತ್ತು. ಓಹ್ ಸಿಸ್ಯಾ ಏನಪ್ಪಾ ಇದ್ದಕಿದ್ದಂತೆ ನೆನಸಿಕೊಂಡುಬಿಟ್ಟಿದ್ದಾನೆ ಅಂದುಕೊಂಡು ಕಾಲ್ ರಿಸೀವ್ ಮಾಡಿ “ಹಲೋ ಮಗ…..” ಅಂದೆ. ಆ ಕಡೆ ಇಂದ ವೈಶು ಸ್ವಲ್ಪ ಕಿಕ್ಕ್ ವಾಯ್ಸ್ ನಲ್ಲಿ “ಹಲೋ ಯಾರೂ….. ಯಾರು ಇದು…..” ಅಂದ. ನಾನು “ಮಗ ನಾನು… ಸುಧಾಕರ್ ಮೈಸೂರ್ ಇಂದ….. ಯಾಕಲ ಮಗ ನಂಬರ್ ಸೇವ್ ಮಾಡಿಕೊಂಡಿಲ್ಲವಾ...?” ಅಂತ ಕೇಳಿದೆ. ಅದಕ್ಕೆ ವೈಶು “ ಓಹ್.. ನೀನೆನ್ಲಾ….. ?ನಂಬರ್ ಯಾವಾಗ ಚೇಂಜ್ ಮಾಡಿದೆ?” ಅಂತ ಕೇಳಿದೆ. ಅದಕ್ಕೆ ನಾನು “ನಂಬರ್ ಚೇಂಜ್ ಮಾಡಿ 3 ದಿನ ಅಯೀತು… ಕಳಿಸಿದ್ದನಲ್ಲಾ…? ನಂಬರ್ ಅಪ್ ಡೇಟ್ ಮಾಡಿಕೊಳ್ಳಿ ಅಂತ… ಏನ್ ಯಾವದೋ ಹುಡುಗಿ ನಂಬರ್ ಅಂತ ಫುಲ್ ಕುಶ್ ಆಗೀ ಫೋನ್ ಮಾಡಿಬಿಟ್ಟೆನೋ ಅಲ್ಲವಾ..?” ಅಂದೆ. ಅದಕ್ಕೆ ಅವನು “ಹ್ಞೂ…. ಕಾಣಲ ಹುಡ್ಗೀರು F**K GIK ಅನ್ನೋ ಮೆಸೇಜಸ್ ಕಳಿಸ್ತಾರೆ…!!!??? ಲೋ ಯಾರೂ ನಮ್ಮ ಹುಡುಗರೇ ಅಂತ ಗೊತ್ತಿತ್ತು ಬಟ್ ನೀನು ಅಂತ ಗೊತ್ತಿರಲಿಲ್ಲ ಕಣೋ..” ಅಂತ ಹೇಳಿದ. ನಾನಿದ್ದು “ಸರಿ ನಾನು ಮೆಸೇಜ್ ಕಳಿಸೋಕೆ ಶುರು ಮಾಡಿ 3 ದಿನ ಅಯೀತು, ಈಗ ಇವತ್ತು ಡೌಟ್ ಬಂತ ನಿನಗೆ?” ಅಂತ ಕೇಳಿದೆ. ಅವನು ಅದಕ್ಕೆ “ಅವತ್ತೇ ಕೇಳಬೇಕು ಅಂತ ಅಂದು ಕೊಂಡೆ ಕಣೋ… ಕಾಲ್ ಮಾಡೋಣ… ಮಾಡೋಣ… ಅಂತ ಅಂದುಕೊಂಡು ಮರೆತೆ ಹೊಯೀತು… ಇವತ್ತು ನಾವು ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡ್ತಾ ಇದ್ದೆವು, ಎಣ್ಣೆ ಹಾಕಿದ ಮೇಲೆ ಯಾಕೋ ತಲೆ ಕೆಟ್ಟು ಹೊಯೀತು… ಯಾರಪ್ಪ ಇದು…? ನೋಡೋಣ ಅಂತ ಕಾಲ್ ಮಾಡಿದೆ ಅಷ್ಟೇ. ಏನ್ ಮಾಡ್ತಾ ಇದ್ದೆ ?” ಅಂತ ಕೇಳಿದ. “ಏನಿಲ್ಲ ಮಗ MBA ಎಕ್ಷಮ್ಸ ಇತ್ತು ನಾಳೆ, ಓದುತ್ತ ಇದ್ದೆ… ಏನ್ ಸಮಾಚಾರ ? ಫುಲ್ ಟೈಟಾ?” ಅಂದೆ. ಅವನು “ಯೇ… ಇಲ್ಲ ಗುರು ದುಡ್ಡು ಸಾಲಲಿಲ್ಲಾ… ಈಗಷ್ಟ ಸ್ವಲ್ಪ ಹೊತ್ತಿಂದೆ ರೆಸ್ಟೋರೆಂಟ್ ನಿಂದ ಹೊರಗೆ ಎದ್ದು ಬಂದೆವು. ಯಾರೂ 2000 ರೂಪಯೀ ಸಾಲ ತಗೊಂದಡಿದ್ದ ಹಂಗೆ ಅದನ್ನ ಈಸಿಕೊಂಡು ಹೋಗೋಣ ಅಂತ ಗಾಡಿ ತಗೊಂಡು ನಮ್ ಸಿಸ್ಯಾ ಒಬ್ಬನ ಜೊತೆ ಬಂದೆ” ಎಂದ. ನಾನು ಅದಕ್ಕೆ “ ಏನ್ ಗಾಡಿ ಚೇಂಜ್ ಮಾಡಿದ ಗುರು? ಅಥವಾ ಇನ್ನು Rx 135 ನೆ ಓಡಿಸ್ತಾ ಇದ್ದೀಯಾ?” ಅಂದೆ. ಅದಕ್ಕೆ ಅವನು “ ಏನ್ ಮಗಾ ಅವಗಲಿಂದ ಗಾಡಿ ಆನ್ ನಲ್ಲೆ ಇದೆ... Rx ಸೌಂಡ್ ಗೊತ್ತಾಗಲ್ಲವಾ…? ತಡಿ ಒಂದು ನಿಮಿಷ…” ಅಂತ ಹೇಳಿ, ಗಾಡಿ ಮೇಲೆ ಕೂತಿದ್ದ ಅವನ ದೋಸ್ತ್ ಗೆ “ಸಿಸ್ಯಾ ಲೋ ಅಕ್ಸಲಾರೇಟ್ರ್ ರೈಸ್ ಮಾಡ್ಲ…..” ಅಂದ. ಅವನ ಫ್ರೆಂಡ್ ಎಣ್ಣೆ ಹಾಕಿದ್ದನೋ ಇಲ್ಲವೋ ಅಕ್ಸಲಾರೇಟ್ರ್ ಅನ್ನೋ ಫುಲ್ ರೈಸ್ ಮಾಡಿದ ಅನ್ನಿಸುತ್ತೆ, ವೈಶಾಕ್ ನ ಗಾಡಿ ‘Drooooooooooooooooooo… Droonn… Droonn… ಅಂತು.



ವೈಶು ಫೋನ್ ನಲ್ಲಿ “ ಯಂಗೇ…? ಸೌಂಡು…? ಕೇಳಿಸ್ತಾ…? ಅಥವಾ ಇನ್ನೊಂದು ಸಲ ರೈಸ್ ಮಾಡಿಸಲಾ...? ” ಅಂತ ಕೇಳಿದ. ನಾನು “ ಲೋ… ಏನ್ಲಾ ಅದು? ಸಾಕು ಬಿಡಲಾ…” ಅಂದೆ. ವೈಶಾಕ್ ಪುನ್ಹ ಅವನ ಫ್ರೆಂಡ್ ಗೆ ಕೂಗಿ ಹೇಳಿದ “ ಮಗಾ ಸಾಕು ಆಫ್ ಮಾಡ್ಲ…”. ನಾನು, ವೈಶಾಕ್ ಪಿ.ಯು.ಸಿ.ಯಲ್ಲಿ ಓದುವಾಗ ನಮ್ಮ ಜೊತೆ ಜಂಡಾ.., ಎಂ.ಸೀ.., ಸೀನಾ.. ಅನ್ನೋ ಇನ್ನು 3 ಜನ ಫ್ರೆಂಡ್ಸ್ ಇದ್ದರು. ನಾವೆಲ್ಲ ಸಕ್ಕತ್ತು ಕೂಳೆ(Masti) ಮಾಡ್ತಾ ಇದ್ದೆವು. ಅವರನ್ನ ನೆನೆಸ್ಕೊಂಡು ವೈಶು ನ ಕೇಳಿದೆ “ ಮಗ ಜಂಡಾ.., ಎಂ.ಸೀ.., ಸೀನಾ.. ಯಾರದ್ರು ಸಿಕಿದ್ದರೆನೋ…”? ವೈಶು ಅದಕ್ಕೆ “ ಇಲ್ಲ ಗುರು... ಯಾರು ಸಿಕ್ಕಿಲ್ಲ....” ಅಂದ. “ ಮತ್ತೇ… ಮೈಸೂರ್ ಗೆ ಬಾರೋ ಯಾವಾಗಲಾದರು” ಅಂದೆ. ಅವನು “ ಮೈಸೂರ್ ನಲ್ಲಿ ಏನು ಇದೆ ಅಂತ ಬರೋಣ…? ನೀನೆ ಬರ್ಲಾ ಬ್ಯಾಂಗಲೋರ್ ಗೆ ಪಾರ್ಟಿ ಮಾಡ್ಕೊಂಡು ಹೋಗುವಂತೆ. ಜಾಸ್ತಿ ಏನು ಬೇಡ ಒಂದು 2000 ರುಪಾಯೀ ತೆಗೆದುಕೊಂಡು ಬಾ. ನೀನೇನು ಪಾರ್ಟಿಗೆ ದುಡ್ಡು ಹಾಕಬೇಡಪ್ಪ ನಾವೇ ಕೊಡಿಸ್ತಿವಿ... ಬೈ ಚಾನ್ಸ್ ಶಾರ್ಟ್ಜ್(Shortage) ಆದರೆ ಅಂತ ತರೋಕೆ ಹೇಳಿದೆ ಅಷ್ಟೇ… ಓಹ್.. ನನ್ನ ಫ್ರೆಂಡ್ ದುಡ್ಡು ಕೊಟ್ಟಿ ಕಳಿಸಿದಾ ಅನ್ನಿಸುತ್ತೆ… ಪುನ್ಹ ರೆಸ್ಟೋರೆಂಟ್ ಹೋಗ್ಬೇಕು ” ಅಂದ. ನಾನು “ ಯಾವ ಏರಿಯಾ ಮಗಾ...?” ಅಂದೆ. ಅವನು “ ಯಾವದು ರೆಸ್ಟೋರೆಂಟ್ ಇರೋದಾ? ಜಯನಗರ್ ಹತ್ತಿರ ಮಗಾ…” ಅಂದ. ನಾನು “ ಓಹ್… ಏನ್ ಈಗ ಜಯನಗರ್ ಫುಲ್ ಪಾಶ್ & ಕಲರ್ ಪುಲ್ ಏರಿಯಾನಾ...?” ಅಂತ ಕೇಳಿದೆ. ಅವನು “ ಎಣ್ಣೆ ಹೊಡಿದಾಗ ಏನ್ಲಾ ಎಲ್ಲಾ ಏರಿಯಾನು ಕಲರ್ ಪುಲ್ ಆಗೀ ಕಾಣುತ್ತದೆ.… ಸ್ಲಂ ಕೂಡ….!!? ” ಅಂದ. ಓಹೋ… ಇವನು ಫುಲ್ ಜೋಶ್ನಲ್ಲಿ ಇದ್ದಾನೆ…ಇನ್ನು ಯಾವಾಗಲಾದರೂ ಮಾತಾಡೋಣ ಅಂತ ಅನ್ನದು ಕೊಂಡು ನಾನು “ ಮತ್ತೇ ಇನ್ನೇನೂ ಮಗಾ…? ಜಂಡಾ.., ಎಂ.ಸೀ.. ಸಿಕ್ಕಿದ್ದಾರಾ?” ಅಂತ ಪುನ್ಹ ಕೇಳಿದೆ. ಅವನು “ ಯಾಕ್ ಮಗಾ ಫೋನ್ ಇಡಬೇಕೇನ್ಲಾ…? ಇರಿಟೇಟ್ ಆಗ್ತಾ ಇದ್ದೀಯ….? ಕೇಳಿದ್ದನ್ನೇ ಕೇಳ್ತಾ ಇದ್ದೀಯಾ? ಅವಾಗಲೇ ಹೇಳಲಿಲ್ಲವ ಅವರು ಸಿಕ್ಕಿಲ್ಲ ಅಂತ? ”ಅಂದ. ನಾನು “ಹಾಗೇನು ಇಲ್ಲ ಮಗಾ… ಹಳೆ ದೋಸ್ತ್ ಕಾಲ್ ಮಾಡಿದಾಗ ಅವನ ಜೊತೆ ಮಾತಾಡೋ ಖುಷಿ ಬೇರೆ ಯಾವಾಗ ಇರುತ್ತೆ ಹೇಳು?” ಅಂದು . ಪುನ್ಹ “ ಮದುವೆ ಏನ್ ಕಥೇಲಾ..? ಯಾವಗಪ್ಪ ಮದುವೆ ಆಗೋದು?” ಅಂತ ಕೇಳಿದೆ. “ ಇನ್ನು ನೀವೆಲ್ಲ ಇದ್ದಿರಲ್ಲಪ್ಪಾ… ನಮ್ಕಿಂಥ ಮುಂಚೆ ಕೆಲಸಕ್ಕೆ ಸೇರ್ಕಂಡ್ರಿ…ನೀವು ಫಸ್ಟ್ ಆಗಿರಪ್ಪಾ… ನಮ್ಮ ಮನೇಲಿ ಎಲ್ಲಾ ಇಷ್ಟು ಬೇಗ ಮಾಡ್ತಾರೆ? ನಾನು ಏನಾದರು ಅಂದ್ರೆ ‘ಏನ್ ಇವನು ಇನ್ನು ಹುಡುಗ್ ಹುಡುಗುರ್ತಾರಾ ಆಡ್ತಾನೆ…’ ಅಂತಾರೆ. ಯಾವಾಗಲಾದರು ಟಿವಿ 9 ನಲ್ಲಿ ತಕ್ಷಣ ಫೇಮಸ್ ಆಗಿರೋ ಜನ ಬಂದಾಗ ನಾನು ‘ಇವನು 2-3 ವರ್ಷದ ಹಿಂದೆ ನನಗೆ ಪರಿಚಯ ಇದ್ದ!!’ ಎಂದರೆ ಫುಲ್ ಶಾಕ್ ಆಗೀ ‘ಹೊಂ...ಏನೋ ಇವನು....’ ಅಂತಾರೆ…. ಒಂದೊಂದು ಸಲ ಒಂದೊಂದು ತರಾ…ಏನ್ ಮಾಡೋದಪ್ಪ?” ಅಂದ ನಾನು “ ಇನ್ನೇನು ಮಗಾ ಸಮಾಚಾರ… ಊಟ ಅಯೀತಾ..?” ಅಂದೆ ಅವನು “ ಓಹ್ಹ್…. ಗುರು… ಫುಲ್ ಬೇಜಾರ್ ಆಗೀ ಬಿಟ್ಟಿದ್ದೀಯಾ ಬಿಡು. ಸರಿ ಫೋನ್ ಇಡ್ತೀನಿ… ಓಕೆ ನಾ…? ನಾನು Usually ಡ್ರಿಂಕ್ಸ್ ತಗೊಂಡಾಗ ಯಾವಾಗಲು ಯಾರಿಗೂ ಫೋನ್ ಮಾಡಲ್ಲಾ ಮಾಡಿದರೆ ಮಾತ್ರ ಮಾತಾಡುತ್ತಾ ಇರಬೇಕು ಅನ್ನಿಸುತ್ತೆ. ಏನು ಇದು ಯಾರ್ರ್ ನಂಬರು ಅಂತ ತಿಳ್ಕೊಲೋಕೆ ಮಾಡಿದೆ ಅಷ್ಟೇ. ಸರಿ ನೀನು ಓದು ಗುರು… ಟೈಮ್ ವೇಸ್ಟ್ ಮಾಡಬೇಡ… ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ಒಳಗೆ ಹೋದರು… ನಾನು ಹೋಗ್ತೀನಿ… ಪುನ್ಹ ಫೋನ್ ಮಾಡ್ತಿನಿ Bye La…” ಅಂದು ಕಾಲ್ ಕಟ್ ಮಾಡಿದ.



ನನಗಂತೂ ಅವನ ಜೊತೆ ಮಾತಾಡಿದ ಆ 8-9 ನಿಮಿಷ 1 ಗಂಟೆ ಆದಂತೆ ಅನುಭವ ಆಗಿತ್ತು. ನನಗೆ ಮೊದಲಿಂದಲೂ ನನ್ನ ಫ್ರೆಂಡ್ಸ್ ಸರ್ಕಲ್ ನಲ್ಲಿ Especially ವೈಶಾಕ್ ಕಂಡರೆ ಏನೋ ತುಂಬಾ ಇಷ್ಟ. ನನ್ನೋಬ್ಬನಿಗೆ ಅಲ್ಲಾ ಅವನ ಫ್ರೆಂಡ್ಸ್ ಎಲ್ಲರಿಗೂ. ಅವನ ಮುಖ ನೋಡಿದರೆ ಪುಲ್ ಸಿರಿಯಸ್ ಅನ್ನಿಸುತ್ತೆ ಬಟ್ ಯಾವಾಗಲು Superb ಕಾಮಿಡಿ ಡೈಲಾಗ್ಸ್ & ಜೋಕ್ಸ್ ಹೇಳುತ್ತಾ ಇರುತ್ತಾನೆ. ನಾನು ಅವನು 4th Std to 7th Std ಒಟ್ಟಿಗೆ ಓದಿದ್ದಾದರು ಪುನ್ಹ ನಾವು ಕ್ಲೋಸ್ ಆಗಿದ್ದು ಪಿ.ಯು.ಸಿ. ಗೆ ಮರಿಮಲ್ಲಪ್ಪ ಕಾಲೇಜಿಗೆ ಸೇರಿದ ನಂತರ. ಆ ದಿನಗಳಲ್ಲಿ ವೈಶಾಕ್ ಸಿಕ್ಕಿಲ್ಲ ಅಂದಿದ್ದರೆ ಇವತ್ತು ಇರೋ ಸುಧಾಕರ್(Me), ಅವನ ಮಾತು… ಕಥೆ…ಸ್ಟೈಲ್… ಎಲ್ಲಾ ಚೇಂಜ್ ಆಗೀ ಇರುತ್ತಿದವು. 2000-2001 ರಲ್ಲಿ ಕ್ಲಾಸ್ ಬಂಕ್ ಮಾಡಿ ಬಲಮುರಿ, ಚಾಮುಂಡಿ ಬೆಟ್ಟ, ಜಯಶ್ರೀ ಹೋಟೆಲ್, ಫಿಲಂ ಗೆ ಹೋಗುತಿದ್ದ ಆ ದಿನಗಳನ್ನ ನೆನೆಸಿಕೊಂಡರೆ ನನ್ನ ಜೋಶ್ ಬ್ಯಾಟರಿ ಫುಲ್ ಚಾರ್ಜ್ ಆಗೀ ಬಿಡುತ್ತೆ. & I’m always thankful to god since he has blessed me with all right friends at exactly right timings…..



1 comment: