Monday, September 27, 2010

‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

ಮಹಾಭಾರತ ’ ಮತ್ತು ‘ ರಾಮಾಯಣ ’ ಈ ಎರಡು ಹಿಂದೂ ಧಾರ್ಮಿಕ ಕೃತಿಗಳನ್ನು ನಾನು ಅದೆಷ್ಟು ಬಾರಿ ಓದಿದ್ದೇನೋ ಲೆಕ್ಕವಿಲ್ಲ. ಅದರಲ್ಲೂ ಮಹಾಭಾರತವನ್ನು ಓದುವಾಗ ಪ್ರತಿ ಬಾರಿ ಹೊಸ ಹೊಸ ವಿಚಾರಗಳು ಗೋಚರವಾಗುತ್ತೆ. ಮಹಾಭಾರತದ ಮೂಲ ಕಥೆಗಳು ಹಾಗು ಕೆಲವು ದಿನಪತ್ರಿಕೆ, ಕೆಲವು ಮ್ಯಾಗಜಿನ್ ಗಳಲ್ಲಿ ಮಹಾಭಾರತಕ್ಕೆ ಸಂಬಂದಿಸಿದಂತೆ ಪ್ರಕಟವಾಗೋ ಉಪಕಥೆಗಳು, ಇವೆರಡನ್ನು ತಾಳೆ ಹಾಕಿ ಕಥೆಗಳ ಮಧ್ಯ ಲಿಂಕ್ ಕೊಡೂದು, ಅದರ ಬಗ್ಗೆ ಸ್ನೇಹಿತರು ಹಾಗು ನನ್ನ ಅಣ್ಣ ಶಶಿಯೊಡನೆ ಚರ್ಚೆಯನ್ನು ಆಗಾಗ ಮಾಡುತ್ತಾ ಇರುತ್ತೇನೆ. ನಾವು ನಮ್ಮ ಬಾಲ್ಯದಲ್ಲಿ ನಮ್ಮ ಭಾಷಾ ಪಟ್ಯ ಪುಸ್ತಕಗಳಲ್ಲಿ ಈ ಮಹಾಭಾರತಕ್ಕೆ ಸಂಬಂಧಪಟ್ಟಂತೆ ಕೆಲವು ವೀರರ ಹಾಗು ಅವರ ಸಂಕಿಪ್ತ ಜೀವನ ಚರಿತ್ರೆಗಳನ್ನೂ ಓದಿರುತ್ತೇವೆ. ಪ್ರೈಮರಿಯಲ್ಲಿದ್ದಾಗ ಏಕಲವ್ಯನ ಬಗ್ಗೆ ಓದಿ ಇಡಿ ಮಹಾಭಾರತದ ಕಥೆಯಲ್ಲಿ ಅವನೇ ಪರಾಕ್ರಮಿ ಅನ್ನಿಸಿತ್ತು ಹಾಗೆ ಹೈಸ್ಕೊಲ್ ನಲ್ಲಿ ಮಹಾಭಾರತದ ಕಥೆ ಓದು ಹಾಗು ವಿಶ್ಲೇಷಣೆ ನಡುವೆ ನನಗೆ ಕೆಲವೊಮ್ಮೆ ಅರ್ಜುನ ಕೆಲವೊಮ್ಮೆ ಕರ್ಣನು ಪರಾಕ್ರಮಿ ಅನ್ನಿಸುತ್ತಿದ್ದರು. ನಮ್ಮ ಊರು ಕಾಡುಕೊತ್ತನ ಹಳ್ಳಿಯಲ್ಲಿ ನಡೆಯುತ್ತಿದ ‘ ಕುರುಕ್ಷೇತ್ರ - ಧರ್ಮ ರಾಜ್ಯ ಸ್ಥಾಪನೆ ’ ಎಂಬ ಪೌರಾಣಿಕ ನಾಟಕದಲ್ಲಿ ಕುರುರಾಯ ಧುರ್ಯೋಧನನ ಪಾತ್ರಕಿದ್ದ ಬೇಡಿಕೆ ಹಾಗು ಅವನ ಪಾತ್ರದ ಡೈಲಾಗ್ಸ್, ದರ್ಬಾರ್ ಸೀನ್ ಗಳನ್ನು ನೋಡಿ ಧುರ್ಯೋಧನನೇ ಎಲ್ಲಾರಿಗಿಂತ ವೀರನಿರಬೇಕು ಅಂತ ಕೂಡ ಅನ್ನಿಸಿತ್ತು. ನಂತರ ಟಿ.ವಿ.ಯಲ್ಲಿ ಬರುತ್ತಿದ ಮಹಾಭಾರತ ಸೀರಿಯಲ್ ನ ಫುಲ್ ಎಪಿಸೋಡ್ ಅನ್ನು ಪುನ ಇಂಟರ್ನೆಟ್ನಲ್ಲಿ ಡೌನ್ಲೋಡ್ ಮಾಡಿ ನೋಡಿದಾಗ ಇಡೀ ಮಹಾಭಾರತ ಕಥೆಗೆ ಒಂದು ರೀತಿ ಕೃಷ್ಣನೇ ಮೂಲ ಹಾಗು ಅವನೇ ಎಲ್ಲಾರಿಗಿಂತ ಬುದ್ದಿವಂತ, ಚತುರ, ಬಲಶಾಲಿ ಅನ್ನೋ ನಿರ್ಧಾರ ಮಾಡಿದ್ದೆ. ಎಸ್. ಎಲ್. ಭೈರಪ್ಪನವರ ‘ಆವರಣ’ ಕಾದಂಬರಿ ಓದಿದ ನಂತರ ಅವರ ಕಾದಂಬರಿಗಳ ಫುಲ್ ಸೀರೀಸ್ ಓದಲು ಶುರು ಮಾಡಿದ ಮೇಲೆ ಹಾಗು ನನ್ನ ಅಣ್ಣ ಶಶಿಯ ಸಲಹೆ ಮೇರೆಗೆ ಭೈರಪ್ಪನವರ ಪ್ರಶಸ್ತಿ ಪುರಸ್ಕ್ರತ ಕಾದಂಬರಿಯಾದ ‘ಪರ್ವ’ ವನ್ನು ಓದಿದೆ. ಮಹಾಭಾರತದ ಪಾತ್ರಗಳನ್ನು ಎಲ್ಲರಂತೆ ಅತೀಶಯೂ ಶಕ್ತಿ ಇರೂ ದೇವಮಾನವರಾಗಿ ಚಿತ್ರಿಸದೆ ಅವರನ್ನೆಲ್ಲಾ ಕಲಿಯುಗದಲ್ಲಿ ಇರೋ ಸಾಮಾನ್ಯ ಮನುಷ್ಯರಂತೆ ಭೈರಪ್ಪನವರು ಚಿತ್ರಿಸಿದ್ದಾರೆ. ಆ ಕಾದಂಬರಿಯಲ್ಲಿ ಭೀಮನ ಪಾತ್ರವನ್ನು ಹೆಚ್ಚಾಗಿ ಗಮನದಲ್ಲಿ ಇಟ್ಟುಕೊಂಡು, ಭೀಮನ ಬಗ್ಗೆ ಸ್ವಲ್ಪ ಓತ್ತು ಕೊಟ್ಟು ಬರೆಯಲಾಗಿರುವುದರಿಂದ ಸಹಜವಾಗಿ ‘ ಪರ್ವ ’ ಓದಿದ ಮೇಲೆ ಭೀಮನೇ ಮಹಾಭಾರತ ಕಥೆಯ ನಿಜವಾದ ಪರಾಕ್ರಮಿ ಹಾಗು ಬಲಶಾಲಿ ಎಂದು ಅನ್ನಿಸದೇ ಇರಲಾರದು.
ಸೊ ಹಾಗೆ ಮಹಾಭಾರತದ ಕಥೆ ಪಾತ್ರಗಳು ಅವುಗಳ ವಿಶ್ಲೇಷಣೆಯಲ್ಲಿ ಅವಾಗವಾಗ ಮುಳುಗೂ ನನಗೆ ಮೊನ್ನೆ ಇಂಟರ್ನೆಟ್ನಲ್ಲಿ ಜಾಲಡುತಿದ್ದಾಗ ಮಹಾಭಾರತ ಕಥೆಯ ಅನೇಕ ವೀರರ ಪಟ್ಟಿ ಯಲ್ಲಿ ‘ ಬಾರ್ಬರಿಕ ’ ಅನ್ನೋ ಹೆಸರನ್ನು ಮೊದಲನೆ ಸರಿ ನೋಡಿದೆ. ಅವನ ಕಥೆ ಅನ್ನು ಸಂಪೂರ್ಣವಾಗಿ ಹೆಕ್ಕಿ ತೆಗೆದು ಓದಿದ ಮೇಲೆ ಅನ್ನಿಸಿತು ಈ ಬಾರ್ಬರಿಕನೆ ಇಡಿ ಮಹಾಭಾರತ ಕಥೆಯ ಅಪ್ರತಿಮ ವೀರ ಕ್ಷತ್ರಿಯ ಹಾಗು ಮಹಾ ಪರಾಕ್ರಮಿ ಎಂದು. ಆದರೆ ಅಷ್ಟೆಲ್ಲ ಶಕ್ತಿ, ಚಾಣಾಕ್ಷತನ ಇದ್ದು ಅವನು ಮಹಾಭಾರತ ಕಥೆಯಲ್ಲಿ ಸರಿಯಾಗಿ ಬೆಳಕಿಗೆ ಬರಲು ಆಗಲಿಲ್ಲ , ಬರುವುದಕ್ಕೆ ಶ್ರೀ ಕೃಷ್ಣನು ಬಿಡಲಿಲ್ಲ. ಸರಿಯಾದ ಅವಕಾಶ ಹಾಗು ಫೋರಂ ಸಿಕ್ಕಿದ್ದರೆ ಇವತ್ತು ನಮ್ಮ ಜನ ಅರ್ಜುನ, ಕರ್ಣ, ಧುರ್ಯೋದನ, ಭೀಮ, ಏಕಲವ್ಯ ಮುಂತಾದವರಿಗಿಂತ ಬಾರ್ಬರಿಕನನ್ನು ಹೆಚ್ಚಾಗಿ ನೆನಪಿನಲ್ಲಿ ಇಟ್ಟುಕೊಳ್ಳುತ್ತಾ ಇದ್ದರು ಅನ್ನಿಸುತ್ತೆ.
ಈ ಬಾರ್ಬರಿಕನ್ನು ಬೇರೆ ಯಾರು ಅಲ್ಲ... ಭೀಮನ ಮಗನಾದ ಘಟೂತ್ಕಚನ ಪುತ್ರ. ಅಂದರೆ ಭೀಮ ಹಾಗು ಹಿಡಂಬಿಯ ಮೊಮ್ಮಗ. ಈ ಬಾರ್ಬರಿಕನು ‘ಯಕ್ಷ ’ನ ಅವತಾರ ಎಂದು ಹೇಳಲಾಗುತ್ತೆ. ಇದೆ ಯಕ್ಷ ಪಾಂಡವರು ವನವಾಸದಲ್ಲಿದ್ದಾಗ ಸರೋವರದ ಬಳಿ ತನ್ನ ಪ್ರಶ್ನೆಗೆ ಉತ್ತರಿಸದೆ ನೀರು ಕುಡಿದ ಭೀಮರ್ಜುನಾದಿ ಹಾಗು ನಕುಲ ಸಹದೇವರನ್ನು ಮೂರ್ಚೆಗೊಳಿಸಿದ್ದ. ಬಾರ್ಬರಿಕನು ತನ್ನ ತಾಯೀ ಮುರ್ವಿಯ (ಯಾದವರ ರಾಜ ಮರುವಿನ ಮಗಳು) ಬಳಿ ಯುದ್ದ ಕೌಶಲ್ಯಗಳನ್ನು ಕಲಿತನೆಂದು ಹೇಳಲಾಗುತ್ತೆ. ಬಾರ್ಬರಿಕನು ಬಾಲ್ಯ ಹಾಗು ಯ್ಯೋವನಾಸ್ಥೆಯಲ್ಲಿಯೇ ಅತಿ ಪರಾಕ್ರಮಿಯಾಗಿದ್ದು ಅವನ ಧೀರತನ ಹಾಗು ಪರಾಕ್ರಮ ನೋಡಿ, ಅದನ್ನು ಮೆಚ್ಚಿ ಶಿವನು ಅವನಿಗೆ 3 ಬಾಣಗಳನ್ನು ವರವಾಗಿ ನೀಡಿದ್ದನು. ಹಾಗಾಗಿ ಬಾರ್ಬರಿಕಗೆ ‘ತೀನ್ ಬಾಣ್ ದಾರಿ’ ಎಂಬ ಹೆಸರು ಕೂಡ ಉಂಟು. ಶಿವನಂತೆ ಅಗ್ನಿ ದೇವನೂ ಬಾರ್ಬರಿಕನ ಪರಾಕ್ರಮ ಮೆಚ್ಚಿ ಅವನಿಗೆ ಒಂದು ಬಿಲ್ಲನ್ನು ನೀಡಿದ್ದನು. ಶಿವ ಕೊಟ್ಟ ಬಾಣ ಹಾಗು ಅಗ್ನಿದೇವ ಕೊಟ್ಟ ಬಿಲ್ಲು ಇವೆರಡರಿಂದ ಬಾರ್ಬರಿಕನು ಇಡೀ ಮೂರುಲೋಕದಲ್ಲಿ ಯಾರನ್ನಾದರು ಜಯೀಸಬಹುದಾಗಿತ್ತು.
ಹೀಗೆ ಬಾರ್ಬರಿಕನಿಗೆ ಮಹಾಭಾರತದ ಯುದ್ದವು ಶುರು ಆಗೀರುವ ವಿಚಾರ ತಿಳಿದು ತನ್ನ ತಾಯೀ ಮರುವಿಯ ಬಳಿ ‘ಮಹಾಭಾರತದ ಯುದ್ದನೋಡಲು ತುಂಬಾ ಆಸೆಯಾಗುತಿದೆ, ಯುದ್ದ ಹೇಗೆ ನೆಡೆಯುತ್ತೆ ಅಂತ ನೋಡಿ ಬರುವೆ’ ಅಂತ ಹೇಳಿ, ಅವಳ ಅನುಮತಿ ಪಡೆದು ತನ್ನ 3 ಬಾಣ ಹಾಗು ಬಿಲ್ಲನ್ನು ತೆಗೆದುಕೊಂಡು ತನ್ನ ನೀಲಿ ಕುದುರೆ ಏರಿ ಕುರುಕ್ಷೇತ್ರಕ್ಕೆ ಬಂದನು. ಅಲ್ಲಿ ಕೃಷ್ಣನು ಪಾಂಡವರ ಹಾಗು ಕೌರವನ ಕಡೆಯ ಮುಖ್ಯಸ್ಥರನ್ನು ಕರೆಸಿ ಈ ಕುರುಕ್ಷೇತ್ರ ಯುದ್ದದ ನಿಯಮಗಳು, ರೊಪುರೇಷಗಳನ್ನು ಚರ್ಚಿಸುತಿದ್ದನು. ಹೀಗೆ ಮಾತಿನ ನಡುವೆ ಕೃಷ್ಣನು ‘ಈ ಯುದ್ದ ಎಷ್ಟು ದಿನ ನೆಡೆಯಬಹುದು ?’ ಎಂದು ಎಲ್ಲರಲ್ಲಿ ಕೇಳಲಾಗಿ ಭೀಷ್ಮನು 20 ದಿನ, ದ್ರೋಣ 25 ದಿನ, ಕರ್ಣ 30 ದಿನ, ಅರ್ಜುನ 18 ದಿನ ಎಂದು ಕ್ರಮವಾಗಿ ಹೇಳಿದರು. ಆದರೆ ಬಾರ್ಬರಿಕನು ಮಧ್ಯ ಎದ್ದು ನಿಂತ ಎಲ್ಲರಿಗೂ ತನ್ನ ಪ್ರಣಾಮಗಳನ್ನು ತಿಳಿಸಿ ‘ಈ ಮಹಾಭಾರಥದ ಯುದ್ದವನ್ನು ಮುಗಿಸಲು ತನಗೆ ಕೇವಲ ಒಂದು ಗಂಟೆ ಸಾಕು !’ ಅಂತ ಹೇಳಿದನು. ಕೃಷ್ಣ ಸೇರಿದಂತೆ ಆಸ್ಥಾನದಲ್ಲಿ ನೆರದಿದ್ದ ಎಲ್ಲಾ ಹಿರಿಯರಿಗೂ ಬಾರ್ಬರಿಕನ ಮಾತು ಕೇಳಿ ಅವಕ್ಕಾದರು. ಕೃಷ್ಣ ಎದ್ದು ಬಂದು ಬಾರ್ಬರಿಕನಿಗೆ ತನ್ನ ಮಾತನ್ನು ಈಗಲೇ ನಿರೂಪಿಸಲು ತಿಳಿಸಿದನು. ಬಾರ್ಬರಿಕನು ಕೃಷ್ಣ ನೊಡನೆ ಬಯಲಿಗೆ ಬಂದು ‘ಏನನ್ನೂ ತೋರಿಸಲಿ?’ ಎಂದು ಕೇಳಿದನು. ಆಗ ಕೃಷ್ಣನು ತನ್ನ ಮುಂದೆ ಸ್ವಲ್ಪ ದೂರದಲ್ಲಿ ಇದ್ದ ಒಂದು ಅರಳಿ ಮರ ತೋರಿಸಿ ‘ಒಂದೆ ಬಾಣದಲ್ಲಿ ಅರಳಿ ಮರದಲ್ಲಿ ಇರೋ ಎಲ್ಲಾ ಎಲೆಗಳನ್ನೂ ತೂತು ಮಾಡು’ ಅಂತ ಹೇಳಿದನು. ಹಾಗೆ ಹೇಳಿದ ಕೃಷ್ಣನು ತನ್ನ ಮಾಯಾ ಶಕ್ತಿ ಯಿಂದ ಆ ಅರಳಿ ಮರದ ಒಂದು ಎಲೆಯನ್ನು ತನ್ನ ಕಾಲ ಪಾದದ ಕೆಳೆಗೆ ಅವಿತಿಟ್ಟು ಕೊಂಡನು. ಬಾರ್ಬರಿಕನು ತನ್ನ 3 ಬಾಣಗಳಲ್ಲಿ ಒಂದನ್ನು ತೆಗೆದು ಅದನ್ನು ಮಂತ್ರಿಸಿ, ಧನಸ್ಸಿಗೇರಿಸಿ ಎಳೆದು ಬಿಟ್ಟನು. ಆ ಬಾಣವು ಅರಳಿ ಮರದಲ್ಲಿ ಇದ್ದ ಎಲ್ಲ ಎಲೆಗಳನ್ನು ತೂತು ಮಾಡಿ ನಂತರ ಕೃಷ್ಣನು ಎಲೆ ಅವಿತುಕೊಂಡಿದ್ದ ಪಾದದ ಬಳಿ ಬಂದು, ಒಂದು ಸುತ್ತು ಹಾಕಿ ಪುನ ಬಾರ್ಬರಿಕ ಕೈ ಸೇರಿತು. ಕೃಷ್ಣ ತನ್ನ ಪಾದವನ್ನು ಸರಿಸಿ ನೋಡಿದಾಗ, ಅವನಿಗೆ ಆಶ್ಚರ್ಯವಾಗುವಂತೆ ತಾನು ಅವಿತಿಟ್ಟುಕೊಂಡಿದ್ದ ಆ ಎಲೆಯು ತೂತಗಿತ್ತು !
ಕೃಷ್ಣನಿಗೆ ತುಂಬಾ ಸಂತೋಷವಾಗಿ ‘ಬಾರ್ಬರಿಕ, ಇಡಿ ಲೋಕವು ನಿನ್ನಂಥ ವೀರ ಪರಾಕ್ರಮಿಯನ್ನು ಇದುವರೆಗೆ ನೋಡಿಲ್ಲ’ ಎಂದು ಹೋಗಳಿ, ಅವನು ಯುದ್ದದಲ್ಲಿ ಯಾರ ಕಡೆ ಸೇರಬಯಸುತ್ತಾನೆ? ಎಂದು ಕೇಳಿದಾಗ, ಬಾರ್ಬರಿಕನು ತನಗೆ ತನ್ನ ತಾತ ಭೀಮನ ಕಡೆ ಸೇರಿ ಯುದ್ದ ಮಾಡಲು ಇಚ್ಛೆ ಇದ್ದರು, ತಾನು ಯುದ್ದ ನೋಡಲು ತನ್ನ ತಾಯೀಯ ಬಳಿ ಅನುಮತಿ ಕೇಳಿ ಹೊರಡುವ ವೇಳೆಯಲ್ಲಿ ತಾನು ಯುದ್ದದಲ್ಲಿ ಭಾಗವಹಿಸುವುದಾದರೆ ಅದು ಯಾರೋ ಯುದ್ದದಲ್ಲಿ ಸೋಲುತ್ತಿರುತ್ತಾರೋ ಅಂಥವರ ಕಡೆ ಸೇರುತ್ತೇನೆ ಎಂದುಮಾತು ಕೊಟ್ಟಿರುವುದಾಗಿ ತಿಳಿಸಿದನು. ಕೃಷ್ಣನು ಈ ಮಾತು ಕೇಳಿ ಈ ಬಾರ್ಬರಿಕನ್ನು ತನ್ನ ನಿರ್ಧಾರದಂತೆ ನೆಡೆದು ಯುದ್ದದಲ್ಲಿ ಭಾಗವಹಿಸಿದರೆ ಪಾಂಡವರಿಗೆ ಹಾಗು ಧರ್ಮಕ್ಕೆ ಉಳಿಗಾಲವಿಲ್ಲ ಎಂದು ಯೋಚಿಸಿ, ಹಾಗೆ ಇದಲ್ಲದೆ ಇವನು ಯುದದಲ್ಲಿ ಭಾಗವಹಿಸಿದರೆ ಒಂದು ಸಲ ಪಾಂಡವರು ಸೂಲಬಹುದು, ಒಂದು ಸಲ ಕೌರವರು ಸೂಲಬಹುದು, ಹಾಗೆ ಈ ಬಾರ್ಬರಿಕನು ಎರಡು ಕಡೆ ಯುದ್ದ ಮಾಡುವಂತಾಗಿ ಎಲ್ಲರೂ ಸತ್ತು ಅವನೊಬ್ಬನೆ ಉಳಿಯೂ ಸಾಧ್ಯತೆ ಕೂಡ ಹೆಚ್ಚು ಎಂದು ಕೊಂಡು, ಇದಕ್ಕೆ ತಡೆ ಹಾಕಬೇಕು ಅಂತ ನಿರ್ಧರಿಸಿ ಕೃಷ್ಣನು ಬಾರ್ಬರಿಕನಿಗೆ ನಿನ್ನ ಗುರು ಯಾರು? ಎಂದು ಕೇಳಲು, ಬಾರ್ಬರಿಕನು ತಾನು ಈ ಎಲ್ಲ ವಿದ್ಯೆಯನ್ನು ಅಭ್ಯಾಸ ಮಾಡುವಾಗ ಕೃಷ್ಣನನ್ನೇ ಮನಸ್ಸಿನಲ್ಲಿ ಧ್ಯಾನಿಸುತ್ತಿದ್ದರಿಂದ, ನೀನೆ ನನ್ನ ಗುರು ಎಂದು ತಿಳಿಸಿದನು. ಕೃಷ್ಣನು ಇದೇ ಮಾತನ್ನು ನಿರಿಕ್ಷಿಸುತಿದ್ದವನಂತೆ, ಹಾಗಾದರೆ ನನ್ನ ಗುರುದಕ್ಷಿಣೆ ನೀಡುವುದಿಲ್ಲವೆ? ಎಂದು ಕೇಳಿದನು. ಬಾರ್ಬರಿಕನು ಏನು ಬೇಕು? ಅಪ್ಪಣೆಯಾಗಲಿ… ಎಂದಾಗ ಕೃಷ್ಣನು ‘ಗುರುದಕ್ಷಿಣೆಯಾಗಿ ನಿನ್ನ ತಲೆಯನ್ನು ನನಗೆ ನೀಡು’ ಎಂದನು. ಬಾರ್ಬರಿಕನು ಎರಡನೇ ಯೋಚನೆ ಮಾಡದೇ ತನ್ನ ತಲೆಯನ್ನು ತನ್ನ ಬಾಣದಿಂದ ಕತ್ತರಿಸಿ ಕೃಷ್ಣನಿಗೆ ಅರ್ಪಿಸಿದನು. ಕೃಷ್ಣನು ಅವನ ತ್ಯಾಗವನ್ನು ಮೆಚ್ಚಿ ನಿನ್ನನ್ನು ಕಲಿಯುಗದಲ್ಲಿ ‘ಶ್ಯಾಮ’ ಎಂಬ ಹೆಸರಿನಲ್ಲಿ ಜನ ಪೂಜಿಸಲಿ ಎಂಬ ವರ ಕೊಟ್ಟನು. ಬಾರ್ಬರಿಕನು ಕೃಷ್ಣನಲ್ಲಿ ಈ ಮಹಾಭಾರಥದ ಯುದ್ದವನ್ನು ನೋಡಬೇಕೆಂದು ಬಹು ಆಸೆ ಇಟ್ಟು ಕೊಂಡಿದ್ದು, ಹಾಗಾಗಿ ಈ ಯುದ್ದ ಮುಗಿಯುವವರೆಗೂ ತನ್ನ ತಲೆಯನ್ನು ಜೀವಂತವಾಗಿ ಇಟ್ಟು ಯುದ್ದ ನೋಡಲು ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡನು. ಕೃಷ್ಣನು ಅದರಂತೆ ಯುದ್ದ ನಡೆಯುವ ಸಮೀಪದ ಬೆಟ್ಟದಲ್ಲಿ (ಎತ್ತರವಾದ ಸ್ಥಳದಲ್ಲಿ) ಅವನ ತಲೆಯನ್ನು ಎರಡು ಬೂಂಬಿಗೆ ಸಿಕ್ಕಿಸಿ ಯುದ್ದ ನೋಡುವಂತೆ ಅನುಕೂಲ ಮಾಡಿಕೊಟ್ಟ ಎಂಬುದು ಕಥೆ.
ಮುಂದುವರೆದು ಮಹಾಭಾರತ ಯುದ್ದವು ಅರ್ಜುನ ಹೇಳಿದಂತೆ 18 ದಿನಕ್ಕೆ ಮುಗಿದ ಮೇಲೆ ಕೌರವರೆಲ್ಲ ಹತರಾದ ನಂತರ ಪಾಂಡವರಲ್ಲಿ ಯುದ್ದದಲ್ಲಿ ಯಾರು ಹೆಚ್ಚು ಪರಾಕ್ರಮದಿಂದ ಹೋರಾಡಿದರು ಎಂಬ ವಿಷಯವಾಗಿ ಚರ್ಚೆ ಶುರುವಾಯಿತು, ಅವರು ಅ ಬಗ್ಗೆ ಒಂದು ಸರಿಯಾದ ನಿರ್ಧಾರಕ್ಕೆ ಬರಲಾಗದೆ ಇದ್ದಾಗ ಕೃಷ್ಣನು ‘ ನಮ್ಮೆಲ್ಲರಿಗಿಂತ ಬಾರ್ಬರಿಕನು ಪರಾಕ್ರಮಿ… ಈ ಯುದ್ದವನ್ನು ಸಂಪೂರ್ಣವಾಗಿ ಹಾಗು ಸರಿಯಾಗಿ ನೋಡಿರುವವನು ಎಂದರೆ ಅವನೊಬ್ಬನೆ… ಅವನನ್ನೇ ಕೇಳೋಣ’ ಎಂದು ಹೇಳಿ, ಎಲ್ಲರನ್ನು ಬಾರ್ಬರಿಕನ ತಲೆ ಇರುವಲ್ಲಿಗೆ ಕರೆದು ಕೊಂಡು ಬಂದು, ಯುದ್ದದಲ್ಲಿ ಪಾಂಡವರ ಕಡೆ ಯಾರು ಹೆಚ್ಚು ಪರಾಕ್ರಮವಾಗೀ ಹೋರಾಡಿದರು ? ಎಂದು ಕೇಳಲಾಗಿ, ಅದಕ್ಕೆ ಬಾರ್ಬರಿಕನು ನಗುತ್ತೆ ‘ನಿಮ್ಮೆಲ್ಲರಿಗಿಂಥ ಹೆಚ್ಚು ಬಲಶಾಲಿ, ಪರಾಕ್ರಮಿ ಹಾಗು ಈ ಯುದ್ದ ನಿಮ್ಮಂತೆ ಗೆಲ್ಲಲು ಸಹಾಯ ಮಾಡಿದ ವ್ಯಕ್ತಿ ಬೇರೆಯಾರು ಅಲ್ಲ… ಕೃಷ್ಣ ! ಎಂದು ತಿಳಿಸಿದನು. ಅವನೆ ಯುದ್ದಕ್ಕೆ ಕಾರಣ ಕರ್ತ, ಅವನಿಂದಲೇ ನಿಮಗೆ ಗೆಲವು. ರಣರಂಗದಲ್ಲಿ ಎಲೆಲ್ಲೂ ಕೃಷ್ಣನ ಸುದರ್ಶನ ಚಕ್ರವು ಕೌರವರ ಕಡೆಯವರನ್ನು ಕತ್ತರಿಸಿ ಹಾಕುತಿತ್ತು’ ಎಂದು ತಿಳಿಸಿ, ಯುದ್ದ ನೋಡಲು ಅನುವು ಮಾಡಿಕೊಟ್ಟ ಕೃಷ್ಣನಿಗೆ ವಂದನೆ ಸಲ್ಲಿಸಿ ಬಾರ್ಬರಿಕನು ಪ್ರಾಣ ಬಿಟ್ಟನು. ಅವನು ಪ್ರಾಣ ಬಿಟ್ಟ ದಿನ ಶುಕ್ಲ ಪಕ್ಷ, ಫಾಲ್ಗುಣ ಮಾಸದ 12ನೇ ದಿನ. ಅವನ ತಲೆಯನ್ನು ತೆಗೆದು ಕೊಂಡು ಹೋಗಿ ‘ಖತು’ ಎಂಬ ಸ್ಥಳದಲ್ಲಿ ಹೊಳಲಾಯಿತು. ‘ಖತು’ ಎಂದರೆ ಈಗಿನ ‘ರಾಜಸ್ಥಾನ’. ಕಲಿಯುಗದಲ್ಲಿ ಒಮ್ಮೆ ಒಂದು ಹಸು ಬಾರ್ಬರಿಕನ ತಲೆ ಹೂಳಿರುವ ಜಾಗದಲ್ಲಿ ನಿಂತು ತನ್ನ ಕೆಚ್ಚಲಿನಿಂದ ಹಾಲು ಸೋರಿಸಲು ಶುರುಮಾಡಿತಂತೆ. ಜನ ಆಶ್ಚರ್ಯ ಗೊಂಡು ಆ ಜಾಗ ಅಗೆದಾಗ ಅಲ್ಲಿ ಅವರಿಗೆ ಬಾರ್ಬರಿಕನ ತಲೆ ಸಿಕ್ಕಿತಂತೆ. ಅದನ್ನು ಅವರು ಒಬ್ಬ ಬ್ರಾಮ್ಮಣನಿಗೆ ನೀಡಿದರಂತೆ. ಬ್ರಾಮ್ಮಣನು ಅದನ್ನು ಸುಮಾರು ದಿನ ಪೂಜಿಸಿದನೆಂದು ಹೇಳಲಾಗುತ್ತೆ. ಹೀಗಿರುವಾಗ ಖತು ಸಂಸ್ಥಾನದ ರಾಜ ರೂಪ್ ಸಿಂಗ್ ಚೌಹಾನ್ ಗೆ ಅವನ ಮನೆ ದೇವರು ಕನಸಿನಲ್ಲಿ ಬಂದು ಈ ಬಾರ್ಬರಿಕನ ತಲೆಯನ್ನು ಒಂದು ದೇವಸ್ತಾನ ಕಟ್ಟಿ ಪ್ರತಿಷ್ಟಾಪಿಸಿ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲು ಹೇಳಿತಂತೆ. ಅದರಂತೆ ರಾಜ ರೊಪ್ ಸಿಂಗ್ ನು ಕ್ರಿ. ಪೂ. 1027 ರಲ್ಲಿ ದೇವಸ್ಥಾನ ಕಟ್ಟಿಸಿ ಬಾರ್ಬರಿಕನ ತಲೆ ಹಾಗು ಒಂದು ಮೂರ್ತಿಯನ್ನು ಪ್ರತಿಷ್ಟಾಪಿಸಿಸಿದನು. ಈ ದೇವಸ್ಥಾನವನ್ನು 1720 ರಲ್ಲಿ ದೀವಾನ್ ಅಭಯ್ ಸಿಂಗ್ ನು ಈಗಿನ ಸ್ಥಿತಿಗೆ ಪುನರ್ ನಿರ್ಮಾಣ ಮಾಡಿದನು. ಬಾರ್ಬರಿಕನು ರಾಜಸ್ಥಾನದಲ್ಲಿ ಈಗ ‘ಖತುಶ್ಯಾಮಿಜೀ’ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಾನೇ. ಈ ಖತುಶ್ಯಾಮಿಜೀಗೆ ಅಪಾರ ಭಕ್ತ ಸಮುದಾಯವೇ ಉಂಟು. ಹೋಳಿಯ 3-4 ದಿನ ಮುಂಚೆ ರಾಜಸ್ಥಾನದಲ್ಲಿ ನಡೆಯುವ ಫಾಲ್ಗುಣ ಮೇಳದಲ್ಲಿ ಲಕ್ಷಾಂತರ ಜನ ಪಾಲ್ಗೊಂಡು ಬಾರ್ಬರಿಕ ಅಂದರೆ ಖತುಶ್ಯಾಮಿಜೀಯ ದರ್ಶನ ಪಡೆಯುತ್ತಾರೆ.
ಹಾಗೆ ಬಾರ್ಬರಿಕನ ಬಾಣ ಕೃಷ್ಣನ ಪಾದದ ಮೇಲೆ ಸುತ್ತು ಹಾಕಿ ಅವನ ಪಾದವನ್ನು ಘಾಸಿಗೊಳಿಸಿತ್ತು. ಹಾಗಾಗಿ ಅದು ಕೃಷ್ಣನ ವೀಕ್ ಪಾಯಿಂಟ್ ಆಗಿತ್ತು. ಕೃಷ್ಣನ ಸಾವು ಕೂಡ ಪಾದಕ್ಕೆ ‘ ಜರ ’ ಎಂಬ ಬೇಟೆಗಾರ ಬಿಟ್ಟ ಬಾಣ ತಾಕಿ ಪ್ರಾಣ ಹೊಯೀತು ಎಂದು ಹೇಳಲಾಗುತ್ತೆ. ಬಾರ್ಬರಿಕನ ಕಥೆ ಗೊತ್ತಿರೋ ಜನರು ಅವನಿಗೆ ಅವಕಾಶ ಸಿಕ್ಕಿದ್ದರೆ ಮಹಾಭಾರತದ ಯುದ್ದದಲ್ಲಿ ಮಹಾಪರಾಕ್ರಮಿ (ಬೆಸ್ಟ್ ವಾರಿಯರ್) ಎನಿಸುತ್ತಿದ್ದ ಅನ್ನುತ್ತಾರೆ. ಅದೇನೇ ಹೇಳಿ ಮನುಷ್ಯನಿಗೆ ಬರೀ ಚಾಣಾಕ್ಷತನ, ಪರಾಕ್ರಮ, ವಿದ್ಯಾ, ಕೌಶಲ್ಯಗಳು ಇದ್ದರೆ ಸಾಲದು. ಅದನ್ನು ಯಾವಾಗ ಹೇಗೆ ಸರಿಯಾದ ರೀತಿಯಲ್ಲಿ ಉಪಯೋಗಿಸಬೇಕು ಅನ್ನೋ ನಾಲೆಡ್ಜ್ ಇರಬೇಕು. ಬಾರ್ಬರಿಕನು, ತಾನು ಇಂಥವರ ಕಡೆಯೇ ಸೇರಿ ಯುದ್ದ ಮಾಡಬೇಕು... ಅಂತ ಸರಿಯಾದ ಫರಂ (Firm) ಡಿಸಿಷನ್ ತೆಗೆದುಕೊಂಡಿದ್ದರೆ ಮಹಭಾರತದ ಕಥಾ ರೂಪವೇ ಬದಲಾಗುತಿತ್ತೇನೋ. ಈಗಲೂ ಮನಸಿನಲ್ಲಿ ಅದೇ ಪ್ರಶ್ನೆ ಕಾಡುತ್ತಾ ಇದೇ ‘ ಕೃಷ್ಣ… ಬಾರ್ಬರಿಕನಿಗೆ ಹಾಗ್ಯಕೆ ಮಾಡಿದೆ ?... ’

Thursday, September 2, 2010

Hai 9483478030… Bye 9448657473… & ವೈಶಾಕ್ ಕಾಲಿಂಗ್ ಸುಧಾಕರ್.....

2004ರಲ್ಲಿ BSNL SIM ತಗೋಳೋದು ಅಂದ್ರೆ ಸರಕಾರೀ ಮೆಡಿಕಲ್ ಕಾಲೇಜಿನಲ್ಲಿ ಫ್ರೀ ಮೆಡಿಕಲ್ ಸೀಟ್ ತಗೆದುಕೊಂಡ ಹಾಗೆ ಇತ್ತು. ಯಪ್ಪಾ…ಏನ್ ಕಾಸ್ಟ್ಲಿ ಗೊತ್ತಾ?. SIM ಬೆಲೆ ನೂರು ರುಪಾಯೀ ಇದ್ರೂ ಬ್ಲಾಕ್ ನಲ್ಲಿ ಅದನ್ನು Rs 800-1000 ರಕ್ಕೆ ಮಾರುತ್ತ ಇದ್ದರು. ಸಾಲದಕ್ಕೆ ಈ BSNL ನೆಟ್ವರ್ಕ್ ಬಗ್ಗೆ ಅವತ್ತು ಜನರಲ್ಲಿ ಇದ್ದ ಭಾವನೆ ಏನೆಂದರೆ ‘ಒಂದು ಊರಿನಲ್ಲಿ ಯಾರದರೊಬ್ಬರ ಮನೆಯಲ್ಲಿ ಒಂದೇ ಒಂದು BSNL ಲ್ಯಾಂಡ್ ಲೈನ್ ಕನೆಕ್ಷನ್ ಇದ್ದರೆ ಸಾಕು ಅಥವಾ BSNL ಲ್ಯಾಂಡ್ ಲೈನ್ ನ ಪೋಲ್ ಇದ್ದರೆ ಸಾಕು, ಇಡಿ ಊರಿನಲ್ಲಿ BSNL ನೆಟ್ವರ್ಕ್ ಸಿಗುತ್ತೆ ’ !! ??. ಸರಿ ನನಗೆ ಫಾರೆಸ್ಟ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಸಿಕ್ಕಿ ನನ್ನನ್ನು ಚಿಕ್ಕಮಗಳೂರಿನ ಕೂಪ್ಪ ಡಿವಿಷನ್ಗೆ ಟ್ರಾನ್ಸವರ್ ಮಾಡಿದಾಗ ಅಲ್ಲಿ ವಾತಾವರಣ ಹೇಗೆ ಇದೆ ಅಂತ ನೋಡಿ ಬರಲು ಹೋಗಿದ್ದಾಗ ತಿಳಿದು ಬಂದ ಸಂಗತಿ ಏನೆಂದರೆ, ಅಲ್ಲಿ BSNL ನೆಟ್ವರ್ಕ್ ಬಿಟ್ಟರೆ ಬೇರೆ ಸಿಗುವುದಿಲ್ಲ ಅನ್ನೋದು. ಅಪ್ಪಾಜಿ ಬೇರೆ “ BSNL SIM ಸಿಗೋದು ಕಷ್ಟ ಕಣಪ್ಪ… SIM ಸಿಕ್ಕರೆ ಒಂದು ಹೊಸ ಮೊಬೈಲ್ ತೆಗೆದು ಕೊಡ್ತೀನಿ…” ಅಂದಿದ್ದರು. ಸರಿ ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಫಾರೆಸ್ಟರ್ ಆಗಿ ಕೆಲಸ ಮಾಡುತ್ತಿರುವಾಗ ಅಲ್ಲಿನ BSNL ಆಫೀಸ್ ನವರು BSNL SIM ಗೆ ಅಪ್ಲಿಕೇಶನ್ ಕಾಲ್ ಮಾಡಿದ್ದರು ನಾನು ಹೋಗಿ ಅಪ್ಲಿಕೇಶನ್ ಸಬ್ಮಿಟ್ ಮಾಡಿಬಂದೆ. ಆವಾಗ ಮೇ 2004. ಇದನ್ನು ಈಗಿನ ಕಾಲದಲ್ಲಿ ಜನರಿಗೆ ಹೇಳಿದರೆ ನಂಬುತ್ತಾರೆಯೇ…? “ಏನೋ.. BSNL ನವರು ಈಗ ರೋಡ್ ರೋಡ್ ನಲ್ಲಿ ಮೇಳ ಇಟ್ಟು SIMಗಳನ್ನೂ ಫ್ರೀಯಾಗಿ ಹಂಚುತ್ತಿರುವಾಗ ನೀನು ಅದಕ್ಕೆ ಅಪ್ಲಿಕೇಶನ್ ಹಾಕಿದ್ದ…?” ಅಂತ ಆಶ್ಚರ್ಯ ವ್ಯಕ್ತಪಡಿಸ್ತಾರೆ. ನನಗೆ ಜೂನ್ 2004ರಲ್ಲಿ ಧಾರವಾಡದ ಗುಂಗರಗಟ್ಟಿಯಲ್ಲಿ ಒಂದು ವರ್ಷ ಫಾರೆಸ್ಟರ್ ಟ್ರೈನ್ನಿಂಗ್ ಗೆ ಹಾಕಿದ್ದರು. ಸೊ ಚಿಕ್ಕಮಗಳೂರಿನಿಂದ ರಿಲೀವ್ ಆಗಿ ಧಾರವಾಡಕ್ಕೆ ಬಂದೆ. ಆಗ್ 2004 ರಲ್ಲಿ ನರಸಿಂಹರಾಜಪುರದ ಆಫೀಸ್ ಟೈಪಿಸ್ಟ್ ವಾಣಿ ನನ್ನ ರೊಂ ಮೆಟ್ ಅನಿಲನ ಮೊಬೈಲ್ ಗೆ ಕಾಲ್ ಮಾಡಿ “ರೀ ಸುಧಾಕರ್ congratulation ಕಣ್ರೀ… ನಿಮ್ಮ SIM ಬಂದಿದೆ ರೀ….. Rs 120 ಕಟ್ಟಿ ಬಿಡಿಸಿಕೊಳ್ಳಬೇಕು” ಅಂದರು. ಸರಿ ತಕ್ಷಣ ನಾನು ಒಂದು ಆತರೈಜೇಶನ್ ಲೆಟರ್ ಮತ್ತೇ ದುಡ್ಡು ಎರಡನ್ನು ಕಳಿಸಿ SIM ಬಿಡಿಸಿಕೊಳ್ಳಿ ಅಂತ ಲೆಟರ್ ಬರೆದು ಟೈಪಿಸ್ಟ್ ವಾಣಿಗೆ ಕಳಿಸಿದೆ. ಅದರಂತೆ ಅವರು SIM ತೆಗೆದುಕೊಂಡು ನಾನು ಹೇಳಿದಹಾಗೆ ನನ್ನ ತಂದೆಗೆ ಕೊರಿಯರ್ ಮಾಡಿದರು. ನನ್ನ ತಂದೆ ಆ SIMನ ಜೊತೆ ಆ ಕಾಲಕ್ಕೆ ಐಕಾನ್ ಸೆಟ್ ಆಗಿದ್ದ ನೋಕಿಯಾ 1100 ಅನ್ನು Rs 4800/- ಗೆ ಖರೀದಿ ಮಾಡಿ ಕಳಿಸಿಕೊಟ್ಟರು. ಇದು ನಡೆದಿದ್ದು ಆಗಸ್ಟ್ 2004ರಲ್ಲಿ. ಆದರೆ ನನ್ನ ದುರಾದೃಷ್ಟನೋ ಏನೋ ಅಕ್ಟೋಬರ್ 2004ರ ಮೊದಲ ವಾರ ನನ್ನ ಮೊಬೈಲ್ ಸೆಟ್ಟನ್ನು ನನ್ನ ರೊಂನಲ್ಲೇ ಯಾರೋ ಕದ್ದು ಬಿಟ್ಟರು!!! ಒಳ್ಳೇ ಕಳ್ಳ ನನ್ನ ಮುಂದೇನೇ ಬಂದು, ಮೊಬೈಲ್ ಕದ್ದು ‘ ಜೂಟ್ ’ ಅಂತ ಹೇಳಿ ಓಡಿ ಹೋದಹಾಗೆ ಇತ್ತು ಆ ಅನುಭವ. ಪುನ ನಾನು ನನ್ನ ಮೊಬೈಲ್ ಧಾರವಾಡ್ ಸಿಟಿಯಲ್ಲಿ ಎಲ್ಲೊ ಕಳೆದುಹೋಗಿದೆ ಅಂತ ಕಂಪ್ಲೈಂಟ್ ಲಾಡ್ಜ ಮಾಡಿ, ಮೈಸೂರ್ ಗೆ ಬಂದ ನಂತರ ಡೂಪ್ಲಿಕೆಟ್ SIM ಅನ್ನು ತೆಗೆದುಕೊಂಡೆ. ಇಷ್ಟೆಲ್ಲಾ ಯಾಕೆ ಆ SIM ಬಗ್ಗೆ ಬರೀತಾ ಇದ್ದೀನಿ ಅಂದ್ರೆ ಮೊನ್ನೆ ಜುಲೈ 2010 ರಲ್ಲಿ ನಾನು ಆ ನನ್ನ SIMನ ಚೇಂಜ್ ಮಾಡಿದೆ. ಸೊ ಆ ಚಿಕ್ಕಮಗಳೂರಿನಲ್ಲಿ ತೆಗೆದುಕೊಂಡಿದ್ದ SIM ನಂಬರ್ ನನ್ನ ಜೊತೆ 6 ವರ್ಷ ಇತ್ತು. ಏನ್ ಮಾಡೋದು…? BSNL ನವರು ಯಾವುದೇ SMS ಪ್ಯಾಕೇಜ್ ಅನ್ನು ಒದಗಿಸದ ಕಾರಣ SIM ಚೇಂಜ್ ಮಾಡಬೇಕಾಗಿ ಬಂತು!




ಇವತ್ತಿನ ಕಾಲದ ಜನರ ಮೆಂಟಾಲಿಟಿ ಹೆಂಗಿದೆ ಎಂದರೆ BSNL SIM ಉಪಯೋಗಿಸುವವರು ಅಂದ್ರೆ, ಒಂದೂ ಅವನು ವಯಸ್ಸಾಗಿರೋ ವ್ಯಕ್ತಿ… ಇಲ್ಲವೂ ಅವನು ಆಫೀಶಿಯಲ್ ಆಗಿರ್ತಾನೆ (ಹುಡುಗೀರಂತೂ 99% ಯಾರು BSNL SIM ತಗೆದುಕೊಳ್ಳೋದಿಲ್ಲ ಬಿಡಿ) ಅನ್ನೋ ನಂಬಿಕೆ. ಮೊನ್ನೆ ಹಾಗೆ ಯಾಕೋ ನಂಗೆ ನನ್ನ ಫ್ರೆಂಡ್ಸ್ ಗಳು ಒಬೊಬ್ಬರಾಗಿ ಮಿಸ್ ಆಗಿ ಹೋಗ್ತಾ ಇದ್ದರೆ, ಕಾಂಟಾಕ್ಟ್ ತಪ್ಪಿ ಹೋಗ್ತಾ ಇದೆ, ನನ್ನ ಮತ್ತು ನನ್ನ ಸ್ನೇಹಿತರ ನಡುವಿನ ಗ್ಯಾಪ್ ಜಾಸ್ತಿ ಆಗ್ತಾ ಇದೆ ಅಂತೆಲ್ಲ ಅನ್ನಿಸಿ ನನಗೆ 6 ವರ್ಷ ಕನೆಕ್ಷನ್ ಹಾಗು ಸಾಥ್ ನೀಡಿದ್ದೆ SIM ಚೇಂಜ್ ಮಾಡೋ ಮಹತ್ವವಾದ ನಿರ್ಧಾರ ಕೈಗೊಂಡೆ. SIM ಚೇಂಜ್ ಮಾಡಿ ಎಲ್ಲರಿಗೂ “ಹಲೋ ಸರ್/ ಫ್ರೆಂಡ್ಸ್ ದಿಸ್ ಇಸ್ ಸುಧಾಕರ್(ಲೋಕು) ಪ್ರೊಂ ಸಿ.ಕೆ.ಜಿ.ಬಿ, ಕೆ ಆರ್ ನಗರ್ ( X ಫಾರೆಸ್ಟರ್) ಐ ಹಾವ್ ಚೇಂಜ್ed ಮೈ ನಂಬರ್ ಪ್ಲೀಸ್ ಅಪ್ ಡೇಟ್ ಮೈ ನ್ಯೂ ನಂಬರ್” ಅಂತ ಮೆಸೇಜ್ ಮಾಡಿದೆ. ಅದು ಎಷ್ಟು ಜನರಿಗೆ ತಲುಪಿತೋ, ತಲುಪಿದ ಜನರಲ್ಲಿ ಎಷ್ಟು ಜನ ಓದಿ, ನಂಬರ್ ಅಪ್ ಡೇಟ್ ಮಾಡಿಕೊಂಡರು ಗೊತ್ತಿಲ್ಲ. ಬಟ್ ನನ್ನ ಒಬ್ಬಆತ್ಮಿಯ ಹಳೇ ಗೆಳಯ ವೈಶಾಕ್ ಅಂತೂ ಅಪ್ ಡೇಟ್ ಮಾಡಿಕೊಂಡಿರಲಿಲ್ಲ. ಸರಿ ನನ್ನ ಹೊಸ SIM ನಲ್ಲಿ ದಿನ 300 ಲೋಕಲ್ SMS, 20 ನ್ಯಾಷನಲ್ SMS ಫ್ರೀ… ಅನ್ನೋ ಆಫರ್ ಇತ್ತು. ಸರಿ ಎಲ್ಲರಿಗೂ ಬೆಳಗಿನ ಹೊತ್ತು ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಲು ಶುರು ಮಾಡಿದೆ. ಮಧ್ಯ ಮಧ್ಯ ಕೆಲವರಿಗೆ ನನಗೆ ಬಂದಿದ್ದ ಜೋಕ್ಸ್, ಪಿ.ಜೇ, ಇನ್ನು ಕೆಲವರಿಗೆ ಕೆಲವು ಪೋಲಿ (ನಾನ್ ವೆಜ್) ಮೆಸೇಜ್ ಗಳನ್ನೂ ಫಾರ್ವರ್ಡ್ ಮಾಡ್ತಾ ಇದ್ದೆ. ಅವತ್ತು ಜುಲೈ 2010 ರ ಎರಡನೆ ಶನಿವಾರ ನನ್ನ MBA ಮೂರನೆ ಸೆಮಿಸ್ಟರ್ ನ ಎಕ್ಷಮ್ಸ ನಡೀತಾ ಇದ್ದವು, ನಾನು ಆಫೀಸಿಗೆ 11 ದಿನ ರಜೆ ಹಾಕಿದ್ದೆ. ನನ್ನ ಆಪ್ತ ಸ್ನೇಹಿತ ಪ್ರಸಾದೀ ಕೂಡ ನಾನು MBA ಸೇರಿದ ಒಂದು ವರ್ಷದ ನಂತರ ಅವನು MBA ಗೆ ಸೇರಿದ್ದ. ಅವನದು ಮೊದಲನೆಯ ಸೆಮಿಸ್ಟರ್ ಎಕ್ಷಮ್ಸ ನೆಡಿತಾ ಇತ್ತು. ಇಬ್ಬರು ಇಂಜಿನಿಯರಿಂಗ್ ಓದೋ ಟೈಮ್ನಿಂದಲೂ ಯಾವುದೆ ಎಕ್ಷಮ್ಸ ಬಂದರು ನನ್ನ ಮನೆಯಲ್ಲೇ ಕಂಬೈನ್ ಆಗಿ ಸ್ಟಡೀ ಮಾಡ್ತಾ ಇದ್ದೆವು. ಟೈಮ್ ರಾತ್ರಿ 9.10 ಆಗಿತ್ತು ಪ್ರಸಾದೀ ನನ್ನ ರೂಮಿನ ಅಟ್ಯಾಚ್ಡ್ ಬಾತ್ರೂಂನ ಬಾಗಿಲ ಮೇಲೆ ಇರೋ ಗೋಡೆಗೆ ಹಾಕಿರೋ ಗಡಿಯಾರ ನೋಡಿ “ಮಗ 9.10 ಅಯೀತು… ಯಾಕೋ ಓದಿ… ಓದಿ… ತಲೆ ಬಿಸಿ ಆಗಿದೆ ಸ್ವಲ್ಪ ಸಿಮಿ(ಅವನ ಗರ್ಲ್ ಫ್ರೆಂಡ್) ಜೊತೆ ಮಾತಾಡಿ ಕೊಂಡು ಹಾಗೆ ಊಟ ಮಾಡಿಕೊಂಡು ಬರ್ತನಿ” ಅಂತ ಹೇಳಿ ಹೋದ. ನಾನು ಲೈಟ್ ಆಫ್ ಮಾಡಿ ನನ್ನ ರೂಂ ಇಂದ ಇನ್ನೇನು ಹೊರಗೆ ಬರಬೇಕು ಅಷ್ಟರಲ್ಲಿ ನನ್ನ ಫೋನು ‘When The Thron Bush turns White, That’s when I’ll Come Home….’ ಅಂತ ರಿಂಗ್ ಆಗ ತೊಡಗಿತು. ಫೋನ್ ನೋಡಿದೆ ‘Vaishak calling…’ ಅಂತ ಡಿಸ್ಪ್ಲೇ ಬರ್ತಾ ಇತ್ತು. ಓಹ್ ಸಿಸ್ಯಾ ಏನಪ್ಪಾ ಇದ್ದಕಿದ್ದಂತೆ ನೆನಸಿಕೊಂಡುಬಿಟ್ಟಿದ್ದಾನೆ ಅಂದುಕೊಂಡು ಕಾಲ್ ರಿಸೀವ್ ಮಾಡಿ “ಹಲೋ ಮಗ…..” ಅಂದೆ. ಆ ಕಡೆ ಇಂದ ವೈಶು ಸ್ವಲ್ಪ ಕಿಕ್ಕ್ ವಾಯ್ಸ್ ನಲ್ಲಿ “ಹಲೋ ಯಾರೂ….. ಯಾರು ಇದು…..” ಅಂದ. ನಾನು “ಮಗ ನಾನು… ಸುಧಾಕರ್ ಮೈಸೂರ್ ಇಂದ….. ಯಾಕಲ ಮಗ ನಂಬರ್ ಸೇವ್ ಮಾಡಿಕೊಂಡಿಲ್ಲವಾ...?” ಅಂತ ಕೇಳಿದೆ. ಅದಕ್ಕೆ ವೈಶು “ ಓಹ್.. ನೀನೆನ್ಲಾ….. ?ನಂಬರ್ ಯಾವಾಗ ಚೇಂಜ್ ಮಾಡಿದೆ?” ಅಂತ ಕೇಳಿದೆ. ಅದಕ್ಕೆ ನಾನು “ನಂಬರ್ ಚೇಂಜ್ ಮಾಡಿ 3 ದಿನ ಅಯೀತು… ಕಳಿಸಿದ್ದನಲ್ಲಾ…? ನಂಬರ್ ಅಪ್ ಡೇಟ್ ಮಾಡಿಕೊಳ್ಳಿ ಅಂತ… ಏನ್ ಯಾವದೋ ಹುಡುಗಿ ನಂಬರ್ ಅಂತ ಫುಲ್ ಕುಶ್ ಆಗೀ ಫೋನ್ ಮಾಡಿಬಿಟ್ಟೆನೋ ಅಲ್ಲವಾ..?” ಅಂದೆ. ಅದಕ್ಕೆ ಅವನು “ಹ್ಞೂ…. ಕಾಣಲ ಹುಡ್ಗೀರು F**K GIK ಅನ್ನೋ ಮೆಸೇಜಸ್ ಕಳಿಸ್ತಾರೆ…!!!??? ಲೋ ಯಾರೂ ನಮ್ಮ ಹುಡುಗರೇ ಅಂತ ಗೊತ್ತಿತ್ತು ಬಟ್ ನೀನು ಅಂತ ಗೊತ್ತಿರಲಿಲ್ಲ ಕಣೋ..” ಅಂತ ಹೇಳಿದ. ನಾನಿದ್ದು “ಸರಿ ನಾನು ಮೆಸೇಜ್ ಕಳಿಸೋಕೆ ಶುರು ಮಾಡಿ 3 ದಿನ ಅಯೀತು, ಈಗ ಇವತ್ತು ಡೌಟ್ ಬಂತ ನಿನಗೆ?” ಅಂತ ಕೇಳಿದೆ. ಅವನು ಅದಕ್ಕೆ “ಅವತ್ತೇ ಕೇಳಬೇಕು ಅಂತ ಅಂದು ಕೊಂಡೆ ಕಣೋ… ಕಾಲ್ ಮಾಡೋಣ… ಮಾಡೋಣ… ಅಂತ ಅಂದುಕೊಂಡು ಮರೆತೆ ಹೊಯೀತು… ಇವತ್ತು ನಾವು ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡ್ತಾ ಇದ್ದೆವು, ಎಣ್ಣೆ ಹಾಕಿದ ಮೇಲೆ ಯಾಕೋ ತಲೆ ಕೆಟ್ಟು ಹೊಯೀತು… ಯಾರಪ್ಪ ಇದು…? ನೋಡೋಣ ಅಂತ ಕಾಲ್ ಮಾಡಿದೆ ಅಷ್ಟೇ. ಏನ್ ಮಾಡ್ತಾ ಇದ್ದೆ ?” ಅಂತ ಕೇಳಿದ. “ಏನಿಲ್ಲ ಮಗ MBA ಎಕ್ಷಮ್ಸ ಇತ್ತು ನಾಳೆ, ಓದುತ್ತ ಇದ್ದೆ… ಏನ್ ಸಮಾಚಾರ ? ಫುಲ್ ಟೈಟಾ?” ಅಂದೆ. ಅವನು “ಯೇ… ಇಲ್ಲ ಗುರು ದುಡ್ಡು ಸಾಲಲಿಲ್ಲಾ… ಈಗಷ್ಟ ಸ್ವಲ್ಪ ಹೊತ್ತಿಂದೆ ರೆಸ್ಟೋರೆಂಟ್ ನಿಂದ ಹೊರಗೆ ಎದ್ದು ಬಂದೆವು. ಯಾರೂ 2000 ರೂಪಯೀ ಸಾಲ ತಗೊಂದಡಿದ್ದ ಹಂಗೆ ಅದನ್ನ ಈಸಿಕೊಂಡು ಹೋಗೋಣ ಅಂತ ಗಾಡಿ ತಗೊಂಡು ನಮ್ ಸಿಸ್ಯಾ ಒಬ್ಬನ ಜೊತೆ ಬಂದೆ” ಎಂದ. ನಾನು ಅದಕ್ಕೆ “ ಏನ್ ಗಾಡಿ ಚೇಂಜ್ ಮಾಡಿದ ಗುರು? ಅಥವಾ ಇನ್ನು Rx 135 ನೆ ಓಡಿಸ್ತಾ ಇದ್ದೀಯಾ?” ಅಂದೆ. ಅದಕ್ಕೆ ಅವನು “ ಏನ್ ಮಗಾ ಅವಗಲಿಂದ ಗಾಡಿ ಆನ್ ನಲ್ಲೆ ಇದೆ... Rx ಸೌಂಡ್ ಗೊತ್ತಾಗಲ್ಲವಾ…? ತಡಿ ಒಂದು ನಿಮಿಷ…” ಅಂತ ಹೇಳಿ, ಗಾಡಿ ಮೇಲೆ ಕೂತಿದ್ದ ಅವನ ದೋಸ್ತ್ ಗೆ “ಸಿಸ್ಯಾ ಲೋ ಅಕ್ಸಲಾರೇಟ್ರ್ ರೈಸ್ ಮಾಡ್ಲ…..” ಅಂದ. ಅವನ ಫ್ರೆಂಡ್ ಎಣ್ಣೆ ಹಾಕಿದ್ದನೋ ಇಲ್ಲವೋ ಅಕ್ಸಲಾರೇಟ್ರ್ ಅನ್ನೋ ಫುಲ್ ರೈಸ್ ಮಾಡಿದ ಅನ್ನಿಸುತ್ತೆ, ವೈಶಾಕ್ ನ ಗಾಡಿ ‘Drooooooooooooooooooo… Droonn… Droonn… ಅಂತು.



ವೈಶು ಫೋನ್ ನಲ್ಲಿ “ ಯಂಗೇ…? ಸೌಂಡು…? ಕೇಳಿಸ್ತಾ…? ಅಥವಾ ಇನ್ನೊಂದು ಸಲ ರೈಸ್ ಮಾಡಿಸಲಾ...? ” ಅಂತ ಕೇಳಿದ. ನಾನು “ ಲೋ… ಏನ್ಲಾ ಅದು? ಸಾಕು ಬಿಡಲಾ…” ಅಂದೆ. ವೈಶಾಕ್ ಪುನ್ಹ ಅವನ ಫ್ರೆಂಡ್ ಗೆ ಕೂಗಿ ಹೇಳಿದ “ ಮಗಾ ಸಾಕು ಆಫ್ ಮಾಡ್ಲ…”. ನಾನು, ವೈಶಾಕ್ ಪಿ.ಯು.ಸಿ.ಯಲ್ಲಿ ಓದುವಾಗ ನಮ್ಮ ಜೊತೆ ಜಂಡಾ.., ಎಂ.ಸೀ.., ಸೀನಾ.. ಅನ್ನೋ ಇನ್ನು 3 ಜನ ಫ್ರೆಂಡ್ಸ್ ಇದ್ದರು. ನಾವೆಲ್ಲ ಸಕ್ಕತ್ತು ಕೂಳೆ(Masti) ಮಾಡ್ತಾ ಇದ್ದೆವು. ಅವರನ್ನ ನೆನೆಸ್ಕೊಂಡು ವೈಶು ನ ಕೇಳಿದೆ “ ಮಗ ಜಂಡಾ.., ಎಂ.ಸೀ.., ಸೀನಾ.. ಯಾರದ್ರು ಸಿಕಿದ್ದರೆನೋ…”? ವೈಶು ಅದಕ್ಕೆ “ ಇಲ್ಲ ಗುರು... ಯಾರು ಸಿಕ್ಕಿಲ್ಲ....” ಅಂದ. “ ಮತ್ತೇ… ಮೈಸೂರ್ ಗೆ ಬಾರೋ ಯಾವಾಗಲಾದರು” ಅಂದೆ. ಅವನು “ ಮೈಸೂರ್ ನಲ್ಲಿ ಏನು ಇದೆ ಅಂತ ಬರೋಣ…? ನೀನೆ ಬರ್ಲಾ ಬ್ಯಾಂಗಲೋರ್ ಗೆ ಪಾರ್ಟಿ ಮಾಡ್ಕೊಂಡು ಹೋಗುವಂತೆ. ಜಾಸ್ತಿ ಏನು ಬೇಡ ಒಂದು 2000 ರುಪಾಯೀ ತೆಗೆದುಕೊಂಡು ಬಾ. ನೀನೇನು ಪಾರ್ಟಿಗೆ ದುಡ್ಡು ಹಾಕಬೇಡಪ್ಪ ನಾವೇ ಕೊಡಿಸ್ತಿವಿ... ಬೈ ಚಾನ್ಸ್ ಶಾರ್ಟ್ಜ್(Shortage) ಆದರೆ ಅಂತ ತರೋಕೆ ಹೇಳಿದೆ ಅಷ್ಟೇ… ಓಹ್.. ನನ್ನ ಫ್ರೆಂಡ್ ದುಡ್ಡು ಕೊಟ್ಟಿ ಕಳಿಸಿದಾ ಅನ್ನಿಸುತ್ತೆ… ಪುನ್ಹ ರೆಸ್ಟೋರೆಂಟ್ ಹೋಗ್ಬೇಕು ” ಅಂದ. ನಾನು “ ಯಾವ ಏರಿಯಾ ಮಗಾ...?” ಅಂದೆ. ಅವನು “ ಯಾವದು ರೆಸ್ಟೋರೆಂಟ್ ಇರೋದಾ? ಜಯನಗರ್ ಹತ್ತಿರ ಮಗಾ…” ಅಂದ. ನಾನು “ ಓಹ್… ಏನ್ ಈಗ ಜಯನಗರ್ ಫುಲ್ ಪಾಶ್ & ಕಲರ್ ಪುಲ್ ಏರಿಯಾನಾ...?” ಅಂತ ಕೇಳಿದೆ. ಅವನು “ ಎಣ್ಣೆ ಹೊಡಿದಾಗ ಏನ್ಲಾ ಎಲ್ಲಾ ಏರಿಯಾನು ಕಲರ್ ಪುಲ್ ಆಗೀ ಕಾಣುತ್ತದೆ.… ಸ್ಲಂ ಕೂಡ….!!? ” ಅಂದ. ಓಹೋ… ಇವನು ಫುಲ್ ಜೋಶ್ನಲ್ಲಿ ಇದ್ದಾನೆ…ಇನ್ನು ಯಾವಾಗಲಾದರೂ ಮಾತಾಡೋಣ ಅಂತ ಅನ್ನದು ಕೊಂಡು ನಾನು “ ಮತ್ತೇ ಇನ್ನೇನೂ ಮಗಾ…? ಜಂಡಾ.., ಎಂ.ಸೀ.. ಸಿಕ್ಕಿದ್ದಾರಾ?” ಅಂತ ಪುನ್ಹ ಕೇಳಿದೆ. ಅವನು “ ಯಾಕ್ ಮಗಾ ಫೋನ್ ಇಡಬೇಕೇನ್ಲಾ…? ಇರಿಟೇಟ್ ಆಗ್ತಾ ಇದ್ದೀಯ….? ಕೇಳಿದ್ದನ್ನೇ ಕೇಳ್ತಾ ಇದ್ದೀಯಾ? ಅವಾಗಲೇ ಹೇಳಲಿಲ್ಲವ ಅವರು ಸಿಕ್ಕಿಲ್ಲ ಅಂತ? ”ಅಂದ. ನಾನು “ಹಾಗೇನು ಇಲ್ಲ ಮಗಾ… ಹಳೆ ದೋಸ್ತ್ ಕಾಲ್ ಮಾಡಿದಾಗ ಅವನ ಜೊತೆ ಮಾತಾಡೋ ಖುಷಿ ಬೇರೆ ಯಾವಾಗ ಇರುತ್ತೆ ಹೇಳು?” ಅಂದು . ಪುನ್ಹ “ ಮದುವೆ ಏನ್ ಕಥೇಲಾ..? ಯಾವಗಪ್ಪ ಮದುವೆ ಆಗೋದು?” ಅಂತ ಕೇಳಿದೆ. “ ಇನ್ನು ನೀವೆಲ್ಲ ಇದ್ದಿರಲ್ಲಪ್ಪಾ… ನಮ್ಕಿಂಥ ಮುಂಚೆ ಕೆಲಸಕ್ಕೆ ಸೇರ್ಕಂಡ್ರಿ…ನೀವು ಫಸ್ಟ್ ಆಗಿರಪ್ಪಾ… ನಮ್ಮ ಮನೇಲಿ ಎಲ್ಲಾ ಇಷ್ಟು ಬೇಗ ಮಾಡ್ತಾರೆ? ನಾನು ಏನಾದರು ಅಂದ್ರೆ ‘ಏನ್ ಇವನು ಇನ್ನು ಹುಡುಗ್ ಹುಡುಗುರ್ತಾರಾ ಆಡ್ತಾನೆ…’ ಅಂತಾರೆ. ಯಾವಾಗಲಾದರು ಟಿವಿ 9 ನಲ್ಲಿ ತಕ್ಷಣ ಫೇಮಸ್ ಆಗಿರೋ ಜನ ಬಂದಾಗ ನಾನು ‘ಇವನು 2-3 ವರ್ಷದ ಹಿಂದೆ ನನಗೆ ಪರಿಚಯ ಇದ್ದ!!’ ಎಂದರೆ ಫುಲ್ ಶಾಕ್ ಆಗೀ ‘ಹೊಂ...ಏನೋ ಇವನು....’ ಅಂತಾರೆ…. ಒಂದೊಂದು ಸಲ ಒಂದೊಂದು ತರಾ…ಏನ್ ಮಾಡೋದಪ್ಪ?” ಅಂದ ನಾನು “ ಇನ್ನೇನು ಮಗಾ ಸಮಾಚಾರ… ಊಟ ಅಯೀತಾ..?” ಅಂದೆ ಅವನು “ ಓಹ್ಹ್…. ಗುರು… ಫುಲ್ ಬೇಜಾರ್ ಆಗೀ ಬಿಟ್ಟಿದ್ದೀಯಾ ಬಿಡು. ಸರಿ ಫೋನ್ ಇಡ್ತೀನಿ… ಓಕೆ ನಾ…? ನಾನು Usually ಡ್ರಿಂಕ್ಸ್ ತಗೊಂಡಾಗ ಯಾವಾಗಲು ಯಾರಿಗೂ ಫೋನ್ ಮಾಡಲ್ಲಾ ಮಾಡಿದರೆ ಮಾತ್ರ ಮಾತಾಡುತ್ತಾ ಇರಬೇಕು ಅನ್ನಿಸುತ್ತೆ. ಏನು ಇದು ಯಾರ್ರ್ ನಂಬರು ಅಂತ ತಿಳ್ಕೊಲೋಕೆ ಮಾಡಿದೆ ಅಷ್ಟೇ. ಸರಿ ನೀನು ಓದು ಗುರು… ಟೈಮ್ ವೇಸ್ಟ್ ಮಾಡಬೇಡ… ನನ್ನ ಫ್ರೆಂಡ್ಸ್ ಎಲ್ಲಾ ರೆಸ್ಟೋರೆಂಟ್ ಒಳಗೆ ಹೋದರು… ನಾನು ಹೋಗ್ತೀನಿ… ಪುನ್ಹ ಫೋನ್ ಮಾಡ್ತಿನಿ Bye La…” ಅಂದು ಕಾಲ್ ಕಟ್ ಮಾಡಿದ.



ನನಗಂತೂ ಅವನ ಜೊತೆ ಮಾತಾಡಿದ ಆ 8-9 ನಿಮಿಷ 1 ಗಂಟೆ ಆದಂತೆ ಅನುಭವ ಆಗಿತ್ತು. ನನಗೆ ಮೊದಲಿಂದಲೂ ನನ್ನ ಫ್ರೆಂಡ್ಸ್ ಸರ್ಕಲ್ ನಲ್ಲಿ Especially ವೈಶಾಕ್ ಕಂಡರೆ ಏನೋ ತುಂಬಾ ಇಷ್ಟ. ನನ್ನೋಬ್ಬನಿಗೆ ಅಲ್ಲಾ ಅವನ ಫ್ರೆಂಡ್ಸ್ ಎಲ್ಲರಿಗೂ. ಅವನ ಮುಖ ನೋಡಿದರೆ ಪುಲ್ ಸಿರಿಯಸ್ ಅನ್ನಿಸುತ್ತೆ ಬಟ್ ಯಾವಾಗಲು Superb ಕಾಮಿಡಿ ಡೈಲಾಗ್ಸ್ & ಜೋಕ್ಸ್ ಹೇಳುತ್ತಾ ಇರುತ್ತಾನೆ. ನಾನು ಅವನು 4th Std to 7th Std ಒಟ್ಟಿಗೆ ಓದಿದ್ದಾದರು ಪುನ್ಹ ನಾವು ಕ್ಲೋಸ್ ಆಗಿದ್ದು ಪಿ.ಯು.ಸಿ. ಗೆ ಮರಿಮಲ್ಲಪ್ಪ ಕಾಲೇಜಿಗೆ ಸೇರಿದ ನಂತರ. ಆ ದಿನಗಳಲ್ಲಿ ವೈಶಾಕ್ ಸಿಕ್ಕಿಲ್ಲ ಅಂದಿದ್ದರೆ ಇವತ್ತು ಇರೋ ಸುಧಾಕರ್(Me), ಅವನ ಮಾತು… ಕಥೆ…ಸ್ಟೈಲ್… ಎಲ್ಲಾ ಚೇಂಜ್ ಆಗೀ ಇರುತ್ತಿದವು. 2000-2001 ರಲ್ಲಿ ಕ್ಲಾಸ್ ಬಂಕ್ ಮಾಡಿ ಬಲಮುರಿ, ಚಾಮುಂಡಿ ಬೆಟ್ಟ, ಜಯಶ್ರೀ ಹೋಟೆಲ್, ಫಿಲಂ ಗೆ ಹೋಗುತಿದ್ದ ಆ ದಿನಗಳನ್ನ ನೆನೆಸಿಕೊಂಡರೆ ನನ್ನ ಜೋಶ್ ಬ್ಯಾಟರಿ ಫುಲ್ ಚಾರ್ಜ್ ಆಗೀ ಬಿಡುತ್ತೆ. & I’m always thankful to god since he has blessed me with all right friends at exactly right timings…..