Wednesday, March 31, 2010

‘ಎಷ್ಟು ಖರ್ಚು ಮಾಡಿದರು ನಿನ್ನನ ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅನ್ನೋ ಕೊರಗು…

ಪ್ರೀತಿಯ Tiger ,

ನಿನ್ನ ಹೆಸರು ಕೇಳಿದರೆ ಏನೋ ರೋಮಾಂಚನ!!!! ನನಗಷ್ಟೇ ಅಲ್ಲ ಜಗತ್ತಿನ ಬಹಳಷ್ಟು ಜನಕ್ಕೆ. ವಿಶ್ವದಾದ್ಯಂತ ನಿನ್ನನ್ನು ಎಲ್ಲರೂ ಈ ಭೂಮಿಯ ಮೋಸ್ಟ್ charismatic ಪ್ರಾಣಿ ಅಂತರೆ. ನಿನ್ನ ರಾಜಗಂಭಿರ್ಯ, ನಿನ್ನ ಬಲಶಾಲಿತನ, ನಿನ್ನ ಬುದ್ದಿವಂತಿಕೆ ಎಂಥವರಲ್ಲಿಯು ಅಚ್ಚರಿ ಹುಟ್ಟಿಸದೆ ಇರಲಾರದು. ಒಬ್ಬ ಮನುಷ್ಯ ಏನೆಲ್ಲಾ ಗುಣಗಳು ತನ್ನಲ್ಲಿರಬೇಕು ಅಂತ ಬಯಸುತ್ತಾನೋ ಆ ಗುಣಗಳೆಲ್ಲ ನಿನ್ನಲ್ಲಿ ವಂಶಪರ್ಯಂಪರವಾಗಿ ಬಂದಿದೆ ಅನಿಸುತ್ತದೆ. ನಿನಗೆ ಆಂಗ್ಲರು Tiger ಅಂತ ಇಟ್ಟಿರೋ ಹೆಸರಿನ ಮೂಲ ಯಾವುದು ಗೊತ್ತ? ಅದು ಗ್ರೀಕ್ ನ TIGRIS ಎಂಬ ಶಬ್ದದಿಂದ ಬಂದಿರುತ್ತದೆ . ಈ TIGRIS ಪದವು ಪೆರ್ಸಿಯ ಮೂಲದಾಗಿದ್ದು ಅದು ಬಾಣ (Arrow) ಎಂಬ ಅರ್ಥವನ್ನು ಹಾಗು ಪ್ರಾಣಿಯ ವೇಗವನ್ನು ಸೂಚಿಸುತ್ತದೆಯಂತೆ.

ಹಿಂದಿನಿಂದಲೂ ನೀನೊಂಥರ ‘Big sport thing’ ಅಂತಾರಲ್ಲ ಹಾಗೆ. ಹಿಂದಿನ ರಾಜ ಮಹಾರಾಜರಿಗೆ ನಿನ್ನ ಬೇಟೆ ಆಡುವುದೇ ಒಂದು ಹೆಮ್ಮೆಯ ವಿಷಯವಾಗಿತ್ತಂತೆ. ಕಾಡಿನಲ್ಲಿ ಮಚನ್ ಕಟ್ಟಿ ನಿಮ್ಮವರನ್ನ ಬೇಟೆ ಆಡುತ್ತಾ ಇದ್ದರು. ಹಾಗೆ ಊರಿನವರೆಲ್ಲಾ ಸೇರಿ ನಿನ್ನನು ಹೆದರಿಸಿ ಓಡಿಸಿ ಒಂದು ಕಡೆ ಸೇರಿಸಿ ಬೇಟೆ ಆಡುತ್ತಾ ಇದ್ದರು. ನನಗಂತು ನಿನ್ನ ಚರ್ಮ ಎಂದರೆ ತುಂಬಾ ಇಷ್ಟ. ಅ ಚರ್ಮದ ಮೇಲೆ ಇರೋ ಪಟ್ಟಿಗಳು ಎಂಥ ನೋಡುಗರನ್ನು ಸೆಳೆಯುತ್ತವೆ. ನಿಮ್ಮಲ್ಲಿ ಎಷ್ಟೋ ಹುಲಿಗಳಿಗೆ 100ಕಿಂತ ಹೆಚ್ಚು ಪಟ್ಟಿಗಳಿರುತ್ತವೆಯಂತೆ. ಇನ್ನೊಂದು ವಿಸ್ಮಯಕಾರಿ ಅಂಶ ಎಂದರೆ ನಿಮ್ಮಲೂ ನಮ್ಮ ಮನುಷ್ಯರ ಕೈ ಬೆರಳಿನ ಗುರುತಿನ ಹಾಗೆ ಒಂದು ಹುಲಿಯ ಚರ್ಮದ ಪಟ್ಟಿ, ಪಟ್ಟಿಯರೀತಿ, ವಿನ್ಯಾಸ ಇನ್ನೊಂದು ಹುಲಿಯ ತರಹ ಇರುವುದಿಲ್ಲ.(ಯಾವುದೇ 2 ಹುಲಿಗೆ ಒಂದೆ ರೀತಿ ಪಟ್ಟಿ ಇರುವುದಿಲ್ಲ)

ಸಾಂಸ್ಕೃತಿಕವಾಗಿಯೂ ಜಗತ್ತಿನಲ್ಲಿ ನಿನಗೆ ಎಷ್ಟು ಮನ್ನಣೆ ಉಂಟು ಗೊತ್ತ? ಏಷಿಯಾ ಹಾಗು ಸುತ್ತಮುತ್ತ ಎಷ್ಟೋ ರಾಷ್ಟ್ರಗಳಲ್ಲಿ ಕಾಡಿನರಾಜ ಎಂದು ಸಿಂಹದ ಬದಲಾಗಿ ನಿನ್ನ ಆಯ್ಕೆಮಾಡಿದ್ದರೆ. ಚೀನಾ ದೇಶದ ಮುಖ್ಯ ರಾಶಿ ಪ್ರಾಣಿ ನೀನು. ನಮ್ಮ ಇತಿಹಾಸ, ಪುರಾಣ ನೋಡಿದರು ನಿನ್ನ ಉಲ್ಲೇಖವೇ. ಹೊಯ್ಸಳ ಸಾಮ್ರಾಜ್ಯದ ಚಿನ್ನ್ಹೆ, ತಾಯೀ ಚಾಮುಂಡೇಶ್ವರಿಯ ವಾಹನ, ಸ್ವಾಮಿ ಐಯ್ಯಪ್ಪನ ವಾಹನ, etc. ಅಷ್ಟೇ ಅಲ್ಲದೆ jungle book ಎಂಬ ಕಾದಂಬರಿಯಲ್ಲಿ ನಿನ್ನನ್ನು ಒಮ್ಮೆ ವಿಲ್ಲನ್ (ಶೇರ್ ಖಾನ್) ಆಗಿ ಸಹ ತೋರಿಸಲಾಗಿದೆ. ಮತ್ತೆ ನನ್ನ ಫೇವರಿಟ್ ಕಾರ್ಟೂನ್ calvin & hobbes ನಲ್ಲಿ calvin ನ imaginary ಫ್ರೆಂಡ್ಆಗಿ (doll) ಇಡೀ ಜಗತ್ತಿನಲ್ಲಿ ಮಿಂಚಿದ್ದಿಯ.

ಮೊನ್ನೆ ಅನಿಮಲ್ ಪ್ಲಾನೆಟ್ ಎಂಬ ಚಾನೆಲ್ 73 ದೇಶದಲ್ಲಿ ನೆಡಸಿದ ಜಗತಿನ ಅತ್ಯಂತ ಅಚ್ಚು ಮೆಚ್ಚು ಪ್ರಾಣಿ ಸಮೀಕ್ಷೆಯೆಲ್ಲಿ ನಿನ್ನನೇ ಹೆಚ್ಹು ಜನ ಆಯ್ಕೆ ಮಾಡಿದ್ದಾರೆ. ಹುಲಿ 21%, ನಾಯೀ 20%, ಡಾಲ್ಫಿನ್ 13% , ಕುದುರೆ 10%, ಸಿಂಹ 9%, ಹಾವುಗಳು 8% ಹಾಗು ಉಳಿದ ಮುಂತಾದ ಪ್ರಾಣಿಗಳು.

ನಿನ್ನನ್ನ ನಾನು ವೈಲ್ಡ್ ಆಗೀ ನೋಡಬೇಕು ಅಂತ ಪಣತೋಟ್ಟಿ 2001ರಿಂದಲೂ ಹುಡುಕಲು ಶುರುಮಾಡಿದೆ. 3 ದಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿನ್ನ ಸೆನ್ಸಸ್ಗೆ ಬಂದು 40-50 ಕಿಲೋಮೀಟರ ಕೋರ್ ಜೋನನಲ್ಲೆಲ್ಲೆ ಅಲೆದೆ. ನಿನ್ನನ್ನು ಹುಡುಕಲು ಹೋಗಿ ಕಾಡಿನಮೇಲೆ ಪ್ರೀತಿ ಉಂಟಾಗಿ ಫಾರೆಸ್ಟ್ ಡಿಪಾರ್ಟ್ಮಂಟ ಸೇರಿ ಪುನ್ಹಃ ನಿನ್ನನ್ನು ಈ ಬಾರಿ ನೋಡಲೇ ಬೇಕೆಂದು wildlife ರೀಜನ್ ನ ಇನ್ಟಿರಿಯರ್ ಜಾಗಕೆ ಡೇಪ್ಟೇಷನ್ ಬಂದು ಹಗಲು ರಾತ್ರೀ ಸುತ್ತಿದೆಷ್ಟು? ಮೈಸೂರ್ zooಗೆ ಹೋದಾಗ ಯಾವ ಪ್ರಾಣಿನು ನೋಡದೆ ಸೀದಾ ನಿನ್ನ ಮನೆ ಹತಿರ ಬಂದು ಕಣ್ಣುತುಂಬ ನಿನ್ನ ನೋಡಿ ಸಂತೋಷ ಪಡುತ್ತಿದ್ದೆ. ಇವತ್ತು ಇದನ್ನೆಲ್ಲಾ ಯಾಕೆ ನಿಂಗೆ ಬರೆದು ಹೇಳ್ತಾ ಇದ್ದಿನಿ ಅಂದ್ರೆ ನಾನು ಸೆನ್ಸಸ್ಗೆ ಹೋದಾಗ ಅಂದರೆ 2002 ರಲ್ಲಿ ನೀನು ಮತ್ತು ಇತರ ಎಲ್ಲ ಹುಲಿಗಳ ಸಂಖ್ಯೆ 3642(Tigers ಲೆಫ್ಟ್ ಇನ್ ವೈಲ್ಡ್ ಇನ್ ಇಂಡಿಯಾ) ಅಂತ ತಿಳಿಸಿದರು. ಅದೇ 2009 - 10 ರ ಸೆನ್ಸಸ್ ರಿಪೂರ್ಟನಲ್ಲಿ ನಿಮ್ಮಗಳ ಸಂಖ್ಯೆ ಕೇವಲ 1411. ಯಾಕೋ ನಿನ್ನ ವೈಲ್ಡ್ ಆಗೀ ಕಾಡಿನಲ್ಲಿ ನೋಡಬೇಕು ಎಂಬ ಕನಸು ಕನಸಾಗೇ ಉಳಿಯುತ್ತಾ ಅಂತ ಡೌಟ್.

ನಿಮ್ಮಗಳ ಸಂಖ್ಯೆ ಇಷ್ಟು ಕಡಿಮೆಯಾಗಲು ಕಾರಣ ನಿನಗೆ ಗೊತ್ತ? ಮೊದಲಿಗೆ ನಮ್ಮಜನಗಳು ನಿಮ್ಮ ಕಾಡನ್ನು ಹಾಳುಮಾಡ್ತಾಇರೊದು. ಅವರು ಹೀಗೆ ಮಾಡಿದರೆ ನೀನು ಎಲ್ಲಿ ಇರ್ತೀಯ? ಜಾಗವೇ ಇಲ್ಲದೆ ನಿನ್ನ ಸಂಥಾನಾಭಿವ್ರುದ್ಧಿಯು ಹೇಗೆ ಸಾಧ್ಯ? ಅಂತೆಲ್ಲ ನಮ್ಮ ಜನಗಳು ಯೋಚನೆ ಮಾಡುವುದೇ ಇಲ್ಲ. ಎರಡನೆ ಕಾರಣ ಅಂದ್ರೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಮತ್ತು ನಿನ್ನ ದೇಹಕ್ಕಿರುವ ಬೆಲೆ. ನಮ್ಮ ದೇಶದಲ್ಲಿ 2008 ರಲ್ಲಿ 28 ಹುಲಿ, 2007 ರಲ್ಲಿ 30 ಹಾಗು 2009 ರಲ್ಲಿ 65 ಹುಲಿಗಳನ್ನು ಕೊಂದಿದ್ದಾರೆ. ಕೇಳಿದರೆ ಮೈಜುಮ್ಮಯೆನ್ನುತೆ ಅಲ್ಲಾ? ಅದು ಬರೀ ಸಿಕ್ಕಿ ಕೇಸ್ ಬುಕ್ ಅಗೀರೋ ಸಂಖ್ಯೆ, ಸಹಜ ಸಾವು ಅಂತ, ಬೆಳಕಿಗೆ ಬರದೆ ಇರೋಂಥಹ ಸಂಖ್ಯೆ ಇನ್ನು ಜಾಸ್ತಿ. ಭಾರತದಲ್ಲಿ 1994 – 2004 ರ ತನಕ 10 ವರ್ಷಗಳಲ್ಲಿ 684 ಹುಲಿ ಬೇಟೆ ಪ್ರಕರಣಗಳು ದಾಖಲಾಗಿವೆ.

ಈಗ ನಾನು ಹೇಳೋ ವಿಷಯ ಕೇಳಿದ್ರೆ ನಿನ್ನಷ್ಟು ಆಶ್ಚರ್ಯ ಹಾಗು ಅಸಹ್ಯ ಪಡೋ ಪ್ರಾಣಿ ಭೊಮಿ ಮೇಲೆ ಮತ್ತೊಂದು ಇರಲಾರದು. ಇವತ್ತಿನಂತೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಬೆಲೆ ಬರೊಬ್ಬರಿ $ 10000 ಡಾಲರ್ಸ್!!!. ಅದು ಇಡಿಯಾಗಿ. ನಿನ್ನ ಕತ್ತರಿಸಿ ತುಂಡು ತುಂಡು ಮಾಡಿ ಮಾರಿದರೆ ನಿನ್ನ ಬೆಲೆ ಆಗ $ 50000…!!!! ನಿಮಗಳಿಗೆ ಗೊತಿಲ್ಲದ ಹಾಗೆ ಮನುಷ್ಯರು ನಿಮಗೆ ಹೇಗೆ ಬೆಲೆ ನಿರ್ಧಾರ ಮಾಡಿದರೆ ನೋಡು. ನಿನ್ನ ದೇಹದ ಪ್ರತಿ ಭಾಗ ಕೂಡಾ ಬೇಡಿಕೆಯಲ್ಲಿದೆ. ನಿನ್ನ ದೇಹದ ಭಾಗಗಳನ್ನು ಹೆಚ್ಚಾಗಿ ಏಷಿಯಾ ಹಾಗು ಸುತ್ತ ಮುತ್ತಲ್ಲಿ ಸಂಪ್ರದಾಯಕ ಔಷಧಿಗೆ ಬಳಸುತ್ತಾರೆ. ನಿನ್ನ ಬ್ರೈನ್ ಮೊಡವೆ ಹಾಗು ಆಲಸ್ಯ ಓಡಿಸುವ ಔಷಧಿಗೆ, ನಿನ್ನ ಮೀಸೆ ಹಲ್ಲುನೋವಿಗೆ, ಕಣ್ಣು ಮೂಗು ಮಲೇರಿಯಾ ಔಷಧಿಗೆ. ಮೂಳೇಗಳು ಹುಣ್ಣು ಹಾಗು ಟೈಫೈಡ ನಿವಾರಿಸಲು. ನಿನ್ನ ಅತ್ಯಾಕರ್ಶಕ ಚರ್ಮದ ಬೆಲೆ ಗೊತ್ತ? ಕನಿಷ್ಟ ಎಂದರು $ 15000. ಹಾಂಕಾಂಗ್ ನಲ್ಲಿ ನಿನ್ನ ಮೂಳೇಪುಡಿ ಕೆಜಿಗೆ $ 3600 ಅಂತೆ. ತೈವಾನ್ ನಲ್ಲಿ ನಿನ್ನ ಕಣ್ಣುಗಳ ಬೆಲೆ $175 – $250… ನಿನ್ನನ್ನು ಔಷಧಿಗೆ ಬರಿ ಏಷಿಯಾ ಅಲ್ಲದೆ ಲಂಡನ, ಬರ್ಮಿಂಗಹಾಂ, ಮಾನ್ಚಿಸ್ಟರ್, ಮುಂತಾದ ದೇಶಗಳಲ್ಲೂ ಉಪಯೋಗಿಸುತ್ತಾರೆ. 1998 ರಲ್ಲಿ WWF ಎಂಬ ಸಂಸ್ಥೆಯು ಜಕಾರ್ಥ ಎಂಬಲ್ಲಿ ನಡುರಸ್ತೆಯಲ್ಲಿ 2 ಹುಲಿ ಮರಿಗಳನ್ನೂ ಪೆಟ್ ಶಾಪ್ ನಲ್ಲಿ ಓಪನ್ ಆಗೀ ಮಾರುತ್ತಿದ್ದರ ಬಗ್ಗೆ ವರದಿ ಮಾಡಿತ್ತು.

ಭಾರತದಲ್ಲೆ ಅಲ್ಲ ವಿಶ್ವದಲೆಲ್ಲಾ ನಿಮ್ಮ ಜನಗಳ ಸಂತತಿ ಅಳಿವಿನಲ್ಲಿದೆ. ಇವತ್ತು ಒಟ್ಟರೆ ವಿಶ್ವದಾದ್ಯಂತ ಕಾಡಿನಲ್ಲಿ ಬದುಕಿರುವ ಹುಲಿಗಳ ಸಂಖ್ಯ 3000 –4000 ಅಷ್ಟೇ. ಇದೆ 100 ವರ್ಷಗಳ ಹಿಂದೆ ಅದು 100000 ಇತ್ತು !!!. ನಿಮಲ್ಲಿದ್ದ 9 ಜಾತಿ ಹುಲಿಗಳಲ್ಲಿ ಈಗಾಗಲೇ 3 ಜಾತಿ ಹುಲಿಗಳು (ಬಾಲಿ, ಜಾವನ್ ಮತ್ತು ಕ್ಯಾಸ್ಪಿಯನ್) 1970 ರಲ್ಲೇ ವಿನಾಶಗೊಂಡಿದ್ದು ಉಳಿದ ಜಾತಿಗಳಾದ ಬಂಗಾಲ ಹುಲಿ – 1411, ಇಂಡೊಚೀನ ಹುಲಿ – 600 ರಿಂದ ೮೦೦, ದಕ್ಷಿಣ ಚೀನಾ ಹುಲಿ ಕಾಡಿನಲ್ಲಿ ಇದ್ದ ಎಲ್ಲ ಹುಲಿ ವಿನಶಗೊಂದಿದ್ದು ಬರಿ zooನಲ್ಲಿ 15 ರಿಂದ 20 ಹುಲಿ ಇದೆ, ಸೈಬಿರಿಯಾದ ಹುಲಿ - ಅಂದಾಜು 400, ಸುಮಾತ್ರದ ಹುಲಿ 300 ರಿಂದ 350 ಕಡೆಯದಗೀ ಮಲ್ಲೆಶಿಯಾದ ಹುಲಿ 400 ಇವೆ ಎಂದು ಅಂದಾಜಿಸಲಾಗಿದೆ.

ಸಂಸಾರ್ ಚಂದ್,ತಿನ್ಲಿ, ಮೊಹಮ್ಮೆದ್ ಯಾಕುಬ್, ಶಬೀರ್ ಹಸ್ಸನ್ ಖುರೇಷಿ ಅಂತ ಪಾಪಿ ಗಳು ನಿನ್ನ ವಂಶವನ್ನೇ ನಿರ್ಮೂಲನ ಮಾಡಲು ಪಣತೊಟ್ಟಿರುವಂತೆ ನಿನ್ನವರನ್ನು ಬೇಟೆ ಆಡಿ ಕೊಂದು ಹೊರದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು (ಸದ್ಯ ಈಗ ಎಲ್ಲರೂ ಜೈಲಿನಲ್ಲಿದ್ದಾರೆ). ಕಡೇಲಿ ಹೇಳಿದನಲ್ಲ ಖುರೇಷಿ ಅಂತ ಅವನನ್ನು January 2000ರಲ್ಲಿ ಕಾಗಾ ಎಂಬ ಕೇಸ್ ನಲ್ಲಿ ಹಿಡಿದಾಗ ಅವನಿಂದ ವಶ ಪಡಿಸಿಕೊಂಡ ವಸ್ತುಗಳ ಲಿಸ್ಟ್ ನೋಡಿದರೆ ಸುಸ್ತಾಗುತ್ತೆ... 70 ಚಿರತೆ ಚರ್ಮ, 18000 ಚಿರತೆ ಉಗುರು, 4 ನಿಮ್ಮವರ(ಹುಲಿ) ಚರ್ಮ, 132 ನಿಮ್ಮವರ(ಹುಲಿ) ಉಗುರು, 221 ಕೃಷ್ಣ ಮೃಗದ ಚರ್ಮ. ಇಂಥ ನೀಚಜನರಿಗೆ ಏನು ಶಿಕ್ಷೆ ಕೊಡಬೇಕು ನೀನೆ ಹೇಳು…?

ಹೇಗೋ ಸದ್ಯ ಈಗ ಜನ ಎಚ್ಚೆತ್ತುಕೂಂಡಿದ್ದಾರೆ. ಎಲ್ಲಾ ಕಡೆ ನಿನ್ನ ಹಾಗು ನಿಮ್ಮವರನ್ನು ಉಳಿಸುವ ಜಾಥ ನಡೀತಾ ಇದೆ. ನೀನು ಆಹಾರ ಸರಪಳಿಯಲ್ಲಿರೂ ಮುಖ್ಯ ಜೀವಿ, ನೀನೇ ಹೋದರೆ ಇಡೀ ecosystem ಹಾಳಾಗುತ್ತೆ. ನಾನಂತು ನನ್ನ ಸ್ನೇಹಿತರಿಗೆ, ನನ್ನ ಜೊತೆ ಕೆಲ್ಸಮಾಡುವವರಿಗೆ ಆಗಾಗ ನಿನ್ನನು ಉಳಿಸಲು ನಮ್ ಕೈಯಲಿ ಎನ್ ಎನ್ ಮಾಡಬಹುದು ಅಂತ ಹೇಳ್ತಾ ಇರ್ತೆನೆ.

‘ ಆದಷ್ಟು ಕಾಡನ್ನು ಅದರ ಪರಿಸರವನ್ನು ಹಾಳು ಮಾಡಬೇಡಿ’
‘ಒಳ್ಳೆ ಜವಬ್ದಾರಿ ಪ್ರವಾಸಿಗರಾಗಿ ವರ್ತಿಸಿ’
‘ಕಾಡಿಗೆ ಹೋದಾಗ ಅಲ್ಲಿ ಹೆಜ್ಜೆ ಗುರುತು ಬಿಟ್ಟು ಏನು ಬಿಡಬೇಡಿ ಹಾಗೆ ಅಲ್ಲಿಂದ ವಾಪಸ್ಸು ಬರುವಾಗ ನೆನಪು ಬಿಟ್ಟು ಏನನ್ನೂ ತರಬೇಡಿ’
‘ಬೇಟೆ ಹಾಗು ಬೇಟೆ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋಗಿ ತಿಳಿಸಿ’
‘ನಿರ್ಧಾರ ತೆಗೆದುಕೊಳೊ ಅಧಿಕಾರಿಗಳಿಗೆ (prime minister & local MP) ಹುಲಿ ಅಳಿವಿನಂಚಿನಲ್ಲಿರುವುದರ ಬಗ್ಗೆ ಪತ್ರ ಬರೆಯಿರಿ’

ಎಂದೆಲ್ಲ ಹೇಳ್ತಾ ಇರ್ತೆನೆ. ನಿನ್ನನು ಉಳಿಸಲು ನನ್ನ ಕೈಲೀ ಏನು ಸಾಧ್ಯವೂ ಅದನ್ನೆಲ್ಲಾ ಮಾಡ್ತಾ ಇದ್ದೇನೆ. ಅದರೆ ಎಲ್ಲಿವರಗೆ ಫಾರೆಸ್ಟ್ ಡಿಪಾರ್ಟ್ಮಂಟನಲ್ಲಿ ಖಾಲಿ ಇರುವ ಪೋಸ್ಟ್ ಗಳನ್ನೂ ಭರ್ತಿ ಮಾಡುವುದಿಲ್ಲವೊ, ಕಾಡಿನ ಅಕ್ಕಪಕ್ಕ ಇರುವ ಜನರನ್ನು, ಊರನ್ನು ಸ್ಥಳಾಂತರ ಮಾಡುವುದಿಲ್ಲವೂ ಅಲ್ಲಿಯವರೆಗೂ ನಿನ್ನನ್ನು, ನಿಮ್ಮವರನ್ನು ಉಳಿಸೋದು ಕಷ್ಟ.

ನಮ್ಮ ಭಾರತ ಸರ್ಕಾರ ಕೂಡ ಮುಂದಿನ 5 ವರ್ಷಕ್ಕೆ ನಿನ್ನನ್ನು ಹಾಗು ನಿಮ್ಮವರನ್ನು ಉಳಿಸಲು $150 million dollars ಅನುದಾನವನ್ನು ಮಿಸಲಿಟ್ಟಿದೆ. ಜಗತ್ತಿನಾದ್ಯಂತ ನಿನ್ನನು ಉಳಿಸಲು ಸಾವಿರಾರು ಕೊಟ್ಯಾಂತರ ರೂಪಾಯಿಯನ್ನು ವ್ಯಯಿಸುತ್ತಿದ್ದಾರೆ. ಆದರೆ ಈಗ ಸಧ್ಯ ನನ್ನಲಿ ಇರುವ ಕೊರಗು ಏನೆಂದರೆ ‘ ಎಷ್ಟು ಖರ್ಚು ಮಾಡಿದರು ನಿನ್ನನು ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅಂತ.

ಇಂತಿ
ಜಗತ್ತಿನಲ್ಲಿ ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುವವ....

Monday, March 22, 2010

2002ರ ಎಲಿಫಂಟ್ ಸೆನ್ಸಸ್ ಹಾಗು ಕುಡಿಯೋ ನೀರು...

ಫಿಲಂಗಳಲ್ಲಿ ಕಾಡು, ದಟ್ಟವಾದ ಹಸಿರು ಗಿಡ ಮರ, ನದಿ, ಪ್ರಾಣಿಗಳನ್ನು ನೋಡಿ ಪುಲ್ ಇಂಪ್ರೆಸ್ ಆಗಿ 2001ರ ಅಕ್ಟೋಬರ್ ತಿಂಗಳಲ್ಲಿ ಟೈಗರ್ ಸೆನ್ಸಸ್ಗೆ ಅಂತ 3 ದಿನ ಗೋಪಾಲ್ ಸ್ವಾಮಿ ಬೆಟ್ಟದಲ್ಲಿ ಆ ಮಳೆ ಹಾಗು ಮಂಜಿನಲ್ಲಿ ಕಡಿಮೆ ಅಂದ್ರು 40 ಕಿಲೋಮೀಟರು ಅನ್ನು ಸರ್ವೇ ಮಾಡಿದ್ದೆವು. ಆಗ 5 ಜನ ಹೋಗಿದ್ವಿ ಅದ್ರಲ್ಲಿ ಇಬ್ಬರು ಲೇಡಿಸ್ ಇದ್ರೂ, ಹಂಗಾಗಿ ಫೆಸಿಲಿಟಿ ಸ್ವಲ್ಪ ಚೆನ್ನಾಗೆ ಇತ್ತು. ಪುನಃ 7 ತಿಂಗಳ ನಂತರ ಫಾರೆಸ್ಟ್ ಡಿಪಾರ್ಟ್ಮೆಂಟ್ ನವರು ಎಲಿಫಂಟ್ ಸೆನ್ಸಸ್ ಗೆ ಇಷ್ಟ ಹಾಗು ಆಸಕ್ತಿ ಇದ್ದ ಜನ ಬರಬಹುದು ಅಂತ ಪೇಪರನಲ್ಲಿ ಹಾಕಿದಾಗ ನಾನು ಯದು ಮತ್ತೇ ದೀಪುನ ಕರೆದು " ಲೋ ಹೋಗೋಣ ಕಣ್ರೋ... ಮಸ್ತಾಗಿ ಇರುತ್ತೆ, 3 ದಿನನದ್ರು ಈ ಸಿಟಿ ಲೈಪ್ ಬಿಟ್ಟು ಕಾಡು ಸೇರೋಣ" ಅಂತ ಅವರನ್ನು ಮತ್ತು ಅವರ ತಂದೆ ತಾಯೀಯವರನ್ನು ಒಪ್ಪಿಸಿ, ನಮ್ಮ ಅಣ್ಣ ಶಶಿ ದೋಸ್ತ್ ಶ್ರೀಧರನ ತಂದೆ ತಂಗರಾಜುರವರು ರೇಂಜರ್ ಆಗಿದ್ದ ಗುಂಡ್ರೆ ಫಾರೆಸ್ಟ್ ಗೆ ಪೋನ್ ಮಾಡಿಸಿ ಅವರ ಇನ್ ಪ್ಲೋಯನ್ಸ್ ಮಾಡಿಸಿ ಮಧ್ನಾಹ 3 ಗಂಟೆಗೆ ಮೈಸೂರನಿಂದ ಹೋರಟವು

ಮೈಸೂರ್ ಯಿಂದ ಬಂಡೀಪುರಕ್ಕೆ ಹೋಗಿ ಅಲ್ಲಿಂದ ರೇಂಜರ್ ನಮ್ಮನ್ನು ಹಾಗು ನಮ್ಮ ಹಾಗೆ ಸೆನ್ಸಸ್ಗೆ ಬಂದಿದ್ದ ಇನ್ನಿಬ್ಬರನ್ನುಜೀಪ್ ನಲ್ಲಿ ಕರ್ಕೊಂಡು, ಅ ಇಬ್ಬರನ್ನು ನಾಯೀಹಳ್ಳ ಕ್ಯಾಂಪಿಗೆ ಡ್ರಾಪ್ ಮಾಡಿ ನನ್ನನ್ನ , ದೀಪುನ ಹಾಗು ಯದುನ ಕರ್ನಾಟಕ ಹಾಗು ಕೇರಳ ಗಡಿಯಲ್ಲಿರುವ ಪುಲ್ ಡೆನ್ಸ & ತಿಕ್ಕ್ ಅದ ಗುಂಡ್ರೆ ಫಾರೆಸ್ಟ್ ಮಧ್ಯ ಇರುವ ಐ ಬಿ ಗೆ ಡ್ರಾಪ್ ಮಾಡಿದರು. ಅಲ್ಲಿದ್ದ ವಾಚರ ಪುಟ್ಟ ಸ್ವಾಮಿ , ಮಾರ, ಚಂದ್ರು ಹಾಗು ಕುಕ್ ಸುಬ್ಬಣ್ಣಗೆ ರೇಂಜರ್ ರವರು "ಇವರು ನಮ್ಮ ಮಗನ ಫ್ರೆಂಡ್ಸ್ ಗಳು ಚೆನ್ನಾಗಿ ನೋಡಿಕೊಂಡು, ಕಡು ತಿರುಗಿಸಿ, ಸರ್ವೇ ಮಾಡಿಸಿ" ಅಂತ ಹೇಳಿ ನಮ್ಮ ಕಡೆ ತಿರುಗಿ " ಆನೆ ಬಹಳ ಢೇಂಜರ್ ಅನಿಮಲ್ ಕಣ್ರಪ್ಪ, ಹುಷಾರು... ನಾನು ಪುನಃ ಬರತ್ತೀನಿ." ಅಂದು ಹೊರಟುಹೋದರು. journey ಯಿಂದ ಸುಸ್ತಾಗಿದ್ದ ನಾವು ಪುಟ್ಟ ಸ್ವಾಮಿ ಹತ್ತಿರ ನಾವು ನಾಳೆಯಿಂದ 3 ದಿನ ಏನ್ ಮಾಡಬೇಕು?, ಎಷ್ಟು ದೂರ ನಡಿಬೇಕು? ಅಂತ ಕೇಳ್ತಾ ಸುಬ್ಬಣ್ಣ ಮಾಡಿದ್ದ ಅನ್ನ ,ಸಾರು ತಿಂದು, ಇದ್ದ ಕಾಟನಲ್ಲಿ ಮೂರುಜನ ಮಲಗಿದವು.
ಬೆಳಿಗ್ಗೆ ಐ ಬಿ ಹೊರಗಿಂದ ದೀಪು " ಲೋ ಮಗ ಬಾರೂ ಇಲ್ಲಿ ಜಿಂಕೆ, ನವಿಲು ಎಷ್ಟ ಹತ್ತಿರ ಬಂದಿದ್ದವೆ ನೋಡು ಬಾ ಇಲ್ಲಿ" ಎಂದ. ನಾನು ಯದು ಹೊರಗೆ ಬಂದು ನೋಡಿದ ಕೊಡಲೇ ಯದು "ಸಾರ್ಥಕ ಅಯೀತು ಮಗ ಜೀವನ" ಅಂದ. ಐ ಬಿ ಮುಂದೆ ಕರ್ನಾಟಕಗೆ ಹಾಗು ಕೇರಳಗೆ ಬಾರ್ಡರ್ ಹಾಕಿದ ಹಾಗೆ ಕಬಿನಿ ನದಿ ಹರಿತ ಇತ್ತು. ನದಿಯ ಹತ್ತಿರ ಹೋದ್ರೆ 20 ಅಡಿ ಆಳದ ನದಿ ಬೇಸಿಗೆಗೆ 5-6 ಅಡಿಗೆ ಒಣಗಿತ್ತು ಹಾಗು ನೀರು ಒಳ್ಳೆ ನಮ್ಮ ಸೇಟೂ ಹೋಟೆಲ್ ಟೀ ತರಹ ಕೆಂಪಗಿತ್ತು. ಯದು "ಮಗ ಅದೇನ್ಲಾ ನೀರ್ ನಲ್ಲಿ ತೇಲತಾ ಇರೂದು? " ಅಂದ ಅದಕೆ ನಾನು "ಆನೆ ಲದ್ದಿ ಮಗ!!" ಎಂದೆ. ಸರಿ ನಾವು ಮೂವರು ಐ ಬಿ ಗೆ ವಾಪಸ್ಸು ಬಂದು ನಿತ್ಯಕರ್ಮ, ಸ್ನಾನ ಎಲ್ಲ ಮುಗಿಸಿ ಬರುವಷ್ಟರಲ್ಲಿ ಸುಬ್ಬಣ್ಣ ಬಿಸಿ ಬಿಸಿ ಉಪ್ಪಿಟ್ಟು ಮಾಡಿದ್ರು. "ಏನೇ ಹೇಳಿ ಕಾಡಿನಲ್ಲಿ ಏನ್ ಮಾಡಿ ತಿಂದರು ಮ್ರುಷ್ಟನ್ನದತರಹ ಇರುತ್ತೆ" ಅಂದ ದೀಪು ಉಪ್ಪಿಟ್ಟು ತಿನ್ನುತ. ನಾನು ಪುಟ್ಟ ಸ್ವಾಮಿ ಗೆ "ಸರ್ ಈ ಕಾಡಲ್ಲಿ ಸ್ನಾನಕ್ಕೆ, ಅಡುಗೆಗೆ ನೀರು ಎಲ್ಲಿಂದ ತರ್ತೀರ?" ಎಂದೇ ಅದಕ್ಕೆ ಪುಟ್ಟ ಸ್ವಾಮಿ "ಐ ಬಿ ಮುಂದೇನೆ ನದಿ ಇಟ್ಕೊಂಡು ನೀರಿಗೆ ಯಾಕೆ ಅಲೆಯೋಣ ಸರ್ !!!" ಅಂದ. ತಕ್ಷಣ ನಾನು, ದೀಪು, ಯದು ಮೂವರು ಆನೆ ಲದ್ದಿ ತೇಲತ ಇದ್ದ ಅ ನದಿ ನೆನಸ್ಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು . ಮಾರನಿಗೆ ಅರ್ಥವಾಗಿ "ಏನ್ ತಲೆ ಕೆಡಿಸ್ಕೊಳಬೇಡಿ ಸರ್... ಚೆನ್ನಾಗಿ ಕಾಯಿಸಿ ಅಡುಗೆಗೆ ಉಪಯೋಗಿಸುದು" ಅಂದ.

ಸರಿ ತಿಂಡಿ ನಂತರ ಸೆನ್ಸಸ್ಗೆ ಹೊರಟೆವು. ಹೊರಡೋ ಮುಂಚೆ ಪುಟ್ಟ ಸ್ವಾಮಿ ನಮಗೆಲ್ಲ ಕಾಡಿನಲ್ಲಿ ಹೇಗಿರಬೇಕು ಅಂತ ಬ್ರೀಫೀಂಗ ಮಾಡಿದರು. " ಯಾರು ಕಾಡಿನಲ್ಲಿ ಅನವಶ್ಯಕವಾಗಿ ಹಾಗು ಜೋರಾಗಿ ಮಾತಾಡಬೇಡಿ, ನಮ್ಮ ಜೊತೇನೆ ಇರಿ ಅಲ್ಲಿ ಇಲ್ಲಿ ಹೋಗಬೇಡಿ" ಅಂತೆಲ್ಲ ಹೇಳಿದ್ರು. ನಂತರ 10 ಕಿಲೋಮೀಟರು ಟ್ರೆಕ್ ಮಾಡಿದೆವು"... ಆನೆ, ಅದರ ಲದ್ದಿ, ಅದರ ನಿಶಾನೆಗಳನ್ನು ಹುಡುಕಿಕೊಂಡು. ಉಪ್ಪಿಟ್ಟು ಆಗಲೇ ಕರಗಿಹೋಗಿತ್ತು. ಯದು "ಮಧ್ನಹದ ಊಟ ಎಲ್ಲಿ?"ಎಂದು ಚಂದ್ರನ್ನ ಕೇಳಿದ. ಅದಕ್ಕೆ ಪುಟ್ಟ ಸ್ವಾಮಿ "ಊಟ? ರಾತ್ರಿನೇ..." ಅಂದ್ರು. ನನಗಂತು ಕೋಪಹತಿಹೋಯಿತು "ನನ್ನ ಕೈಲಿ ಇನ್ನು ನಡಿಯಕ್ಕೆ ಆಗಲ್ಲ" ಅಂದೆ. ಮಾರ ಅದಕ್ಕೆ " ಇಲ್ಲೇ ಇನ್ನು 1 ಕಿಲೋಮೀಟರು ಚೆನ್ನಮ್ಮನ ಕೆರೆ ಸಿಗುತ್ತೆ, ಅಲ್ಲಿ ಸಂಜೆವರೆಗೂ ಕೂತು ಆನೆ ಕಾಯಬೇಕು. ಸ್ವಲ್ಪ ಕಡಲೆಪುರಿ ಹಾಗು ಬಿಸ್ಕತ್ ಇದೆ ಬನ್ನಿ" ಅಂದ. ನಂತರ ಅ ದಿನ ಕೆರೆ ಹತ್ತಿರ ಮರದ ಬಳಿ ಕೂತು ಕೆರೆಗೆ ಎಷ್ಟು ಆನೆ ನೀರು ಕುಡಿಯೋಕೆ ಬಂತು, ಗಂಡೂ , ಹೆಣ್ಣೂ , ಮರಿನೂ , ಅದರ ಅಂದಾಜು ವಯಸ್ಸು... ಇವೆಲ್ಲ ಮಾಹಿತಿ ಬರಕೋಬೇಕಿತ್ತು. ಯದು ದೀಪು ಡಬ್ಬಲ್ ಬ್ಯಾರನ್ gun ಅನ್ನು ಅರ್ಧ ಅರ್ಧ ಗಂಟೆ ಒಬ್ಬರು ಅಂತ ಶಿಫ್ಟ್ ನಲ್ಲಿ ಹಿಡಿದುಕೊಂಡು ಕೂತಿದ್ದರು.

ಆನೆ ಲೆಕ್ಕ ಹಾಕ್ತ, ಕಾಡು ಬಗ್ಗೆ ಪುಟ್ಟ ಸ್ವಾಮಿ, ಮಾರ, ಚಂದ್ರನ್ನ ಪ್ರಶ್ನೆ ಕೇಳ್ತಾ ಸಂಜೆ ಅಯೀತು. ವಾಪಸ್ಸು ಐ ಬಿ ಗೆ ನೆಡೆದು ಬರ್ತಾ ಹೊಟ್ಟೆ ಹಸಿದು ಸುಸ್ತಾಗಿತ್ತು. ಪುಟ್ಟ ಸ್ವಾಮಿ ಬೇರೆ "ಕತ್ತಲಾಗ್ತಾ ಇದೆ ಸದ್ದು ಮಾಡದೇ ಬೇಗ ಬೇಗ ನೆಡಿರಿ ಸರ್" ಅಂತ ಇದ್ರೂ. ಬಯಾರಿಕೆಗೆ ಆಗಿ ನೀರು ಕುಡಿಯೋಣ ಅಂತ ಬಾಟಲ್ ನೋಡಿದ್ರೆ ಅ ನೀರಿನ ದಟ್ಟ ಬಣ್ಣ ನೋಡಿ ಕುಡಿಯಲು ಮನಸಾಗದೆ ನೀರು ಬಾಯಿಗೆ ಹಾಕಿ ಮುಕ್ಕಳಿಸಿ ಪುನಃ ಉಗಿದೆ. ಮೊದಲ ಸಾರಿಗೆ ನಮ್ಮ ಮೂವರಿಗೂ ಯಾಕೂ ಸೆನ್ಸಸ್ಗೆ ಬಂದಿದ್ದು ತಪ್ಪಾಯೀತು ಅಂತ ಅನ್ನಿಸ್ತು. ನಂತರ ಮಾರ " ಸರ್ ನಿಮಗೆ ಅಭ್ಯಾಸ ಇಲ್ಲ ನೋಡಿ ಅದಕ್ಕೆ ಸುಸ್ತು. ರಾತ್ರಿ ಉಟಕ್ಕೆ ಸುಬ್ಬಣ್ಣ ಮೀನು ಸಾರು ಮಾಡಿರ್ತಾನೆ. ಚೆನ್ನಾಗಿ ಊಟ ಮಾಡುರಂತೆ ಬೇಗ ನೆಡಿರಿ" ಅಂದ.

ನಾನು ಮತ್ತು ದೀಪು ಮೊದಲಿಂದ ಮೀನು ತಿನ್ನುತ ಇರಲಿಲ್ಲ ಅದಕ್ಕೆ ಬರಿ ಸಾರು ಹಾಕಿಸಿಕೊಂಡಿದ್ದೆವು. ನಾನು ಯದುಗೆ "ಮಗ ಮೀನು ಹೇಗಿದೆ?" ಅಂತ ಕೇಳಿದೆ. ಯದು "ಯಾರಿಗೆ ಗೊತ್ತು!!!" ಅಂದ, ಅದಕ್ಕೆ ದೀಪು "ಮತ್ತೆ 2 ಮೀನು ಹಾಕಿಸಿಕೋಂಡಿದ್ದಿಯಲ್ಲೊ ?!" ,ಅಂದ ಅದಕ್ಕೆ ಯದು " ಲೋ ನದಿಲಿ ಯಾವುದು ಸತ್ತೊಗಿರು ಮೀನು ತಂದು ಸಾರು ಮಾಡವ್ರೆ ಮೀನು ತಿನೋಣ ಅಂತೆ ಎಳೆದು ಎಳೆದು ಸಾಕಾಯಿತು ರಬ್ಬರ್ ತರಹ ಎಕ್ಷಪ್ಯಾಂಡ ಆಗುತ್ತೆ ಅಷ್ಟೇ, ತಿನ್ನೋಕೆ ಆಗ್ತಾ ಇಲ್ಲ... ಇಡಿ ನೀ ಟ್ರೈ ಮಾಡು" ಅಂತ ಒಂದು ಮೀನನ್ನು ನನ್ನ ತಟ್ಟೆಗೆ ಹಾಕೋಕೆ ಬಂದ. ನಾ ಅಲ್ಲಿಂದ ಎದ್ದು ಹೋದೆ. ಅವತ್ತು ಸಿಕ್ಕಪಟ್ಟೆ ನಡೆದ್ದುದರಿಂದ ಬೇಗ ನಿದ್ದೆ ಬಂತು.

ಸರಿ ಸೆನ್ಸಸ್ನ ಎರಡನೇ ದಿನ ಬೆಳಿಗ್ಗೆ ಎದ್ದು ರೆಡಿ ಆಗಿ ಸುಬ್ಬಣ್ಣನ ಸ್ಪೆಷಲ್ ಚಿತ್ರಾನ್ನ ತಿಂದು ನಂತರ ಯಾಕು ಇರಲಿ ಅಂತ ಸ್ವಲ್ಪ ಚಿತ್ರಾನ್ನ ನ ಪಾರ್ಸಲ್ ಮಾಡಿಕೊಂಡು ಹೊರೆತವು. ಪುನಃ ಬೇರೆ ರೂಟನಲ್ಲಿ ಅದೇ ಚೆನ್ನಮ್ಮನ ಕೆರೆಗೆ ಕರ್ಕೊಂಡುಬಂದ್ರು. ಆದ್ರೆ ಇವತ್ತು ಬಂದದ್ದು ಶಾರ್ಟ್ಕಟ್ ದಾರಿ. ನೆನ್ನೆ ನಾವು ನಡೆಯಲು ಗೋಳಡಿದ್ದರ ಎಫೆಕ್ಟ್ ಅದು. ಸರಿ ಇವತು ಯಾರ ಮುಖ ನೋಡಿದ್ದವು ಏನು ಕೆರೆ ಹತ್ತಿರ ಒಂದ ಆನೇನು ಸುಳಿಲಿಲ್ಲ . ಮಧ್ನಾಹ 1.30 ಗೆ ಚಿತ್ರಾನ್ನ ತಿಂದೆವು. ನಂತರ ನೀರು ಮುಕ್ಕಳಿಸಿದೆವು!!.. ಆಮೇಲೆ 2.30 ಕೆ ಸುಮಾರು 12-13 ಆನೆ ಇದ್ದ ಒಂದು ಗುಂಪು(ಅದ್ರಲ್ಲಿ 2 ಮರಿ) ಕೆರೆಗೆ ಬಂತು. ಸರಿ ಆನೆಗಳ ಡೀಟೇಲ್ಸ ಬರೆದುಕೊಂಡೆವು. ಮಧ್ಯ ನನಗೆ ಕೆಮ್ಮು ಬಂದು ಸ್ವಲ್ಪ ಜೋರಾಗಿಯೇ ಕೆಮ್ಮಿದೆ. ಯದು,ದೀಪು , ಪುಟ್ಟ ಸ್ವಾಮಿ, ಮಾರ,ಚಂದ್ರು ಎಲ್ಲ ನನ್ನ ಕಡೆಗೆ ನೋಡಿದರು. ತಕ್ಷಣ ಆನೆಗಳು ನೀರಿನಲ್ಲಿ ಆಟ ಆಡೋದು ನಿಲ್ಲಿಸಿ ನಮ್ಮ ಕಡೆ ನೋಡಿದವು. ಮಾರ , ಚಂದ್ರ ಅಲರ್ಟ್ ಆಗಿ ಎದ್ದು ಮರಗಳು ಇರುವ ಸೈಡಿಗೆ ಹೋಗಿ ಎಂದು ಸನ್ನೆ ಮಾಡಿದರು. ನಿಧಾನವಾಗಿ ಮರಗಳ ಹತ್ತಿರ ಹೋಗಿ ನಿಂತವು. ಆನೆಗಳು ಸ್ವಲ್ಪ ಹೊತ್ತು ನಮ್ಮ ಕಡೆ ಗುರಾಇಸಿ ಪುನಃ ಆಡಲು ಶುರು ಮಾಡಿದವು.

ನಂತರ ಮಾರ " ಮರಿಯಾನೆ ಇದ್ದಾರೆ ಆನೆಗಳು ಚಾರ್ಜ್ ಮಾಡೋದು ಜಾಸ್ತಿ ಅದಕ್ಕೆ ಸರ್ ಸದ್ದು ಮಾಡಬೇಡಿ..." ಅಂದ. ನಾನು ದೀಪು ಮತ್ತು ಯದುಗೆ "ನೋಡಿರೂ ಅನೆ ಬೈ ಚಾನ್ಸ್ ಅಟ್ಯಾಕ್ ಮಾಡಿದ್ರೆ !!!? ನೇರ ಓಡಬೇಡಿ ಜಿಗ ಜ್ಯಗ್ ಆಗಿ ಕಾಡೊಳಗೆ ಓಡಿ..." ಅಂತ ಯಾವುದು ಬುಕ್ಕಿನಲ್ಲಿ ಓದಿದ್ದ ಪಾಯಿಂಟ್ ನೆನಪಾಗಿ ಹೇಳಿದೆ. ಅವತ್ತು ಏನ್ ಗ್ರಚಾರ ಕೆಟ್ಟಿತ್ತೊ ಏನೋ? ದೀಪು ತನ್ನ ಕೈಯಲ್ಲಿದ್ದ gunನಿಂದ ಇದ್ದಕಿದ್ದಂತೆ ಅಚಾನಕ್ ಆಗಿ ಕ್ಲಿಕ್ ಅಂತ ಜೋರಾಗಿ ಸೌಂಡ್ ಮಾಡಿಸಿಬಿಟ್ಟ!!!. ತಕ್ಷಣ ೪-೫ ಆನೆಗಳು ಮರಿಯನೆಗಳನ್ನು ಸುತ್ತುವರಿದವು. 2 ದೊಡ್ಡ ಆನೆಗಳು ನಮ್ಮಕಡೆಗೆ ತಿರುಗಿ ಚಾರ್ಜ್ ಮಾಡಲು ರೇಡಿಯಾದವು. ನಾನು, ನನ್ನ ಪಕ್ಕ ದೀಪು, ಅವನ್ ಪಕ್ಕ ಯದು, ನಮ್ಮ ಮುಂದೆ ಮಾರ. ನಾನು & ಯದು ತಿರುಗಿನೋಡಿದರೆ ಚಂದ್ರ ಆಗಲೇ 8-9 ಅಡಿ ದೂರದಲ್ಲಿದ್ದ ಮರ ಹತ್ತಿಬಿಟ್ಟಿದ್ದಾನೆ!!!!!! ಪುಟ್ಟ ಸ್ವಾಮಿ ಯಂತು ಹತ್ತಿರದಲೆಲ್ಲೂ ಕಾಣದಹಾಗೆ ಪೋಟ್(ಎಸ್ಕೇಪ್) ಆಗಿಬಿಟ್ಟಿದ್ದ...ಮಾರ ಕೂಡಲೇ ದೀಪಯಿಂದ ಗನ ತೆಗೆದುಕೊಂದು ತೋಟ(ಬುಲೆಟ್) ಲೋಡ್ ಮಾಡಿಕೊಂಡ. 2 ಆನೆಗಳಲ್ಲಿ 1 ಅನೆ 2 ಹೆಜ್ಜೆ ಮುಂದೆ ಹಾಕಿದ ಕೂಡಲೆ ಮಾರ gunಅನ್ನು ಮೇಲೆ ಮಾಡಿ airfire ಮಾಡಿದ. ಅನೆ ನಿಂತಿತು.2-3 ನಿಮಿಷ ಏನು movements ಇಲ್ಲ... ಪುನಃ ಮಾರ ಮತ್ತೊಂದು ಸಲ airfire ಮಾಡಿದ. ಆಗ ಅನೆಗಳೆಲ್ಲ ನಿಧಾನವಾಗಿ ಕಾಡಿನಲ್ಲಿ ಮರೆಯಾದವು. ಆಮೇಲೆ ಹಿಂದಯಿಂದ ಪುಟ್ಟ ಸ್ವಾಮಿ "ನೋಡಿ ನಿಮ್ಮಿಂದ ಹೇಗೆ ಆಗಿ ಬಿಟ್ಟಿತು...? ಏನು ಪುಣ್ಯ gun fire ಅಯೀತು... stuck ಆಗಿದ್ದರೆ..?" ಅಂತ ಗೊಣಗುತ್ತ ಬಂದ. ಚಂದ್ರ ಕೂಡ "ನಮ್ಮ ಹೆಂಡತಿ ಮಕ್ಕಳ ಗತಿ ಏನು ಸರ್?" ಅನ್ಕೊಂಡು ಮರ ಇಳಿದು ಬಂದ. ಮಾರ ಮಾತ್ರ ಏನು ಹೇಳದೆ "ಹುಷಾರಾಗಿ ನೆಡಿರಿ ಸಾರ್.. ವಾಪಸ್ಸು ಐ ಬಿ ಗೆ ಹೋಗೋಣ" ಅಂತ ಮುಂದೆ ಹೆಜ್ಜೆ ಹಾಕಿದ. ನನಗೆ, ದೀಪುಗೆ, ಯದುಗೆ ಇದ್ದಕಿದ್ದಂತೆ ಮಾರನ ಮೇಲೆ ಗೌರವ, ಭಕ್ತಿ ಮೂಡಿದ ಹಾಗೆಆಯಿತು . ಆಗಿದ್ದ ಗಾಬರಿಗೆ ನಾವು ಬಾಟಲ್ ನಲ್ಲಿದ್ದ ನೀರನ್ನು (ಲದ್ದಿ ನೀರನ್ನು!!!?) ಕುಡಿದು ಖಾಲಿ ಮಾಡಿದೆವು.ವಾಪಸ್ಸು ಐ ಬಿ ಗೆ ಬಂದು ಊಟ ಮಾಡಿ ಮಲಗಿದವು.

ಮಾರನೇ ದಿನ ನಾವು ಎದ್ದು, ನಮಗೆ ಸುಸ್ತಾಗಿದೆ ನಾವು ಬರುವುದಿಲ್ಲ, ನೀವೇ ಹೋಗಿ ಬನ್ನಿ ಪ್ಲಿಜ್ ಎಂದೆವು. ಸರಿ ಎಂದು ಮಾರ, ಚಂದ್ರ ಸರ್ವೆಗೆ ಹೊರಟರು. ನಾವು ಸುಬ್ಬಣ್ಣ ಮಾಡಿದ್ದ ಉಪ್ಪಿಟ್ಟು ತಿಂದು ಅಲ್ಲೇ ಐ ಬಿ ಸುತ್ತ ತಿರುಗುತ್ತ ಟೈಮ್ ಪಾಸ್ ಮಾಡಿದವು. ಮಧ್ನಹದ ಹೊತ್ತಿಗೆ ರೇಂಜರ್ ಜೀಪಿನಲ್ಲಿ ಬಂದರು. ಯದು ತಕ್ಷಣ ಹೋಗಿ ಜೀಪ್ಯೆಲ್ಲ ಹುಡುಕಾಡಿ ಅರ್ಧ ಬಾಟಲ್ ಬಿಸ್ಲಾರಿ ನೀರು ತಂದ ನಾನು,ದೀಪು,ಯದು ಮೂರೂ ಜನ ಶುದ್ದ ನೀರು ಕುಡಿದು ಸಂತೊಷಪಟ್ಟೆವು!!!. ಮಾಡಿದ್ದ ಸರ್ವೇ, ಬರೆದುಕೊಂಡಿದ್ದ ಡೀಟೇಲ್ಸ ಎಲ್ಲಾ ರೇಂಜರ್ ಗೆ ಕೊಟ್ಟು ನಂತರ ಎಲ್ಲರಿಗು ವಿದಾಯ ಹೇಳಿ ರೇಂಜರ್ ಜೀಪ್ನಲ್ಲಿ ಹಚ. ಡಿ. ಕೋಟೆ ವರೆಗೆ ಡ್ರಾಪ್ ಮಾಡಿಸಿಕೊಂಡು ಅಲ್ಲಿಂದ ಮೈಸೂರು ಬಸ್ ಹತ್ತಿದವು.

ಇವತ್ತಿಗೂ ಅಷ್ಟೇ ಯಾರಾದರು ಕುಡಿಯವ ನೀರಿನ ಬಗ್ಗೆ ಕಾಮೆಂಟ್ ಮಾಡಿ, ಸರಿ ಇಲ್ಲ, ಧೂಳ್ ಇದೆ , ಕಸ ಇದೆ ಅಂದರೆ ನಾನಾಗಲಿ, ದೀಪು ಆಗಲಿ, ಯದು ಆಗಲಿ " ನಾವು ಎಲಿಫಂಟ್ ಸೆನ್ಸಸ್ ನಲ್ಲಿ ಕುಡಿದ ಗುಂಡ್ರೆ ನದಿ ನೀರಿಗಿಂತನಾ ???!!!" ಅಂತ ಕೇಳ್ತೀವಿ"...