Saturday, April 24, 2010

2005ರ ನನ್ನ Birthday...

ನಾನು ಜುಲೈ 2004 ರ ಮೊದಲ ವಾರದಲ್ಲಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯರಿಂಗ್ ಕಾಲೇಜಿನ ಬಾಯ್ಸ್ ಹಾಸ್ಟೆಲ್ ನಲ್ಲಿ ನನ್ನ ಡಿಪಾರ್ಟ್ಮೆಂಟಲ್ Exam ಗೋಸ್ಕರ ಉಳಿದುಕೊಂಡಿದ್ದೆ. ಅಲ್ಲಿದ್ದಾಗ ನನ್ನ ಜೊತೆ ಕೆಲಸ ಮಾಡುತ್ತಿದ್ದ ಗೌಂಕರ್ ಫೋನ್ ಮಾಡಿ ‘ಸರ್ ನಿಮಗೆ ಜುಲೈ 14th ರಿಂದ ಧಾರವಾಡದ ಗುಂಗರಗಟ್ಟಿಯಲ್ಲಿ 1 Year ಟ್ರೈನಿಂಗ್ ಗೆ ಲೆಟರ್ ಕಳಿಸಿದ್ದಾರೆ’ ಅಂತ ಹೇಳಿದಮೇಲೆ ಸ್ವಲ್ಪ ನೆಮ್ಮದಿಯಾಯಿತು. ಕಾರಣ 2004ರಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟನವರು ಕರ್ನಾಟಕದಲ್ಲಿ 4 ಕಡೆ ಟ್ರೈನಿಂಗ್ ಕೊಡ್ತಾಇದ್ದರು. ಕುಶಾಲ್ ನಗರ, ಗುಲ್ಬರ್ಗ, ತಟ್ಟಿಹಳ್ಳ( ಯೆಲ್ಲಾಪುರ) ಹಾಗು ಧಾರವಾಡ್. ಇವುಗಳಲ್ಲಿ ತಟ್ಟಿಹಳ್ಳದಲ್ಲಿ ಟ್ರೈನಿಂಗ್ ಅಂದ್ರೆ ಪನಿಶ್ಮೆಂಟ್ ಅಂತಾನೆ. ಅಲ್ಲಿ ಜನ ನೋಡ್ಬೇಕು ಅಂದ್ರೆ 20 Kms ಕಾಡಿಂದ ಹೊರಗೆ ಬರಬೇಕು. So ನರಸಿಂಹರಾಜಪುರ ರೇಂಜ್ ನಿಂದ 13th ರಿಲೀವ್ ಆಗಿ ಜುಲೈ 14th ಮೈಸೂರಿನಿಂದ ಶಿವಮೊಗ್ಗ, ಅಲ್ಲಿಂದ ಹುಬ್ಬಳ್ಳಿ ಅಲ್ಲಿಂದ ಧಾರವಾಡ್ ಗೆ ಬಂದು ಸಂಜೆ 5 ಗಂಟೆಗೆ ಇಳಿದಿದ್ದಾಯಿತು. ನಮ್ಮ ಟ್ರೈನಿಂಗ್ ಸೆಂಟರ್ ಇದ್ದದ್ದು ಗುಂಗರಗಟ್ಟಿ ಎಂಬ ಜಾಗದಲ್ಲಿ. ಅದು ಧಾರವಾಡ್ – ಬೆಳಗಾಂ ರೋಡ್ (Puna - Belgaum NH) ನಲ್ಲಿ 14 Kms ಬಂದರೆ ಅಲ್ಲಿ ಇಡಿ ದೇಶಕ್ಕೆ ತ್ರಿವರ್ಣದ ರಾಷ್ಟ್ರಬಾವುಟ ಸಪ್ಪ್ಲಯ್ ಮಾಡೂ ಗರಗ ಎಂಬ ಊರಿನ ರಸ್ತೆ ಸಿಗುತೆ. ಆ ಕ್ರಾಸ್ ನಿಂದ 800 Mts ದೂರದಲ್ಲಿ ಇದ್ದ Telco factory ಮುಂದೆ ಇತ್ತು ನಮ್ಮ ಫಾರೆಸ್ಟ್ ಟ್ರೈನಿಂಗ್ ಸೆಂಟರ್.
ಒಟ್ಟು 68 ಜನ 17th ಬ್ಯಾಚ್ ಫಾರೆಸ್ಟ್ ರ್ ನ 1Year ಟ್ರೈನಿಂಗ್ ಗೆ ಬಂದಿದ್ದರು. ಟ್ರೈನಿಂಗ್ ಸೆಂಟರ್ ಎಂಟ್ರೆನ್ಸ್ ನಲ್ಲಿ ಒಂದು ದೊಡ್ಡ ಗೇಟ್ ಇದೆ. ಅಲ್ಲಿಂದ ಒಳಗೆ 1 Km ಸ್ಟ್ರೈಟ್ ಟಾರ್ ರೋಡ್ ಇತ್ತು ಅದು ನಮ್ಮ ಟ್ರೈನಿಂಗ್ ಸೆಂಟರ್ ನ ಮೈನ್ ಬಿಲ್ಡಿಂಗ್ ಗೆ ಜಾಯಿನ್ ಆಗ್ತಾ ಇತು. ಟ್ರೈನಿಂಗ್ ಸೆಂಟರ್ ನಲ್ಲಿ ಒಟ್ಟು 5 ಬ್ಲಾಕ್ ಗಳು ಇದ್ದವು. ನಂದು ಕಡೆ ಬ್ಲಾಕ್ ನಲ್ಲಿ ಲಾಸ್ಟ್ ರೂಂ. ರೂಂ ನಂ 8.
ಸರಿ ಬಂದ ದಿನವೇ ಎಲ್ಲರ ಪರಿಚಯ ಅಯಿತು. ಅಲ್ಲಿ ಟ್ರೈನಿಂಗ್ ನಲ್ಲಿ PT ಮಾಸ್ಟರ್ ಆಗಿ ಅಲ್ಲೇ ಗುಂಗರಗಟ್ಟಿ ಸಮೀಪ ನೀರಲಕಟ್ಟಿ ಎಂಬ ಊರಿನ X ಆರ್ಮಿ ಮ್ಯಾನ್ ಅಡಿವೆಪ್ಪ ಎಂಬವ ಇದ್ದ. ದಪ್ಪ ಆಸಾಮಿ. ಒಂದು Angleನಲ್ಲಿ ಹ್ಯಾಪಿ ಮ್ಯಾನ್ ತರಹ ಕಾಣ್ತಾ ಇದ್ದ. ಲವ್ ಅಟ್ ಫಸ್ಟ್ ಸೈಟ್ ತರ ನನಗೆ ಅವನ ಮೇಲೆ ಹೇಟ್ ಅಟ್ ಫಸ್ಟ್ ಸೈಟ್ ಅಯೀತು!!!. ನಮ್ ಟ್ರೈನಿಂಗ್ ರೋಟಿನ್ ಹೇಗಿತು ಅಂದ್ರೆ… ಬೆಳಿಗ್ಗೆ 5.30 ಕ್ಕೆ PT ಅಡಿವೆಪ್ಪ ಎದ್ದು ವಿಷಲ್ ಹಾಕ್ತ ಇದ್ದ, ನಾವುಗಳು ಒಂದು ರೂಂನಲ್ಲಿ ಐದೈದು ಜನಾವಿದ್ದು ಎಲ್ಲ ನಿತ್ಯಕರ್ಮ ಮುಗಿಸಿ, ಬ್ರಶ್ ಮಾಡಿ ರೆಡಿ ಆಗಿ ವೈಟ್ ಟಿ-ಶರ್ಟ್, ವೈಟ್ ನಿಕ್ಕರ್, ಜಾಗಿಂಗ್ ಶೂ ಹಾಕಿಕೊಂಡು ಫೀಲ್ಡ್ ನಲ್ಲಿ Exact 5.50ಕ್ಕೆ ಫಾಲ್ ಇನ್ ಆಗಬೇಕಿತು. ಟ್ರೈನಿಂಗ್ ನಲ್ಲಿ ತಿಂಗಳಿಗೊಬ್ಬ ಲೀಡರ್ ಅಂತ ಮಾಡ್ತಾ ಇದ್ದರು, ಅವನು ಎಷ್ಟು ಜನ ಬಂದಿದ್ದರೆ? ಯಾರು ಬಂದಿಲ್ಲ? ಯಾಕೆ ಬಂದಿಲ್ಲ?ಅಂತ ತಿಳಿದು PT ಮಾಸ್ಟರ್ಗೆ ರಿಪೋರ್ಟ್ ಮಾಡಿದ ನಂತರ ಜಾಗಿಂಗ್ ಶುರು. ಡೈಲಿ ಮಿನಿಮಮ್ಮ್ 8-10 Kms ಓಡಬೇಕಿತ್ತು. ಅಮೇಲೆ ಸ್ವಲ್ಪ Exercise. 7.15 ಕ್ಕೆ ಓಡಿ ಬಂದು ತಿಂಡಿ ತಿಂದು, 8.00 ಕ್ಕೆ ರೂಮ್ ಗೆ ಹೋಗಿ ಸ್ನಾನ ಮಾಡಿ ಬುಕ್ಸ್ ತಗೊಂಡು ನಮ್ ರೂಂ ಗಳಿಂದ 1 km ದೂರದಲಿದ್ದ ಮೈನ್ ಬಿಲ್ಡಿಂಗ್ ನ ಕ್ಲಾಸ್ ರೂಂ ಗೆ Exact 9.00 ಗೆ ರೀಚ್ ಆಗ್ತಾ ಇದ್ದೆವು. ಅಲ್ಲಿ ಕ್ಲಾಸ್ ಇರುತ್ತಿತು. ಟೀ ಬ್ರೇಕ್ 11.00ಕ್ಕೆ. ಊಟ 1.00 ರಿಂದ 2.00 ರವರೆಗೆ. 2.00 ರಿಂದ 4.00 Field ವರ್ಕ್. ಗುಂಡಿ ಅಗೆಯೋದು, ರಸ್ತೆ ಸರಿ ಮಡೋದು, ಪ್ಲಾಂಟೇಶನ್ ಕ್ಲಿನ್ ಮಾಡೋದು. ಮತ್ತೆ 4.00 ಕ್ಕೆ ಟೀ. 4.30 ಟು 6.00 ಗೇಮ್ಸ್ (ಆಟ ಆಡ್ಲೆಬೇಕಿತ್ತು) ನಂತರ 8.30 ಕ್ಕೆ ಊಟ. ಅಮೇಲೆ ರೆಸ್ಟ್. 1 ವರ್ಷ ಲೈಫ್ ಹೀಗೆ ಇತ್ತು. ನಮ್ಮ ಫಾರೆಸ್ಟ್ ರ್ ನ ಟ್ರೈನಿಂಗ್ ಗೆ Usually ACF ನ ಚೀಫ್ ಟ್ರೈನರ್ ಆಗೀ ಮಾಡ್ತಾರೆ. ನಮ್ಮ ಟ್ರೈನಿಂಗ್ ನಲ್ಲಿ 2-3 ಜನ ACF ‘s ಚೇಂಜ್ ಆದರು. But ಮಜೋರಿಟಿ ಟ್ರೈನಿಂಗ್ ಮುಗೀಯೋವರೆಗೂ ಕುಲಕರ್ಣಿ ಎಂಬ ACF ಇದ್ದರು.

ನನ್ನ ರೂಂ (ರೂಂ 8) ನಂ ಟ್ರೈನಿಂಗ್ ಕ್ಯಾಂಪಸ್ ನ ಒಂದು ತುದಿಲೀ ಇತು. ನಮ್ ಟ್ರೈನಿಂಗ್ ಹುಡುಗರು ಎಲ್ಲಾ ನನ್ನ ರೂಂಗೆ ಬರ್ತಾ ಇದ್ದರು. ಕಾರ್ಡ್ಸ್ ಆಡೋಕೆ, ಮ್ಯೂಸಿಕ್ ಕೇಳೋಕೆ, Discussion ಮಾಡೋಕೆ, ಲೈಟ್ ಆಗೀ ಪಾರ್ಟಿ ಮಾಡೋಕೆ, ಇನ್ನು ಏನ್ ಏನೋ ಕೆಲಸಗಳಿಗೆ ನನ್ನ ರೂಂ ಫೇಮಸ್ ಆಗಿತ್ತು. Even ಟ್ರೈನಿಂಗ್ ಫೋನ್ ಕೂಡ ನಮ್ ರೂಂ ನಲ್ಲೆ ಇತ್ತು. ರೂಂ8 It was Noting But a Club!.

ನಾನು, ಗಿರಿ, ರಾಕೇಶ್, ಅನಿಲ್ ಎಲ್ಲ ಅಕ್ಕ ಪಕ್ಕ ರೂಂ ನಲ್ಲಿ ಇದ್ದೆವು. 68 ಜನ ಟ್ರೈನೀಸ್ ನಲ್ಲಿ ಮಜೋರಿಟಿ ನಾರ್ತ್ ಕರ್ನಾಟಕ ಹುಡುಗರು ಇದ್ದರು. ನನಗೆ ತಿಳಿದಿರೋ ಹಾಗೆ ನಾರ್ತ್ ಕರ್ನಾಟಕ ಜನ ನಮ್ಮ ಸೌತ್ ಕರ್ನಾಟಕ (ಅಂದ್ರೆ ಮೈಸೂರ್, ಮಂಡ್ಯ, ತುಮಕೂರ್, ಹಾಸನ್) ಜನರ ರೀತಿ ಹಾರ್ಡ್Rash ಇಲ್ಲ. ಅವರು ತುಂಬಾ ಸಾಫ್ಟ್ & Humbel ಜನ. ಟ್ರೈನಿಂಗ್ ನಲ್ಲಿ ನಾವು ಸ್ವಲ್ಪ ಜನ ಅಂದ್ರೆ ನಾನು, ರೋಹಿತ್, ರಾಕಿ, ಅನಿಲ್ ಇವರೆಲ್ಲ Rash ಬಾಯ್ಸ್ ಅಂತ ಹೇಳ್ತಾ ಇದ್ದರು. ಅದರಲ್ಲೂ ನನಗೆ ಬ್ಯಾಡ್ ಬಾಯ್(Bad Boy) ಅನ್ನೋ ಪಟ್ಟ ಸಿಕ್ಕಿತು ( Especially ಕರಾಟೆ ಪ್ರಾಕ್ಟೀಸ್ ನಲ್ಲಿ ನಾನು & ಗಿರೀಶ್ ಫೈಟ್ ಮಾಡುವಾಗ, ಅವನ ಕೈನ ನಾನು ಫ್ರ್ಯಾಕ್ಚರ್ ಮಾಡಿದಾಗ!!!). ಅಡಿವೆಪ್ಪನಿಗೆ ಸುಮಾರು ಜನ ಟ್ರೈನೀಸ್ ಮರ್ಯಾದಿ ಕೊಡ್ತಾ ಇದ್ದರು. ಆದರೆ ನಾನು ಮತ್ತೆ ಇನ್ನು ಇತರ ಹುಡುಗರು ಬರಿ ಉಲ್ಟಾ ಮಾತಾಡುತ್ತ ಇದ್ದೆವು. ನನ್ನ ಕಂಡರೆ ಭಯಂಕರ ಉರಿ ಅವನಿಗೆ!. ಯಾವಾಗಲು ‘ ಏ ಸುಧಾಕರ್, ನೀನು ಟ್ರೈನಿಂಗ್ ನಲ್ಲಿ Groupism ಮಾಡ್ತಿಯೇನೋ. ನಿನ್ನನ್ನ ಎಲ್ಲಿ ಮಟ್ಟ ಹಾಕಬೇಕು ಅಲ್ಲಿ ಹಾಕ್ತೀನಿ’ ಅಂತ ಇದ್ದ. ನನ್ನ ಮೇಲೆ ಕಂಪ್ಲೈಂಟ್ ಹೇಳಲು ಯಾವಾಗಲು ಚಾನ್ಸ್ ಕಾಯ್ತಿದ್ದ


ಅವತು Jan 13th 2005. ಟ್ರೈನಿಂಗ್ ಶುರು ಆಗೀ 183 ದಿನಗಳಗಿದ್ದವು. ಅವತು ನನ್ನ 21st Birthday. 13 ಅನ್ನು ಜಗತ್ತಿನ ಎಷ್ಟೋ ದೇಶದ ಜನರು unlucky ನಂಬರ್ ಅಂತ ಭಾವಿಸ್ತಾರೆ. ಅದರಲ್ಲೂ 13th Friday ಅಂದರೆ ಪ್ರೇತಾತ್ಮ, ಭೂತ ಲೋಕದಲ್ಲಿ ಅದೊಂದು ವಿಶೇಷ ದಿನ. 13th Friday ಹೆಸರಿನ ಎಷ್ಟೋ Horror ಚಿತ್ರಗಳು ಇಂಗ್ಲಿಷ್ ನಲ್ಲಿ ರಿಲೀಸ್ ಆಗಿವೆ. But ನನಗೆ 13 ಫೇವರೇಟ್ ನಂಬರ್. ನಾನು ಹುಟ್ಟಿದು 13th Friday ದಿನವೇ!!! ನನ್ನ Birthday ಬಗ್ಗೆ ನನ್ನ ರೂಂಮೆಟ್ ಗಳಿಗೆ ಮಾತ್ರ ಗೊತ್ತಿತು. ಅವತ್ತು asusual 5.30 ಕ್ಕೆ ಎದ್ದು ಬ್ರುಶ್ ಮಾಡಿ PTಗೆ ರೆಡಿ ಆದೆ. ನಮ್ಮ ಜಾಗಿಂಗ್ ಗ್ರೌಂಡ್ ನಮ್ಮ ಕ್ಯಾಂಪಸ್ ನ ಸೆಂಟರ್ ನಲ್ಲಿತ್ತು. ರೆಗ್ಯುಲರ್ 400 mtsಗಳ ಟ್ರ್ಯಕ್ ಅದು . ದಿನವು PT ಅಡಿವೆಪ್ಪ 15-18 ರೌಂಡ್ ಅಂದ್ರೆ 6-8 kms ನಮ್ಮೆಲ್ಲರನ್ನೂ ಓಡಿಸ್ತಾಇದ್ದ. Initial 5 ರೌಂಡ್ಸ್ slow ಆಗೀ ಹಾಗು ಬರ್ತಾ ಬರ್ತಾ ಸ್ಪೀಡ್ ಆಗೀ ಓಡಬೇಕಿತು. So ಅವತ್ತು ಯಾಕೋ ಅಡಿವೆಪ್ಪ ಆರು ಏಳು ರೌಂಡ್ಸ್ ಆದಮೇಲೆ ‘ಓಡಿರೋ ಸ್ಪೀಡ್ ಆಗೀ ಓಡಿರಿ’ ಅಂತಿದ್ದ. ನಾವು ಸ್ಪೀಡ್ನ ಪಿಕ್ ಅಪ್ ಮಾಡಿಕೊಂಡೆವು. ಅಡಿವೆಪ್ಪ ‘‘ಇನ್ನು ಸ್ಪೀಡ್...ಇನ್ನು ಸ್ಪೀಡ್...’ ಅಂತ ಇದ್ದೆ. ಯಾಕೋ ನಂಗು, ರಾಕಿಗು, ರೋಹಿತಂಗು ರೇಗಿ ಹೊಯಿತು. ತಕ್ಷಣ ನಿಂತು ಬಿಟ್ಟೆವು. ನಾವು ನಿಂತ ಮೇಲೆ ಸ್ಲೋ ಆಗೀ ಎಲ್ಲರೂ ನಿಲ್ಲತೊಡಗಿದರು. ಅಡಿವೆಪ್ಪ ಬಂದು ‘ ‘ಏ ಯಾಕೋ ನಿಂತಿರಿ? ಓಡಿರೋ...’ ಅಂದ ನಾನು ‘ ಏನ್ ಸರ್? ಎಷ್ಟು ಸ್ಪೀಡ್ ಆಗೀ ಅಂತ ಓಡೋಕೆ ಅಗುತ್ತೆ?, ಏನ್ ಲಿಮಿಟ್ ಬೇಡವ?’ ಅಂದೆ. ರಾಕಿ ಇದ್ದು ‘ ಸರ್ ನಾವು ಓಡೋ ಅರ್ಧ ಸ್ಪೀಡ್ ನಲ್ಲಿ ನೀವು2 ರೌಂಡ್ ಹಾಕಿ ಸಾಕು’ ಅಂದುಬಿಟ್ಟ. ಅಷ್ಟು ಸಾಕಿತ್ತು ಅಡಿವೆಪ್ಪನಿಗೆ ‘ಸರಿ ನೀವು ಓಡೋದಿಲ್ಲ ಅಲ್ಲವ? ನನ್ನ ಮಾತು ಕೇಳದಿದ್ದ- ಮೇಲೆ ನಾನು ನಿಮಗೆ PT ಕ್ಲಾಸ್ ತಗೋಳಲ್ಲ’ ಅಂತ ಹೇಳಿ ಜಾಗಿಂಗ್ ಗ್ರೌಂಡ್ ನಿಂದ ಅವನ ರೂಮಿಗೆ ಹೊರಟು ಹೋದ. ನಾವುಗಳು ಸ್ವಲ್ಪ ಹೊತ್ತು ಕಾದು ನಮ್ಮ ಪಾಡಿಗೆ ನಾವು ಗ್ರೌಂಡಿನಿಂದ ರೂಂಗೆ ಹೋದವು.
ಬೆಳಗೆ ACF ಕುಲಕರ್ಣಿ ಕ್ಲಾಸ್ ನಲ್ಲಿ ಪಾಠ ಮಾಡುವಾಗ ಅಡಿವೆಪ್ಪ ಬಂದು ನಿಂತ. ಕುಲಕರ್ಣಿ ಸರ್ ‘ಏನ್ರೀ ಅಡಿವೆಪ್ಪ ಬಂದಿದು?’ ಅಂದ್ರು . ಅದಿಕ್ಕೆ ಅಡಿವೆಪ್ಪ ‘ ಸರ್ ನಾನು ಇನ್ನು ಈ ಬ್ಯಾಚ್ ಗೆ PT ಕ್ಲಾಸ್ Conduct ಮಾಡಲ್ಲ ಸರ್, ಆ ಬಗ್ಗೆ ಲೆಟರ್ ಕೊಡೋಕೆ ಬಂದೆ ಅಷ್ಟೇ...’ ಅಂದ.

ತಕ್ಷಣ ಆಲ್ಮೋಸ್ಟ್ ಲಾಸ್ಟ್ Row ನಲ್ಲಿ ಕೂತಿದ್ದ ನಾನು, ರಾಕಿ, ಅನಿಲ್ ಮೂವರು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಕುಲಕರ್ಣಿ ಸರ್ ‘ ಯಾಕ್ರಿ PT ಕ್ಲಾಸ್ ತಗೊಳಲ್ಲ? ಏನಾಯೀತು?’ ಅಂತ ಕೇಳಿದ್ರು. ಅಡಿವೆಪ್ಪ ಶುರು ಮಾಡಿಬಿಟ್ಟನಲ್ಲಪ್ಪ ‘ ಸರ್ ಇವರ್ಯಾರು ನನ್ನ ಮಾತು ಕೇಳಲ್ಲ, ಆ ಸುಧಾಕರ್ Groupism ಮಾಡ್ತಾನೆ, ಅವನ ಜೊತೆ ರಾಕೇಶ್, ಅನಿಲ್ ಇನ್ನು ಸುಮಾರು ಜನ ನನಗೆ ತಿರುಗಿ ಉಲ್ಟಾ ಮಾತಾಡುತ್ತಾರೆ’ ಅಂತ ಕಂಪ್ಲೈಂಟ್ ಮಾಡಿದ. ACF ಕುಲಕರ್ಣಿ ‘ ಸುಧಾಕರ್ ಸ್ಟ್ಯಾಂಡ್ ಅಪ್’ ಅಂದ್ರು ನಾನು ಎದ್ದು ನಿಂತೆ. ಅವರು ‘ಏನ್ರೀ ಇದೆಲ್ಲ?’ ಅಂದ್ರು. ನಾನು ‘ ಸರ್ ನಮ್ಮದೇನೂ ತಪಿಲ್ಲ... ಬೇಕಂತನೆ ಸಿಕ್ಕಪಟ್ಟೆ ಓಡಿಸ್ತಾರೆ, ನಮ್ಮೇಲೆ ಯಾಕ ಸಿಟ್ಟು ಅವರಿಗೆ ಅಂತ ಗೊತ್ತಿಲ್ಲ... ಸುಮ್ಮ ಸುಮ್ಮನೆ ಕಂಪ್ಲೈಂಟ್ ಮಾಡ್ತಾ ಇದ್ದರೆ, Groupism ಅಂದ್ರೆ ನನಗೆ ಏನು ಅಂತಾನೆ ಗೊತ್ತಿಲ್ಲ… ನನ್ನ ಯಾಕ ಅದನ ಮಾಡ್ಲೀ…’ ಅಂತ ನನ್ನ ಮಾತು ಮುಗಿಸೋವಷ್ಟರಲ್ಲಿ ACF ಅವರು ‘SHUT UP ಸುಧಾಕರ್….. ಡೋಂಟ್ ಆಕ್ಟ್ ಸ್ಮಾರ್ಟ್. ಟ್ರೈನಿಂಗ್ ನಲ್ಲಿ ಟ್ರೈನೀ ತರಾ ಇರೋದು ಕಲಿತಿಕೋ....’ ಅಂತ ಹೇಳಿ ಅಡಿವೆಪ್ಪನ ಕಡೆ ತಿರುಗಿ ‘ ರೀ ಅಡಿವೆಪ್ಪ ಇವತ್ತು ಯಾರೆಲ್ಲ PT ಮಾಡದೆ Boycott ಮಾಡಿ ಗಲಾಟೆ ಮಾಡಿದರು ಅವರನ್ನೆಲ್ಲಾ ಮಧ್ಯಾನ ಫೀಲ್ಡ್ ವರ್ಕ್ ಟೈಂನಲ್ಲಿ ಅದೇ ಗ್ರೌಂಡ್ ನಲ್ಲಿ... ಬಿಸಿಲಿನಲ್ಲಿ ಓಡಿಸಿ… ಅದೇ ಇವರ ಪನಿಶ್ಮೆಂಟ್... ಈಗ ಹೋಗಿ...’ ಅಂತ ಹೇಳಿ ಏನೋ ಬರಿಯೋಕೆ ಬೋರ್ಡ್ ಕಡೆ ತಿರುಗಿದರು. ಅಡಿವೆಪ್ಪ ಒಂದು ಸಲ ನನ್ನ ಕಡೆ ನೋಡಿ, ಲೈಟ್ ಆಗೀ ಸ್ಮೈಲ್ ಬೇರೆ ಕೊಟ್ಟ!!! ನಂತರ ಅಲ್ಲಿಂದ ಹೊರಟುಹೋದ. ಸುಮಾರು ಹುಡುಗರು ನನ್ನ ಕಡೆ ತಿರುಗಿ ‘ಅಯ್ಯೋ ಪಾಪ’ ಅನ್ನೋ ರೀತಿ ನೋಡಿದರು.

ಸರಿ ಮಧ್ಯಾನ ಊಟದ ಟೈಮ್ ನಲ್ಲಿ ನನ್ನ ರೂಂ ಮೆಟ್ಸ್ ಎಲ್ಲರಿಗೂ ‘ ‘ಇವತ್ತು ಸುಧಾಕರ್ ನ Birthday, ಇವತ್ತೆ ಅವನಿಗೆ ಭರ್ಜರಿ ಪನಿಶ್ಮೆಂಟ್’ ಅಂತ ಹೇಳ್ತಾಇದ್ದರು . ಊಟದ ಹಾಲ್ ನಲ್ಲಿ ಅವತು ನನ್ನ Birthday & ಪನಿಶ್ಮೆಂಟ್ ವಿಷಯವೇ ಸೆಂಟರ್ ಆಪ್ಫ್ ಅಟ್ರ್ಯಕ್ಶನ್. ನಮ್ಮ ಟ್ರೈನಿಂಗ್ ನಲ್ಲಿ ಇದ್ದ 6 ಜನ Ladies ಪೈಕಿ ಯೋಗೇಶ್ವರಿ ಬಂದು ‘ ರೀ ಸುಧಾಕರ್ ಹೋಗಿ ACF ಹತ್ರ, ಇವತ್ತು ನನ್ನ Birthday, ಪನಿಶ್ಮೆಂಟ್ ನಾಳೆ ತೊಗೋತೀನಿ ಸಾರ್!!!!??? ಅಂತ ಕೇಳ್ಕೋಳಿ’ ಅನ್ನೋ ಖತರ್ನಾಕ್ ಸಲಹೆ ಕೊಟ್ಟಳು. ಸರಿ ಊಟ ಅಯೀತು ಕಾಕೀ ಶರ್ಟ್ & ಕಾಕೀ ನಿಕ್ಕರ್ ಹಾಕಿಕೊಂಡು ರೂಂನಿಂದ ಹೊರಡುವಾಗ ನನ್ನ ತಂಗಿ ರಾಜಮಣಿ ಕಾಲ್ ಮಾಡಿದಳು. ಫೋನ್ ನಲ್ಲಿ ಅವಳು ‘ ಲೋಕು (ಮೈ ಪೆಟ್ ನೇಮ್) ಹ್ಯಾಪಿ Birthday ಕಣೋ… ಏನ್ ಫುಲ್ ಜಾಲಿನಾ ಇವತ್ತು? ಯಾರ ಯಾರ ಏನ್ ಏನ್ ಗಿಫ್ಟ್ ಕೊಟ್ಟರೋ?’ ಅಂದಳು. ಆಗ ನಾನು ‘ ಇವತ್ತು ನನ್ನ Birthday ಸೂಪರ್ ಕಣೆ, ನಮ್ ACF ಸಕ್ಕತ್ತಾಗಿರೋ ಗಿಫ್ಟ್ ಕೊಟ್ಟಿದಾರೆ, ಎಲ್ಲ ನಿನಗೆ ನೈಟ್ ಡಿಟೈಲ್ ಆಗೀ ಹೇಳ್ತಿನಿ’ ಅಂತ ಹೇಳಿ ಫೋನ್ ಇಟ್ಟೆ.


ಸರಿ ನಂತರ ಅಡಿವೆಪ್ಪ ಬಂದು ನನ್ನ ಸೇರಿದಂತೆ 5 ಜನರ ಹೆಸರು ಹೇಳಿ ‘ನೀವೆಲ್ಲ 2 ರಿಂದ 4 ಗಂಟೆ ವರೆಗೆ ಜಾಗಿಂಗ್ ಟ್ರ್ಯಕ್ ನಲ್ಲಿ ಓಡಿ...’ ಅಂತ ಹೇಳಿ, ನಾವು ಸರಿಯಾಗೀ ಓಡುತೀವೊ ಇಲ್ಲವೋ ಅಂತ ನೋಡಲು ಒಬ್ಬ ಟ್ರೈನೀನ ಕಾವಲು ಹಾಕಿ ಹೋದ. ಅವತ್ತು ಸಿಕ್ಕಪಟ್ಟೆ ಬಿಸಿಲು. ಧಾರವಾಡದ ಬಿಸಿಲು ಅಂದ್ರೆ ಕೇಳಬೇಕೆ??? ಒಂದು 40 ನಿಮಿಷ ಅಯೀತು. ಮಧ್ಯದಲ್ಲಿ ಯಾರೋ ಅಡಿವೆಪ್ಪ ಹತ್ತಿರ ಹೋಗಿ ‘ಇವತ್ತು ಸುಧಾಕರ್ ನ Birthday, ಯಾಕೆ ಪನಿಶ್ಮೆಂಟ್ ಕೊಟ್ಟಿರಿ?’ ಅಂತ ಹೇಳಿದ್ದಾರೆ. ನಂತರ ಅವನು ಬಂದು ‘ಏ ಸುಧಾಕರ ಸಾಕು ನೀನು ಓಡ ಬೇಡ ಕಣೋ, ಯಾಕೋ ನಿನ್ನ Birthday ಅಂತ ಹೇಳಿಲ್ಲ ನೀನೂ...ನಿಲ್ಲಿಸೋ’ ಅಂದ. ನಾನು ನಿಂತು, ಒಂದು ಸಲ ಅವನ ಕಡೆ ಲುಕ್ ಕೊಟ್ಟು ಪುನ್ಹ ಓಡೋಕೆ ಶುರುಮಾಡಿದೆ. ಅವನಿಗೂ ಏನ್ ಅನ್ನಿಸಿತೋ ಏನೋ ಅಲ್ಲಿಂದ ಹೊರಟು ಹೋದ. So ಅವತ್ತು ನಮ್ಮ 5 ಜನಕ್ಕೂ ಫುಲ್ ಸುಸ್ತೋ ಸುಸ್ತು.

ಸಂಜೆ 4 ಗಂಟೆ ಅಯೀತು. ಟೀ ಬ್ರೇಕ್. ನಂತರ ಗೇಮ್ಸ್ ನಲ್ಲಿ ಯಾಕೋ ಅಡಿವೆಪ್ಪ ಮಂಕಾಗಿ ಇದ್ದ. ನಾನು ಮಾಮೂಲೀ ಹುಡುಗರ ಜೊತೆ ಕೂಳೆ (Masti) ಮಾಡಿಕೊಂಡೆ ಇದ್ದೆ. ಅವತ್ತು ಮೆಸ್ಸಿ(Mess)ಗೆ ಸಾಮಾನು ತರುವವರ ಹತ್ತಿರ ಎಲ್ಲರಿಗೂ ಕೊಡೋಣ ಅಂತ ಸ್ವೀಟ್ಸ್ ತರಿಸಿದೆ. ಸಂಜೆ ಸ್ನಾನ ಮಾಡಿದ ಕೂಡಲೆ ನನ್ನ ಮನಸ್ಸಿನಲ್ಲಿ ಈಗ ACF ಹತಿರ ಹೋಗಿ ‘ ಸರ್, ಈವತು ನನ್ನ Birthday, ಸ್ವೀಟ್ ತಗೋಳಿ...’ ಅಂದ್ರೆ ಅವರ Expression ಹೇಗಿರುತ್ತೆ? ಅಂತ ಯೋಚಿಸಿ. ಕೊಡಲೇ ಸ್ವೀಟ್ ಪ್ಯಾಕೆಟ್ ತೆಗೆದುಕೊಂಡು ನನ್ನ ಸೈಕಲ್ ನಲ್ಲಿ (ಟ್ರೈನಿಂಗ್ ಚೀಫ್ ಹೊಸ್ಮಟ್ ರವರು ಎಲ್ಲರಿಂದ 2000 ರು ಕಲೆಕ್ಟ್ ಮಾಡಿ ಸೈಕಲ್ ಕೊಡಿಸಿದ್ದರು) ACF ಚೇಂಬರ್ಗೆ ಹೋದೆ. But ಅವರು ಅಲ್ಲಿ ಇರಲಿಲ್ಲ. Peonನಿಂದ ಅವರು 20 ನಿಮಿಷ ಹಿಂದೆ ಬೆಳಗಾಂನಲ್ಲಿ ಇರುವ ತಮ್ಮಮನೆಗೆ ಹೋದರೆಂದು ತಿಳಿಯಿತು. ತಕ್ಷಣ ಫೋನ್ ಮಾಡಿದೆ. ಫೋನ್ ರಿಂಗ್ ಅಗುತ್ತಿದ್ದಂತೆ ಅವರು ‘ ಹಲೋ ಯಾರು?’ಅಂದರು. ನಾನು ‘ ಸರ್ ಗುಡ್ ಇವಿನಿಂಗ್, ಸುಧಾಕರ್ ಸರ್’ ಅಂದೆ. ಅವರು ‘ಏನ್ ಹೇಳಿ… ಏನ್ ಪುನ್ಹ ಅಡಿವೆಪ್ಪ ಹಾಗು ನಿಮ್ಮದು ಗಲಾಟೆನ?’ ಅಂದ್ರು. ನಾನು 'ಹಾಗೇನು ಇಲ್ಲ ಸರ್… ಇವತ್ತು ನನ್ನ Birthday.ನಿಮಗೆ ಸ್ವೀಟ್ ಕೊಡೋಣ ಅಂತ ಬಂದಿದೆ. ನೀವು ಇರಲಿಲ್ಲ, ಎಲ್ಲಿ ಇದ್ದೀರಿ? ಅಂತ ಫೋನ್ ಮಾಡಿದೆ ಅಷ್ಟೇ’ ಅಂದೆ. ಅವರು ‘ಓಹ್ಹ್ಹ್…’ ಅಂದು ಒಂದು 5-6 ಸೆಕೆಂಡ್ ಬಿಟ್ಟು ಫೋನ್ ಕಟ್ ಮಾಡಿದರು. ನನಗಂತು ಏನೋ ಮನಸ್ಸಿಗೆ ಒಂದು ರೀತಿ ಸಮಾಧಾನ ಅಯೀತು. ಹಾಯ್ ಎನ್ನಿಸಿತು!!. ನಾನು ನನ್ನ Birthday.ವಿಷಯ ಹೇಳಿದಾಗ ಅವರ ಮುಖ ಹೇಗಾಯಿತೋ ಅನ್ನೋ ಕಲ್ಪನೆ ಮಾಡಿಕೊಳ್ಳುತ ರೂಂ ಗೆ ಬಂದೆ. ಬಂದ 15 ನಿಮಿಷಕ್ಕೆ ಶರತ್ ಶೆಟ್ಟಿ ಫೋನ್ ಮಾಡಿ ‘ಸುಧಾ ಲೇ... ACF ಬಂದಿದ್ದರೆ. ಮೆಸ್ ಹತ್ತಿರ ಬರ್ಲಾ ಮಗಾ...’ ಅಂದ ತಕ್ಷಣ ಸೈಕಲ್ ತಗೊಂಡು ಮೆಸ್ ಹತ್ತಿರ ಹೋದೆ. ಅಲ್ಲಿ ACF ಸುತ್ತ ಎಲ್ಲ ಟ್ರೈನೀಸ್ ನಿಂತಿದ್ದರು. ACF ನನ್ನ ಹತ್ತಿರ ಬಂದು ‘I’m Sorry ಸುಧಾಕರ್… ನಿಮ್ಮ Birthday ದಿನನೇ ಪನಿಶ್ಮೆಂಟ್ ಕೊಟ್ಟುಬಿಟ್ಟೆ. ಯಾವುದೆ ಹಾರ್ಡ್ ಫೀಲಿಂಗ್ಸ್ ಇಟ್ಟು ಕೊಳ್ಳಬೇಡಪ್ಪ… ನಾನು 10 kms ದೂರ ಹೋಗಿದೆ, ಯಾಕೋ ಬೇಜಾರ್ ಆಗಿ ವಾಪಸ್ ಬಂದೆ’ ಅಂತ ಹೇಳಿ ಬೇರೆ ಟ್ರೈನೀಸ್ ಕಡೆ ತಿರುಗೀ ‘ ನೀವಾರು ಯಾರದ್ರು ಹೇಳ್ಬಾರ್ದ ಅವನ Birthday ಅಂತ?’ ಅಂದು, ಸ್ವೀಟ್ ತಗೊಂಡು ತಿಂದು ಪುನ್ಹ Wishes ಹೇಳಿ ಹೊರಟುಹೋದರು. ನಂತರ ಎಲ್ಲರಿಗೂ ಸ್ವೀಟ್ಸ್ ಕೊಟ್ಟು Birthday ಸೆಲೆಬ್ರೆಟ್ ಮಾಡಿ ನನ್ನ ರೂಂ ಗೆ ಹೋದೆ. ಅವತು ನನ್ನ ಮೈಂಡ್ ಫುಲ್ Calm ಆಗಿ ಇತ್ತು. ACF ಪಾಪ ಒಳ್ಳೆಯವರು ಅನ್ನಿಸ್ತು. Next ಯಾವಗಲಾದ್ರು ಚಾನ್ಸ್ ಸಿಕ್ಕಿದಾಗ ಅಡಿವೆಪ್ಪ ನನ್ನನ್ನು ಸಿಕ್ಕಿಸಿದ ಹಾಗೆ ನಾನು ಅವನನ್ನು ಸಿಕ್ಕಿಸಬೇಕು ಅನಿಸ್ತು.
ಎಲ್ಲರೂ ಹೇಳ್ತಾರೆ Birthday ದಿನ ಅತ್ತರೆ ಇಡೀ ವರ್ಷ ಅಳ್ತೀಯ, ಬೇಜಾರ್ ಮಾಡಿಕೊಂಡರೆ ಇಡೀ ವರ್ಷ ಬೇಜಾರಾಗಿ ಇರ್ತಿಯಾ ಅಂತ But ಅವತು ಪನಿಶ್ಮೆಂಟ್ ತಗೊಂಡ ನನಗೆ ಇಡೀ ವರ್ಷ ಯಾವುದೆ ತುಂಬಾ ಬೇಜಾರ್ ಆಗೂ ಅಂತ ಘಟನೆ ನೆಡಿಲಿಲ್ಲ. ಯಾರದ್ರು Birthday ದಿನ ಹುಷಾರಾಗಿ ಇರಬೇಕು ಅಂತ Advice ಮಾಡಿದರೆ ಅಥವಾ ಯಾರಿಗದ್ರು ಹೇಳ್ತಾ ಇದ್ದರೆ ನನಗೆ 2005 ರ ನನ್ನ Birthday ನೆನಪಿಗೆ ಬಂದು ಸುಮ್ಮನಾಗ್ತಿನಿ.

Saturday, April 10, 2010

ಗಿಟಾರ್... ಆತ್ಮದ ಶಾಪ… & ದೇ ಡೈಡ್ ಯಂಗ್…

ಮೊದಲಿಂದಲೂ ನನಗೆ ಗಿಟಾರ್ ಮ್ಯೂಸಿಕ್ ಅಂದ್ರೆ ಇಷ್ಟ. ಅದರಲ್ಲೂ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ನನ್ನ ಫೇವರೇಟ್. ಹಾಗೆ ಒಮ್ಮೆ ನನ್ನ ಮೊಬೈಲ್ ಗೆ ರಿಂಗ್ ಟೋನ್ ಹುಡುಕುವಾಗ ‘ದಿ ಕ್ರೌ’ (THE CROW) ಅನ್ನೋ ಹೆಸರಿನ ರಿಂಗ್ ಟೋನ್ ಸಿಕ್ಕಿತು. ಅದನ್ತು ಹೆವಿ ಹಾರ್ಡ ರಾಕ್ ಗಿಟಾರ್ ಟೋನ್. ನಾನಂತು ಅದನ್ನು ಸಾಕಷ್ಟು ಸಲ ಕೇಳಿ ಅದನ್ನು ನನ್ನ ಫ್ರೇಂಡ್ಸ ಗೆ ಕೇಳಿಸಿ ‘ಇದನ್ನು ನುಡಿಸಿದ ಅಂದ್ರೆ, ಹೀ ನೋಸ ಎವೆರಿತಿಂಗ ಅಬೌಟ್ ಗಿಟಾರ್ ಅಂತನೆ ಅರ್ಥ ' ಅಂತ ಹೇಳ್ತಾ ಇದ್ದೆ. So ಹಾಗೆ ಅದು THE CROW ಫಿಲಂ ಟ್ಯೂನ್ ಅಂತ ಗೊತ್ತಾಯಿತು. ಫಿಲಂ ಡೌನ್ಲೋಡ್ ಮಾಡಿದೆ. ಅ ಫಿಲಂ ನಲ್ಲಿ ನಟಿಸಿರೋದು ಒಂದು ಕಾಲದಲ್ಲಿ ಕರಾಟೆ ಹಾಗು ಮಾರಷಲ್ ಆರ್ಟ್ಸ್ ಸಾಮ್ರಾಜ್ಯದ ಅನಭಿಶ್ಯ್ಕ್ತ ದೊರೆ ಆಗಿದ ಬ್ರೂಸ್ ಲೀ ಮಗ ಬ್ರಾಂಡನ್ ಲೀ!... ಬ್ರೂಸ್ ಲೀ ಗೆ ಮಗ ಇದ್ದ ವಿಷ್ಯ ನನಗೆ ಗೊತ್ತಿರಲಿಲ್ಲ. ನಾನು ಫಿಲಂ ನೋಡಿದೆ. ಅದು ಒಬ್ಬ ಮ್ಯೂಸೀಷಿಯನ ಪುನರ್ಜನ್ಮ ಪಡೆದು ತನ್ನ ಪ್ರೇಯಸಿ ಯನ್ನು ಕೊಂದವರ ವಿರುದ್ದ ಸೇಡು ತೀರಿಸಿಕೊಳ್ಳುವ ಸ್ಟೋರಿ. ಯಾವುದೇ ಫಿಲಂ ನೋಡಿದರು ನಂತರ ಇಂಟರ್ನೆಟ್ನಲ್ಲಿ ಅ ಫಿಲಂ ಬಗ್ಗೆ, ಆಕ್ಟರ್ಸ್ ಬಗ್ಗೆ, ಬೇರೆ ಎಲ್ಲ ಇನ್ಫಾರ್ಮಶನ್ ನೋಡೋದು ನನ್ನ ಅಭ್ಯಾಸ ಹಾಗೆ THE CROW ಫಿಲಂ ರಿವ್ಯೂ ಓದಿದಾಗ ನನಗೆ ತುಂಬಾ ಶಾಕ್ ಅಯೀತು... ಆ ಚಿತ್ರದ ನಾಯಕ ಬ್ರೂಸ್ ಲೀ ಮಗ ಬ್ರಾಂಡನ್ ಲೀ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಒಂದು ಗನ್ ಫೈರ್ ಸೀನನಲ್ಲಿ ಬೈಯ ಚಾನ್ಸ್ ಗನ್ ನಲ್ಲಿ ಒರಿಜಿನಲ್ ಬುಲ್ಲೆಟ್ ಇದ್ದು ಅದು ಬ್ರಾಂಡನ ಲೀ ಮೇಲೆ ಫೈರ್ ಆಗಿ ಅ ದಿನವೇ ಮೃತಪಟ್ಟನು . So ಅವನ ಅಸಹಜ ಸಾವಿನ ಬಗ್ಗೆ ಕುತೊಹಲ ಮೂಡಿ ಇಂಟರ್ನೆಟ್ ಹೊಕ್ಕಾಗ ನನಗೆ ಸಿಕ್ಕ ಮಾಹಿತಿ ಏನಂದರೆ...


ಆವತ್ತು ಮಾರ್ಚ್ 31, 1993 ಸಮಯ: ಬೆಳಗಿನ ಜಾವ 12.30, ಸ್ಥಳ : ಕಾರೋಲ್ಕೋ ಸ್ಟುಡಿಯೊಸ್ (ಈಗಿನ ಸ್ಕ್ರೀನ್ ಗೇಮ್ಸ್) ವಿಲ್ ಮಿಂಗ್ಟನ್, ನಾರ್ತ್ ಕ್ಯಾರೊಲಿನ, ಬ್ರೂಸ್ಲೀ ಮಗ ಬ್ರಾಂಡನ್ ಲೀಯ ನಾಯಕತ್ವದ ಚಿತ್ರ THE CROW ಚಿತ್ರೀಕರಣ ನೆಡಿತಾಇತ್ತು. ಚಿತ್ರೀಕರಣ ಶೇಕಡಾ 90% ಮುಗಿದಿತ್ತು. ಇನ್ನು ಬರಿ 8 ದಿನಗಳ ಚಿತ್ರೀಕರಣ ಬಾಕಿ ಇತು. ನಾಯಕ ಎರಿಕ್ ಡ್ರವೆನ್(ಬ್ರಾಂಡನ್ ಲೀ) ತನ್ನ ಹಾಗು ತನ್ನ ಗರ್ಲ್ ಫ್ರೆಂಡ್ ಅಪಾರ್ಟಮೇಂಟ್ನಲ್ಲಿ ಅವನ ಗರ್ಲ್ ಫ್ರೆಂಡ್ ನನ್ನು ಹೊಡೆದು ಮಾನಭಂಗ ಮಾಡುವಾಗ ಅಪಾರ್ಟಮೇಂಟ್ಗೆ ನುಗ್ಗುವ ಸೀನ್. ಅಗ್ಗ ಪ್ಲೇಬಾಯ್ (ಮೈಕಲ್ ಮಸ್ಸಿ) ಎಂಬ ವಿಲನ್ ಲೀ ಗೆ ಶೋಟ್ ಮಾಡ್ಬೇಕಾಗಿರುತ್ತೆ. ಶೂಟಿಂಗ್ ಶೇಡ್ಯೋಲ್ ಪ್ರಕಾರ ಎಲ್ಲ ನಡೆದಿತ್ತು. ಬ್ರಾಂಡನ್ ಲೀ ‘Hang Man’s joke’ ಎಂಬ ಫ್ರೇಸ್ ಇದ್ದ ಟೀ-ಶರ್ಟ್ ಮೇಲೆ ಬ್ಲಾಕ್ ಜಾಕೆಟ್ ಹಾಕಿಕೊಂಡು ರೂಮಿಗೆ ನುಗ್ಗುತ್ತಾನೆ. ಮೈಕಲ್ ಮಸ್ಸಿ ತನ್ನ ಬಳಿ ಇದ್ದ .44 ಕ್ಯಾಲಿಬೇರ್ ರಿವಾಲ್ವರ್ ಇಂದ 10-12 ಅಡಿ ದೂರದಿಂದ ಬ್ರಾಂಡನ್ ಲೀಗೆ ಗುಂಡು ಹಾರಿಸುತ್ತಾನೆ. ತಕ್ಷಣ ಬ್ರಾಂಡನ್ ಲೀ ತನ್ನ ಬಲ ಪಕ್ಕೆ ಹಿಡಿದುಕೊಂಡು ಕೆಳಗೆ ಬೀಳುತ್ತಾನೆ, ಬಿದ್ದು ತನಗೆ ತೀವ್ರವಾಗಿ ಗಾಯವಾಗಿದೆ ಎಂದು ಸನ್ನೆ ಮಾಡಿ ತೋರಿಸ್ತಾನೆ. ಆದರೆ ಎಲ್ಲರು ಅವರವರ ಪಾತ್ರದ ಅಭಿನಯದಲ್ಲಿ ತಲ್ಲಿನರಾಗಿದ್ದರಿಂದ ಯಾರಿಗೂ ತಕ್ಷಣ ಬ್ರಾಂಡನ್ ಲೀನ ಗಮನಿಸಲು ಸಾಧ್ಯವಾಗಿಲ್ಲ. ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ‘ಕಟ್’ ಅಂತ ಹೇಳೋ ಮುಂಚೆ ಮೈಕಲ್ ಮಸ್ಸಿ ಹಾರಿಸಿದ್ದ ಬುಲೆಟ್ ಬ್ರಾಂಡನ್ ಲೀ ನ ಹೊಟ್ಟೆಯನ್ನು ದೊಡ್ಡ ತೂತು ಮಾಡಿ ಜೀರ್ಣಾಅಂಗದ ಅಕ್ಕಪಕ್ಕ ಇದ್ದ ಎಷ್ಟೋ ಅಂಗಗಳನ್ನು ಸೀಳಿ ಹೋಗಿ ಬೆನ್ನ ಮೊಳೆ ಪಕ್ಕ ಲಾಡ್ಜ್ ಆಗಿತ್ತು. ಬ್ರಾಂಡನ್ ಲೀ ಗೆ ಬಿದ್ದಿರುವುದು ನಿಜವಾದ ಗುಂಡು ಅಂತ ತಿಳಿದ ತಕ್ಷಣ ಅವನ್ನು ನ್ಯೂ ಹನೋವೆರ್ ಹಾಸ್ಪಿಟಲ್ ಗೆ ಕರೆದು ಕೊಂಡು ಹೋಗಿ 6 ತಾಸು ಆಪರೇಷನ್ ಮಾಡಿ ಬುಲೆಟ್ ತೆಗೆದರು. ಗುಂಡು ತೆಗೆಯುವಾಗ ಹಾಗು ಆಪರೇಷನ್ ವೇಳೆಯಲ್ಲಿ ತುಂಬಾ ರಕ್ತ ಸ್ರಾವವಾಗಿ, ಅವನಿಗೆ 60 ಪಿಂಟ್(28 ಲೀಟರ್) ರಕ್ತ ಕೊಡಲಾಗಿತು. ಇಷ್ಟಾದರು ಬ್ರಾಂಡನ್ ಲೀ ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುಂಡು ತಗುಲಿದ 13 ತಾಸು ಬಳಿಕ ಅವನು ಮೃತನಾದ. ಮಾರ್ಚ್ 31st 1993 ರ ಮಧ್ಯಾನ 1.03 ನಿಮಿಷಕ್ಕೆ ಬ್ರಾಂಡನ್ ಲೀ ಸತ್ತಿದ್ದಾನೆಂದು ಘೋಷಿಸಲಾಯಿತು. ಸಾಯಲು ಕಾರಣ (Cause Of Death) ವನ್ನು GSW – Gun Shot Wound ಎಂದು ದಾಖಲಿಸಲಾಯಿತು. ಆಗ ಅವನಿಗೆ ಕೇವಲ 28 ವರ್ಷ ಹಾಗು ಅವನ ಪ್ರೇಯಸಿ ಎಲಿಜ ಒಟ್ಟಿಗೆ ಅವನ ಮದುವೆಗೆ ಇನ್ನು ಬರೇ 2 ವಾರ ಬಾಕಿ ಇತ್ತು…





BRANDON BRUCE LEE(01-02-1965 – 31-03-1993)


ಈ ಪ್ರಕರಣದ ಬಗ್ಗೆ ತನಿಖೆ ನಡೆದಾಗ ಶೋಟಿಂಗ್ ಸಿಬ್ಬಂದಿಗಳ ಬೇಜವಾಬ್ದಾರಿತನ ಹಾಗು ಅನಾನುಭಾವಿ ಕೆಲಸಗಾರರುಗಳೇ ಕಾರಣ ಎಂದು ವರದಿಮಾಡಿದರು. ಯಾರಿಗೂ ಗೊತ್ತಿಲ್ಲದ ಹಾಗೆ ನಕಲಿ ಗುಂಡಿನ ಜಾಗದಲ್ಲಿ ಅಸಲಿ ಗುಂಡು ಲೋಡ್ ಆಗಿ ಬ್ರಾಂಡನ್ ಲೀ ನ ಬಲಿಪಡೆದಿತ್ತು. ಗುಂಡು ಹಾರಿಸಿದ್ದ ಮೈಕಲ್ ಮಸ್ಸಿ ಹಿಂದೆನೂ ಒಂದು ಕ್ಯಾಮೆರಾ ಇದ್ದು, ಅದು ಬ್ರಾಂಡನ್ ಲೀ ಗುಂಡು ತಗುಲಿದುದ್ದನ್ನು ಸರಿಯಾಗಿ ಸೆರೆ ಹಿಡಿದಿತ್ತಂತೆ. ಆದರೆ ಅದನ್ನು ಡೆವಲಪ್ ಮಾಡದೆ ಹಾಗೆ ನಾಶಪಡಿಸಿದರಂತೆ. ಚಿತ್ರ ನಟ ಮೈಕಲ್ ಮಸ್ಸಿ ಬ್ರಾಂಡನ್ ಲೀ ಸಾವಿಗೆ ಕಾರಣನಲ್ಲ ಇದು ಕೇವಲ ಆಕಸ್ಮಿಕ ಅಪಘಾತ ಎಂದು ಪರಿಗಣಿಸಿ ಅವನ ಮೇಲೆ ಯಾವ ಕ್ರಿಮಿನಲ್ ಆರೋಪವನ್ನು ಹೊರಿಸಲಿಲ್ಲ. ಈ ಬಗ್ಗೆ ಅವನ ತಾಯೀ ಲಿಂಡಾ ಲೀ ಚಿತ್ರ ತಂಡದವರ ಮೇಲೆ ಕೇಸು ಹಾಕಿ, ಬಹಿರಂಗ ಪಡಿಸದ ಅನುಕಂಪ ಮೊತ್ತವನ್ನು ಪಡೆದರು. ಬ್ರಾಂಡನ್ ಲೀ ಯಾ ಸಂಸ್ಕಾರದ ದಿನ ಅವನ ತಾಯೀ ಜಗತ್ತಿನ ಎಲ್ಲ ಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಚಿತ್ರೀಕರಣದ ವೇಳೆಯಲ್ಲಿ ಸುರಕ್ಷಿತ ಕ್ರಮಗಳ (safety measures) ಬಗ್ಗೆ ಹೆಚ್ಚು ಸೀರಿಯಸ್ ಆಗಿರಲು ಮನವಿಮಾಡಿಕೊಂಡರು.


ಬ್ರಾಂಡನ್ ಲೀ ನನ್ನು ವಾಶಿಂಗ್ಟನ್ನ ಸಿಟಲ್ ನಲ್ಲಿರುವ ಲೇಕ್ ವ್ಯೂ ಸೆಮೆಂಟರಿ ಪಾರ್ಕ್ ನಲ್ಲಿ ಅವನ ತಂದೆ ಬ್ರೂಸ್ ಲೀ ಸಮಾಧಿ ಪಕ್ಕ ಹೂಳಲಾಯಿತು. ಆ ಜಾಗವನ್ನು ತನ್ನ ತಾಯೀ ಲಿಂಡಾ ಲೀ ತನ್ನ ಸಾವಿನ ನಂತರ ತನಗಾಗಿ ಮೀಸಲಿಟ್ಟಿಕೊಂಡಿದ್ದಳಂತೆ.



THE CROW ಚಿತ್ರದ ಚಿತ್ರೀಕರಣವು 90% ಮುಗಿದು ಬಾಕಿ ಕೆಲವೊಂದು ಸೀನ್ ಗಳನ್ನು ಬ್ರಾಂಡನ್ ಲೀ ಯ ಗೈರಿನಲ್ಲಿ ಅವನ ಡೂಪ್ ಬಳಸಿ ಹಾಗೆ ಕೆಲವು ಸ್ಪೆಷಲ್ ಎಫೆಕ್ಟ್ ಬಳಸಿ ಮುಗಿಸಲಾಯಿತು. ಚಿತ್ರ ಮುಗಿಸಲು ಅವನ ಪ್ರೇಯಸಿ ಎಲಿಜ ಹಾಲ್ಟ್ನ್ ಹಾಗು ಅವಳ ತಾಯೀ ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ಗೆ ತುಂಬಾ ಸಹಕರಿಸಿದರು. THE CROW ಕೊನೆಗೆ ಮೇ 1994ರಲ್ಲಿ ಬಿಡುಗಡೆಗೊಂಡಿತು. ಹಾಗು ನಿರೀಕ್ಷೆಗೂ ಮೀರಿ ಚಿತ್ರ ಜನಪ್ರಿಯವಾಯಿತು.


THE CROW ಚಿತ್ರೀಕರಣದ ವೇಳೆ ಬ್ರಾಂಡನ್ ಲೀ ಸಾವಲ್ಲದೇ ಇನ್ನು ಅನೇಕ ಅಪಘಾತಗಳು ಸಂಭವಿಸಿದವಂತೆ ಶೂಟಿಂಗ್ ನ ಮೊದಲನೆ ದಿನವೇ ಮೆಟಲ್ ಗ್ರೈಂಡರ್ಗೆ ಹೈ ಟೆನ್ಶನ್ ವೈರ್ ಶಾರ್ಟ್ ಆಗೀ ಒಬ್ಬ ಆಚಾರಿಯ(carpenter) ತನ್ನ ಮುಖ,ಎದೆ ಎಲ್ಲ ಸುಟ್ಟಿಕೊಂಡನಂತೆ, ಇನ್ನೊಬ್ಬ ಕೆಲಸಗಾರನ ಕೈಗೆ scredriver ಸೀಳಿ ನುಗಿತಂತೆ, ಯಾರಿಗೂ ತಿಳಿಯದ ರೀತಿ ಒಂದು ಇಡೀ ಲಾರಿ ತುಂಬಾ ಇದ್ದ ಶೂಟಿಂಗ್ ಸೆಟ್ ನ ಸಾಮಾನು ಬೆಂಕಿಗೆ ಯಲ್ಲಿ ಬೆಂದುಹೋಯಿತಂತೆ, ಸ್ಟಂಟ್ ಮ್ಯಾನ್ ಒಬ್ಬನು ಮೇಲಿಂದ ಬಿದ್ದು ಕೈ,ಕಾಲು,ಎದೆ ಮೂಳೆ(ರಿಬ್ಸ್) ಎಲ್ಲಾ ಮುರಿದುಕೊಂದಡನಂತೆ. ಮತ್ತು ಮಾರ್ಚ್ 1993 ರ ಮೊದಲ ವಾರ ಬಿರುಗಾಳಿ ಬಂದು ಶೂಟಿಂಗ್ ಸೆಟ್ ನ ಅನೇಕ ಭಾಗವನ್ನು ಹಾಳುಮಾಡಿತಂತೆ.


ಬ್ರಾಂಡನ್ ಲೀ ಯಂತೆ ಅವನ ತಂದೆ ಬ್ರೂಸ್ ಲೀ ಕೂಡ ಕೇವಲ ತಮ್ಮ 32 ವಯಸ್ಸಿನಲ್ಲೇ ಅತ್ಯಂತ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಬ್ರೂಸ್ ಲೀ ಕೂಡ ತನ್ನ ಕಡೆ ಚಿತ್ರ ‘ದಿ ಗೇಮ್ ಆಫ್ ದಿ ಡೆತ್ ’ ನ ಸ್ಕ್ರಿಪ್ಟ್ ಅನ್ನು ನಾಯಕಿ ಬೆಟ್ಟಿ ಟಿಂಗ್ ಪೆಯಿಯೊಂದಿಗೆ ತನ್ನಮನೆಯಲ್ಲಿ ಚರ್ಚಿಸುತ್ತಿದ್ದಾಗ ಅವನಿಗೆ ತಲೆನೋವು ಬಂತಂತೆ. ಆಗ ಬೆಟ್ಟಿ EQUAGESIC ಅನ್ನು ಅಸ್ಪಿರ್ನ್ ಮಾತ್ರೆ ನೀಡಿದಳು. ಅದನ್ನು ನುಂಗಿ ಮಲಗಿದ ಬ್ರೂಸ್ ಲೀ ಪುನಃ ಎದ್ದೇಳಲೇಇಲ್ಲವಂತೆ. ಬ್ರೂಸ್ ಲೀ ಸಾವಿನ ಬಗ್ಗೆ ಜನರಿಗೆ ಸಾಕಷ್ಟು ಸಂಶಯವಿತ್ತು. ಅವನನ್ನು ಅವನ ವೈರಿಗಳು ಕೊಲೆ ಮಾಡಿದರು, ಅವನನ್ನು ಹೊಡೆದಾಟದಲ್ಲಿ ಮುಗಿಸಲಾಯಿತು, DRUGS OVERDOSE ಇಂದ ಕೊಲ್ಲಲಾಯಿತು ಅಂತೆಲ್ಲ ವದಂತಿ ಇದ್ದವಂತೆ. ಅದರೆ ಅವನ್ ಮರಣೋತ್ತರ ಪರೀಕ್ಷೆ ಮಾಡಿದ ಡಾಕ್ಟರ ಬ್ರೂಸ್ ಲೀ ಗೆ Medicine ನ ವ್ಯತ್ಯಾಸ ಹಾಗು ಇನ್ನಿತರ ಕಾರಣಗಳಿಂದ ಅವನ ಮೆದಳು ಉಬ್ಬಿ, ಅವನು ಗಾಢ ನಿದ್ರೆಗೆ ಹೋಗಿ ಪುನಃ ಎಚ್ಚರವಾಗದೆ ಮೃತಪಟ್ಟಿದಾನೆ ಎಂದು ಘೋಷಿಸಿದರು.





BRUCE LEE(27-11-1940 – 20-07-1973)


ಇದೆಲ್ಲರ ನಡುವೆ ತಂದೆ ಮಗ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಲು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಎಂಬ ಚಿಕ್ಕ ಸನ್ಯಾಸಿ(Monk) ನ ಶಾಪ ಕಾರಣ ಎಂದು ಸಾಕಷ್ಟು ಜನ ನಂಬಿದ್ದಾರೆ. ಬ್ರೂಸ್ ಲೀ ಗೆ ಯಾವಾಗಲು ಒಂದು ಕನಸು ಬೀಳುತ್ತಿತಂತೆ. ಆ ಕನಸಿನಲ್ಲಿ ಒಂದು ಧ್ವನಿ ‘ನಿನ್ನ ಅಪ್ಪ ತನ್ನ 64 ನೇ ವಯಸ್ಸಿನಲ್ಲಿ ಸಾಯುತ್ತಾನೆ, ನೀನು ಅವನ ಆಯಸ್ಸಿನ ಅರ್ಧದಷ್ಟು ಸಹ ಬದುಕುವುದಿಲ್ಲ’ ಎಂದು ಹೇಳಿತಂತೆ. ಈ ಬಗ್ಗೆ ಬ್ರೂಸ್ ಲೀ ಯು ಅವನ ಅಪ್ಪ ಬಳಿ ವಿಚಾರಿಸಿದಾಗ ಅವನ ಅಪ್ಪ ‘ಅದು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಯಾ ಧ್ವನಿ, ಅವನು ಸಾಯುವಾಗ ನನ್ನ ಸಮಾಧಿ ಪಕ್ಕ ಯಾರನ್ನು ಹೂಳಬೇಡಿ ಎಂದಿದ್ದ. ಆದರೆ ಅಲ್ಲಿ ನಿನ್ನ ತಾತ ನನ್ನು ಹೂತಿದ್ದಾರೆ’ ಅಂದನಂತೆ. ಯಾವಾಗ ಬ್ರೂಸ್ ಲೀ ಗೆ ಅ ಧ್ವನಿ ಕನಸಿನಲ್ಲಿ ಬರುವುದು ಹೆಚ್ಚಾಯಿತೋ ಆಗ ಅವನು ಹಾಂಗ್ ಕಾಂಗ್ ಬಿಟ್ಟು ಅಮೆರಿಕಾಗೆ ಬಂದು ಬಿಟ್ಟ. ಅಮೆರಿಕಾಗೆ ಬಂದರು ಸಹ ಅ ಧ್ವನಿ ಅವನ ಕನಸಿನಲ್ಲಿ ಬಂದು ಕಾಡುವುದು ತಪ್ಪಲಿಲ್ಲವಂತೆ. ಒಂದು ದಿನಇದ್ದಕಿದ್ದಂತೆ ಪುನ ಅ ಧ್ವನಿ ಕನಸಿನಲ್ಲಿ ಬಂದು ‘ ನೀನು ನಿನ್ನ ಜೀವನದಲ್ಲಿ ತುಂಬಾ ಸಾಧಿಸಿ ನಿನ್ನ 32ನೆ ವಯಸ್ಸಿಗೆ ಸಾಯುತ್ತಿಯ ಹಾಗು ನಿನ್ನ ಮಗ ಕೂಡ ಅವನಿಗೆ ಮಕ್ಕಳಾಗುವ ಮೊದಲೆ ಸಾಯುತ್ತಾನೆ’ ಅಂದಿತಂತೆ. ಅದರಂತೆ ಬ್ರೂಸ್ ಲೀ ಯ ತಂದೆ 64 ನೆ ವಯಸ್ಸಿಗೆ ತೀರಿಕೊಂಡರು. ಬ್ರೂಸ್ ಲೀ 1973 ರಲ್ಲಿ ತನ್ನ 32 ವಯಸ್ಸಿನಲ್ಲಿ ಸತ್ತ. ಸಾಯುವ ಮೊದಲೆ ಅವನು ಆ ಧ್ವನಿಯಿಂದ ಪಾರಗಲು ಇತರ ಫೆನ್ಗ್ಷಿ ಮಾಸ್ಟರ್ ಬಳಿ ಹೋಗಿ ಪರಿಹಾರ ಗಳನ್ನೂ ಕೇಳಿದ್ದನಂತೆ. ಹಾಗೆ ಅವನ ಮಗ ಕೂಡ ಅವನ ತನ್ನ ಮದುವೆ ಇನ್ನು 2 ವಾರವಿದೆ ಅಂತನೇ ದಾರುಣವಾಗಿ ಚಿತ್ರಿಕರಣದ ವೇಳೆ ಸತ್ತ. ಇವತ್ತು ಕೂಡ ಬ್ರೂಸ್ ಲೀ ಯಾ ಫ್ಯಾಮಿಲಿ ಅಂದ್ರೆ ಅವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ಒಂದೂ Divorce ಆಗಿದ್ದರೆ, ಇಲ್ಲಾ ಸತ್ತುಹೋಗಿದ್ದಾರೆ, ಇಲ್ಲ ಅಂದ್ರೆ ದೀವಾಳಿಯಾಗಿದ್ದರೆ ಮತ್ತು ಅವರು ಇವೆಲ್ಲ ಆ ಫೆನ್ಗ್ಷಿ ಮಾಸ್ಟರ್ ಸುಂಗ್ ಲಿಯ ಆತ್ಮದ ಶಾಪ ಅಂತರಂತೆ...


ಇದೆಲ್ಲಾ ಓದಿದ ನಂತರ, ಪುನಃ ನಾನೂ ನನ್ನ ಕಂಪ್ಯೂಟರ್ ನಲ್ಲಿದ್ದ ‘THE CROW’ ಸಿನಿಮಾ ದ 65 ನಿಮಿಷ 11 ಸೆಕೆಂಡ್ ನಲ್ಲಿ ಬರುವ ಆ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ಸೀನ್ ನೋಡಿ, ಹಾಗೆ 11 ನಿಮಿಷ 46 ಸೆಕೆಂಡ್ ನಲ್ಲಿ ಬರುವ ಬ್ರಾಂಡನ್ ಲೀ (ಎರಿಕ್ ದ್ರವೆನ್) ಕೊಲೆಯಾಗು ಸೀನ್ ನೋಡಿ ಕಂಪ್ಯೂಟರ್ Off ಮಾಡಿದ ನಂತರ ನನ್ನ ಮನಸ್ಸಿನಲ್ಲಿ ಇವೆಲ್ಲ ನಿಜವೆ?... ಯಾವುದೋ ಆತ್ಮದ ಶಾಪ ಒಬ್ಬ ಮನುಷ್ಯನ ಜೀವನವನ್ನು ಇಷ್ಟರಮಟ್ಟಿಗೆ ಹಾಳುಮಾಡುತ್ತದೆಯೇ? ಅನ್ನೋ ಪ್ರಶ್ನೆ ಮೂಡಿ, ಉತ್ತರ ಸಿಗದೆ ಹಾಗೆ ಸುಮ್ಮನಾದೆ...