Wednesday, March 31, 2010

‘ಎಷ್ಟು ಖರ್ಚು ಮಾಡಿದರು ನಿನ್ನನ ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅನ್ನೋ ಕೊರಗು…

ಪ್ರೀತಿಯ Tiger ,

ನಿನ್ನ ಹೆಸರು ಕೇಳಿದರೆ ಏನೋ ರೋಮಾಂಚನ!!!! ನನಗಷ್ಟೇ ಅಲ್ಲ ಜಗತ್ತಿನ ಬಹಳಷ್ಟು ಜನಕ್ಕೆ. ವಿಶ್ವದಾದ್ಯಂತ ನಿನ್ನನ್ನು ಎಲ್ಲರೂ ಈ ಭೂಮಿಯ ಮೋಸ್ಟ್ charismatic ಪ್ರಾಣಿ ಅಂತರೆ. ನಿನ್ನ ರಾಜಗಂಭಿರ್ಯ, ನಿನ್ನ ಬಲಶಾಲಿತನ, ನಿನ್ನ ಬುದ್ದಿವಂತಿಕೆ ಎಂಥವರಲ್ಲಿಯು ಅಚ್ಚರಿ ಹುಟ್ಟಿಸದೆ ಇರಲಾರದು. ಒಬ್ಬ ಮನುಷ್ಯ ಏನೆಲ್ಲಾ ಗುಣಗಳು ತನ್ನಲ್ಲಿರಬೇಕು ಅಂತ ಬಯಸುತ್ತಾನೋ ಆ ಗುಣಗಳೆಲ್ಲ ನಿನ್ನಲ್ಲಿ ವಂಶಪರ್ಯಂಪರವಾಗಿ ಬಂದಿದೆ ಅನಿಸುತ್ತದೆ. ನಿನಗೆ ಆಂಗ್ಲರು Tiger ಅಂತ ಇಟ್ಟಿರೋ ಹೆಸರಿನ ಮೂಲ ಯಾವುದು ಗೊತ್ತ? ಅದು ಗ್ರೀಕ್ ನ TIGRIS ಎಂಬ ಶಬ್ದದಿಂದ ಬಂದಿರುತ್ತದೆ . ಈ TIGRIS ಪದವು ಪೆರ್ಸಿಯ ಮೂಲದಾಗಿದ್ದು ಅದು ಬಾಣ (Arrow) ಎಂಬ ಅರ್ಥವನ್ನು ಹಾಗು ಪ್ರಾಣಿಯ ವೇಗವನ್ನು ಸೂಚಿಸುತ್ತದೆಯಂತೆ.

ಹಿಂದಿನಿಂದಲೂ ನೀನೊಂಥರ ‘Big sport thing’ ಅಂತಾರಲ್ಲ ಹಾಗೆ. ಹಿಂದಿನ ರಾಜ ಮಹಾರಾಜರಿಗೆ ನಿನ್ನ ಬೇಟೆ ಆಡುವುದೇ ಒಂದು ಹೆಮ್ಮೆಯ ವಿಷಯವಾಗಿತ್ತಂತೆ. ಕಾಡಿನಲ್ಲಿ ಮಚನ್ ಕಟ್ಟಿ ನಿಮ್ಮವರನ್ನ ಬೇಟೆ ಆಡುತ್ತಾ ಇದ್ದರು. ಹಾಗೆ ಊರಿನವರೆಲ್ಲಾ ಸೇರಿ ನಿನ್ನನು ಹೆದರಿಸಿ ಓಡಿಸಿ ಒಂದು ಕಡೆ ಸೇರಿಸಿ ಬೇಟೆ ಆಡುತ್ತಾ ಇದ್ದರು. ನನಗಂತು ನಿನ್ನ ಚರ್ಮ ಎಂದರೆ ತುಂಬಾ ಇಷ್ಟ. ಅ ಚರ್ಮದ ಮೇಲೆ ಇರೋ ಪಟ್ಟಿಗಳು ಎಂಥ ನೋಡುಗರನ್ನು ಸೆಳೆಯುತ್ತವೆ. ನಿಮ್ಮಲ್ಲಿ ಎಷ್ಟೋ ಹುಲಿಗಳಿಗೆ 100ಕಿಂತ ಹೆಚ್ಚು ಪಟ್ಟಿಗಳಿರುತ್ತವೆಯಂತೆ. ಇನ್ನೊಂದು ವಿಸ್ಮಯಕಾರಿ ಅಂಶ ಎಂದರೆ ನಿಮ್ಮಲೂ ನಮ್ಮ ಮನುಷ್ಯರ ಕೈ ಬೆರಳಿನ ಗುರುತಿನ ಹಾಗೆ ಒಂದು ಹುಲಿಯ ಚರ್ಮದ ಪಟ್ಟಿ, ಪಟ್ಟಿಯರೀತಿ, ವಿನ್ಯಾಸ ಇನ್ನೊಂದು ಹುಲಿಯ ತರಹ ಇರುವುದಿಲ್ಲ.(ಯಾವುದೇ 2 ಹುಲಿಗೆ ಒಂದೆ ರೀತಿ ಪಟ್ಟಿ ಇರುವುದಿಲ್ಲ)

ಸಾಂಸ್ಕೃತಿಕವಾಗಿಯೂ ಜಗತ್ತಿನಲ್ಲಿ ನಿನಗೆ ಎಷ್ಟು ಮನ್ನಣೆ ಉಂಟು ಗೊತ್ತ? ಏಷಿಯಾ ಹಾಗು ಸುತ್ತಮುತ್ತ ಎಷ್ಟೋ ರಾಷ್ಟ್ರಗಳಲ್ಲಿ ಕಾಡಿನರಾಜ ಎಂದು ಸಿಂಹದ ಬದಲಾಗಿ ನಿನ್ನ ಆಯ್ಕೆಮಾಡಿದ್ದರೆ. ಚೀನಾ ದೇಶದ ಮುಖ್ಯ ರಾಶಿ ಪ್ರಾಣಿ ನೀನು. ನಮ್ಮ ಇತಿಹಾಸ, ಪುರಾಣ ನೋಡಿದರು ನಿನ್ನ ಉಲ್ಲೇಖವೇ. ಹೊಯ್ಸಳ ಸಾಮ್ರಾಜ್ಯದ ಚಿನ್ನ್ಹೆ, ತಾಯೀ ಚಾಮುಂಡೇಶ್ವರಿಯ ವಾಹನ, ಸ್ವಾಮಿ ಐಯ್ಯಪ್ಪನ ವಾಹನ, etc. ಅಷ್ಟೇ ಅಲ್ಲದೆ jungle book ಎಂಬ ಕಾದಂಬರಿಯಲ್ಲಿ ನಿನ್ನನ್ನು ಒಮ್ಮೆ ವಿಲ್ಲನ್ (ಶೇರ್ ಖಾನ್) ಆಗಿ ಸಹ ತೋರಿಸಲಾಗಿದೆ. ಮತ್ತೆ ನನ್ನ ಫೇವರಿಟ್ ಕಾರ್ಟೂನ್ calvin & hobbes ನಲ್ಲಿ calvin ನ imaginary ಫ್ರೆಂಡ್ಆಗಿ (doll) ಇಡೀ ಜಗತ್ತಿನಲ್ಲಿ ಮಿಂಚಿದ್ದಿಯ.

ಮೊನ್ನೆ ಅನಿಮಲ್ ಪ್ಲಾನೆಟ್ ಎಂಬ ಚಾನೆಲ್ 73 ದೇಶದಲ್ಲಿ ನೆಡಸಿದ ಜಗತಿನ ಅತ್ಯಂತ ಅಚ್ಚು ಮೆಚ್ಚು ಪ್ರಾಣಿ ಸಮೀಕ್ಷೆಯೆಲ್ಲಿ ನಿನ್ನನೇ ಹೆಚ್ಹು ಜನ ಆಯ್ಕೆ ಮಾಡಿದ್ದಾರೆ. ಹುಲಿ 21%, ನಾಯೀ 20%, ಡಾಲ್ಫಿನ್ 13% , ಕುದುರೆ 10%, ಸಿಂಹ 9%, ಹಾವುಗಳು 8% ಹಾಗು ಉಳಿದ ಮುಂತಾದ ಪ್ರಾಣಿಗಳು.

ನಿನ್ನನ್ನ ನಾನು ವೈಲ್ಡ್ ಆಗೀ ನೋಡಬೇಕು ಅಂತ ಪಣತೋಟ್ಟಿ 2001ರಿಂದಲೂ ಹುಡುಕಲು ಶುರುಮಾಡಿದೆ. 3 ದಿನ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿನ್ನ ಸೆನ್ಸಸ್ಗೆ ಬಂದು 40-50 ಕಿಲೋಮೀಟರ ಕೋರ್ ಜೋನನಲ್ಲೆಲ್ಲೆ ಅಲೆದೆ. ನಿನ್ನನ್ನು ಹುಡುಕಲು ಹೋಗಿ ಕಾಡಿನಮೇಲೆ ಪ್ರೀತಿ ಉಂಟಾಗಿ ಫಾರೆಸ್ಟ್ ಡಿಪಾರ್ಟ್ಮಂಟ ಸೇರಿ ಪುನ್ಹಃ ನಿನ್ನನ್ನು ಈ ಬಾರಿ ನೋಡಲೇ ಬೇಕೆಂದು wildlife ರೀಜನ್ ನ ಇನ್ಟಿರಿಯರ್ ಜಾಗಕೆ ಡೇಪ್ಟೇಷನ್ ಬಂದು ಹಗಲು ರಾತ್ರೀ ಸುತ್ತಿದೆಷ್ಟು? ಮೈಸೂರ್ zooಗೆ ಹೋದಾಗ ಯಾವ ಪ್ರಾಣಿನು ನೋಡದೆ ಸೀದಾ ನಿನ್ನ ಮನೆ ಹತಿರ ಬಂದು ಕಣ್ಣುತುಂಬ ನಿನ್ನ ನೋಡಿ ಸಂತೋಷ ಪಡುತ್ತಿದ್ದೆ. ಇವತ್ತು ಇದನ್ನೆಲ್ಲಾ ಯಾಕೆ ನಿಂಗೆ ಬರೆದು ಹೇಳ್ತಾ ಇದ್ದಿನಿ ಅಂದ್ರೆ ನಾನು ಸೆನ್ಸಸ್ಗೆ ಹೋದಾಗ ಅಂದರೆ 2002 ರಲ್ಲಿ ನೀನು ಮತ್ತು ಇತರ ಎಲ್ಲ ಹುಲಿಗಳ ಸಂಖ್ಯೆ 3642(Tigers ಲೆಫ್ಟ್ ಇನ್ ವೈಲ್ಡ್ ಇನ್ ಇಂಡಿಯಾ) ಅಂತ ತಿಳಿಸಿದರು. ಅದೇ 2009 - 10 ರ ಸೆನ್ಸಸ್ ರಿಪೂರ್ಟನಲ್ಲಿ ನಿಮ್ಮಗಳ ಸಂಖ್ಯೆ ಕೇವಲ 1411. ಯಾಕೋ ನಿನ್ನ ವೈಲ್ಡ್ ಆಗೀ ಕಾಡಿನಲ್ಲಿ ನೋಡಬೇಕು ಎಂಬ ಕನಸು ಕನಸಾಗೇ ಉಳಿಯುತ್ತಾ ಅಂತ ಡೌಟ್.

ನಿಮ್ಮಗಳ ಸಂಖ್ಯೆ ಇಷ್ಟು ಕಡಿಮೆಯಾಗಲು ಕಾರಣ ನಿನಗೆ ಗೊತ್ತ? ಮೊದಲಿಗೆ ನಮ್ಮಜನಗಳು ನಿಮ್ಮ ಕಾಡನ್ನು ಹಾಳುಮಾಡ್ತಾಇರೊದು. ಅವರು ಹೀಗೆ ಮಾಡಿದರೆ ನೀನು ಎಲ್ಲಿ ಇರ್ತೀಯ? ಜಾಗವೇ ಇಲ್ಲದೆ ನಿನ್ನ ಸಂಥಾನಾಭಿವ್ರುದ್ಧಿಯು ಹೇಗೆ ಸಾಧ್ಯ? ಅಂತೆಲ್ಲ ನಮ್ಮ ಜನಗಳು ಯೋಚನೆ ಮಾಡುವುದೇ ಇಲ್ಲ. ಎರಡನೆ ಕಾರಣ ಅಂದ್ರೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಮತ್ತು ನಿನ್ನ ದೇಹಕ್ಕಿರುವ ಬೆಲೆ. ನಮ್ಮ ದೇಶದಲ್ಲಿ 2008 ರಲ್ಲಿ 28 ಹುಲಿ, 2007 ರಲ್ಲಿ 30 ಹಾಗು 2009 ರಲ್ಲಿ 65 ಹುಲಿಗಳನ್ನು ಕೊಂದಿದ್ದಾರೆ. ಕೇಳಿದರೆ ಮೈಜುಮ್ಮಯೆನ್ನುತೆ ಅಲ್ಲಾ? ಅದು ಬರೀ ಸಿಕ್ಕಿ ಕೇಸ್ ಬುಕ್ ಅಗೀರೋ ಸಂಖ್ಯೆ, ಸಹಜ ಸಾವು ಅಂತ, ಬೆಳಕಿಗೆ ಬರದೆ ಇರೋಂಥಹ ಸಂಖ್ಯೆ ಇನ್ನು ಜಾಸ್ತಿ. ಭಾರತದಲ್ಲಿ 1994 – 2004 ರ ತನಕ 10 ವರ್ಷಗಳಲ್ಲಿ 684 ಹುಲಿ ಬೇಟೆ ಪ್ರಕರಣಗಳು ದಾಖಲಾಗಿವೆ.

ಈಗ ನಾನು ಹೇಳೋ ವಿಷಯ ಕೇಳಿದ್ರೆ ನಿನ್ನಷ್ಟು ಆಶ್ಚರ್ಯ ಹಾಗು ಅಸಹ್ಯ ಪಡೋ ಪ್ರಾಣಿ ಭೊಮಿ ಮೇಲೆ ಮತ್ತೊಂದು ಇರಲಾರದು. ಇವತ್ತಿನಂತೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ನಿನ್ನ ಬೆಲೆ ಬರೊಬ್ಬರಿ $ 10000 ಡಾಲರ್ಸ್!!!. ಅದು ಇಡಿಯಾಗಿ. ನಿನ್ನ ಕತ್ತರಿಸಿ ತುಂಡು ತುಂಡು ಮಾಡಿ ಮಾರಿದರೆ ನಿನ್ನ ಬೆಲೆ ಆಗ $ 50000…!!!! ನಿಮಗಳಿಗೆ ಗೊತಿಲ್ಲದ ಹಾಗೆ ಮನುಷ್ಯರು ನಿಮಗೆ ಹೇಗೆ ಬೆಲೆ ನಿರ್ಧಾರ ಮಾಡಿದರೆ ನೋಡು. ನಿನ್ನ ದೇಹದ ಪ್ರತಿ ಭಾಗ ಕೂಡಾ ಬೇಡಿಕೆಯಲ್ಲಿದೆ. ನಿನ್ನ ದೇಹದ ಭಾಗಗಳನ್ನು ಹೆಚ್ಚಾಗಿ ಏಷಿಯಾ ಹಾಗು ಸುತ್ತ ಮುತ್ತಲ್ಲಿ ಸಂಪ್ರದಾಯಕ ಔಷಧಿಗೆ ಬಳಸುತ್ತಾರೆ. ನಿನ್ನ ಬ್ರೈನ್ ಮೊಡವೆ ಹಾಗು ಆಲಸ್ಯ ಓಡಿಸುವ ಔಷಧಿಗೆ, ನಿನ್ನ ಮೀಸೆ ಹಲ್ಲುನೋವಿಗೆ, ಕಣ್ಣು ಮೂಗು ಮಲೇರಿಯಾ ಔಷಧಿಗೆ. ಮೂಳೇಗಳು ಹುಣ್ಣು ಹಾಗು ಟೈಫೈಡ ನಿವಾರಿಸಲು. ನಿನ್ನ ಅತ್ಯಾಕರ್ಶಕ ಚರ್ಮದ ಬೆಲೆ ಗೊತ್ತ? ಕನಿಷ್ಟ ಎಂದರು $ 15000. ಹಾಂಕಾಂಗ್ ನಲ್ಲಿ ನಿನ್ನ ಮೂಳೇಪುಡಿ ಕೆಜಿಗೆ $ 3600 ಅಂತೆ. ತೈವಾನ್ ನಲ್ಲಿ ನಿನ್ನ ಕಣ್ಣುಗಳ ಬೆಲೆ $175 – $250… ನಿನ್ನನ್ನು ಔಷಧಿಗೆ ಬರಿ ಏಷಿಯಾ ಅಲ್ಲದೆ ಲಂಡನ, ಬರ್ಮಿಂಗಹಾಂ, ಮಾನ್ಚಿಸ್ಟರ್, ಮುಂತಾದ ದೇಶಗಳಲ್ಲೂ ಉಪಯೋಗಿಸುತ್ತಾರೆ. 1998 ರಲ್ಲಿ WWF ಎಂಬ ಸಂಸ್ಥೆಯು ಜಕಾರ್ಥ ಎಂಬಲ್ಲಿ ನಡುರಸ್ತೆಯಲ್ಲಿ 2 ಹುಲಿ ಮರಿಗಳನ್ನೂ ಪೆಟ್ ಶಾಪ್ ನಲ್ಲಿ ಓಪನ್ ಆಗೀ ಮಾರುತ್ತಿದ್ದರ ಬಗ್ಗೆ ವರದಿ ಮಾಡಿತ್ತು.

ಭಾರತದಲ್ಲೆ ಅಲ್ಲ ವಿಶ್ವದಲೆಲ್ಲಾ ನಿಮ್ಮ ಜನಗಳ ಸಂತತಿ ಅಳಿವಿನಲ್ಲಿದೆ. ಇವತ್ತು ಒಟ್ಟರೆ ವಿಶ್ವದಾದ್ಯಂತ ಕಾಡಿನಲ್ಲಿ ಬದುಕಿರುವ ಹುಲಿಗಳ ಸಂಖ್ಯ 3000 –4000 ಅಷ್ಟೇ. ಇದೆ 100 ವರ್ಷಗಳ ಹಿಂದೆ ಅದು 100000 ಇತ್ತು !!!. ನಿಮಲ್ಲಿದ್ದ 9 ಜಾತಿ ಹುಲಿಗಳಲ್ಲಿ ಈಗಾಗಲೇ 3 ಜಾತಿ ಹುಲಿಗಳು (ಬಾಲಿ, ಜಾವನ್ ಮತ್ತು ಕ್ಯಾಸ್ಪಿಯನ್) 1970 ರಲ್ಲೇ ವಿನಾಶಗೊಂಡಿದ್ದು ಉಳಿದ ಜಾತಿಗಳಾದ ಬಂಗಾಲ ಹುಲಿ – 1411, ಇಂಡೊಚೀನ ಹುಲಿ – 600 ರಿಂದ ೮೦೦, ದಕ್ಷಿಣ ಚೀನಾ ಹುಲಿ ಕಾಡಿನಲ್ಲಿ ಇದ್ದ ಎಲ್ಲ ಹುಲಿ ವಿನಶಗೊಂದಿದ್ದು ಬರಿ zooನಲ್ಲಿ 15 ರಿಂದ 20 ಹುಲಿ ಇದೆ, ಸೈಬಿರಿಯಾದ ಹುಲಿ - ಅಂದಾಜು 400, ಸುಮಾತ್ರದ ಹುಲಿ 300 ರಿಂದ 350 ಕಡೆಯದಗೀ ಮಲ್ಲೆಶಿಯಾದ ಹುಲಿ 400 ಇವೆ ಎಂದು ಅಂದಾಜಿಸಲಾಗಿದೆ.

ಸಂಸಾರ್ ಚಂದ್,ತಿನ್ಲಿ, ಮೊಹಮ್ಮೆದ್ ಯಾಕುಬ್, ಶಬೀರ್ ಹಸ್ಸನ್ ಖುರೇಷಿ ಅಂತ ಪಾಪಿ ಗಳು ನಿನ್ನ ವಂಶವನ್ನೇ ನಿರ್ಮೂಲನ ಮಾಡಲು ಪಣತೊಟ್ಟಿರುವಂತೆ ನಿನ್ನವರನ್ನು ಬೇಟೆ ಆಡಿ ಕೊಂದು ಹೊರದೇಶಗಳಿಗೆ ಕಳ್ಳಸಾಗಾಣಿಕೆ ಮಾಡುತ್ತಿದ್ದರು (ಸದ್ಯ ಈಗ ಎಲ್ಲರೂ ಜೈಲಿನಲ್ಲಿದ್ದಾರೆ). ಕಡೇಲಿ ಹೇಳಿದನಲ್ಲ ಖುರೇಷಿ ಅಂತ ಅವನನ್ನು January 2000ರಲ್ಲಿ ಕಾಗಾ ಎಂಬ ಕೇಸ್ ನಲ್ಲಿ ಹಿಡಿದಾಗ ಅವನಿಂದ ವಶ ಪಡಿಸಿಕೊಂಡ ವಸ್ತುಗಳ ಲಿಸ್ಟ್ ನೋಡಿದರೆ ಸುಸ್ತಾಗುತ್ತೆ... 70 ಚಿರತೆ ಚರ್ಮ, 18000 ಚಿರತೆ ಉಗುರು, 4 ನಿಮ್ಮವರ(ಹುಲಿ) ಚರ್ಮ, 132 ನಿಮ್ಮವರ(ಹುಲಿ) ಉಗುರು, 221 ಕೃಷ್ಣ ಮೃಗದ ಚರ್ಮ. ಇಂಥ ನೀಚಜನರಿಗೆ ಏನು ಶಿಕ್ಷೆ ಕೊಡಬೇಕು ನೀನೆ ಹೇಳು…?

ಹೇಗೋ ಸದ್ಯ ಈಗ ಜನ ಎಚ್ಚೆತ್ತುಕೂಂಡಿದ್ದಾರೆ. ಎಲ್ಲಾ ಕಡೆ ನಿನ್ನ ಹಾಗು ನಿಮ್ಮವರನ್ನು ಉಳಿಸುವ ಜಾಥ ನಡೀತಾ ಇದೆ. ನೀನು ಆಹಾರ ಸರಪಳಿಯಲ್ಲಿರೂ ಮುಖ್ಯ ಜೀವಿ, ನೀನೇ ಹೋದರೆ ಇಡೀ ecosystem ಹಾಳಾಗುತ್ತೆ. ನಾನಂತು ನನ್ನ ಸ್ನೇಹಿತರಿಗೆ, ನನ್ನ ಜೊತೆ ಕೆಲ್ಸಮಾಡುವವರಿಗೆ ಆಗಾಗ ನಿನ್ನನು ಉಳಿಸಲು ನಮ್ ಕೈಯಲಿ ಎನ್ ಎನ್ ಮಾಡಬಹುದು ಅಂತ ಹೇಳ್ತಾ ಇರ್ತೆನೆ.

‘ ಆದಷ್ಟು ಕಾಡನ್ನು ಅದರ ಪರಿಸರವನ್ನು ಹಾಳು ಮಾಡಬೇಡಿ’
‘ಒಳ್ಳೆ ಜವಬ್ದಾರಿ ಪ್ರವಾಸಿಗರಾಗಿ ವರ್ತಿಸಿ’
‘ಕಾಡಿಗೆ ಹೋದಾಗ ಅಲ್ಲಿ ಹೆಜ್ಜೆ ಗುರುತು ಬಿಟ್ಟು ಏನು ಬಿಡಬೇಡಿ ಹಾಗೆ ಅಲ್ಲಿಂದ ವಾಪಸ್ಸು ಬರುವಾಗ ನೆನಪು ಬಿಟ್ಟು ಏನನ್ನೂ ತರಬೇಡಿ’
‘ಬೇಟೆ ಹಾಗು ಬೇಟೆ ಮಾಡುವವರ ಬಗ್ಗೆ ಮಾಹಿತಿ ಇದ್ದಲ್ಲಿ ಪೋಲಿಸ್ ಸ್ಟೇಷನ್ ಗೆ ಹೋಗಿ ತಿಳಿಸಿ’
‘ನಿರ್ಧಾರ ತೆಗೆದುಕೊಳೊ ಅಧಿಕಾರಿಗಳಿಗೆ (prime minister & local MP) ಹುಲಿ ಅಳಿವಿನಂಚಿನಲ್ಲಿರುವುದರ ಬಗ್ಗೆ ಪತ್ರ ಬರೆಯಿರಿ’

ಎಂದೆಲ್ಲ ಹೇಳ್ತಾ ಇರ್ತೆನೆ. ನಿನ್ನನು ಉಳಿಸಲು ನನ್ನ ಕೈಲೀ ಏನು ಸಾಧ್ಯವೂ ಅದನ್ನೆಲ್ಲಾ ಮಾಡ್ತಾ ಇದ್ದೇನೆ. ಅದರೆ ಎಲ್ಲಿವರಗೆ ಫಾರೆಸ್ಟ್ ಡಿಪಾರ್ಟ್ಮಂಟನಲ್ಲಿ ಖಾಲಿ ಇರುವ ಪೋಸ್ಟ್ ಗಳನ್ನೂ ಭರ್ತಿ ಮಾಡುವುದಿಲ್ಲವೊ, ಕಾಡಿನ ಅಕ್ಕಪಕ್ಕ ಇರುವ ಜನರನ್ನು, ಊರನ್ನು ಸ್ಥಳಾಂತರ ಮಾಡುವುದಿಲ್ಲವೂ ಅಲ್ಲಿಯವರೆಗೂ ನಿನ್ನನ್ನು, ನಿಮ್ಮವರನ್ನು ಉಳಿಸೋದು ಕಷ್ಟ.

ನಮ್ಮ ಭಾರತ ಸರ್ಕಾರ ಕೂಡ ಮುಂದಿನ 5 ವರ್ಷಕ್ಕೆ ನಿನ್ನನ್ನು ಹಾಗು ನಿಮ್ಮವರನ್ನು ಉಳಿಸಲು $150 million dollars ಅನುದಾನವನ್ನು ಮಿಸಲಿಟ್ಟಿದೆ. ಜಗತ್ತಿನಾದ್ಯಂತ ನಿನ್ನನು ಉಳಿಸಲು ಸಾವಿರಾರು ಕೊಟ್ಯಾಂತರ ರೂಪಾಯಿಯನ್ನು ವ್ಯಯಿಸುತ್ತಿದ್ದಾರೆ. ಆದರೆ ಈಗ ಸಧ್ಯ ನನ್ನಲಿ ಇರುವ ಕೊರಗು ಏನೆಂದರೆ ‘ ಎಷ್ಟು ಖರ್ಚು ಮಾಡಿದರು ನಿನ್ನನು ಉಳಿಸಿಕೊಳ್ಳಲು ಆಗ್ತಾ ಇಲ್ಲವಲ್ಲ’ ಅಂತ.

ಇಂತಿ
ಜಗತ್ತಿನಲ್ಲಿ ಎಲ್ಲರಿಗಿಂತ ನಿನ್ನನ್ನು ಹೆಚ್ಚಾಗಿ ಪ್ರೀತಿಸುವವ....

6 comments:

  1. Wonderfull Brother...Fantastic article ... !!

    ReplyDelete
  2. Good maga, i like the feel u have on this unique animal...

    ReplyDelete
  3. Sooper article maga.. I am sharing this.

    ReplyDelete
  4. good manji... but the day u have started liking this people have started cursing this animal .. (kote incidence )

    ReplyDelete
  5. Nice article sir , awesome clicks , those days of urs are really cool

    ReplyDelete