Saturday, April 10, 2010

ಗಿಟಾರ್... ಆತ್ಮದ ಶಾಪ… & ದೇ ಡೈಡ್ ಯಂಗ್…

ಮೊದಲಿಂದಲೂ ನನಗೆ ಗಿಟಾರ್ ಮ್ಯೂಸಿಕ್ ಅಂದ್ರೆ ಇಷ್ಟ. ಅದರಲ್ಲೂ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ನನ್ನ ಫೇವರೇಟ್. ಹಾಗೆ ಒಮ್ಮೆ ನನ್ನ ಮೊಬೈಲ್ ಗೆ ರಿಂಗ್ ಟೋನ್ ಹುಡುಕುವಾಗ ‘ದಿ ಕ್ರೌ’ (THE CROW) ಅನ್ನೋ ಹೆಸರಿನ ರಿಂಗ್ ಟೋನ್ ಸಿಕ್ಕಿತು. ಅದನ್ತು ಹೆವಿ ಹಾರ್ಡ ರಾಕ್ ಗಿಟಾರ್ ಟೋನ್. ನಾನಂತು ಅದನ್ನು ಸಾಕಷ್ಟು ಸಲ ಕೇಳಿ ಅದನ್ನು ನನ್ನ ಫ್ರೇಂಡ್ಸ ಗೆ ಕೇಳಿಸಿ ‘ಇದನ್ನು ನುಡಿಸಿದ ಅಂದ್ರೆ, ಹೀ ನೋಸ ಎವೆರಿತಿಂಗ ಅಬೌಟ್ ಗಿಟಾರ್ ಅಂತನೆ ಅರ್ಥ ' ಅಂತ ಹೇಳ್ತಾ ಇದ್ದೆ. So ಹಾಗೆ ಅದು THE CROW ಫಿಲಂ ಟ್ಯೂನ್ ಅಂತ ಗೊತ್ತಾಯಿತು. ಫಿಲಂ ಡೌನ್ಲೋಡ್ ಮಾಡಿದೆ. ಅ ಫಿಲಂ ನಲ್ಲಿ ನಟಿಸಿರೋದು ಒಂದು ಕಾಲದಲ್ಲಿ ಕರಾಟೆ ಹಾಗು ಮಾರಷಲ್ ಆರ್ಟ್ಸ್ ಸಾಮ್ರಾಜ್ಯದ ಅನಭಿಶ್ಯ್ಕ್ತ ದೊರೆ ಆಗಿದ ಬ್ರೂಸ್ ಲೀ ಮಗ ಬ್ರಾಂಡನ್ ಲೀ!... ಬ್ರೂಸ್ ಲೀ ಗೆ ಮಗ ಇದ್ದ ವಿಷ್ಯ ನನಗೆ ಗೊತ್ತಿರಲಿಲ್ಲ. ನಾನು ಫಿಲಂ ನೋಡಿದೆ. ಅದು ಒಬ್ಬ ಮ್ಯೂಸೀಷಿಯನ ಪುನರ್ಜನ್ಮ ಪಡೆದು ತನ್ನ ಪ್ರೇಯಸಿ ಯನ್ನು ಕೊಂದವರ ವಿರುದ್ದ ಸೇಡು ತೀರಿಸಿಕೊಳ್ಳುವ ಸ್ಟೋರಿ. ಯಾವುದೇ ಫಿಲಂ ನೋಡಿದರು ನಂತರ ಇಂಟರ್ನೆಟ್ನಲ್ಲಿ ಅ ಫಿಲಂ ಬಗ್ಗೆ, ಆಕ್ಟರ್ಸ್ ಬಗ್ಗೆ, ಬೇರೆ ಎಲ್ಲ ಇನ್ಫಾರ್ಮಶನ್ ನೋಡೋದು ನನ್ನ ಅಭ್ಯಾಸ ಹಾಗೆ THE CROW ಫಿಲಂ ರಿವ್ಯೂ ಓದಿದಾಗ ನನಗೆ ತುಂಬಾ ಶಾಕ್ ಅಯೀತು... ಆ ಚಿತ್ರದ ನಾಯಕ ಬ್ರೂಸ್ ಲೀ ಮಗ ಬ್ರಾಂಡನ್ ಲೀ ಸಿನಿಮಾದ ಚಿತ್ರೀಕರಣದ ವೇಳೆಯಲ್ಲೇ ಒಂದು ಗನ್ ಫೈರ್ ಸೀನನಲ್ಲಿ ಬೈಯ ಚಾನ್ಸ್ ಗನ್ ನಲ್ಲಿ ಒರಿಜಿನಲ್ ಬುಲ್ಲೆಟ್ ಇದ್ದು ಅದು ಬ್ರಾಂಡನ ಲೀ ಮೇಲೆ ಫೈರ್ ಆಗಿ ಅ ದಿನವೇ ಮೃತಪಟ್ಟನು . So ಅವನ ಅಸಹಜ ಸಾವಿನ ಬಗ್ಗೆ ಕುತೊಹಲ ಮೂಡಿ ಇಂಟರ್ನೆಟ್ ಹೊಕ್ಕಾಗ ನನಗೆ ಸಿಕ್ಕ ಮಾಹಿತಿ ಏನಂದರೆ...


ಆವತ್ತು ಮಾರ್ಚ್ 31, 1993 ಸಮಯ: ಬೆಳಗಿನ ಜಾವ 12.30, ಸ್ಥಳ : ಕಾರೋಲ್ಕೋ ಸ್ಟುಡಿಯೊಸ್ (ಈಗಿನ ಸ್ಕ್ರೀನ್ ಗೇಮ್ಸ್) ವಿಲ್ ಮಿಂಗ್ಟನ್, ನಾರ್ತ್ ಕ್ಯಾರೊಲಿನ, ಬ್ರೂಸ್ಲೀ ಮಗ ಬ್ರಾಂಡನ್ ಲೀಯ ನಾಯಕತ್ವದ ಚಿತ್ರ THE CROW ಚಿತ್ರೀಕರಣ ನೆಡಿತಾಇತ್ತು. ಚಿತ್ರೀಕರಣ ಶೇಕಡಾ 90% ಮುಗಿದಿತ್ತು. ಇನ್ನು ಬರಿ 8 ದಿನಗಳ ಚಿತ್ರೀಕರಣ ಬಾಕಿ ಇತು. ನಾಯಕ ಎರಿಕ್ ಡ್ರವೆನ್(ಬ್ರಾಂಡನ್ ಲೀ) ತನ್ನ ಹಾಗು ತನ್ನ ಗರ್ಲ್ ಫ್ರೆಂಡ್ ಅಪಾರ್ಟಮೇಂಟ್ನಲ್ಲಿ ಅವನ ಗರ್ಲ್ ಫ್ರೆಂಡ್ ನನ್ನು ಹೊಡೆದು ಮಾನಭಂಗ ಮಾಡುವಾಗ ಅಪಾರ್ಟಮೇಂಟ್ಗೆ ನುಗ್ಗುವ ಸೀನ್. ಅಗ್ಗ ಪ್ಲೇಬಾಯ್ (ಮೈಕಲ್ ಮಸ್ಸಿ) ಎಂಬ ವಿಲನ್ ಲೀ ಗೆ ಶೋಟ್ ಮಾಡ್ಬೇಕಾಗಿರುತ್ತೆ. ಶೂಟಿಂಗ್ ಶೇಡ್ಯೋಲ್ ಪ್ರಕಾರ ಎಲ್ಲ ನಡೆದಿತ್ತು. ಬ್ರಾಂಡನ್ ಲೀ ‘Hang Man’s joke’ ಎಂಬ ಫ್ರೇಸ್ ಇದ್ದ ಟೀ-ಶರ್ಟ್ ಮೇಲೆ ಬ್ಲಾಕ್ ಜಾಕೆಟ್ ಹಾಕಿಕೊಂಡು ರೂಮಿಗೆ ನುಗ್ಗುತ್ತಾನೆ. ಮೈಕಲ್ ಮಸ್ಸಿ ತನ್ನ ಬಳಿ ಇದ್ದ .44 ಕ್ಯಾಲಿಬೇರ್ ರಿವಾಲ್ವರ್ ಇಂದ 10-12 ಅಡಿ ದೂರದಿಂದ ಬ್ರಾಂಡನ್ ಲೀಗೆ ಗುಂಡು ಹಾರಿಸುತ್ತಾನೆ. ತಕ್ಷಣ ಬ್ರಾಂಡನ್ ಲೀ ತನ್ನ ಬಲ ಪಕ್ಕೆ ಹಿಡಿದುಕೊಂಡು ಕೆಳಗೆ ಬೀಳುತ್ತಾನೆ, ಬಿದ್ದು ತನಗೆ ತೀವ್ರವಾಗಿ ಗಾಯವಾಗಿದೆ ಎಂದು ಸನ್ನೆ ಮಾಡಿ ತೋರಿಸ್ತಾನೆ. ಆದರೆ ಎಲ್ಲರು ಅವರವರ ಪಾತ್ರದ ಅಭಿನಯದಲ್ಲಿ ತಲ್ಲಿನರಾಗಿದ್ದರಿಂದ ಯಾರಿಗೂ ತಕ್ಷಣ ಬ್ರಾಂಡನ್ ಲೀನ ಗಮನಿಸಲು ಸಾಧ್ಯವಾಗಿಲ್ಲ. ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ‘ಕಟ್’ ಅಂತ ಹೇಳೋ ಮುಂಚೆ ಮೈಕಲ್ ಮಸ್ಸಿ ಹಾರಿಸಿದ್ದ ಬುಲೆಟ್ ಬ್ರಾಂಡನ್ ಲೀ ನ ಹೊಟ್ಟೆಯನ್ನು ದೊಡ್ಡ ತೂತು ಮಾಡಿ ಜೀರ್ಣಾಅಂಗದ ಅಕ್ಕಪಕ್ಕ ಇದ್ದ ಎಷ್ಟೋ ಅಂಗಗಳನ್ನು ಸೀಳಿ ಹೋಗಿ ಬೆನ್ನ ಮೊಳೆ ಪಕ್ಕ ಲಾಡ್ಜ್ ಆಗಿತ್ತು. ಬ್ರಾಂಡನ್ ಲೀ ಗೆ ಬಿದ್ದಿರುವುದು ನಿಜವಾದ ಗುಂಡು ಅಂತ ತಿಳಿದ ತಕ್ಷಣ ಅವನ್ನು ನ್ಯೂ ಹನೋವೆರ್ ಹಾಸ್ಪಿಟಲ್ ಗೆ ಕರೆದು ಕೊಂಡು ಹೋಗಿ 6 ತಾಸು ಆಪರೇಷನ್ ಮಾಡಿ ಬುಲೆಟ್ ತೆಗೆದರು. ಗುಂಡು ತೆಗೆಯುವಾಗ ಹಾಗು ಆಪರೇಷನ್ ವೇಳೆಯಲ್ಲಿ ತುಂಬಾ ರಕ್ತ ಸ್ರಾವವಾಗಿ, ಅವನಿಗೆ 60 ಪಿಂಟ್(28 ಲೀಟರ್) ರಕ್ತ ಕೊಡಲಾಗಿತು. ಇಷ್ಟಾದರು ಬ್ರಾಂಡನ್ ಲೀ ನನ್ನು ಉಳಿಸಿಕೊಳ್ಳಲು ಆಗಲಿಲ್ಲ. ಗುಂಡು ತಗುಲಿದ 13 ತಾಸು ಬಳಿಕ ಅವನು ಮೃತನಾದ. ಮಾರ್ಚ್ 31st 1993 ರ ಮಧ್ಯಾನ 1.03 ನಿಮಿಷಕ್ಕೆ ಬ್ರಾಂಡನ್ ಲೀ ಸತ್ತಿದ್ದಾನೆಂದು ಘೋಷಿಸಲಾಯಿತು. ಸಾಯಲು ಕಾರಣ (Cause Of Death) ವನ್ನು GSW – Gun Shot Wound ಎಂದು ದಾಖಲಿಸಲಾಯಿತು. ಆಗ ಅವನಿಗೆ ಕೇವಲ 28 ವರ್ಷ ಹಾಗು ಅವನ ಪ್ರೇಯಸಿ ಎಲಿಜ ಒಟ್ಟಿಗೆ ಅವನ ಮದುವೆಗೆ ಇನ್ನು ಬರೇ 2 ವಾರ ಬಾಕಿ ಇತ್ತು…





BRANDON BRUCE LEE(01-02-1965 – 31-03-1993)


ಈ ಪ್ರಕರಣದ ಬಗ್ಗೆ ತನಿಖೆ ನಡೆದಾಗ ಶೋಟಿಂಗ್ ಸಿಬ್ಬಂದಿಗಳ ಬೇಜವಾಬ್ದಾರಿತನ ಹಾಗು ಅನಾನುಭಾವಿ ಕೆಲಸಗಾರರುಗಳೇ ಕಾರಣ ಎಂದು ವರದಿಮಾಡಿದರು. ಯಾರಿಗೂ ಗೊತ್ತಿಲ್ಲದ ಹಾಗೆ ನಕಲಿ ಗುಂಡಿನ ಜಾಗದಲ್ಲಿ ಅಸಲಿ ಗುಂಡು ಲೋಡ್ ಆಗಿ ಬ್ರಾಂಡನ್ ಲೀ ನ ಬಲಿಪಡೆದಿತ್ತು. ಗುಂಡು ಹಾರಿಸಿದ್ದ ಮೈಕಲ್ ಮಸ್ಸಿ ಹಿಂದೆನೂ ಒಂದು ಕ್ಯಾಮೆರಾ ಇದ್ದು, ಅದು ಬ್ರಾಂಡನ್ ಲೀ ಗುಂಡು ತಗುಲಿದುದ್ದನ್ನು ಸರಿಯಾಗಿ ಸೆರೆ ಹಿಡಿದಿತ್ತಂತೆ. ಆದರೆ ಅದನ್ನು ಡೆವಲಪ್ ಮಾಡದೆ ಹಾಗೆ ನಾಶಪಡಿಸಿದರಂತೆ. ಚಿತ್ರ ನಟ ಮೈಕಲ್ ಮಸ್ಸಿ ಬ್ರಾಂಡನ್ ಲೀ ಸಾವಿಗೆ ಕಾರಣನಲ್ಲ ಇದು ಕೇವಲ ಆಕಸ್ಮಿಕ ಅಪಘಾತ ಎಂದು ಪರಿಗಣಿಸಿ ಅವನ ಮೇಲೆ ಯಾವ ಕ್ರಿಮಿನಲ್ ಆರೋಪವನ್ನು ಹೊರಿಸಲಿಲ್ಲ. ಈ ಬಗ್ಗೆ ಅವನ ತಾಯೀ ಲಿಂಡಾ ಲೀ ಚಿತ್ರ ತಂಡದವರ ಮೇಲೆ ಕೇಸು ಹಾಕಿ, ಬಹಿರಂಗ ಪಡಿಸದ ಅನುಕಂಪ ಮೊತ್ತವನ್ನು ಪಡೆದರು. ಬ್ರಾಂಡನ್ ಲೀ ಯಾ ಸಂಸ್ಕಾರದ ದಿನ ಅವನ ತಾಯೀ ಜಗತ್ತಿನ ಎಲ್ಲ ಚಿತ್ರ ನಿರ್ಮಾಪಕರು, ನಿರ್ದೇಶಕರಿಗೆ ಚಿತ್ರೀಕರಣದ ವೇಳೆಯಲ್ಲಿ ಸುರಕ್ಷಿತ ಕ್ರಮಗಳ (safety measures) ಬಗ್ಗೆ ಹೆಚ್ಚು ಸೀರಿಯಸ್ ಆಗಿರಲು ಮನವಿಮಾಡಿಕೊಂಡರು.


ಬ್ರಾಂಡನ್ ಲೀ ನನ್ನು ವಾಶಿಂಗ್ಟನ್ನ ಸಿಟಲ್ ನಲ್ಲಿರುವ ಲೇಕ್ ವ್ಯೂ ಸೆಮೆಂಟರಿ ಪಾರ್ಕ್ ನಲ್ಲಿ ಅವನ ತಂದೆ ಬ್ರೂಸ್ ಲೀ ಸಮಾಧಿ ಪಕ್ಕ ಹೂಳಲಾಯಿತು. ಆ ಜಾಗವನ್ನು ತನ್ನ ತಾಯೀ ಲಿಂಡಾ ಲೀ ತನ್ನ ಸಾವಿನ ನಂತರ ತನಗಾಗಿ ಮೀಸಲಿಟ್ಟಿಕೊಂಡಿದ್ದಳಂತೆ.



THE CROW ಚಿತ್ರದ ಚಿತ್ರೀಕರಣವು 90% ಮುಗಿದು ಬಾಕಿ ಕೆಲವೊಂದು ಸೀನ್ ಗಳನ್ನು ಬ್ರಾಂಡನ್ ಲೀ ಯ ಗೈರಿನಲ್ಲಿ ಅವನ ಡೂಪ್ ಬಳಸಿ ಹಾಗೆ ಕೆಲವು ಸ್ಪೆಷಲ್ ಎಫೆಕ್ಟ್ ಬಳಸಿ ಮುಗಿಸಲಾಯಿತು. ಚಿತ್ರ ಮುಗಿಸಲು ಅವನ ಪ್ರೇಯಸಿ ಎಲಿಜ ಹಾಲ್ಟ್ನ್ ಹಾಗು ಅವಳ ತಾಯೀ ನಿರ್ದೇಶಕ ಆಲೆಕ್ಷ್ ಪ್ರೊಯಾಸ್ ಗೆ ತುಂಬಾ ಸಹಕರಿಸಿದರು. THE CROW ಕೊನೆಗೆ ಮೇ 1994ರಲ್ಲಿ ಬಿಡುಗಡೆಗೊಂಡಿತು. ಹಾಗು ನಿರೀಕ್ಷೆಗೂ ಮೀರಿ ಚಿತ್ರ ಜನಪ್ರಿಯವಾಯಿತು.


THE CROW ಚಿತ್ರೀಕರಣದ ವೇಳೆ ಬ್ರಾಂಡನ್ ಲೀ ಸಾವಲ್ಲದೇ ಇನ್ನು ಅನೇಕ ಅಪಘಾತಗಳು ಸಂಭವಿಸಿದವಂತೆ ಶೂಟಿಂಗ್ ನ ಮೊದಲನೆ ದಿನವೇ ಮೆಟಲ್ ಗ್ರೈಂಡರ್ಗೆ ಹೈ ಟೆನ್ಶನ್ ವೈರ್ ಶಾರ್ಟ್ ಆಗೀ ಒಬ್ಬ ಆಚಾರಿಯ(carpenter) ತನ್ನ ಮುಖ,ಎದೆ ಎಲ್ಲ ಸುಟ್ಟಿಕೊಂಡನಂತೆ, ಇನ್ನೊಬ್ಬ ಕೆಲಸಗಾರನ ಕೈಗೆ scredriver ಸೀಳಿ ನುಗಿತಂತೆ, ಯಾರಿಗೂ ತಿಳಿಯದ ರೀತಿ ಒಂದು ಇಡೀ ಲಾರಿ ತುಂಬಾ ಇದ್ದ ಶೂಟಿಂಗ್ ಸೆಟ್ ನ ಸಾಮಾನು ಬೆಂಕಿಗೆ ಯಲ್ಲಿ ಬೆಂದುಹೋಯಿತಂತೆ, ಸ್ಟಂಟ್ ಮ್ಯಾನ್ ಒಬ್ಬನು ಮೇಲಿಂದ ಬಿದ್ದು ಕೈ,ಕಾಲು,ಎದೆ ಮೂಳೆ(ರಿಬ್ಸ್) ಎಲ್ಲಾ ಮುರಿದುಕೊಂದಡನಂತೆ. ಮತ್ತು ಮಾರ್ಚ್ 1993 ರ ಮೊದಲ ವಾರ ಬಿರುಗಾಳಿ ಬಂದು ಶೂಟಿಂಗ್ ಸೆಟ್ ನ ಅನೇಕ ಭಾಗವನ್ನು ಹಾಳುಮಾಡಿತಂತೆ.


ಬ್ರಾಂಡನ್ ಲೀ ಯಂತೆ ಅವನ ತಂದೆ ಬ್ರೂಸ್ ಲೀ ಕೂಡ ಕೇವಲ ತಮ್ಮ 32 ವಯಸ್ಸಿನಲ್ಲೇ ಅತ್ಯಂತ ಸಂಶಯಾಸ್ಪದವಾಗಿ ಸಾವನ್ನಪ್ಪಿದರು. ಬ್ರೂಸ್ ಲೀ ಕೂಡ ತನ್ನ ಕಡೆ ಚಿತ್ರ ‘ದಿ ಗೇಮ್ ಆಫ್ ದಿ ಡೆತ್ ’ ನ ಸ್ಕ್ರಿಪ್ಟ್ ಅನ್ನು ನಾಯಕಿ ಬೆಟ್ಟಿ ಟಿಂಗ್ ಪೆಯಿಯೊಂದಿಗೆ ತನ್ನಮನೆಯಲ್ಲಿ ಚರ್ಚಿಸುತ್ತಿದ್ದಾಗ ಅವನಿಗೆ ತಲೆನೋವು ಬಂತಂತೆ. ಆಗ ಬೆಟ್ಟಿ EQUAGESIC ಅನ್ನು ಅಸ್ಪಿರ್ನ್ ಮಾತ್ರೆ ನೀಡಿದಳು. ಅದನ್ನು ನುಂಗಿ ಮಲಗಿದ ಬ್ರೂಸ್ ಲೀ ಪುನಃ ಎದ್ದೇಳಲೇಇಲ್ಲವಂತೆ. ಬ್ರೂಸ್ ಲೀ ಸಾವಿನ ಬಗ್ಗೆ ಜನರಿಗೆ ಸಾಕಷ್ಟು ಸಂಶಯವಿತ್ತು. ಅವನನ್ನು ಅವನ ವೈರಿಗಳು ಕೊಲೆ ಮಾಡಿದರು, ಅವನನ್ನು ಹೊಡೆದಾಟದಲ್ಲಿ ಮುಗಿಸಲಾಯಿತು, DRUGS OVERDOSE ಇಂದ ಕೊಲ್ಲಲಾಯಿತು ಅಂತೆಲ್ಲ ವದಂತಿ ಇದ್ದವಂತೆ. ಅದರೆ ಅವನ್ ಮರಣೋತ್ತರ ಪರೀಕ್ಷೆ ಮಾಡಿದ ಡಾಕ್ಟರ ಬ್ರೂಸ್ ಲೀ ಗೆ Medicine ನ ವ್ಯತ್ಯಾಸ ಹಾಗು ಇನ್ನಿತರ ಕಾರಣಗಳಿಂದ ಅವನ ಮೆದಳು ಉಬ್ಬಿ, ಅವನು ಗಾಢ ನಿದ್ರೆಗೆ ಹೋಗಿ ಪುನಃ ಎಚ್ಚರವಾಗದೆ ಮೃತಪಟ್ಟಿದಾನೆ ಎಂದು ಘೋಷಿಸಿದರು.





BRUCE LEE(27-11-1940 – 20-07-1973)


ಇದೆಲ್ಲರ ನಡುವೆ ತಂದೆ ಮಗ ಇಬ್ಬರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಲು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಎಂಬ ಚಿಕ್ಕ ಸನ್ಯಾಸಿ(Monk) ನ ಶಾಪ ಕಾರಣ ಎಂದು ಸಾಕಷ್ಟು ಜನ ನಂಬಿದ್ದಾರೆ. ಬ್ರೂಸ್ ಲೀ ಗೆ ಯಾವಾಗಲು ಒಂದು ಕನಸು ಬೀಳುತ್ತಿತಂತೆ. ಆ ಕನಸಿನಲ್ಲಿ ಒಂದು ಧ್ವನಿ ‘ನಿನ್ನ ಅಪ್ಪ ತನ್ನ 64 ನೇ ವಯಸ್ಸಿನಲ್ಲಿ ಸಾಯುತ್ತಾನೆ, ನೀನು ಅವನ ಆಯಸ್ಸಿನ ಅರ್ಧದಷ್ಟು ಸಹ ಬದುಕುವುದಿಲ್ಲ’ ಎಂದು ಹೇಳಿತಂತೆ. ಈ ಬಗ್ಗೆ ಬ್ರೂಸ್ ಲೀ ಯು ಅವನ ಅಪ್ಪ ಬಳಿ ವಿಚಾರಿಸಿದಾಗ ಅವನ ಅಪ್ಪ ‘ಅದು ಫೆನ್ಗ್ಷಿ ಮಾಸ್ಟರ್ ಸುಂಗ್ ಲಿ ಯಾ ಧ್ವನಿ, ಅವನು ಸಾಯುವಾಗ ನನ್ನ ಸಮಾಧಿ ಪಕ್ಕ ಯಾರನ್ನು ಹೂಳಬೇಡಿ ಎಂದಿದ್ದ. ಆದರೆ ಅಲ್ಲಿ ನಿನ್ನ ತಾತ ನನ್ನು ಹೂತಿದ್ದಾರೆ’ ಅಂದನಂತೆ. ಯಾವಾಗ ಬ್ರೂಸ್ ಲೀ ಗೆ ಅ ಧ್ವನಿ ಕನಸಿನಲ್ಲಿ ಬರುವುದು ಹೆಚ್ಚಾಯಿತೋ ಆಗ ಅವನು ಹಾಂಗ್ ಕಾಂಗ್ ಬಿಟ್ಟು ಅಮೆರಿಕಾಗೆ ಬಂದು ಬಿಟ್ಟ. ಅಮೆರಿಕಾಗೆ ಬಂದರು ಸಹ ಅ ಧ್ವನಿ ಅವನ ಕನಸಿನಲ್ಲಿ ಬಂದು ಕಾಡುವುದು ತಪ್ಪಲಿಲ್ಲವಂತೆ. ಒಂದು ದಿನಇದ್ದಕಿದ್ದಂತೆ ಪುನ ಅ ಧ್ವನಿ ಕನಸಿನಲ್ಲಿ ಬಂದು ‘ ನೀನು ನಿನ್ನ ಜೀವನದಲ್ಲಿ ತುಂಬಾ ಸಾಧಿಸಿ ನಿನ್ನ 32ನೆ ವಯಸ್ಸಿಗೆ ಸಾಯುತ್ತಿಯ ಹಾಗು ನಿನ್ನ ಮಗ ಕೂಡ ಅವನಿಗೆ ಮಕ್ಕಳಾಗುವ ಮೊದಲೆ ಸಾಯುತ್ತಾನೆ’ ಅಂದಿತಂತೆ. ಅದರಂತೆ ಬ್ರೂಸ್ ಲೀ ಯ ತಂದೆ 64 ನೆ ವಯಸ್ಸಿಗೆ ತೀರಿಕೊಂಡರು. ಬ್ರೂಸ್ ಲೀ 1973 ರಲ್ಲಿ ತನ್ನ 32 ವಯಸ್ಸಿನಲ್ಲಿ ಸತ್ತ. ಸಾಯುವ ಮೊದಲೆ ಅವನು ಆ ಧ್ವನಿಯಿಂದ ಪಾರಗಲು ಇತರ ಫೆನ್ಗ್ಷಿ ಮಾಸ್ಟರ್ ಬಳಿ ಹೋಗಿ ಪರಿಹಾರ ಗಳನ್ನೂ ಕೇಳಿದ್ದನಂತೆ. ಹಾಗೆ ಅವನ ಮಗ ಕೂಡ ಅವನ ತನ್ನ ಮದುವೆ ಇನ್ನು 2 ವಾರವಿದೆ ಅಂತನೇ ದಾರುಣವಾಗಿ ಚಿತ್ರಿಕರಣದ ವೇಳೆ ಸತ್ತ. ಇವತ್ತು ಕೂಡ ಬ್ರೂಸ್ ಲೀ ಯಾ ಫ್ಯಾಮಿಲಿ ಅಂದ್ರೆ ಅವನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಕೂಡ ಒಂದೂ Divorce ಆಗಿದ್ದರೆ, ಇಲ್ಲಾ ಸತ್ತುಹೋಗಿದ್ದಾರೆ, ಇಲ್ಲ ಅಂದ್ರೆ ದೀವಾಳಿಯಾಗಿದ್ದರೆ ಮತ್ತು ಅವರು ಇವೆಲ್ಲ ಆ ಫೆನ್ಗ್ಷಿ ಮಾಸ್ಟರ್ ಸುಂಗ್ ಲಿಯ ಆತ್ಮದ ಶಾಪ ಅಂತರಂತೆ...


ಇದೆಲ್ಲಾ ಓದಿದ ನಂತರ, ಪುನಃ ನಾನೂ ನನ್ನ ಕಂಪ್ಯೂಟರ್ ನಲ್ಲಿದ್ದ ‘THE CROW’ ಸಿನಿಮಾ ದ 65 ನಿಮಿಷ 11 ಸೆಕೆಂಡ್ ನಲ್ಲಿ ಬರುವ ಆ ಹಾರ್ಡ ರಾಕ್ ಗಿಟಾರ್ ಮ್ಯೂಸಿಕ್ ಸೀನ್ ನೋಡಿ, ಹಾಗೆ 11 ನಿಮಿಷ 46 ಸೆಕೆಂಡ್ ನಲ್ಲಿ ಬರುವ ಬ್ರಾಂಡನ್ ಲೀ (ಎರಿಕ್ ದ್ರವೆನ್) ಕೊಲೆಯಾಗು ಸೀನ್ ನೋಡಿ ಕಂಪ್ಯೂಟರ್ Off ಮಾಡಿದ ನಂತರ ನನ್ನ ಮನಸ್ಸಿನಲ್ಲಿ ಇವೆಲ್ಲ ನಿಜವೆ?... ಯಾವುದೋ ಆತ್ಮದ ಶಾಪ ಒಬ್ಬ ಮನುಷ್ಯನ ಜೀವನವನ್ನು ಇಷ್ಟರಮಟ್ಟಿಗೆ ಹಾಳುಮಾಡುತ್ತದೆಯೇ? ಅನ್ನೋ ಪ್ರಶ್ನೆ ಮೂಡಿ, ಉತ್ತರ ಸಿಗದೆ ಹಾಗೆ ಸುಮ್ಮನಾದೆ...





2 comments:

  1. Good Brother...Nice Article... :)

    ReplyDelete
  2. Impressive stuff bro.. thanks for sharing your blog. Looking forward for many more :)

    ReplyDelete