Monday, May 3, 2010

ನಾನು ಮೊದಲ ಸಲ ಮೊಬೈಲ್ ನಲ್ಲಿ ‘ಹಲೋ’ ಅಂದಾಗ….

ಅವತ್ತು ಸೋಮವಾರ. 2 ದಿನದ ಹಿಂದೆ ಫಾರೆಸ್ಟ್ ಡಿಪಾರ್ಟ್ಮೆಂಟನ ಫಾರೆಸ್ಟರ್ ರೆಕ್ರೋಟಮೆಂಟ್ ಗೆ ಅಂತ ನಮ್ಮ ಮೈಸೂರ್ ನಲ್ಲಿ ಇರೋ ರೇಸ್ ಕೋರ್ಸ್ ನಲ್ಲಿಯ 2 Kms ಟ್ರ್ಯಾಕ್ ನಲ್ಲಿ 12 1/2 ರೌಂಡ್ಸ್ ನ ಫಿಸಿಕಲ್ ಟೆಸ್ಟ್ ಗೆ ಅಂತ ಓಡಿ, ಮಾರನೆ ದಿನ ಅಂದ್ರೆ ಭಾನುವಾರ ನಜರ್ಬಾದ್ ಹತ್ತಿರ ಇರೋ ಪೋಲಿಸ್ ಅಕಾಡೆಮಿಯಲ್ಲಿ ರಿಟನ್ ಟೆಸ್ಟ್ ಬರೆದಾಗಿತು. ಫಿಸಿಕಲ್ ಟೆಸ್ಟ್ ದಿನ ಡಾಕ್ಯುಮೆಂಟ್ ವೆರಿಫಿಕೇಷನ್ ಮಾಡಿದ್ದರು, ಬಟ್ ನನ್ನ ಒರಿಜಿನಲ್ ಸರ್ಟಿಫಿಕೆಟ್ಸ್ ಎಲ್ಲಾ N I E ಕಾಲೇಜ್ ನವರಿಗೆ ಸರಂಡರ್ ಮಾಡಿದ್ದರಿಂದ ಡಿಪಾರ್ಟ್ಮೆಂಟನವರು ನಂಗೆ ನನ್ನ ಒರಿಜಿನಲ್ ಡಾಕ್ಯುಮೆಂಟ್ಸ್ನ ಸೋಮವಾರ ತೋರಿಸಲು ಹೇಳಿದ್ದರು. So ಅವತ್ತು ಅಮ್ಮ ಮಾಡಿದ್ದ ಉಪ್ಪಿಟ್ಟು ತಿಂದು ನನ್ನ ಗಾಡಿ ಹೀರೋ ಪುಚ್ 2G ಯಲ್ಲಿ ಅರಣ್ಯ ಭವನಕ್ಕೆ ಹೋಗಿ ಎಲ್ಲಾ ಒರಿಜಿನಲ್ ಡಾಕ್ಯುಮೆಂಟ್ಸ್ ನೆಲ್ಲ ತೋರಿಸಿ ವಾಪಸ್ಸು ಮನೆಗೆ ಬಂದಾಗ 11.30ಆಗಿತ್ತು. ಅವಾಗ ಅಂದ್ರೆ 2004 ರಲ್ಲಿ ನಾವು ಇನ್ನು ಓದುತ್ತಾ ಇದ್ದೆವು, ಮೊಬೈಲ್ ಆಗಷ್ಟೇ ಮಾರ್ಕೆಟ್ ಗೆ ಬಂದಿತ್ತು. ಎಲ್ಲೊ ತೀರ ರಿಚ್ & ಪಾಶ್ ಹುಡುಗರು ಅಥವಾ ಹುಡುಗೀರ ಹತ್ತಿರ ಮಾತ್ರ ಮೊಬೈಲ್ ಇತ್ತು. ಇನ್ ಕಮ್ಮಿಂಗ್ ಕಾಲಿಗೂ ಕೂಡ ದುಡ್ಡು ಕಟ್ ಆಗುತ್ತಿದ್ದ ಕಾಲ ಅದು. ನಾವಂತೂ ಯಾರ ಜೊತೆ ಮಾತನಾಡಬೇಕಾದರು ಲ್ಯಾಂಡ್ ಲೈನ್ ನೇ ಉಪಯೋಗಿಸಬೇಕಾಗಿತ್ತು. ಅವಗಂತೂ ನಮ್ಮ ಫ್ರೆಂಡ್ಸ್, ರಿಲೇಟಿವ್ಸ್ ಎಲ್ಲರ ಮನೆ ಲ್ಯಾಂಡ್ ಲೈನ್ ನಂಬರ್ ಗಳು ಬಾಯಲ್ಲಿ(ನೆನಪಿನಲ್ಲಿ) ಇರುತ್ತಿದ್ದವು (ನಂಬರ್ ಗಳು ಕೂಡ ಈಗಿನ ಮೊಬೈಲ್ ತರಾ 10 ಡಿಜಿಟ್ ಆಗಿರದೆ ಬಾರೆ ೬ ಡಿಜಿಟ್ಸ್ ಮಾತ್ರ ಇತ್ತು). ಸರಿ ಅಮ್ಮ ಹೊರಗೆ ಕೂತು ಮಧ್ಯಾನದ ಅಡಿಗೆಗೆ ಅಕ್ಕಿ ಆರಿಸ್ತ ಇದ್ದರು, ನಾನು ಅಮ್ಮನ ಜೊತೆ ಅದು-ಇದು ಮಾತಾಡುತ್ತ ಕೂತಿದ್ದೆ. ನಮ್ಮ ಲ್ಯಾಂಡ್ ಲೈನ್ ಫೋನ್ ರಿಂಗ್ ಅಯೀತು. ಹೋಗಿ ನಾನೆ ರಿಸೀವ್ ಮಾಡಿ ‘ಹಲೋ...’ ಅಂದೆ.- ನನ್ನ ಇಂಜಿನಿಯರಿಂಗ್ ಕ್ಲಾಸ್ ಮೆಟ್ ಅಶ್ರೀಥ್ ಪ್ರಾಣೇಶ್ ಆ ಕಡೆ ಲೈನ್ ನಲ್ಲಿ ಇದ್ದ. ಅವನು ‘ಸುಧಾ ಲೇ.. ಫಂಕ್ಷನ್ ಗೆ ಬರ್ತೀಯೋ... ಇಲ್ಲವೋ? ’ ಅಂದ ತಕ್ಷಣ ನೆನಪಾಯಿತು ಇವತ್ತು ಅವನ ಅಕ್ಕ ಹಾಗು ಭಾವ ಮಂಡ್ಯದ ಗುತ್ತಲು ಕಾಲೋನಿಯಲ್ಲಿ ಹೊಸದಾಗೀ ಕಟ್ಟಿದ್ದ ಮನೆ ಗೃಹಪ್ರವೇಶ ಅಂತ. ಒಂದು ವಾರದ ಹಿಂದೆನೇ ಇನ್ವೈಟ್ ಮಾಡಿದ್ದ. ನನಗೆ ಮರೆತು ಹೋಗಿತ್ತು. ನಾನು ‘ಲೋ ನೆನ್ನೆನಾದರು ನೆನಪು ಮಾಡೋದಲ್ಲವಾ?..., ಮಧ್ಯಾನ ಆಗ್ತಾ ಬಂತು... ಏನ್ ಮಾಡ್ಲಿ?’ ಅಂದೆ. ಅವನು ‘ ಲೋ ಮಗ ಮಂಡ್ಯ ಏನ್ ಬರಿ 40 Kms ಮೈಸೂರಿಂದ. ಬಾರಲಾ... ಸಂಜೆ ಬೇಗ ಹೋಗೋವಂತೆ’ ಅಂದ. ನಾನು ಅವನ ಅಕ್ಕನ ಮನೆ ಎಲ್ಲಿ ಬರುತ್ತೇ ಅಂತ ಸರಿಯಾಗೀ ಡಿಟೈಲ್ಸ್ ಕೇಳಿಕೊಂಡು ಫೋನ್ ಇಟ್ಟೆ. ಸರಿ ನಾನು ನನ್ನ ಗಾಡಿ ಹೀರೋ ಪುಚ್ ನಲ್ಲೆ ಹೋಗೋಣ ಅಂತ ಡಿಸೈಡ್ ಮಾಡಿ ಅಮ್ಮನಿಗೆ ಮಂಡ್ಯಗೆ ಫಂಕ್ಷನ್ ಗೆ ಹೋಗಿ ಸಂಜೆ ಒಳಗೆ ಬರ್ತೀನಿ ಅಂತ ಹೇಳಿ ಹೊರಟೆ. ಅಮ್ಮಂಗೆ ಗಾಡಿಲೀ ಹೋಗೋ ವಿಷ್ಯ ಹೇಳಲಿಲ್ಲ. ಯಾವಾಗಲು ಅಷ್ಟೇ ಎಲ್ಲಾದರು ಗಾಡಿಲಿ ಟ್ರಿಪ್ ಹೊರಟರೆ ಬಸ್ಸಲ್ಲಿ ಅಂತ ಸುಳ್ಳು ಹೇಳಿ, ಬಂದ ಮೇಲೆ ನಿಜ ಹೇಳ್ತಾ ಇದ್ದೆ. ಮಧ್ಯಾನ 12.00 ಕ್ಕೆ ಮನೆ ಬಿಟ್ಟು ಯದು ಮನೆ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಯಾಕೋ ನನ್ನ ಮನಸ್ಸು ‘ಯದುನೂ ಕರ್ಕೊಂಡು ಹೋಗು’ ಅಂತ ಹೇಳಿತು. So ಗಾಡಿನ ಅವನ ಮನೆ ಮುಂದೆ ಸ್ಟಾಪ್ ಮಾಡಿ ಯದುನ ಕರೆದು ‘ಮಂಡ್ಯಗೆ ಬರ್ತೀಯಾ?’ ಅಂತ ಕೇಳಿದೆ. ಅವನು ಇವತ್ತು ಸಂಜೇನೆ ವಾಪಸ್ಸು ಬರಬೇಕು ಅನ್ನೋ ಕಂಡಿಷನ್ ಹಾಕಿ, ನಾನು ಅದಕ್ಕೆ ಒಪ್ಪಿದ ಮೇಲೆ ‘ಬರ್ತೀನಿ’ ಅಂತ ಹೇಳಿದ. ಅವನ ಮನೆಯಿಂದ ಹೊರಡೋ ಮುಂಚೆ ಅವನು ಕೂಗಿ ಹೇಳಿದ ‘ಅಮ್ಮ ಇಲ್ಲೇ ಹೋಗ್ಬರ್ತೀನಿ’ ಅಂತ. ನಾನು ತಿರುಗಿ ಅವನ ಮುಖ ನೋಡಿ ‘ಯಾಕಲಾ ಮಂಡ್ಯಗೆ ಹೋಗ್ಬರ್ತೀನಿ ಅಂತ ಹೇಳಲ್ಲವ?’ ಅಂದೆ. ಅದಕ್ಕೆ ಅವನು ‘ಏ... ನಡಿ ಮಗ… ಅವನ್ನೆಲ್ಲ ಹೇಳ್ತಾ ಕೂತ್ಕಳಕ್ಕೆ ಆಗಲ್ಲ…!!!’ಅಂದ.


ಸರಿ ನನ್ನ ಹೀರೋ ಪುಚ್ ನಲ್ಲಿ ನಾನು ಯದು ಮಂಡ್ಯ ಗೆ ಹೊರಟೆವು. ಹೀರೋ ಪುಚ್ ನಲ್ಲಿ ಮ್ಯಾಕ್ಷಿಮಮ್ಮ್ ಸ್ಪೀಡ್ 50-60 Kms ಅಷ್ಟೇ. ಇನ್ನು ಸ್ಪೀಡ್ ಆಗೀ ಓಡ್ಸಿದ್ರೆ ಗಡಿ ಫುಲ್ ಶೇಕ್ ಆಗ್ತಾ ಇತ್ತು. ಮಧ್ಯ ಶ್ರೀರಂಗಪಟ್ಟಣದಲ್ಲಿ ಒಂದು ಪಿಟ್ ಸ್ಟಾಪ್ ಕೊಟ್ಟು ಮಧ್ಯಾನ 1.45 ಕ್ಕೆ ಪ್ರಾಣೇಶ್ ನ ಅಕ್ಕನ ಮನೆ ಹತ್ತಿ ಹೋದೆವು. ಪ್ರಾಣೇಶ ಫುಲ್ ಖುಷಿ ಆಗೀ ‘ಅಂತೂ ಬಂದಲ್ಲ ಮಗ...’ ಅಂದ. ಪ್ರಾಣೇಶ ಅವನ ಮನೆಯವರಿಗೆ ಪರಿಚಯ ಮಾಡಿಸಿ ಒಳ್ಳೆ ಊಟ ಹಾಕಿಸಿದ. ಆಮೇಲೆ ಸುಮಾರೋತ್ತು Exam, ಕಾಲೇಜು, Result ಅಂತೆಲ್ಲಾ ಮಾತಾಡಿ, ನಾನು ಅವನಿಗೆ ‘ಸರಿ ಮಗ ಹೊರಟೆ...’ ಅಂದೆ. ಅವನು ‘ಲೋ ಇವತ್ತು ಇಲ್ಲೇ ಇರೋ ಮಗ...’ ಅಂತ ಹಿಂಸೆ ಮಾಡಲು ಶುರು ಮಾಡಿದ. ಸರಿ ನಾನು ಅವನ ಹಿಂಸೇನ ತಡಿಲಾರದೆ ‘ಇಲ್ಲ ಮಗ ಇಲ್ಲೇ ಮಂಡ್ಯದಿಂದ 10 Kms ದೂರದಲ್ಲಿ ನನ್ನ ದೊಡ್ಡಮ್ಮನ ಊರು ಲೋಕಸರ ಇದೆ, ಅಲ್ಲಿಗೆ ಹೋಗಬೇಕು...’ಅಂತ ಸುಳ್ಳು ಹೇಳಿ ಯದುನ ಕರ್ಕೊಂಡು ಮಂಡ್ಯ ಸಿಟಿ ಹತ್ತಿರ ಬಂದೆ. ಯಾಕೋ ಮನಸ್ಸಿನಲ್ಲಿ ನಿಜವಾಗಲು ಯಾಕೆ ನಾನು ದೊಡ್ಡಮ್ಮನ ಊರಿಗೆ ಹೋಗಬಾರದು ಅಂತ ಅನ್ನಿಸಿತು. ಯದು ಕೇಳಿದರೆ ಅವನು ‘ ಮಗ ನನ್ನ ಮೈಸೂರು ಬಸ್ಗೆ ಹತ್ತಿಸಿ ನೀನು ಒಬ್ಬನೇ ಹೊಗಲ...’ ಅಂತ ಅನ್ನೋಕೆ ಶುರು ಮಡಿದ. ನಾನು ಅದಕ್ಕೆ ‘ಮಗ ಯಾರಿಗದ್ರು ನಮ್ಮ ಫ್ರೆಂಡ್ಸ್ ಗೆ ಕಾಲ್ ಮಾಡಿ ನಿನ್ನ ಮನೆಗೆ ಏನೋ ಎಮರ್ಜೆನ್ಸಿ ಬಂದು ಯದು ಬೆಂಗಳೂರಿಗೆ ಹೋದ... ಅಂತ ತಿಳಿಸೋಕೆ ಹೇಳೋಣ ಬಿಡು....’ ಅಂತ ಹೇಳಿ ಕಷ್ಟ ಪಟ್ಟು ಒಪ್ಪಿಸಿದ್ದಾಯಿತು (ಯದು ಮನೇಲಿ ಲ್ಯಾಂಡ್ ಲೈನ್ ಫೋನ್ ತೆಗೆಸಿಬಿಟ್ಟಿದ್ದರು). ಹಾಗೆ ನಮ್ ಫ್ರೆಂಡ್ ವಿಕ್ಕಿ ಗೆ ಕಾಲ್ ಮಾಡಿ ಯದು ಮನೆಗೆ ವಿಷಯ ತಿಳಿಸಲು ಹೇಳಿದೆನು. ಅಮೇಲೆ ನನ್ನ ಮನೆಯ ಲ್ಯಾಂಡ್ ಲೈನ್ ಗೆ ಕಾಲ್ ಮಾಡಿ ಅಮ್ಮನಿಗೆ ಇವತ್ತು ಲೋಕಸರಕ್ಕೆ ಹೋಗಿ Halt ಅಗೀದ್ದು ನಾಳೆ ಸಂಜೆ ಬರ್ತೀನಿ ಅಂತ ತಿಳಿಸಿದೆ. ನಾನು & ಯದು ಊರಿಗೆ ಸ್ವಲ್ಪ ಲೇಟ್ ಆಗೀ ಹೋಗೋಣ ಅಂತ ಡಿಸೈಡ್ ಮಾಡಿ ಅಲ್ಲೇ ಸ್ವಲ್ಪ ಸುತ್ತಲು ನಿರ್ದರಿಸಿದೆವು. ಆ ರೀತಿ ಮಾಡಲು ಒಂದು ಕಾರಣ ಇತ್ತು. 2004 ರಲ್ಲಿ ನನಗೆ ಮಂಡ್ಯದ ಒಂದು ಹುಡುಗಿ ಮೇಲೆ ಕ್ರಶ್(Crush) ಆಗಿತು!!!. ಅವಳನ್ನು ನೋಡಲು ಸಾಕಷ್ಟು ಬಾರಿ ಮಂಡ್ಯ ಗೆ ಹೋಗಿಬಂದಿದ್ದೆ. So ನಾನು ಯದು ಸುತ್ತುವಾಗ ಅವಳು By chance ಸಿಕ್ಕಿದ್ರೆ! ಅಂತ ಲೇಟ್ ಆಗೀ ಹೊರಡೋಣ ಅಂತ ಯದುಗೆ ಹೇಳಿದೆ. ಮಂಡ್ಯ ಪೇಟೇ ಬೀದಿಲಿ ಯಾವುದೂ ಸ್ಟುಡಿಯೋ ಮುಂದೆ “10 ರೊಪಾಯಿಗೆ 20 ಪಾಸ್ಪೋರ್ಟ್ ಫೋಟೋ” ಅಂತ ಬೋರ್ಡ್ ಹಾಕಿದ್ದರು. ನಾನು ಯದು ಮುಖ ಮುಖ ನೋಡಿಕೊಂಡು ಅಲ್ಲಿ ಅಂಗಡಿಗೆ ಹೋಗಿ ವಿಚಾರಿಸಿದೆವು. ಅಂಗಡಿಯವನು ಈಗ ಫೋಟೋ ತೆಗೆದರೆ ನಾಳೆ ಸಿಗತ್ತೆ ಅಂದ. ಸರಿ ನಾವು ಯಾಕೆ ಟ್ರೈ ಮಾಡಬಾರದು ಅಂತ ಡಿಸೈಡ್ ಮಾಡಿ ಅಲ್ಲೇ ಇದ್ದ ಬೋರ್ ವೆಲ್ ನಲ್ಲಿ ಮುಖ ತೊಳೆದು. ನೀಟ್ ಆಗೀ ತಲೆ ಬಾಚಿ ಫೋಟೋ ಗೆ ಫೋಸು ನೀಡಿ ಅಡ್ವಾನ್ಸ್ ಅಂತ ಇಬ್ಬರಿಂದ ರೂ 10 ನೀಡಿ ಅಲ್ಲಿಂದ ಲೋಕಸರಕ್ಕೆ ಹೊರೆಟೆವು. ಹೊರಟಾಗ ಕತ್ತಲೆಯಾಗಿತ್ತು. ಸಮಯ ರಾತ್ರಿ ಸುಮಾರು 7.15 ಆಗಿತ್ತು. ಮಂಡ್ಯದಿಂದ ಲೋಕಸರಕ್ಕೆ ‘ಮಂಗಲ’ ಎಂಬ ಗ್ರಾಮ ದಾಟಿ ಹೋಗಬೇಕು. ಚಿಕ್ಕ ತಾರು ರಸ್ತೆ. ಎರಡು ಕಡೆ ಕಬ್ಬಿನ ಗದ್ದೆ. ಕಣ್ಣಿಗೆ ಏನು ಕಾಣಿಸದಷ್ಟು ಕಗ್ಗತ್ತಲು. ಒಂದು ಕ್ಷಣ ಯಾಕೋ ನಂಗೂ ಯದುಗೂ ಹೆದರಿಕೆ ಅಯೀತು. ನನಗಂತು ಇಂತ ಟೈಮ್ ನಲ್ಲಿ ಬರಿ ಕೆಟ್ಟ ಯೋಚನೆಗಳೇ ಬರುತ್ತವೆ ‘ಟೈರ್ ಪಂಕ್ಚರ್ ಆದರೆ ಏನ್ ಮಾಡೋದು?...’ ‘ಯಾರದ್ರು ಅಡ್ಡ ಹಾಕಿ ನಮ್ಮತ್ತಿರ ಇರೋದೆಲ್ಲ ಕಿತ್ತುಕೊಂಡು ಹೋದರೆ ಏನ್ ಮಾಡೋದು?...’ ಹಾಗೆ ಹೀಗೆ ಯೋಚನೆ ಮಾಡ್ತಾ ದಾರಿ ಸವೆಸಿ, ಊರಿನ ಮುಂದೆ ಇದ್ದ ಕಾಲುವೆ ಹಾಗು ಸೇತುವೆ ದಾಟಿ ದೊಡ್ಡಮ್ಮನ ಮನೆಗ ಬಂದಾಗ ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯ!. ನಮ್ಮಣ್ಣ ರಾಜೇಶ ‘ಲೋ ಲೋಕು ಏನ್ ಸಡನ್ ಆಗಿ, ಅದು ಇಷ್ಟು ಹೊತ್ತಿನಲ್ಲಿ?!’ ಅಂತ ಕೇಳಿದ. ಉಳಿದವರು ಅಂದ್ರೆ ನನ್ನ ತಂಗಿರು, ನನ್ನ ಅಕ್ಕ, ದೊಡ್ಡಮ್ಮ, ಭಾವ ಕೂಡ ಅದೆ ಪ್ರಶ್ನೆ ಕೇಳೋ ಹಾಗೆ ನೋಡಿದರು. ನಾನು ಅದಕ್ಕೆ ‘ಏನ್ ಇಲ್ಲಾ... ಮಂಡ್ಯದಲ್ಲಿ ಫ್ರೆಂಡ್ ಮನೆ ಗೃಹ ಪ್ರವೇಶ ಇತ್ತು, ಅಲ್ಲಿಂದ ಹೊರಡೋದು ಲೇಟ್ ಅಯೀತು. ಹಾಗೇ ನಿಮ್ಮನೆಲ್ಲಾ ನೋಡಿಕೊಂಡು ಹಾಲ್ಟ್ ಆಗೀ ನಾಳೆ ಹೋಗೋಣ ಅಂದುಕೊಂಡು ಬಂದೆ’ ಅಂತ ಹೇಳಿದೆ. (ಯದುನ 2 ವರ್ಷದ ಹಿಂದೆ ರಾಕಾಸಮ್ಮ ಹಬ್ಬಕ್ಕೆ ಇದೇ ಊರಿಗೆ ಕರೆದುಕೊಂಡು ಬಂದಿದ್ದರಿಂದ ಅವನನ್ನು ಪರಿಚಯ ಮಾಡಿಸುವ ಅವಶ್ಯಕತೆ ಬಿಳಲಿಲ್ಲ).


ಸರಿ ನನ್ನ ಅಕ್ಕ ಸವಿತಾ ಒಳ್ಳೆ ಮುದ್ದೆ & ಹುರಳಿ ಉಪ್ಪಿನ ಸಾರು ಮಾಡಿ ಕೊಟ್ಟಳು. ಅದ್ಬುತವಾಗಿತ್ತು!!! ಊಟ ಮಾಡಿ ಎಲ್ಲರು ಮಲಗಿದರು. ನಾನು ಯದು ಮಲಗಿರುವಾಗ ಅವನು ಇದ್ದಕ್ಕಿದ್ದಂತೇನೆ ‘ಮಗ ಇಲ್ಲಿಂದ ಬೆಂಗಳೂರು ಎಷ್ಟು Kms?’ ಅಂತ ಕೇಳಿದ. ಅದಕ್ಕೆ ನಾನು ‘ಯಾಕೋ ಮಗ...?’ ಅಂದೆ. ಅದಕ್ಕೆ ಅವನು ‘ಬೆಂಗಳೂರಿನ ನಾಗರಬಾವಿಯಲ್ಲಿರೋ ನನ್ನ ಕಸಿನ್ ಅನಿಲ ಒಂದು ಮೊಟರೋಲಾ ಮೊಬೈಲ್ ಸೆಟ್ ಇಟ್ಟುಕೊಂಡಿದ್ದಾನೆ. ಬೆಂಗಳೂರುಗೆ ಬಂದ್ರೆ ಅದನ್ನ ನನಗೆ ಕೊಡ್ತೀನಿ ಅಂತ ಪ್ರಾಮಿಸ್ ಮಾಡಿದ್ದ. ಅದಕ್ಕೆ ಏನ್ ನಾಳೆ ಬೆಂಗಳೂರುಗೆ ಹೋಗಿ ಬಂದುಬಿಡೋಣ?!!!’ ಅಂದ. ನಾನು ಯೋಚನೆ ಮಾಡಿದೆ ಮೈಸೂರ್ ಗೆ ಹೋಗಿ ಮಾಡೋ ಕೆಲಸನಾದರು ಏನು...? ಬೆಂಗಳೂರುಗೆ ಹೋಗಿಬರೋಣ ಅಂತ ಅಂದುಕೊಂಡು ‘ಸರಿ ಮಗ ಹೋಗೋಣ... ಆದರೆ ಬಸ್ ಚಾರ್ಜ್?.... ಒಂದು ಕಡೆಗೆ ಆಗುತ್ತೆ.. ರಿಟರ್ನ್ ಬರೋಕೆ ದುಡ್ಡು ಇಲ್ಲವಲ್ಲ’ಅಂದೆ. ಅದಕ್ಕೆ ಯದು ‘ಲೋ ನನ್ನ ಕಸಿನ್ ಅನಿಲ್ ಕೊಡ್ತಾನೆ ಬಿಡಲಾ...’ಅಂದ. ಸರಿ ರಾತ್ರಿ ಮಲಗೀ ಬೆಳಿಗ್ಗೆ ಬೇಗ ಎದ್ದೆವು. ದೊಡ್ಡಮ್ಮ ಮತ್ತು ನನ್ನ ಅಕ್ಕಂದಿರು ಅಲ್ಲೇ ಊರಿನಲ್ಲಿ ಒಂದು ದಿನ ಊಳಿಯೂಕೆ ಎಷ್ಟು ಹಿಂಸೆ ಮಾಡಿದರು, ಬೆಂಗಳೂರಿನಲ್ಲಿ ಒಂದು Important ಫಂಕ್ಷನ್ ಇದೆ ಅಂತ ಹೇಳಿ ನಾವಿಬ್ಬರು ಬೆಳಿಗ್ಗೆ 6.30ಕ್ಕೆ ಹೊರಟುಬಿಟ್ಟೆವು. ಮಂಡ್ಯಗೆ ಹೋಗಿ ಅಲ್ಲಿ ಬಸ್ ಸ್ಟ್ಯಾಂಡ್ ನಲ್ಲಿ ಗಾಡಿ ಪಾರ್ಕ್ ಮಾಡಿ, ಬಸ್ ಹತ್ತಿ ಬೆಂಗಳೂರುಗೆ ಹೋಗೋಣ ಅಂತ ರಾತ್ರಿ ಪ್ಲಾನ್ ಮಾಡಿದ್ದೇವು. ಮಂಡ್ಯಗೆ ಬರುವಾಗ ‘ಮಂಗಲ’ ದಾಟಿ ಮುಂದೆ ಬಂದರೆ ಅಲ್ಲೇ ‘ಹನಿಯಂಬಾಡಿ’ ಅನ್ನೋ ಇನ್ನೊಂದು ಊರು ಇದೆ. ಅಲ್ಲಿ ಒಂದು ಸ್ಟಾಪ್ ಕೊಟ್ಟು, ಅಲ್ಲೇ ಒಂದು ಶೆಡ್ಡು ಹೋಟೆಲ್ ನಲ್ಲಿ ನಾನು ಯದು ಟೀ ಕುಡಿಯುತ್ತ ನಿಂತೆವು. ಟೀ ಕುಡಿವಾಗ ನಾನು ‘ಮಗ ಏನ್ಲಾ.. ನೆನ್ನೆ ಮಧ್ಯಾನ ದಿಂದ ಸಂಜೆವರೆಗೂ ಮಂಡ್ಯ ಬೀದಿ ಬೀದಿ ಸುತ್ತಿದರು ಅವಳು ಸಿಗಲಿಲ್ಲವಲ್ಲೋ?...’ ಅಂದೆ. ಯದು ಅದಕ್ಕೆ ‘ಬೇಜಾರ್ ಮಾಡ್ಕೋಬೇಡ ಬಿಡು ಮಗ...’ಅಂದ. ನಾನು ‘ಲೋ ಯದು ಯಾಕೊ ನನ್ನ ಮನಸ್ಸು ಹೇಳ್ತಾ ಇದೆ ಅವಳು ಈಗ ಸಿಗ್ತಾಳೆ ಅಂತ’ ಅಂದೆ. ಯದು ತಕ್ಷಣ ‘ಅದು ಹೇಗೆ ಅಷ್ಟು ಗ್ಯಾರೆಂಟಿಯಾಗಿ ಹೇಳ್ತೀಯ ಮಗ?’ ಅಂದ. ‘ಅದನ್ನೇ ಮಗ 6th ಸೆನ್ಸ್ ಅನ್ನೋದು...’ ಅಂತ ನಾನು ಯದುಗೆ ಹೇಳಿದೆ. ಸರಿ ಯದು ಯಾಕೋ ನಾನು ಅವಳನ್ನು ನೋಡದೆ ಬೇಜಾರ್ ಆಗಿರೋದರಿಂದ ಏನ್ ಏನೋ ಮಾತಾಡುತ್ತಾ ಇದ್ದೀನಿ ಅನ್ಕೋಕೊಂಡ ಅನ್ನಿಸುತ್ತದೆ. ಟೀ ಕುಡಿದ ಮೇಲೆ ಅಲ್ಲಿಂದ ಹೊರಟೆವು. ಗಾಡಿಯನ್ನು ಯದು ಓಡಿಸ್ತಾ ಇದ್ದ. ನಮ್ ಗಾಡಿ ಹೊಸಳ್ಳಿ ಬಿಟ್ಟು ಮಂಡ್ಯ ಎಂಟರ್ ಆಗಬೇಕು.ನಾನು ಇವತ್ತಿನವರೆಗೂ ಆಶ್ಚರ್ಯಪಡೋ ಅಂತ ಒಂದು ಸನ್ನಿವೇಶ ನಡೆದುಹೋಯಿತು. ಯದು ಗಾಡಿ ಓಡಿಸ್ತಾ ಇದ್ದ. ನಾನು ಮುಂದೆ ರೋಡ್ ನೋಡ್ತಾ ಇದ್ದೆ, ಇದ್ದಕಿದ್ದಂತೆ ಒಂದು 400 ರಿಂದ 500 ಮೀಟರ್ ದೂರದಲ್ಲಿ ಅವಳ ಗಾಡಿ ಕಾಣಿಸಿತು. ನನಗೆ ಆ ಕ್ಷಣ ‘ಶಾಕ್ ಆಫ್ ದಿ ಲೈಫ್’ ಅಯೀತು. ಇದೇನು ನನ್ನ ಭ್ರೆಮೆಯೇ ಅಂತ ಡೌಟ್ ಆಗೀ ಸರಿಯಾಗೀ ಇನ್ನೊಮ್ಮೆ ಕಣ್ಣು ಅರಳಿಸಿ ನೋಡಿದೆ. ಡೌಟೆ ಇಲ್ಲ. ಅವಳೇ!!! ಆದರೆ ಅವಳ ಹಿಂದ ಯಾರೋ ಕೂತಿದ್ದರು. ಸರಿ ತಕ್ಷಣ ಯದುಗೆ ‘ಮಗ ಸ್ವಲ್ಪ ಗಾಡಿ ನಿಲ್ಲಿಸೋ..’ ಅಂದೆ. ಯದು ‘ಯಾಕ್ ಮಗ?...ಏನಾದರು ಬಿದ್ದು ಹೊಯೀತಾ?’ ಅಂತ ಕೇಳಿದ. ನಾನು ‘ಲೋ ಫಸ್ಟ್ ಗಾಡಿ ನಿಲ್ಲಿಸೋ... ಅವಳು ನಮ್ಮ ಮುಂದೆನೆ ಬರ್ತಾ ಇದ್ದಾಳೆ…’ ಅಂದೆ. ಯದು ತಕ್ಷಣ ಗಾಡಿನಾ ಸೈಡ್ ಗೆ ಹಾಕಿ ‘ಏನ್ ಮಗ ತಮಾಷೆ ಮಾಡ್ತಾ ಇದ್ದೀಯ?... ಎಲ್ಲಿ ಅವಳು ತೋರಿಸು?’ ಅಂದ. ಅಷ್ಟರಲ್ಲಿ ಅವಳು ಮಂಡ್ಯದ ಮೇನ್ ರೋಡ್ ಗೆ ಜಾಯಿನ್ ಆಗೀ ಬಿಟ್ಟಳು. ಸರಿ ನಾನು ಯದುಗೆ ‘ ಮಗ ಜಸ್ಟ್ ಪಾಸ್ ಅದಳು ಕಣ್ಲ… ಅವಳ ಹಿಂದೆ ಯಾರೋ ಕೂತಿದ್ದರು… ಎಲ್ಲೊ ಏನೋ ತರೋದಿಕ್ಕೆ ಹೋಗಿರಬಹುದು, ಒಂದು ಕೆಲಸ ಮಾಡಣ... ಮುಂದೆ ಯಾವುದಾದ್ರು ಟೀ ಅಂಗಡಿಲೀ ಟೀ ಕುಡಿತಾ ನಿಲ್ಲೋಣ... ವಾಪಸ್ಸು ಇದೇ ದಾರಿಲಿ ಬರಬಹುದು’ ಅಂತ ಹೇಳಿದೆ. ನಂತರ ಇಬ್ಬರು ಟೀ ಅಂಗಡಿಗೆ ಹೋಗಿ ಸ್ಪೆಷಲ್ ಟೀಗೆ ಆರ್ಡರ್ ಮಾಡಿ ನಿಂತೆವು. ಸರಿಯಾಗೀ 15 ನಿಮಿಷ ಬಿಟ್ಟು ಅವಳು ವಾಪಸ್ಸು ಅದೇ ದಾರಿಲೀ ಬಂದಳು. ನಾನು ಅವಳು ನನ್ನ ಗಮನಿಸಲೀ ಅಂತ ಅಂಗಡಿಯಿಂದ ಹೊರಗೆ ನಿಂತಿದ್ದೆ. ಬಟ್ ಅವಳು ನನ್ನ ನೋಡದೆ ಹಾಗೆ ಪಾಸ್ ಆಗ್ತಾ ಇದ್ದಳು. ನಾನು ಕೂಡಲೆ ‘ರೀ……….’ ಅಂದೆ. ಸಧ್ಯ ತಿರುಗಿ ನೋಡಿದಳು!. ಒಂದು ಕ್ಷಣ ಅವಳ ಮುಖದಲ್ಲಿ ಫುಲ್ ಗಾಬರಿ & ಶಾಕಿಂಗ್ Expression!!!. ಗಾಡಿ ‘U’ Turn ಮಾಡಿ ಹತಿರ ಬಂದಳು ‘ಏನ್ರೀ ನೀವು...? ಇಷ್ಟು ಬೆಳಗ್ಗೆ.... ಅದು ನಮ್ಮೂರಲ್ಲಿ?...’ ಅಂತ ಕೇಳಿದಳು. ನಾನು ‘ಏನಿಲ್ಲ ರೀ... ನಮ್ಮ ಊರು ಇಲ್ಲೇ 10 Kms ದೂರದಲ್ಲಿದೆ. ಒಂದು ಫಂಕ್ಷನ್ ಇತ್ತು ಮುಗಿಸಿ ಈಗ ಬಂದೆ. ಬೆಂಗಳೂರುಗೆ ಹೋಗಬೇಕಿತ್ತು. ಹಾಗೆ ಇಲ್ಲೇ ನಾನು, ಯದು ಟೀ ಕುಡಿತಾ ನಿಂತೆವು ಮತ್ತೆ ಇವನು ನನ್ನ ಫ್ರೆಂಡ್ ಯದು ಡಿಪ್ಲೋಮೋ ಮಾಡ್ತಾ ಇದ್ದಾನೆ’ ಅಂತ ಯದುನಾ ಪರಿಚಯ ಮಾಡಿಸಿದೆ. ಪುನಃ ‘ನೀವು ಎಲ್ಲಿ ಗೆ ಹೋಗಿದ್ದರಿ ಇಷ್ಟು ಬೆಳಗ್ಗೆನೆ?’ ಅಂದೆ. ಅವಳು ಅದಕ್ಕೆ ‘ನನ್ನ ಕಸಿನ್ ಬೆಂಗಳೂರಿಂದ ಬಂದಿದ್ದ. ವಾಪಸ್ಸು ಹೋಗ್ತಾ ಇದ್ದ. So ರೈಲ್ವೆ ಸ್ಟೇಷನ್ ಗೆ ಡ್ರಾಪ್ ಮಾಡಲು ಹೋಗಿದ್ದೆ. ರೀ ಮನೆಗೆ ಬನ್ರಿ ಅಮ್ಮನ್ನ ಪರಿಚಯ ಮಾಡಿಸ್ತೀನಿ... ತಿಂಡಿ ತಿಂದು ಹೋಗುವಿರಂತೆ’ ಅಂದಳು. ನಾನು ‘ನಿನ್ನ ನೋಡಿದ್ದೇ ಸಾಕಮ್ಮ... ಫುಲ್ ಖುಷಿ ಆಗಿಬಿಟ್ಟಿದ್ದಿನಿ...ಸಾಕು’ ಅಂತ ಮನಸಲ್ಲಿ ಅಂದುಕೊಂಡು ‘ಇಲ್ಲ ಬಿಡ್ರಿ ಇನ್ನೊಮ್ಮೆ ಬರ್ತೀನಿ. ಸ್ವಲ್ಪ ಅರ್ಜೆಂಟ್ ಆಗೀ ಬೆಂಗಳೂರುಗೆ ಹೋಗ್ಬೇಕು ಯದು ಮೊಬೈಲ್ Purchase ಮಾಡಬೇಕಂತೆ’ ಅಂದೆ ಅವಳು ‘ಹೌದ?... ಮೊಬೈಲಾ.....?’ ಅಂದಳು. 2004 ರಲ್ಲಿ ಹಾಗಿತ್ತು ಮೊಬೈಲ್ purchase ಮಾಡೋದು, ಇಟ್ಟುಕೊಳ್ಳೋದು ಅಂದ್ರೆ ದೊಡ್ಡ ವಿಷಯನೆ. ಸರಿ ಅವಳಿಗೆ ಬೈ ಹೇಳಿ ನಾನು ಮತ್ತೆ ಯದು ಬಸ್ ಸ್ಟ್ಯಾಂಡ್ ಗೆ ಬಂದು ಗಾಡಿ ನಿಲ್ಲಿಸಿ ಬೆಂಗಳೂರ್ ಬಸ್ ಹತ್ತಿದವು. ಮಧ್ಯಾನ 1 ಗಂಟೆ ಮಜೆಸ್ಟಿಕ್ ರೀಚ್ ಆದೆವು. ಯದು ಅವನ ಕಸಿನ್ ಗೆ ಫೋನ್ ಮಾಡಿದ. ಅವನು ನಮಗೆ ವಿಜಯನಗರ್ ಗೆ ಬರಲು ಹೇಳಿ ನಮ್ಮನು ಅಲ್ಲಿ ಪಿಕ್ ಮಾಡುವುದಾಗಿ ತಿಳಿಸಿದ. ಸರಿ ವಿಜಯನಗರಕ್ಕೆ ಹೋದೆವು. ಅವನು ಕೂಡ ಬಂದು ಪಿಕ್ ಮಾಡಿದ. ನಾಗರಬಾವಿಯಲ್ಲಿರೋ ಅವನ ಮನೆಗೆ ಕರೆದುಕೊಂಡು ಹೋದ. ಯದು ಕಸಿನ್ ಅನಿಲನ ತಾಯೀ ಒಳ್ಳೆ ಅಡಿಗೆ ಮಾಡಿದ್ದರು. ಹೊಟ್ಟೆ ತುಂಬಾ ಊಟ ಮಾಡಿ ರೆಸ್ಟ್ ಮಾಡಲು ಅವರ ಮನೆಯ ಫಸ್ಟ್ ಫ್ಲೋರ್ ನಲ್ಲಿದ್ದ ಅನಿಲನ ರೂಮಿಗೆ ಹೋದೆವು. ಅನಿಲ ಒಂದು ಕವರ್ ತಂದು ಅದರಲ್ಲಿದ್ದ ಮೊಬೈಲ್ ಹೊರಗೆ ತೆಗೆದ. ಅದು ಒಂದು ಚಿಕ್ಕ ಓವೆಲ್ ಶೇಪ್ ನಲ್ಲಿದ್ದ ಬಿಳಿ ಮೋಟರೋಲ c 200 ಸೆಟ್. ತೆಗೆದ ಮೊಬೈಲ್ ನನ್ನು ಯದು ಗೆ ಕೊಟ್ಟು ಅನಿಲ ‘ಯದು ಸೆಟ್ ತಂದು ಒಂದು ತಿಂಗಳಾಗಿತ್ತು, ನನ್ನ ಫ್ರೆಂಡ್ ಒಬ್ಬ use ಮಾಡ್ತಾ ಇದ್ದ. Spice sim ಇದೆ. ನೋಡಪ್ಪ ನಿಂಗೆ ಪ್ರಾಮಿಸ್ ಮಾಡಿದ ಹಾಗೆ ಸೆಟ್ ಕೊಡ್ತಾ ಇದ್ದೀನಿ... ತಗೋ..’ ಅಂದ.

ನಾನು ಯದು ಮುಖ ನೋಡಿದೆ ಫುಲ್ ಖುಷಿ & ವಿವರಿಸಲಾಗದ ಆನಂದದಲ್ಲಿದ್ದ… ಯದು ಒಂದೆರೆಡು ನಿಮಿಷ ಮೊಬೈಲ್ ನೋಡಿ ಅದನ್ನ ನನ್ನ ಕೈಗೆ ಕೊಟ್ಟ. ನನಗೂ ತುಂಬಾ ಸಂತೋಷ ಆಯಿತು ಯಾಕಂದ್ರೆ ನಾನು ನನ್ನ ಕೈಯಲ್ಲಿ ಹಿಡಿದಿದ್ದು ನಮ್ ಗ್ಯಾಂಗ್ ಹುಡುಗರ 1st ಮೊಬೈಲ್ ಅನ್ನ. ಸರಿ ಸ್ವಲ್ಪ ಹೊತ್ತು ಬಿಟ್ಟು ಯದು & ನಾನು ಅನಿಲನಿಗೆ ನಾವು ಇನ್ನು ಮೈಸೂರ್ ಗೆ ಹೋಗಬೇಕು ಅಂತ ಹೇಳಿ ಹೊರಟೆವು. ನಾನು ಯದು ಗೆ ಏನೋ ಸಿಗ್ನಲ್ ಕೊಡ್ತಾ ಇದ್ದೆ ಅನಿಲ ‘ಏನ್ ಸುಧಾಕರ ಅದು?’ ಅಂದ. ನಾನು ಏನು ಹೇಳಲಿಲ್ಲ. ಯದು ಕೂಡಲೆ ‘ಲೋ ಅನಿಲ ನಾವು ತಂದ ದುಡ್ಡೆಲ್ಲ ಖರ್ಚಾಯೀತು. ಈಗ ಬಸ್ ಚಾರ್ಜ್ ಗೆ ಸ್ವಲ್ಪ ದುಡ್ಡು ಕೊಡೂ’ ಅಂದ. ‘ಓಹ್ಹ್ ’ ಅಂತ ಹೇಳಿ ಅನಿಲ 150 ರುಪಾಯಿಯನ್ನು ಯದುಗೆ ಕೊಟ್ಟ. ಸರಿ ಅಲ್ಲಿಂದ ಅನಿಲನಿಗೆ ಬೈ ಹೇಳಿ ನಾನು ಯದು ಮಜೆಸ್ಟಿಕ್ ಗೆ ಬಂದೆವು. ಅಲ್ಲಿ ಮಂಡ್ಯ ಬಸ್ ಗೆ ಕಾಯುತ್ತಿದಾಗ ನಾನು ‘ಮಗ ಅನಿಲ ಬರೆದುಕೊಟ್ಟ ನಿನ್ ಮೊಬೈಲ್ ನಂಬರ್ ನ ಅಲ್ಲಿರೋ ಕಾಯಿನ್ ಬಾಕ್ಸ್ ನಲ್ಲಿ ಡೈಯಲ್ ಮಾಡ್ಲ...’ ಅಂತ ಹೇಳಿ ಜೋಬಿಂದ 1 Rupee ಕಾಯಿನ್ ಕೊಟ್ಟೆ. ಯದು ಮೊಬೈಲ್ ನನ್ನ ಕೈಲೀ ಕೊಟ್ಟು ಹೋಗಿ ನಂಬರ್ ಡೈಯಲ್ ಮಾಡಿದ. ಇಲ್ಲಿ ನನ್ನ ಕೈನಲ್ಲಿ ಮೊಬೈಲ್ ರಿಂಗ್ ಅಯೀತು. ನನಗೆ ರಿಸೀವ್ ಮಾಡೋ ಬಟ್ಟನ್ ಯಾವುದು ಅಂತ ಒಂದು ಕ್ಷಣ ಕನ್ಫ್ಯೂಸ್ ಅಯೀತು. ಗ್ರೀನ್ ಕಾಲರ್ ಬ್ಯಾಕ್ ಗ್ರೌಂಡ್ ನಲ್ಲಿ ಫೋನ್ ಸಿಂಬಲ್ ಇದ್ದ ಬಟ್ಟನ್ ಒತ್ತಿ ‘ಹಲೋ’ ಅಂದೆ. ಮೊಬೈಲ್ ನಲ್ಲಿ ಯದು ವಾಯ್ಸ್ ಕೇಳಿತು ‘ಎನಲಾ ಮಗ? ನನ್ನ ವಾಯ್ಸ್ ಕೇಳ್ತಾ ಇದ್ದೀಯ?... ನಿಂದು ಕೇಳ್ತಾ ಇದೆ...’ ಅಂದ ನಾನು ‘ಹ್ಞೂ ಕಾಣಲ...’ ಅಂತ ಹೇಳಿ, ಯಾರಾರು ನನ್ನನ ನೋಡ್ತಾ ಇದ್ದರಾ ಅಂತ ಸುತ್ತ ನೋಡಿದೆ. ಯದು ಕಾಲ್ ಕಟ್ ಮಾಡಿ ಬಂದ. ನನಗಂತೂ ಒಂದು ಕಾಲ್ಗಂಟೆ ಮೊಬೈಲ್ ಓನರ್ ಯದುಗಿಂತ ಖುಷಿ ಆಗಿತ್ತು. ಸರಿ ಅಮೇಲೆ ಮಂಡ್ಯ ಬಸ್ ಕ್ಯಾಚ್ ಮಾಡಿ ಮಂಡ್ಯ ರೀಚ್ ಆದಾಗ ಸಂಜೆ 6.30 ಆಗಿತ್ತು. ಇನ್ನೇನು ಮಂಡ್ಯ ಸ್ಟ್ಯಾಂಡ್ದಿಂದ ನಮ್ ಗಾಡಿ ತಗೊಂಡು ಹೋರಾಡಬೇಕು ಅನ್ನುವಷ್ಟರಲ್ಲಿ ಯದು ‘ಮಗ.... ಫೋಟೋ...?’ ಅಂದ. ನಾನು ಗಾಡಿಯನ್ನು ಮಂಡ್ಯದ ಪೇಟೆ ಬೀದಿಗೆ ತಿರುಗಿಸಿದೆ. ಅಲ್ಲಿ ಹೋಗಿ ನಮ್ಮ ಫೋಟೋನ ಕಲೆಕ್ಟ್ ಮಾಡಿದೆವು. ಫೋಟೋಗಳು ಚೆನ್ನಾಗಿ ಬಂದಿರಲಿಲ್ಲ. ಅವನು ಕ್ಯಾಮೆರನಾ ಟ್ರೈಪೋಡ್ ಸ್ಟ್ಯಾಂಡ್ ನಲ್ಲಿ ಇಟ್ಟು ಕ್ಲಿಕ್ ಮಾಡದೆ ಹಾಗೆ ಕೈನಲ್ಲೇ ಅವನ ಕತ್ತಿನ ಹತ್ತಿರ ಇಟ್ಟಿಕೊಂಡು, Display ನೋಡುತ್ತಾ ಕ್ಲಿಕ್ ಮಾಡಿದ್ದ. ನಾವು ಗಳು ಕೂಡ ಕ್ಯಾಮೆರಾ ಲೆನ್ಸ್ ನೋಡದೆ ಪೆದ್ದು ಪೆದ್ದಾಗೆ ಅವನ ಕಣ್ಣನ್ನು ನೋಡ್ತಾ ಇದ್ದೆವು ಅನ್ಸುತ್ತೆ. ನಮ್ಮ ಕಣ್ಣು ಗಳು ಫೋಟೋದಲ್ಲಿ ಆಕಾಶವನ್ನು ನೋಡುತ್ತಾ ಇದ್ದ ಹಾಗೆ ಇತ್ತು. ನನಗೆ ಆ Momentನಲ್ಲಿ ಯಾವಾಗಲು ನನ್ನ ಅಮ್ಮ ಹೇಳುತ್ತಿದ್ದ ‘ ಕಾಸಿಗೆ ತಕ್ಕ ಹಾಗೆ ಕಜ್ಜಾಯ...’ ಅನ್ನೋ ಗಾದೆ ಮಾತು ನೆನಪಿಗೆ ಬಂತು. ಟೈಮ್ ಬೇರೆ ಆಗ್ತಾ ಇತ್ತು ಸರಿ ಅಲ್ಲಿಂದ ಸೀದಾ ಮೈಸೂರ್ ಗೆ ಹೊರೆಟೆವು. ನಿಧಾನವಾಗಿ ಓಡಿಸ್ಕೊಂಡು ಪಟ್ನದಲ್ಲಿ ಒಂದು ಸ್ಟಾಪ್ ಕೊಟ್ಟು ಟೀ ಕುಡಿದು, ಮೈಸೂರ್ ರೀಚ್ ಆಗೀ ಕುವೆಂಪು ನಗರ್ ಕಾಂಪ್ಲೆಕ್ಸ್ ಹತ್ತಿರ ಬಂದಾಗ ಟೈಮ್ ರಾತ್ರಿ 8.40 ಆಗಿತ್ತು. ಯದು ‘ಇಲ್ಲೇ ನಿಲ್ಲಿಸು ಮಗ... ಮನೆವರೆಗೂ ಡ್ರಾಪ್ ಬೇಡ’ ಅಂದ. ನಾನು ‘ಯಾಕಲಾ?...’ ಅಂದೆ. ಯದು ಅದಿಕ್ಕೆ ‘ಲೋ ನೀನು ಬಂದರೆ ನನ್ನ ಜೊತೆ ನಿನ್ನನ್ನು ಸೇರಿಸಿ ಉಗಿತಾರ. ಏನ್ ಇಲ್ಲೇ ಎಲ್ಲೊ ಹೋಗಿ ಬರ್ತೀನಿ ಅಂತ ಹೇಳಿ 2 ದಿನ ಆಮೇಲೆ ಬರ್ತಾ ಇದ್ದಿರಲ್ಲ ಅಂತ !... ಹೇಗೋ ಒಬ್ಬನೇ ಮ್ಯಾನೇಜ್ ಮಾಡ್ತೀನಿ ನೀನು ಒಂದೆರೆಡು ದಿನ ಮನೆ ಹತ್ತಿರ ಬರಬೇಡ’ ಅಂದ. ಸರಿ ನಾನು ಯದುಗೆ ಬೈ ಹೇಳಿ ಮನೆಗೆ ಬಂದು ಸೇರಿದೆ. ಫುಲ್ ಸುಸ್ತಾಗಿತ್ತು 2 ದಿನ ನನ್ನ ಹೀರೋ ಪುಚ್ ನಲ್ಲಿ ಅಷ್ಟೆಲ್ಲಾ ಸುತ್ತಾಡಿದು ನನಗೇನೇ ಆಶ್ಚರ್ಯ ಆಗಿತ್ತು. ಯದುಯಿಂದ ಅವನ ಮೊಬೈಲ್ ನಂಬರ್ ತಗೊಂಡಿದ್ದನಲ್ಲಾ, ರಾತ್ರಿ ಮಲಗೋ ಮುಂಚೆ ಅವನ ಮೊಬೈಲ್ ಗೆ ನಮ್ಮನೆ ಲ್ಯಾಂಡ್ ಲೈನ್ ನಿಂದ ಒಂದು ಮಿಸ್ ಕಾಲ್ ಕೊಟ್ಟು ಮಲಗಿದೆ. ಇವತ್ತಿಗೂ ಅಷ್ಟೇ Coincidence & 6th sense ಇವುಗಳ ವಿಷಯವಾಗಲೀ ಅಥವಾ 1st ಟೈಮ್ ಮೊಬೈಲ್ ನಲ್ಲಿ ಮಾತಾಡಿದ ಅನುಭವದ ವಿಷಯಗಳ ಚರ್ಚೆ ಬಂದರೆ ಅವತ್ತಿನ ಯದು ಜೊತೆಗಿನ ಆ ಅನುಭವಗಳು ತಕ್ಷಣ ನೆನಪಾಗ್ತವೆ.


3 comments:

  1. lo magne, U r superbbbbbbbbbb. am so impressed. no words to say about it.sequence, wordings,photos,local langauge are so mind blowing.i didn`t expected this.keep it up maga.

    ReplyDelete
  2. 2021 ford escape titanium hybrid - Tioga
    The 신규 바카라 사이트 latest entry in the Tioga Ridge, TOTO has gold titanium alloy the new entry into is titanium expensive the Tioga Ridge hybrid titanium chopsticks design with the newly added TOTO “Interactive titanium chloride Elements

    ReplyDelete