Thursday, April 28, 2011

ಟ್ರ್ಯಾಫಿಕ್ ಜಾಮ್ ಆಗಿದೆ ‘ಒಂದು ಬೀಡಿನಾದರು ಇದ್ರೆ ಕೊಡಿ ಸಾವ್ಕಾರೇ…’

ಟ್ರ್ಯಾಫಿಕ್ ಜಾಮ್ ಅಂದ್ರೆ ಯಾರಿಗೆ ತಾನೆ ಇಷ್ಟ ಹೇಳಿ? ಇವತ್ತು ಬೆಂಗಳೂರಿನಲ್ಲಿ ಈ ಟ್ರ್ಯಾಫಿಕ್ ಜಾಮ್ ಅತಿ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ. ಗಾರ್ಡನ್ ಸಿಟಿ, ಇಂಡಿಯನ್ ಸಿಲಿಕಾನ್ ಸಿಟಿ ಎಂದೆಲ್ಲ ಕರೆಸಿಕೊಳ್ಳುತ್ತಿದ್ದ ಬೆಂಗಳೂರು ಇಂದು ಟ್ರ್ಯಾಫಿಕ್ ಸಿಟಿ ಆಗಿದೆ. ಹೆವಿ ಬ್ಯುಸಿ ರೋಡ್ ನ ಸಿಗ್ನಲ್ ಲೈಟ್ ಲ್ಲಿ ಸ್ವಲ್ಪ ಹಿಂದೆ ಸಿಕ್ಕಿ ಬಿದ್ದರೆ ಸಿಗ್ನಲ್ ದಾಟಿ ಹೂಗಲಿಕೆ ೩-೪ ಟರ್ನ್ ಹಸಿರು ದೀಪ ಬರಬೇಕು. ಆ ಕರ್ಕಶ ಹಾರ್ನ್ ಸದ್ದು, ವೆಹಿಕಲ್ ಇಂಜಿನ್ ಸೌಂಡ್, ಪೆಟ್ರೋಲ್ ನ ಹೊಗೆ(ಸೀಮೆಎಣ್ಣೆ ಮಿಶ್ರಿತ !?), ಡೀಸಲ್ ನ ಹೊಗೆ ಇವೆಲ್ಲಾರ ಜೊತೆಗೆ ಸರಿಯಾಗಿ ಜಳಪಿಸುವ ಬಿಸಿಲಿದ್ದರಂತು ಮುಗೀತು ಟ್ರ್ಯಾಫಿಕ್ ಜಾಮ್ ಅನ್ನೋದು ನರಕಕ್ಕೆ ಸಮಾನ.


ಆದರೆ ಮರೆಯಲಿಕೆ ಆಗದೆ ಇರೋ ಒಂದು ಟ್ರ್ಯಾಫಿಕ್ ಜಾಮ್ ಅನ್ನು ನಾನು ನನ್ನ ಲೈಫ್ ನ ನೆನಪಿನ ಪುಟಗಳಲ್ಲಿ ಇನ್ನು ಹಸಿರಾಗಿಸಿಕೊಂಡಿದ್ದೇನೆ. ಫ್ರೆಂಡ್ಸ್ ಜೊತೆ ಯಾವಾಗಲಾದರೂ ಮಾತಾಡುವಾಗ ದೇವರು ಬಂದು ‘ನಿನಗೆ ಯಾವ ಟೈಮ್ ಗೆ ಬೇಕೋ ಆ ಟೈಮ್ ಗೆ ನಿನ್ನ ವಾಪಸ್ಸು ಕಳಿಸುತ್ತೇನೆ.. (ಟೈಮ್ ಮಷಿನ್ Concept) ಕೇಳು’ ಅಂದ್ರೆ, ನಾನು ಲೋಕದೀಪ್, ಪ್ರವೀಣ್ ಬಹುಶಃ ಮೇ 2007 ರ ಎರಡನೇ ವಾರದ ಒಂದು ರಾತ್ರಿ ಸಕಲೇಶಪುರ ಹಾಗು ಬಿ ಸಿ ರೋಡ್ ನಡುವೆ ಬರೋ ಶಿರಾಡಿ ಘಟ್ ನಲ್ಲಿ ಆವತ್ತು 5-6 ಕಿಲೋಮೀಟರು ಟ್ರ್ಯಾಫಿಕ್ ಜಾಮ್ ಆದ ಟೈಮ್ ಗೆ ಕರೆದುಕೊಂಡು ಹೋಗಪ್ಪ ಅಂತ ಕೇಳುತ್ತಿವೇನೋ. ಮನುಷ್ಯ ಸೃಷ್ಟಿಸಲಾಗದ ಎಷ್ಟೋ ವಸ್ತು, ವಿಷಯಗಳಲ್ಲಿ ಟ್ರ್ಯಾಫಿಕ್ ಜಾಮ್ ಕೂಡಾ ಒಂದು ಅನ್ನೋದು ನನ್ನ ವಾದ. ಟ್ರ್ಯಾಫಿಕ್ ಜಾಮ್ ಗೆ ನನ್ನ ಪ್ರಕಾರ ಬೇಕಾಗಿರೋ ಮೂರು ಕನಿಷ್ಟ factors ಯಾವುದೆಂದರೆ 1) ಮನುಷ್ಯ ಹಾಗು ಅವನ ಗಾಡಿ 2) ಟೈಮ್ ಕೋಆರ್ಡಿನೇಷನ್ ಅಲಾಂಗ್ ವಿಥ್ ನ್ಯಾಚರಲ್ ಅಬಸ್ಟ್ಕಾಲ್ಸ್ (ನೈಸರ್ಗಿಕ ವಿಕೋಪದ ಜೊತೆ ಸಮಯದ ಹೊಂದಣಿಕೆ ) 3)ಕಡೇದಾಗಿ ನಮ್ಮ ಜನರ ಪೆದ್ದುತನ, ಟ್ರ್ಯಾಫಿಕ್ ರೂಲ್ಸ್ ಬಗ್ಗೆ ಅಸಡ್ಡ ಹಾಗು ಆತರ. ಇವೆಲ್ಲ ಸರಿಯಾಗಿ- ಸೇರಿಬಿಟ್ಟ್ರೆ ಅದ್ಭುತ ಟ್ರ್ಯಾಫಿಕ್ ಜಾಮ್ ಸೃಷ್ಟಯಾಗಿಬಿಡುತ್ತೆ. ಅಂತಹುದೇ ಟ್ರ್ಯಾಫಿಕ್ ಜಾಮ್ ಒಂದು ನಮ್ಮ ಸುದೈವದಿಂದಲೇನೋ ಅವತ್ತು ಪ್ರವೀಣನ ಅಕ್ಕನ ಮದುವೆ ಮುಗಿಸಿ ಬರುವಾಗ ನಮಗೆ ಎದುರಾಗಿತ್ತು. ಪ್ರವೀಣ್ ಅಕ್ಕ ಪ್ರಶಾಂತಿ ಮದುವೆ ಫಿಕ್ಸ್ ಆಗೀ ಅವರ ಎಂಗೇಜ್ಮೆಂಟ್ ಗೆ ನನ್ನ ರೇಂಜರ್ ರಜೆ ಕೊಡದ ಕಾರಣೆ ಆ ಫಂಕ್ಷನ್ಗೆ ಮಿಸ್ ಆಗಿದ್ದೆ. ಆಸ್ ಯ್ಯುಶುವಲ್ ಪ್ರವೀಣ್ ಮನೆ ಫಂಕ್ಷನ್ಗೆ ಯಾವಾಗಲು ರಾಜನ್ ರವರ ಮಾರುತಿ ಒಮ್ನಿ ಇರಲೇ ಬೇಕು.


ಈ ರಾಜನ್ ಪ್ರವೀಣ್ ನಂತೆ ಬ್ಯಾಟರಿ ಬಿಸಿನೆಸ್ ಫೀಲ್ಡ್ ನಲ್ಲಿ ಇರೋನು. ಎಂಗೇಜ್ಮೆಂಟ್ ಗೆ ಯದು,ದೀಪು,ಅಮಿತ್,ಪ್ರವೀಣ್ & ರಾಜನ್ ಇವರು ಹೋಗಿದ್ದರು ಬಟ್ ಮದುವೆಗೆ ಯದು ಬರಲು ಆಗಲಿಲ್ಲ So as ಪ್ಲಾನ್ ನಾನು ಜೋಯಿನ್ ಆದೆ. ಮದುವೆ ಹಿಂದಿನ ದಿನ ಮಂಗಳೂರಿಗೆ ಹೋಗಿ ಹಾಲ್ಟ್ ಆಗೀ ಮಾರನೆದಿನ ಮದುವೆ ಎಲ್ಲಾ ಮುಗಿಸಿ ನೈಟ್ ರಿಸಿಪ್ಶ್ನ್ ಇತ್ತು ಅದನ್ನು ಸಹ ಮುಗಿಸಿ ರಾತ್ರಿ 10.00 ಗಂಟೆಗೆ ಮಂಗಳೂರಿನಿಂದ ಮೈಸೂರ್ ಗೆ ಹೊರಡಬೇಕಿತ್ತು. ಆಗೀನು ದೀಪು ನಿಶಾಳನ್ನು ಮದುವೆ ಆಗಿರಲಿಲ್ಲ. ಪ್ರವೀಣ್ ಅಕ್ಕ ಪ್ರಶಾಂತಿ ಹಾಗು ದೀಪು ಹೆಂಡತಿ ನಿಶಾ ಇಬ್ಬರು ಕಾಲೇಜ್ ಫ್ರೆಂಡ್ಸ್ so ಪ್ರಶಾಂತಿ ಮದುವೆ ಆದಕೂಡಲೇ ಆಸ್ ಯ್ಯುಶುವಲ್ ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವ ಹಾಗೆ ನಿಶಾಳಿಗೂ ತನ್ನ ಫ್ರೆಂಡ್ಸ್ ಎಲ್ಲಾ ಮದುವೆ ಆದರು ಇನ್ನು ನನ್ನ ಮದುವೆ ಆಗಿಲ್ಲ ಅಂತ ಸ್ವಲ್ಪ ಬೇಸರ ಆಗೀ ಅವತ್ತು ದೀಪುಗೆ ಫೋನ್ ನಲ್ಲಿ ಸ್ವಲ್ಪ ರಾಷ ಆಗೀ ಮಾತಾಡಿದ್ದಾಳೆ. ದೀಪು ಫುಲ್ ಮೂಡ್ ಔಟ್ & ಅಪ್ಸೆಟ್ಟ್. ಅಮಿತನನ್ನು ಕೇಳಲೆ ಬೇಕಿಲ್ಲ ಯಾವಾಗಲು ನ್ಯೂಟ್ರಲ್. ಖುಷಿ ದುಃಖ ಎಲ್ಲದಕ್ಕೂ ಒಂದೇ ತರ ರೆಸ್ಪಾನ್ಸ್ . ಟೀಂನಲ್ಲಿ ಯಾರಿಗೂ ಅಮಿತ್ ಸರಿಯಾಗಿ ಸೆಟ್ ಆಗ್ತಾ ಇರಲಿಲ್ಲ... ಸ್ಟಿಲ್ ಹೀ ವಾಸ್ ಇನ್ ಟೀಂ & ಅವರ್ ಫ್ರೆಂಡ್.


ಪ್ರವೀಣ್ ಗೆ ಅಕ್ಕನ ಮದುವೆ ಅಯೀತು.. ಇನ್ನು ತನ್ನ ಅಕ್ಕ ಬೇರೆಮನೆಗೆ ಸೇರಿದವಳು ಅನ್ನೋ ಫೀಲ್. ಸೊ ಮೈಸೂರ್ ಗೆ ಹೋಗೋ ಜೋಶ್ ಇದ್ದಿದ್ದು ನನಗೆ & ರಾಜನ್ಗೆ ಮಾತ್ರ. ಸರಿಯಾಗಿ ನೈಟ್ 10.00 pm ಗೆ ರಾಜನ್ ಮಂಗಳೂರಿನಲ್ಲಿ ದೊಡ್ಡ ಕಳಸದ ಪ್ರತಿಮೆ ಇರೋ ಸರ್ಕಲ್ ದಾಟಿ ಅಲ್ಲೆ ಹತ್ತಿರದ ಪೆಟ್ರೋಲ್ ಬಂಕ್ ನಲ್ಲಿ ಟ್ಯಾಂಕ್ ಫುಲ್ ಪೆಟ್ರೋಲ್ ತುಂಬಿಸಿದರು ನಂತರ ಗಾಡಿ ಮೂವ್ ಅಯೀತು ನಾನು ಪ್ರವೀಣ್ ಗೆ ‘ಮಗ ಎಣ್ಣೆ?’ ಅಂದೆ ಪ್ರವೀಣ್ ದೀಪು ಮುಖ ನೋಡಿದ. ಅಲ್ಲಿ ಡ್ರಿಂಕ್ಸ್ ತೆಗೆದುಕೊಳ್ಳುತ್ತ ಇದ್ದವರು ನಾನು ದೀಪು & ಪ್ರವೀಣ್. ರಾಜನ್ ಸಿಗರೇಟ್ & ಟೀ ಮಾತ್ರ. ಅಮಿತ್ ಅಂತು ಏನು ಮಾಡದೆ ಇನ್ನು ಯಾಕ ಬದುಕಿದ್ದಾನೋ ಅನ್ನೋದೆ ನಮ್ಮ ಬಿಗ್ ಡೌಟ್! ಪ್ರವೀಣ್ ‘ ದೀಪು ಮಲಗಿದ್ದಾನೆ... ಬೇಡ ಮಗಾ... ಮೈಸೂರ್ ನಲ್ಲಿ ಯವಾಗಲಾದ್ರು ಪಾರ್ಟಿ ಮಾಡೋಣ’ ಅಂದ. ನಾನು ಸರಿ ಅಂದು ಹಾಗೆ ಮಾರುತಿ ಒಮ್ನಿ ಸೀಟ್ ಗೆ ತಲೆ ಆನಿಸಿ ಒರಗಿ ನಿದ್ರೆಗೆ ಜಾರಿದೆ. ಪ್ರವೀಣ್ ಹಾಗು ಅಮಿತ್ಗೂ ಮಂಪರು. ನಿದ್ರೆಗೆ ಜಾರಿ ಇನ್ನು 7-8 ನಿಮಿಷ ಕಳೆದಿರಲಿಲ್ಲ ರಾಜನ್ ತಕ್ಷಣ ಗಾಡಿಯನ್ನು ಯಾವೋದು ಶಾಪ್ ಮುಂದೆ ಸಡನ್ ಬ್ರೇಕ್ ಹಾಕಿದ. ರಾಜನ್ ತನ್ನ ಡ್ರೈವಿಂಗ್ ಸೀಟ್ ನಿಂದ ಹಿಂದೆ ತಿರುಗಿ ನನ್ನ ಹಾಗು ದೀಪು ತಲೆ ಮೇಲೆ ಹೊಡೆದು‘ಏ ಎದ್ದೇಲ್ರೋ... ಇಲ್ಲಿ ನಾನು ನೈಟ್ ಫುಲ್ ಗಾಡಿ ಓಡಿಸೋದು... ನೀವು ನಿದ್ದೆ ಮಾಡೋದಾ?... ಎದ್ದು ಏನಾದ್ರು ತಗೊಳ್ಳಿ’ ಅಂದೆ. ನೋಡಿದರೆ ರಾಜನ್ ವೈನ್ ಶಾಪ್ ಮುಂದೆ ನಿಲ್ಲಿಸಿದ್ದಾನೆ. ಪ್ರವೀಣ್ ಒಮ್ನಿ ಡೋರ್ ತೆಗೆದು ಇಳಿದು ‘ 3 ಬಾಟಲ್ ಬೀರ್ ಸಾಕಲ್ಲವಾ?’ ಅಂತ ನನ್ನ ಹಾಗು ದೀಪು ಕಡೆ ನೋಡಿ ಕೇಳಿದ. ದೀಪು ಇನ್ನು ನಿಶಾಳ ಮಾತಿನ ಫೀಲಿಂಗ್ಸ್ ನಲ್ಲಿ ಇದ್ದ ಅಂತ ಕಾಣುತ್ತೆ ‘ ನನಗೆ ಏನೂ ಬೇಡ ಮಗ...’ ಅಂದ. ನಾನು ಯಾಕೋ... ಅಂತ ಕೇಳಲು ಹೋಗಲಿಲ್ಲ ಯಾಕೆಂದ್ರ ಕೊಡಿಸುತ್ತಿದ್ದವನು ಪ್ರವೀಣ್ ತಾನ! ಪ್ರವೀಣ್ ಹೋಗಿ 3 ಕಿಂಗ್ ಫಿಷೆರ್ ಸ್ಟ್ರಾಂಗ್ ಬೀರ್ ಬಾಟಲ್ ತಂದ ಹಾಗೆ 3 ಕಿಂಗ್ ಸಿಗರೇಟ್ ಕೂಡ ತಂದ. ನಾನು ಇದ್ದು ‘ ಮಗ ನೈಟ್ ಫುಲ್ ಜರ್ನಿ ಇನ್ನೊಂದು ಬಾಟಲ್ ತಗೋಬೇಕಿತ್ತು... ಸಿಗರೇಟ್ ಬೇರೆ 3 ತಂದಿದ್ದಿಯ ಸಾಕಾ?’ ಅಂದೆ. ಅಡ್ಡಕ್ಕೆ ಪ್ರವೀಣ್ ‘ಲೋ ಮಾಮ್.. ದೀಪು ಯಾಕೋ ಕುಡಿಯೋದು ಡೌಟ್ ನೀನೆ 2 ಬಾಟಲ್ ಕುಡಿಲಾ... ನನಗೆ ಒಂದು ಸಾಕು… ಸಿಗರೇಟ್ ರಾಜ ಹತ್ರ 1 ಪ್ಯಾಕ್ ಸ್ಮಾಲ್ ಇದೇ ಸಾಕಲ್ಲವಾ?’ ಅಂದ. ಅಮಿತ್ ಬರಿ ಬಾಟಲ್ ತಂದದ್ದು ನೋಡಿ ‘ಸೈಡ್ಸ್ ಏನು ತರಲಿಲ್ಲ್ವ?’ ಅಂದ. ಪ್ರವೀಣ್ ‘ಯಾಕಪ್ಪ ಮದುವೆ ಮನೇಲಿ ಹೊಟ್ಟೆತುಂಬ ತಿನ್ನಲಿಲ್ಲ್ವ...?’ ಅಂದ. ಸರಿ ರಾಜನ್ ಗಾಡಿ ಸ್ಟಾರ್ಟ್ ಮಾಡಿ ಮುಂದೆ ಹೊರಟರು. ಮೈಸೂರ್ - ಮಂಗಳೂರು ರೋಡ್ನಲ್ಲಿ 90 Kms ಸ್ಪೀಡ್ ನಲ್ಲಿ ರಾಜನ್ ಗಾಡಿ ಓಡುತ್ತಾ ಇತ್ತು. ಅವತ್ತು ಮಧ್ಯಾನ್ಹ ತುಂಬಾ ಸೆಕೆ ಇತ್ತು, ಈಗ ರಾತ್ರಿ ತುಂಬಾ ಗಾಳಿ. ಪ್ರವೀಣ್ ನನಗೆ ‘ಓಪನ್ ಮಾಡ್ಲ ಮಾಮ್ ?’ ಅಂದ. ಸರಿ 2 ಬಾಟಲ್ ಓಪನ್ ಆಯೀತು ಹಾಗೆ ಒಂದು ಸಿಪ್ ನನ್ನ ಹಾಗು ಪ್ರವೀಣ್ ಹೊಟ್ಟೆ ಸೇರಿತು. ನಾನು ‘ಸೂಪರ್ ಚಿಲ್ಲ್ಡ್ ಬೀರ್ ಮಗಾ, ಗಂಟಲೊಳಗೆ ಬೀರ್ ಇಳೀಯೂದು ಫೀಲ್ ಆಗ್ತಾ ಇದಿಯಾ?’ ಅಂದೆ. ದೀಪು ನನ್ನ ಹಾಗು ಪ್ರವೀಣ್ ಮುಖ ನೋಡಿ ‘ನನ್ನ ಬಾಟಲ್ ಎಲ್ಲ್ರೋ...?’ ಅಂದ. ನೆಕ್ಷ್ಟ್ ಸಿಪ್ ಅನ್ನು 3 ಜನ ಒಟ್ಟಿಗೆ ಕುಡಿಯೋಕು ರಾಜನ್ ಗಾಡಿ ಇದ್ದಕಿದ್ದ ಹಾಗೆ ವೂಬ್ಬ್ಲಿಗ್ (Wobbling) ಆಗೊಕು ಸರಿ ಹೊಯೀತು... ಒಂದು ಕ್ಷಣ ಇದೇನು ಮೊದಲನೇ ಸಿಪ್ ಗೆ ಕಿಕ್ಕ್ಕಾ ಅದು ಬೀರ್ ಗೆ …? ಅನ್ನಿಸಿತು ರಾಜನ್ ರಸ್ತೆ ಸೈಡ್ ಗೆ ಗಾಡಿ ಹಾಕಿ ಇಳಿದು ಹೋಗಿ ನೋಡಿ ಬಂದು ‘ಬ್ಯಾಕ್ ಟೈರ್ ಒಂದು ಪಂಕ್ಚರ್...’ ಅಂತ ಹೇಳಿ ಡಿಕ್ಕೀ ಓಪನ್ ಮಾಡಿ ಜ್ಯಾಕ್ & ಸ್ಟೆಪ್ನಿ ತೆಗೆದು ಕೊಂಡು ಕೆಳಗೆ ಇಟ್ಟು ಡಿಕ್ಕೀ ಮುಚ್ಚಿದರು ತಕ್ಷಣ ಅದು ಎಲ್ಲಿತ್ತೋ ಗೊತ್ತಿಲ್ಲ ಮಳೆ.. ಅಬ್ಬಾ ಒಂದೊಂದು ಹನಿ ಸಣ್ಣ ಗೋಲಿ ಗಾತ್ರ.... 10 ಸೆಕೆಂಡ್ಗೆ ನಾವೆಲ್ಲಾ 80% ಒದ್ದೆ! ಎಲ್ಲ ಓಡಿ ಕಾರಿನಲ್ಲಿ ಕೂತೆವು. ಟೈಮ್ 10.45 pm. ಬಾಟಲ್ ಪುನ ಕೈಗೆ ಬಂದು ಇನ್ನೊಂದು ಸಿಪ್ ಅಯೀತು.ರಾಜನ್ ಹಾಗೆ ಫ್ರಂಟ್ ಗ್ಲಾಸ್ ನಿಂದ ನೋಡಿ ‘ಮುಂದೆ ಯಾವುದು ಅಂಗಡಿ ಇದೆ. ಎಲ್ಲಾ ಇಳಿದು ಅಲ್ಲಿಗೆ ಓಡಿ. ನಾನು ಗಾಡಿ ಓಡಿಸ್ಕೊಂಡು ಬರ್ತನೆ, ಅಲ್ಲೇ ಟೈರ್ ಚೇಂಜ್ ಮಾಡೋಣ’ ಅಂದ್ರು. ನಾವು ಎಲ್ಲಾ ಇಳಿದು ಅಂಗಡಿ ಹತ್ತಿರ ಓಡಿದೆವು. ಯಾವುದು ನಂದಿನಿ ಡೈರಿ ಅಂಗಡಿ. ಅಂಗಡಿ ಮುಂದೆ ಇದ್ದ ಕಟ್ಟೆಯಲ್ಲಿ ನಾವು ನಾಲ್ಕು ಜನ ಕೂತೆವು. ಕೈಯಲ್ಲಿ ಬಾಟಲ್.. ಮೇನ್ ರೋಡ್ ಬೇರೆ... ಅಕ್ಕ ಪಕ್ಕ ನೋಡಿದೆವು ಯಾವುದು ಹಾಲಿನ ಟ್ಯಾಂಕರ್ ನಿಲ್ಲಿಸಿದ್ರು... ಡ್ರೈವರ್ ಮೋಸ್ಟ್ಲಿ ಒಳಗೆ ಮಲಗಿದ್ದನೇನೋ. ರಾಜನ್ ಗಾಡಿ ತಂದು ಅಲ್ಲೆ ಅಂಗಡಿ ಮುಂದೆ ನಿಲ್ಲಿಸಿ ನಮ್ಮ ಹತ್ತಿರ ಬಂದ್ರು. ಸದ್ಯ ಅಂಗಡಿಗೆ ಅಂದ್ರೆ ಮುಂದೆ ಯಾರೋ ಪುಣ್ಯಾತ್ಮರು ಶೀಟ್ ಹಾಕಿಸಿ portico ತರ ಮಾಡಿದ್ರು. ನಂತರ ರಾಜನ್ ಪ್ರವೀಣ್ ಕರ್ಕೊಂಡು ಹೋಗಿ, ತಲೆ ಮೇಲೆ ಟವಲ್ ಹಾಕೊಂಡು ಸ್ಟೆಪ್ನಿ ಚೇಂಜ್ ಮಾಡಿದ್ರು.


ಅವರು ಬರುವಸ್ಟರಲ್ಲಿ ನನ್ನ ಹಾಗು ದೀಪುವಿನ ಬೀರ್ ಬಾಟಲ್ ಖಾಲಿಯಾಗಿತ್ತು. ಮಳೆ ಕೂಡ ಕಡಿಮೆ ಆಗಿತ್ತು. ಲೈಟ್ ಆಗೀ ಕಿಕ್ಕ್ ಶುರು ಅಯೀತು. ರಾಜನ್ ಗೆ ಏನು ಅನ್ನಿಸಿತೋ ಏನೋ ಅವತಿನಂತೆ ಸೂಪರ್ ಹಿಟ್ ಆಗಿದ್ದ ‘ಅಕ್ಸರ್’ ಫಿಲಂ ನ ‘ಜಾಲಕ್ ದಿಕ್ ಲಾಜ..’ ಸಾಂಗ್ ನ ಕಾರ್ ಡೆಕ್ ನಲ್ಲಿ ಆನ್ ಮಾಡಿದರು. ಹಾಡು ಶುರು ಆದಂತೆ ದೀಪು ಸ್ಟೆಪ್ಸ್ ಹಾಕತೊಡಗಿದ. ಅವನ ಹಿಂದೆ ನಾನು ಮತ್ತು ಪ್ರವೀಣ್ ಅವನ ಬೀರ್ ಬಾಟಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ಸ್ಟೆಪ್ಸ್ ಹಾಕಲು ಶುರು ಮಾಡಿದವು. ನಾಕ್ ಔಟ್ ಸ್ಟ್ರಾಂಗ್ ನಿಜವಾಗಲು ಸ್ಟ್ರಾಂಗ್ ಆಗಿತ್ತು. ಕುಣಿಯುತ್ತ ಕುಣಿಯುತ್ತ ಇನ್ನು ಜೋಶ್ ಏರಾತೊಡಗಿತ್ತು. ಪುನ ಇನ್ನೊಂದು ಹಾಡಿಗೆ ಸ್ಟೆಪ್ಸ್ ಹಾಕಿ ಮಳೆ ಸಂಪೂರ್ಣ ನಿಂತಿದ್ದರಿಂದ ಹೊರೆಟೆವು. ಹಾಗೆ ಕಾರ್ ನಲ್ಲಿ ಸಿಗರೇಟ್ ಶೇರ್ ಮಾಡುತ್ತಾ ಅತಿಯಾಗಿ ಕುಣಿದುದ್ದರಿಂದ ಆದ ಸುಸ್ತನ್ನು ನಿವಾರಿಸಿಕೊಂಡೆವು. ಒಂದು 15-16 ಕಿಲೋ-ಮೀಟರ್ ಸಾಗೀರಬೇಕು ಅಷ್ಟೆ ಪುನಃ ದೀಪು ತೂಕಡಿಸತೊಡಗಿದ. ಹಾಗೆ ಮುಂದಿನ ಸೀಟ್ ನಲ್ಲಿದ್ದ ಪ್ರವೀಣ್ ನು ಆಕಳಿಸತೊಡಗಿದ. ನಾವು ಹೆಚ್ಚುಕಡಿಮೆ ಉಪ್ಪಿನಂಗಡಿ ಬಳಿ ಬಂದಿದ್ದವೇನು ಅಲ್ಲೆ ಬ್ರಾಡ್ ಆಗಿ ಇದ್ದ ರಸ್ತೆ ಬದಿಯಲ್ಲಿ ಒಂದು ಆಯಿಲ್ ಟ್ಯಾಂಕರ್ ನಿಲ್ಲಿಸಿದ್ದರು ರಾಜನ್ ಕೂಡಲೆ ಸಡನ್ ಆಗಿ ಲೆಫ್ಟ್ ತೆಗೆದು ಆ ಗಾಡಿ ಹಿಂದೆ ಪಾರ್ಕ್ ಮಾಡಿ ‘ ಯೆ ಎದ್ದೆಳ್ರೋ ಮಕ್ಳ… ನೀವ್ ಮಲಗಿದ್ರೆ ನಂಗು ನಿದ್ದೆ ಬರುತೆ...’ ಅಂದ್ರು. ಪುನಃ ಕಾರ್ ಡೆಕ್ ಆನ್ ಅಯೀತು ಪುನಃ ‘ಜಾಲಕ್ ದಿಕ್ ಲಾಜ’ ಗೆ ಸ್ಟೆಪ್ಸ್... ಈ ಬಾರಿ ರಾಜನ್ ಕೂಡ ಸ್ಟೆಪ್ಸ್ ಹಾಕಿದರು. ಚಿತ್ರ ವಿಚಿತ್ರ ಸ್ಟೆಪ್ಸ್. ಟೈಮ್ ನೋಡಿರೆ ರಾತ್ರಿ 23.45 ಶೆಕೆಗೆ ನಾನು ದೀಪು ಆಗಲೇ ನಮ್ಮ ಶರ್ಟ್ ಅನ್ನು ಕಿತ್ತು ಡಿಕ್ಕಿಗೆ ಎಸೆದಿದ್ದೆವು. ಒಬ್ಬರಿಗಿಂತ ಒಬ್ಬರು ಒಳ್ಳೆ ಒಳ್ಳೆ ಸ್ಟೆಪ್ಸ್ ಇನ್ವೆಂಟ್ ಮಾಡಲು ಶುರು ಮಾಡಿದರು.


ನಮ್ಮ ಡಾನ್ಸ್ ಸೆಶನ್ ನಡುವೆ ರಸ್ತೆ ಯಲ್ಲಿ ಎಸ್ಟೊಂದು ವೆಹಿಕಾಲ್ಸ್ ಹೋದವು. ಕೆಲವರು ‘ಹೋ...........ಓ......ಓ....ಅಂದರು. ಕೆಲವರು ಸೀಟಿ ಹಾಕಿ ಮುಂದೆ ಹೋದರು. ಪ್ರವೀಣ್ ಅಂತು ಪಕ್ಕದಲ್ಲಿದ ಟ್ಯಾಂಕರ್ ನ ಏಣಿ ಹತ್ತಿ ಟೀ ಶರ್ಟ್ ಬಿಚ್ಚಿ, ಒಂದು ಕೈಯಲ್ಲಿ ಟ್ಯಾಂಕರ್ ನ ಏಣಿ ಇನ್ನೊಂದರಲ್ಲಿ ಟೀ ಶರ್ಟ್ ಅನ್ನು ಗಿರ್ಕಿ ತಿರುಗಿಸತೊಡಗಿದ. ಮಧ್ಯ ಅಮಿತ್ ಎಲ್ಲಿ ಅಂತ ನೋಡಿದರೆ ಕೈ ಕಟ್ಟಿ ಕಾರಿಗೆ ಒರಗಿ ನಿಂತಿದ್ದ. ವೇಸ್ಟ್ ಫೆಲ್ಲೋ... ನಮ್ಮ ನಿದ್ದೆ ಎಲ್ಲಾ ಹಾರಿ ಹೊಯೀತು ಅಂತ ಖಾತ್ರಿ ಆದ ನಂತರ ರಾಜನ್ ಪುನಃ ಎಲ್ಲರನ್ನು ಕಾರಿಗೆ ತುಂಬಿಸಿಕೊಂಡು ಹೊರಟರು. ಅಲ್ಲಿಂದ ಇನ್ನೇನು 7-8 kms ಹೋದೆವು ಶುರು ಆಯಿತು ನೋಡಿ ಟ್ರ್ಯಾಫಿಕ್ ಜಾಮ್. ಅಬ್ಬಾ... ಎಷ್ಟೊಂದು ಗಾಡಿ ಅದು ಘಾಟ್ ಸೆಕ್ಷನ್ ನಲ್ಲಿ. ಸರಿ ಹೊಯೀತು… ನಾವು ಬ್ಲಾಕ್ ಆದಾಗ ಲಾಸ್ಟ್ ನಲ್ಲಿ ಇದ್ದೆವು... ಹಿಂದೆನೂ ಜಾಸ್ತಿ ಗಾಡಿ ಇರಲಿಲ್ಲ. ಏನೋ ಸ್ವಲ್ಪ ದೂರ ಬ್ಲಾಕ್ ಆಗಿರಬೇಕು ಅಂದುಕೊಂಡು ರಾಜನ್ ಗೆ ಹೇಳಿ ಸಾಂಗ್ ಆನ್ ಮಾಡಿಸಿ ಅಲ್ಲೇ ಲೈಟ್ ಸ್ಟೆಪ್ಸ್ ಹಾಕಲು ಶುರು ಮಾಡಿದೆವು. ಅಕ್ಕ ಪಕ್ಕ ಇದ್ದ ಜನ ಎಲ್ಲೊ ನಾವು ಬೇರೆ ಸ್ಟೇಟ್ ನವರು ಅಂದುಕೊಂಡರು. ಕೆಲವರಂತು ಇವರಿಗೆಲ್ಲ ಏನು ಅಗೀದೆ ಅಂತ ತಲೆ ಕೆಡಿಸಿಕೊಂಡು ನಮ್ಮನೆ ನೋಡ್ತಾ ಇದ್ದರು. ಒಂದು ಹಾಡಿಗೆ ಸ್ಟೆಪ್ಸ್ ಹಾಕಿದವು. ಹಿಂದೆ ಗಾಡಿಗಳು ಜಾಸ್ತಿ ಯಾಗ ತೊಡಗಿದ್ದವು. ನಂತರ ರಾಜನ್ ನನಗೆ ದೀಪುಗೆ ‘ಯೆ ಸುಧಾಕರ್ ಮುಂದೆ ಹೋಗಿ ನೋಡಿರೋ ಎಷ್ಟು ದೂರ ಬ್ಲಾಕ್ ಆಗಿದೆ? ಅಂತ.. ನಾನು ಜಾಗ ಸಿಕ್ಕಿದ ಹಾಗೆ ಗಾಡಿ ಮುಂದೆ ತಗೊಂಡು ಬರ್ತೀನಿ’ ಅಂದ್ರು. ನಾನು ದೀಪು ಇಬ್ಬರು ಜಾಮ್ ನಲ್ಲಿ ಬ್ಲಾಕ್ ಆಗಿದ್ದ ಗಾಡಿಗಳ ನಡುವೆ ಓಡಲು ಶುರು ಮಾಡಿದೆವು. ಕಾರು, ಜೀಪು, ಟೆಂಪೋ, ಬಸ್, ಕ್ಯಾಂಟರ್ , 407 ಏನಲ್ಲ ಗಾಡಿಗಳು. ಅಲ್ಲೆ ಯಾರನ್ನೋ ಕೇಳ್ದ್ರೆ ಇನ್ನು 4-5 kms ಫುಲ್ ಬ್ಲಾಕ್ ಅಂತೆ! ಅಂದ್ರು. ನಾನು ದೀಪು ಮುಖ ಮುಖ ನೋಡಿಕೊಂಡೆವು. ಓಹ್ಹ್! ನಾಳೆ ಡ್ಯೂಟಿ ಗೆ ಹೋದ ಹಾಗೇನೆ... ದೀಪು ಗೆ ಏನು ಅನ್ನಿಸಿತೋ ಏನೋ ಅಲ್ಲೆ ರಸ್ತೆ ಬದಿಯಲ್ಲಿ ಇದ್ದ ಒಂದು ಕಲ್ವರ್ಟ್ (ಕಟ್ಟೆ) ಮೇಲೆ ಕೂತ. ನಂತರ ಅಲ್ಲೇ ಕಾಲು ಕಟ್ಟೆ ಮೇಲೆ ಚಾಚಿ ಮಲಗಿದ ‘ಮಗ.. ಲೈಫ್ ಇಸ್ ಸೊ ಬ್ಯೂಟಿಫುಲ್ ಅಲ್ಲವ? ಇದೆಲ್ಲ ನೋಡಿದರೆ ಟೈಮ್ ಹೇಗೆ ನಿಂತು ಹೋಗಬಾರದ.. ಅನ್ನಿಸುತ್ತ ಇದೆ’ ಅಂದ. ಕಟ್ಟೆಮೇಲೆ ಮಲಗಿದ್ದ ಅವನಿಗೆ ನಾನು ಸ್ವಲ್ಪ ಜರಗು ಅಂದು ಪಕ್ಕ ಅಡ್ಜಸ್ಟ್ ಮಾಡಿಕೊಂಡು ನಾನು ಮಲಗಿದೆ. ಮೇಲೆ ಆಕಾಶದಲ್ಲಿ ಅರ್ಧ ಚಂದ್ರ ಮೋಡಗಳ ನಡುವೆ ಇಣಕುತಿದ್ದ. ಅಲ್ಲಲ್ಲಿ ನಕ್ಷತ್ರ. ಕಟ್ಟೆ ಪಕ್ಕ ರಸ್ತೆ ಯಲ್ಲಿ ಟ್ರ್ಯಾಫಿಕ್ ಜಾಮ್ ಆಗಿ ನಿಂತ ಗಾಡಿಗಳು. ಎಲ್ಲಾ ಗಾಡಿಗಳಲ್ಲೂ ಡ್ರೈವರ್ ಒಬ್ಬನನ್ನು ಬಿಟ್ಟು ಉಳಿದವರೆಲ್ಲಾ ನಿದ್ರೆಗೆ ಜಾರಿದರು. ನನಗೆ 1998 ರಲ್ಲಿ ಟೈಟಾನಿಕ್ ಫಿಲಂನ ಹೀರೋಹಿನ್ ಕೇಟ್ ವಿನ್ಲೆಟ್ ಸೊಸೈಡ್ ಮಾಡಿಕೊಳ್ಳಲು ಹಡಗಿನ ಡೆಕ್ ಮೇಲೆ ಓಡಿ ಹೋಗುವ ಸೀನ್ ನಲ್ಲಿ ಹೀರೋ ಲಿಯೋನಾರ್ಡ್ ಹಡಗಿನ ಡೆಕ್ ಮೇಲೆ ಇದ್ದ ಒಂದು ಖಾಲಿ ಬೆಂಚ್ ಮೇಲೆ ಮಲಗಿ ಆಕಾಶದಲ್ಲಿ ನಕ್ಷತ್ರ ನೋಡುತ ಸಿಗರೇಟ್ ಸೇದುತ್ತಾ ಪ್ರತಿಯೊಂದು ಪುಫ್ಫ್ ಎಂಜಾಯ್ ಮಾಡ್ತಾ ಇರುತ್ತಾನೆ . ‘ವಾವ್ಹ್ ದಟ್ಸ ಲೈಫ್!’ ಅದೆಲ್ಲಾ ನೆನೆಪಾಗಿ ದೀಪುಗೆ ‘ ಮಗಾ ಸಿಗರೇಟ್ ಎಲ್ಲೊ?’ ಅಂತ ಕೇಳಿದೆ. ದೀಪು ‘ಮಚ್ಚೀ... ಕಾರ್ ಅಲ್ಲೇ ಬಿಟ್ಟೆ… ಛೆ…. ಏನ್ ಮಾಡೋದು?’ ಅಂದು ಪುನಃ ‘ಮಚ್ಚೀ... ಯಾವುದೊ ಟ್ಯಾಂಕರ್ ನಿಂತಿದೇ ಡ್ರೈವರ್ ಅಥವಾ ಕ್ಲೀನರ್ ಹತ್ರ ಸಿಗರೇಟ್ ಇದ್ದೀಯ ಅಂತ ಕೇಳಿ ಬರ್ತೇನೆ ಅಂತ ಹೇಳಿ ಎದ್ದು ಹೊರಟಾ. ಅದೆಂಗೆ ಕೇಳ್ತಾನೆ ನೋಡೋಣ ಅಂತ ನಾನು ಹಿಂದೆನೇ ಹೋದೆ. ಯಾವುದು ಅಡುಗೆ ಎಣ್ಣೆ ಟ್ಯಾಂಕರ್ ಅದು. ದೀಪು ಟ್ಯಾಂಕರ್ ನ ಡ್ರೈವರ್ ಬಾಗಿಲು ಬಳಿ ನಿಂತು ಬಾಗಿಲು ತಟ್ಟಿ ‘ ಸಾವ್ಕಾರೇ…. ಸಾವ್ಕಾರೇ ….’ ಅಂದ. ಟ್ಯಾಂಕರ್ ನ ಡ್ರೈವರ್ ಕ್ಯಾಬಿನ್ ಒಳಗಿಂದ ‘ಯಾರು ಅದು?...’ ಅಂತ ಧ್ವನಿ ಬಂತು. ದೀಪು ಇದ್ದದು ‘ಸಾವ್ಕಾರೆ ಒಂದು ಸಿಗರೇಟ್ ಇದ್ರೆ ಕೊಡಿ ಪ್ಲೀಜ್ಜ್...’ಅಂದ. ನನಗೆ ಯಾಕೋ ದೀಪು ಉಗಿಸಿಕೊಳ್ತಾನೆ ಅನ್ನಿಸಿತು. ಟ್ಯಾಂಕರ್ ನ ಧ್ವನಿ ಸಿಡುಕಿನಿಂದ ‘ಇಲ್ಲ ಕಣ್ರೀ..ರೀ... ಹೋಗ್ರಿ…’ ಅಂತು. ನಾನು ‘ಬ್ಯಾಡ ಬರ್ಲಾ ಮಗಾ...’ ಅಂದ್ರೆ ದೀಪು ‘ತಡಿ ಮಗಾ..’ ಅಂದು ಪುನ ಹೋಗಿ ‘ಒಂದು ಬೀಡಿನಾದರು ಇದ್ರೆ ಕೊಡಿ ಸಾವ್ಕಾರೇ…’ ಅಂದ. ಆ ಧ್ವನಿ ಪುನಃ ಈಗ ‘ ನಿಜವಾಗ್ಲೂ ಇಲ್ಲ ಕಣ್ರೀ…’ ಅಂತು. ದೀಪು ಪಟ್ಟು ಬಿಡದೆ ‘‘ ‘ಏ... ನೋಡಿ ಸಾವ್ಕಾರೆ... ಇದ್ರೆ ಕೊಡಿ...’ಅಂದ. ಅಷ್ಟು ಹೇಳಲು ಟ್ಯಾಂಕರ್ ನ ಡ್ರೈವರ್ ನೋ ಅಥವಾ ಕ್ಲೀನರ್ ನೋ ಯಾರೋ ಕ್ಯಾಬಿನ್ ಹೊರಗೆ ತಲೆ ಹಾಕಿ ‘ರೀ ಯಾಕ್ರಿ ತಲೆ ತಿಂತಿರಾ... ಮೂದಲೆ ಜಾಮ್ ಆಗೀ ತಲೆ ಕೆಟ್ಟು ಹೀಗಿದೆ.. ನೀವ್ ಬೇರೆ..’ ಅಂತ ರೇಗಿದ. ಬಂದ ದಾರಿಗೆ ಸುಂಕ ಇಲ್ಲದೆ ನಾನು ಅವನು ಮುಂದೆ ಹೋದೆವು.ದೀಪು ಇದ್ದದು ಪುನಃ ‘ಮಗಾ ಬೇರೇ ಯಾರನ್ನಾದರೂ ಕೇಳುವ’ ಅಂದ ಅಷ್ಟರಲ್ಲಿ ಒಂದು ಬಸ್ಸು ಕ್ಯಾಂಟರ್ ನ ಹಿಂಬಾಗಕ್ಕೆ ಡಿಕ್ಕಿ ಹೊಡೆದು ನಿಂತಿದ್ದ ಜಾಗ ಬಂತು. ಓಹೋ... ಮೋಸ್ಟ್ಲಿ ಇದೇ ಜಾಮ್ ನ ಮೊಲ ಜಾಗ ಅನ್ಸುತ್ತೆ ಅಂದುಕೊಂಡೆವು. ಆ ಜಾಗ ಸ್ವಲ್ಪ ಇಳಿಜಾರು ಪ್ರದೇಶವಾಗಿದ್ದು ಬೇರೆ ಗಾಡಿಗಳು ಅಲ್ಲೇ ಇದ್ದ ಸ್ವಲ್ಪ ಜಾಗದಲ್ಲಿ ನುಸುಳಿ ಹೋಗುತ್ತಿದ್ದವು. ನಾನು, ದೀಪು ಈಗ ಅಲ್ಲಿ ನಿಂತು ಗಾಡಿಗಳಿಗೆ ಕಾಶನ್ಸ್ ಕೊಡಲು ಶುರು ಮಾಡಿದೆವು. ‘ಅಹಹ್... ರೈಟ್ ರೈಟ್... ಮುಂದೆ ಬನ್ನಿ... ಸ್ವಲ್ಪ ಲೆಫ್ಟ್... ಸ್ಟಾಪ್... ಸಾಕು ಸಾಕು… ಇನ್ನು ಸ್ವಲ್ಪ ಲೆಫ್ಟ್.... ಅಂತ ಹೇಳಿಕೊಂಡು ಹಾಗೆ ಒಂದು 10-11 ಗಾಡಿಗಳಿಗೆ ಪಾಸ್ ಆಗಲು ಹೆಲ್ಪ್ ಮಾಡಿದೆವು. ವಾಹದ ದಟ್ಟಣೆ ಸ್ವಲ್ಪ ಕರಗಿ ಜಾಮ್ ಸಡಿಲವಾಗಿತ್ತು(ನಮ್ಮ ಶ್ರಮದ ಫಲ??!!). ದೀಪು ನಾನು ಓಹ್ಹ್! ನಮ್ಮ ಗಾಡಿ ಪಾಸ್ ಆಗಬಹುದು ಬೇಗ ಹೋಗಿ ರಾಜನ್ ಗೆ ಹೇಳೋಣ ಅಂತ ಹೇಳಿಕೊಂಡು ಹಿಂದಕ್ಕೆ ಓಡಲು ಶುರು ಮಾಡಿದೆವು. ಒಂದು 150 ಮೀಟರ್ ಗಾಡಿಗಳ ಮಧ್ಯ ರಸ್ತೆ ಬದಿಯಲ್ಲಿ ಓಡಿರಬಹುದು ಇದ್ದಕಿದ್ದ ಹಾಗೆ ರಾಜನ್ ವ್ಯಾನ್ ಅನ್ನು ಸಂಧಿ ಹಾಗು ಇಕ್ಕಟ್ಟಾದ ಜಾಗದಲ್ಲಿ ತೂರುಸಿಕೊಂಡು ಬರ್ತಾ ಇದ್ರೂ. ಗಾಡಿ ನೋಡಿ ನಾನು ನಿಂತೆ. ಪ್ರವೀಣ್ ಗಾಡಿ ಇಂದ ಇಳಿದು ‘ದೀಪು ಎಲ್ಲಿ ಮಾಮ್?’ ಅಂದ. ಇಲ್ಲೆ ಮುಂದೆ ಅಂತ ನಾನು ಕೈ ತೋರಿಸಿದರೆ, ದೀಪು ಎಲ್ಲಿ ಇದ್ದ??!! ಅವನು ರಾಜನ್ ವಾನ್ ನೂ ನೋಡದೆ ಮುಂದೆ ಓಡಿ ಬಿಟ್ಟಿದ. ‘ಅಯ್ಯೋ ಮಗಾ ಗಾಡಿ ನೋಡದೆ ಮುಂದೆ ಓಡಿ ಬಿಟ್ಟವನೇ’ ಅಂದು ರಾಜನ್ ಗೆ ‘ರೋಡ್ ಸುಮಾರ್ ಆಗೀ ಕ್ಲಿಯರ್ ಆಗಿದೆ ನೀವು ಬೇಗ ಪಾಸ್ ಆಗೀ.. ನಾನು ದೀಪು ಕರ್ಕೊಂಡು ಬರ್ತೇನೆ’ ಅಂದು ದೀಪು ಹುಡುಕಿಕೊಂಡು ಮುಂದೆ ಹೋದೆ. ಸಧ್ಯ ದೀಪು ಹೇಗೋ ಅಪ್ಪಿ ತಪ್ಪಿ ಹಿಂದ ನೋಡಿ ರಾಜನ್ ಗಾಡಿ ಗುರುತಿಸಿ ವಾಪಸ್ ಬರುತ್ತಾ ಇದ್ದ. ಎಲ್ಲರೂ ಗಾಡಿ ಏರಿ ಮುಂದೆ ಹೋದೆವು. ರಾಜನ್ ಡ್ರೈವಿಂಗ್ ಅಂತು ಸೂಪರ್ ಜಿಗ್ ಜ್ಯಾಗ್ ಆಗಿ ಮಿಂಚಿನ ವೇಗದಲ್ಲಿ ಟರ್ನ್ ಮಾಡುತಾ.. ಬ್ರೇಕ್ ಹಾಕುತ್ತ.. ಚೂರು ಪಾರು ಜಾಗದಲ್ಲಿ ವಾನ್ ನುಗ್ಗಿಸ್ತಾ ಇದ್ದರು. ಹಾಗೆ 33 kms ಸಾಗಿದೆವು. ಪುನ ಒಂದು ಆಯಿಲ್ ಟ್ಯಾಂಕರ್ ಕಂಬಕ್ಕೆ ಅಡ್ಡಡ್ಡ ಗುದ್ದಿ ಮುಂದಕ್ಕೂ ಹಿಂದಕ್ಕೂ ಮೂವ್ ಆಗದ ಹಾಗೆ ಜಾಮ್ ಆಗಿತ್ತು. ಅಲ್ಲೂ ಸಹ ಗಾಡಿಗಳು ಇದ್ದ ಸ್ವಲ್ಪ ಜಾಗದಲ್ಲೇ ಮೂವ್ ಆಗ್ತಾ ಇದ್ದವು . ಪುನ ಅಲ್ಲಿ 20 ನಿಮಿಷ ದೀಪು, ಪ್ರವೀಣ್ ಹಾಗು ನನ್ನಿಂದ ಜನ ಸೇವೆ. ಟ್ರ್ಯಾಫಿಕ್ ಪೋಲಿಸ್ ತರಾ ಕೈ ಮೇಲೆ ಎತ್ತಿ, ಹಾಂ... ನೀವ್ ಮುಂದೆ ಹೋಗಿ… ಸ್ಟಾಪ್…. ರೀವೆರ್ಸೆ ಬನಿ…. ಸ್ವಲ್ಪ ಲೆಫ್ಟ್ ತಗೊಳ್ಳಿ….. ಅಂತೆಲ್ಲ ಕಿರುಚುತ್ತ ಗಾಡಿಗಳು ಸಾಗಲು ಹೆಲ್ಪ್ ಮಾಡಿದೆವು. ಕಿರುಚಿ ಕಿರುಚಿ ಸುಸ್ತಾಗಿತ್ತು. ರೋಡ್ ಬ್ಲಾಕ್ ಕರಗಿತ್ತು. ಸ್ವಲ್ಪ ಮುಂದೆ ಸಾಗಿದೆವು ಸಧ್ಯ ಅಲ್ಲೆ ಪಕ್ಕದಲ್ಲಿ ಟೀ ಅಂಗಡಿ ತೆರೆದಿತ್ತು. ಎಲ್ಲ ½ ಟೀ ಹಾಕೊಂಡು 2 ದಂ ಎಳೆದೆವು. ಇಷ್ಟೇಲ್ಲಾ ಅಗೋ ಹೊತ್ತಿಗೆ ಯಾಕೋ ನಂಗು ದೀಪುಗು ಹೋಟೆಲಿ ಏನೋ ಸಂಕಟ.. ಯಾಕೋ ಬಾತ್ರೂಂಗೆ ಹೋಗಬೇಕು ಅನ್ನಿಸಿ ಹೋಟೆಲ್ ನವನ ಹತ್ತಿರ ಇಲ್ಲಿ ಬಾತ್ರೂಂ ಇದ್ದೀಯ? ಅಂತ ಕೇಳಿದ್ರೆ ಅವನು ಇಲ್ಲೇ ಹತಿರ ಹೊಳೆ ಇದೆ. ಅಲ್ಲೇ ಹೋಗ್ಬೇಕು ಅನೋದಾ. ನನಗಂತೂ ಈ ರಾತ್ರಿ ಇನ್ನು ಏನೇನು ಅನುಭವಿಸಬೇಕೋ ಅನ್ನಿಸಿತು. ರಾಜನ್ ‘ ಹೊಟ್ಟೆ ಸರಿ ಇಲ್ಲ ಅಂದ ಮೇಲೆ ಟೀ ಸಿಗರೇಟ್ ಯಕೃಲ್ಲಾ ತಗಂಡ್ರೀ?’ ಅಂದ್ರು. ಅಷ್ಟರಲ್ಲಿ ಟ್ರ್ಯಾಫಿಕ್ ಜಾಮ್ ಫುಲ್ ಕರಗಿತ್ತು. ವ್ಯಾನ್ ಸ್ಟಾರ್ಟ್ ಮಾಡಿ ಹೊರೆಟೆವು. ಸ್ವಲ್ಪ ದೂರ ಹೋದೆಹಾಗೆ ನಿದ್ದೆಯ ಸಣ್ಣ ಜೋಂಪು ಹತ್ತುತ್ತಾ ಇತ್ತು. ರಾಜನ್ ಪುನಃ ಸಡನ್ ಬ್ರೇಕ್ ಹಾಕಿದರು. ದೀಪು ‘‘ಯಾಕ ರಾಜನ್ ಪುನಃ ಜಾಮ್ ಆ..?’ ರಾಜನ್ ಇದ್ದು ‘ ಲೋ.. ಎಲ್ಲೊ ನೀರ್ ಶಬ್ದ ಆಗ್ತಾ ಇದೆ ಅದಕ್ಕೆ ನಿಲ್ಲಿಸಿದ’ ರಾಜನ್ ನ ಕಿವಿ ಚುರುಕಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸ್ತಾ ನಾವೆಲ್ಲಾ ವ್ಯಾನ್ ಇಳಿದೆವು ಸುತ್ತ ಕತ್ತಲು. ಟೈಮ್ ನೋಡಿದರೆ ಬೆಳಗಿನ ಜಾವ ??!! (ರಾತ್ರಿ) 1.20 ಎಲ್ಲಾರಿಗೂ ಸದ್ದು ಕೇಳಿಸ್ತ ಇದೆ ಅದರೆ ಏನು ಕಾಣಿಸ್ತ ಇಲ್ಲ. ರಾಜನ್ ಗಾಡಿ ರಿವೆರ್ಸೆ ಮಾಡಿ ನೀರಿನ ಶಬ್ದ ಬರುತ್ತಿದ್ದ ಕಡೆ ತಿರುಗಿಸಿ ನೋಡಿದರೆ ಅಬ್ಬ!! ಮಿನಿ ವಾಟರ್ ಫಾಲ್ಸ್!! ಒಂದು 8-9 ಅಡಿ ಎತ್ತರ . ರಾಜನ್ ‘ಯೆ ಹೋಗಿ ಕೆಲಸ ಮುಗಿಸ್ಕೊಂಡು ಬನ್ನಿ’ ಅಂತ ಹೇಳಿ ಸ್ಮಾಲ್ ಸಿಗರೇಟ್ ಹಚ್ಚಿ ಕೊಂಡರು. ನಾನು ದೀಪು ‘ಹೋಗ್ತೀವಿ... ಆದ್ರೆ ಫಸ್ಟ್ ಗಾಡಿ ಲೈಟ್ ಆಫ್ ಮಾಡಿ’ ಅಂತ ಹೇಳಿ ಹೋಗಿ ಕೆಲಸ ಮುಗಿಸಿ ಬಂದು ನಂತರ ಕಾರಿನಲ್ಲಿ ಹೊರೆಟೆವು. ಯರ್ಯಾರಿಗೆ ನಿದ್ದೆ ಬಂತೋ ಗೊತ್ತಿಲ್ಲಾ ನನಗಂತೂ ತಕ್ಷಣ ನಿದ್ದೆ ಹತ್ತಿತು. ಮಧ್ಯ ಮಧ್ಯ ರಾಜನ್ ಏನ್ ಏನೋ ಗೊಣಗುತ್ತ ಇದ್ದ. ಕಣ್ಣು ಬಿಟ್ಟಾಗ ಬೆಳಿಗ್ಗೆ 6.30am ಕೆ.ಆರ್. ನಗರ್ ತಾಲ್ಲೂಕ್ ನ ಡೋರ್ನಳ್ಳಿ ರೋಡ್ ನಲ್ಲಿ ಇದ್ದೆವು. ರಾಜನ್ ‘ಏನ್ ಮಕ್ಳಾ ಕುಡಿದು, ಕುಣಿದು ಆರಾಮಾಗೀ ನಿದ್ದೆ ಮಾಡಿಬಿಟ್ಟಿರಿ, ನಾನ್ ಮಾತ್ರ ಒಬ್ಬನೇ ದಯ್ಯದ ತರಾ ಗಾಡಿ ಓಡಿಸ್ಕೊಂಡು ಬಂದೆ’ ಅಂದ್ರು. ರಾಜನ್ ನನ್ನ ಮನೆಗೆ ಡ್ರಾಪ್ ಮಾಡಿದಾಗ 7.20 am ಏನೋ ಅಂದು ಕೊಂಡು ಹೋದ ಟ್ರಿಪ್ ಸೂಪರ್ ಜಬರ್ದಸ್ತ್ ಆಗೀ ಇತ್ತು. ಆ ಟ್ರ್ಯಾಫಿಕ್ ಜಾಮ್, ಡಾನ್ಸ್ ಸ್ಟೆಪ್ಸ್, ದೀಪುನಾ ಆ ಸಾವ್ಕಾರೇ.. ಡೈಲಾಗ್.. ಎಲ್ಲಾ ಇವತ್ತಿಗೂ ಮನಸಲ್ಲಿ ಅಚ್ಚಗೀ ಉಳಿದಿವೆ . ಯಾವುದೆ ಟ್ರ್ಯಾಫಿಕ್ ಜಾಮ್ ನಲ್ಲಿ ಸಿಕ್ಕಾಗ ಆ ದಿನ ನೆನೆಪಾಗದ ಅಲ್ಲಿಂದ ನಾನು ಪಾಸ್ ಆಗಿರುವುದಿಲ್ಲಾ.

Rajan, Me, Lok Deep, Praveen





















1 comment: